Horoscope Today : ದಿನಭವಿಷ್ಯ : ಹಣಕಾಸಿನ ವಿಚಾರದಲ್ಲಿ ಈ ರಾಶಿಯವರು ಎಚ್ಚರ..!

Horoscope Today : ದಿನಭವಿಷ್ಯ ಇಂದು ಅಕ್ಟೋಬರ್ 05, 2025 ದ್ವಾದಶ ರಾಶಿಗಳ ಮೇಲೆ ಕೃತಿಕಾ ನಕ್ಷತ್ರವು ಪ್ರಭಾವ ಬೀರುತ್ತದೆ. ಮೇಷರಾಶಿ ಹಾಗೂ ವೃಷಭ ರಾಶಿಗಳ ಮೇಲೆ ಹೆಚ್ಚು ಪ್ರಭಾವ ಇರಲಿದೆ.

ಮೇಷರಾಶಿ

ಕೆಲಸದಲ್ಲಿ ನಿಮ್ಮ ಶ್ರಮಕ್ಕೆ ತಕ್ಕ ಫಲಿತಾಂಶ ದೊರೆಯಲಿದೆ. ಹೊಸ ಜವಾಬ್ದಾರಿಗಳು ಸಿಗಬಹುದು. ಆರ್ಥಿಕವಾಗಿ ನಿಮಗೆ ಇಂದು ಮಿಶ್ರಫಲ. ಖರ್ಚುಗಳ ಮೇಲೆ ನಿಗಾ ಇಡುವುದು ಉತ್ತಮ. ಸಹೋದ್ಯೋಗಿಗಳೊಂದಿಗೆ ಉತ್ತಮ ಬಾಂಧವ್ಯ. ಶನಿ ದೇವರ ಪೂಜೆ ಮಾಡುವುದರಿಂದ ಶುಭ ಫಲಗಳನ್ನು ಪಡೆಯುತ್ತೀರಿ.

ವೃಷಭರಾಶಿ (Taurus)

ನಿಮ್ಮ ಜೀವನದಲ್ಲಿ ಇದ್ದ ಎಲ್ಲಾ ಗೊಂದಲ ಮತ್ತು ಅಡೆತಡೆಗಳು ನಿವಾರಣೆ ಆಗಲಿದೆ. ಕೆಲಸದ ವಿಚಾರದಲ್ಲಿ ನಿಮಗೆ ಇಂದು ಉತ್ತಮ ದಿನ. ಸಣ್ಣ ಅವಧಿಯ ಹೂಡಿಕೆಗಳಿಂದ ದೂರವಿರುವುದು ಉತ್ತಮ. ಕುಟುಂಬದ ಜೊತೆಗೆ ಸಮಯವನ್ನು ಮೀಸಲಿಡಿ. ವೈವಾಹಿಕ ಜೀವನದಲ್ಲಿ ಆನಂದ ಇರುವುದು. ಸಂಜೆಯ ವೇಳೆಗೆ ಶುಭ ಸಮಾಚಾರ ಕೇಳುವಿರಿ.

ಮಿಥುನರಾಶಿ (Gemini)

ಆರ್ಥಿಕ ಲಾಭ ಮತ್ತು ಸಂತೋಷದಿಂದ ಕೂಡಿರುವ ದಿನ. ವ್ಯವಹಾರದಲ್ಲಿ ಹೊಸ ತಂತ್ರಗಳನ್ನು ಅಳವಡಿಸಿಕೊಳ್ಳುವ ಸಾಧ್ಯತೆ, ಭವಿಷ್ಯದಲ್ಲಿ ಲಾಭ ತರಲಿದೆ. ಸ್ಪರ್ಧಾತ್ಮಕ ಪರೀಕ್ಷೆಯಲ್ಲಿರುವ ವಿದ್ಯಾರ್ಥಿಗಳಿಗೆ ಉತ್ತಮ ದಿನ. ಅನಗತ್ಯ ವಿಷಯಗಳಿಂದ ಮನಸ್ಸನ್ನು ದೂರ ಇಡಿ. ತಂದೆಯ ಆರೋಗ್ಯದ ಬಗ್ಗೆ ಚಿಂತೆ ಇರಬಹುದು.

ಕಟಕರಾಶಿ (Cancer)

ಅಷ್ಟಮ ಚಂದ್ರ ಇರುವ ಕಾರಣ ಸ್ವಲ್ಪ ಎಚ್ಚರಿಕೆ ಅಗತ್ಯ. ನಿಮ್ಮ ಕೆಲಸದಲ್ಲಿ ಬದಲಾವಣೆಗಳನ್ನು ಮಾಡಬೇಕಾಗಬಹುದು.ಅನಿರೀಕ್ಷಿತ ಖರ್ಚುಗಳು ಎದುರಾಗಬಹುದು. ಆರೋಗ್ಯದ ಕಡೆ ಹೆಚ್ಚು ಗಮನ ಕೊಡಿ.

ಸಿಂಹರಾಶಿ (Leo)

ವ್ಯವಹಾರದಲ್ಲಿ ಲಾಭದಾಯಕ ಹೂಡಿಕೆ ಮಾಡಬಹುದು. ಅಧಿಕಾರದಿಂದ ಲಾಭವಾಗಬಹುದು. ನಿಮ್ಮ ಪ್ರಯತ್ನಗಳಿಗೆ ಉತ್ತಮ ಬೆಂಬಲ ಸಿಗುವುದು. ಸಂಗಾತಿಯೊಂದಿಗೆ ಉತ್ತಮ ಸಮಯ ಕಳೆಯುವಿರಿ.

ಕನ್ಯಾರಾಶಿ (Virgo)

ವೃತ್ತಿ ಕ್ಷೇತ್ರದಲ್ಲಿ ನಿಮ್ಮ ಪ್ರಾಮಾಣಿಕತೆ ಮತ್ತು ಶ್ರಮಕ್ಕೆ ಮನ್ನಣೆ ಸಿಗಲಿದೆ. ಆರ್ಥಿಕ ಪರಿಸ್ಥಿತಿ ಸುಧಾರಿಸಲಿದೆ. ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು. ಮನೆಯವರೊಂದಿಗೆ ಉತ್ತಮ ಸಮಯ.

ತುಲಾರಾಶಿbra)

ಅನಿರೀಕ್ಷಿತ ಧನಾಗಮನದ ಸಾಧ್ಯತೆ ಇದೆ. ವ್ಯವಹಾರದಲ್ಲಿ ದೊಡ್ಡ ಲಾಭವನ್ನು ನಿರೀಕ್ಷಿಸಬಹುದು. ಸರ್ಕಾರಿ ಕೆಲಸಗಳು ಅಥವಾ ಕಾನೂನು ವಿಷಯಗಳು ನಿಮ್ಮ ಪರವಾಗಿ ಇರಲಿವೆ. ಪ್ರೀತಿ ಪಾತ್ರರ ಜೊತೆ ಹೆಚ್ಚಿನ ಸಮಯ ಕಳೆಯುವಿರಿ. ಪ್ರವಾಸಕ್ಕೆ ಹೋಗುವ ಸಾಧ್ಯತೆ.

ವೃಶ್ಚಿಕರಾಶಿ (Scorpio)

ಕೆಲಸದ ಸ್ಥಳದಲ್ಲಿ ಗೌರವ ಮತ್ತು ಮನ್ನಣೆ ಸಿಗಲಿದೆ. ಹಣಕಾಸಿನ ವಿಷಯಗಳಲ್ಲಿ ಹೂಡಿಕೆಗೆ ಉತ್ತಮ ಸಮಯ. ಕುಟುಂಬದಲ್ಲಿ ಸಂತೋಷದ ವಾತಾವರಣ. ಅನಾವಶ್ಯಕ ಕೋಪವನ್ನು ನಿಯಂತ್ರಿಸುವುದು ಉತ್ತಮ.

ಇದನ್ನೂ ಓದಿ : ನಿತ್ಯಭವಿಷ್ಯಕ್ಕಾಗಿ ಇಲ್ಲಿ ಕ್ಲಿಕ್‌ ಮಾಡಿ

Horoscope Today ಧನಸ್ಸುರಾಶಿ (Sagittarius)

ಆರ್ಥಿಕ ಸ್ಥಿತಿ ಉತ್ತಮವಾಗಿರುತ್ತದೆ. ಸ್ಥಗಿತಗೊಂಡಿರುವ ಕೆಲಸಗಳು ಪೂರ್ಣಗೊಳ್ಳುತ್ತವೆ. ಹೊಸ ಕೆಲಸ ಪ್ರಾರಂಭಿಸಲು ಅಥವಾ ಹೂಡಿಕೆ ಮಾಡಲು ಅನುಕೂಲಕರ ದಿನ.ಧಾರ್ಮಿಕ ಕಾರ್ಯಗಳಲ್ಲಿ ಆಸಕ್ತಿ. ಮಕ್ಕಳ ವಿಚಾರದಲ್ಲಿ ಸಂತೋಷ.

ಮಕರರಾಶಿ (Capricorn)

ಇಂದು ಹೆಚ್ಚಿನ ಶ್ರಮ ವಹಿಸಬೇಕಾಗಬಹುದು. ನಿಮ್ಮ ಗುರಿಯ ಮೇಲೆ ಗಮನವಿಟ್ಟು ಕೆಲಸ ಮಾಡಿದರೆ ಯಶಸ್ಸು ನಿಶ್ಚಿತ. ಆರ್ಥಿಕ ನಿರ್ಧಾರಗಳಲ್ಲಿ ಎಚ್ಚರವಿರಲಿ. ಕುಟುಂಬದ ಬೆಂಬಲ ಸಿಗಲಿದೆ. ಆರೋಗ್ಯದ ಕಡೆ ಗಮನ ಕೊಡಿ.

ಕುಂಭರಾಶಿ (Aquarius)

ನೀವು ಕೈಗೊಂಡ ಕೆಲಸಗಳಲ್ಲಿ ಯಶಸ್ಸು ಸಿಗಲಿದೆ. ನಿರೀಕ್ಷಿತ ಲಾಭವನ್ನು ಪಡೆಯುವಿರಿ. ಆರ್ಥಿಕವಾಗಿ ಉತ್ತಮ ದಿನ. ಸ್ನೇಹಿತರು ಮತ್ತು ಕುಟುಂಬದೊಂದಿಗೆ ಉತ್ತಮ ಸಮಯ. ಧನಾತ್ಮಕ ಚಿಂತನೆಗಳು ನಿಮ್ಮನ್ನು ಮುನ್ನಡೆಸಲಿವೆ.

ಮೀನರಾಶಿ (Pisces)

ಉದ್ಯೋಗದಲ್ಲಿ ಸ್ವಲ್ಪ ಒತ್ತಡ ಹೆಚ್ಚಾಗಬಹುದು, ಆದರೆ ಅದನ್ನು ನಿಭಾಯಿಸುವಿರಿ. ಆರ್ಥಿಕ ನಿರ್ಧಾರಗಳನ್ನು ತೆಗೆದುಕೊಳ್ಳುವಾಗ ಅನುಭವಿಗಳ ಸಲಹೆ ಪಡೆಯಿರಿ. ಧಾರ್ಮಿಕ ಸ್ಥಳಗಳಿಗೆ ಭೇಟಿ ನೀಡುವ ಸಾಧ್ಯತೆ. ಮನಸ್ಸಿನ ಶಾಂತಿಗಾಗಿ ಸಮಯ ಮೀಸಲಿಡಿ.

Kannada News Next Desk

Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021

Related Stories