ದಿನಭವಿಷ್ಯ : ಸಿದ್ದಿಯೋಗ, ಸರ್ವಾರ್ಥ ಸಿದ್ದಿಯೋಗದಿಂದ ಈ ರಾಶಿಯವರಿಗೆ ಅತ್ಯಂತ ಶುಭ

ದ್ವಾದಶ ರಾಶಿಗಳ ಮೇಲೆ ಇಂದು ಪುಷ್ಯ ನಕ್ಷತ್ರದ ಪ್ರಭಾವ ಇರುತ್ತದೆ. ಇನ್ನು ಸಿದ್ದಿಯೋಗ, ಸರ್ವಾರ್ಥ ಸಿದ್ದಿಯೋಗಗಳು ಹಲವು ರಾಶಿಯವರಿಗೆ ಆರ್ಥಿಕ ಲಾಭ ತರಲಿದೆ. ಮೇಷ ರಾಶಿಯಿಂದ ಹಿಡಿದು ಮೀನ ರಾಶಿಯ ವರೆಗೆ ಹೇಗಿದೆ ಇಂದಿನ 12 ದ್ವಾದಶ ರಾಶಿಗಳ ದಿನಭವಿಷ್ಯ (Horoscope Today).

ದಿನಭವಿಷ್ಯ ಇಂದು ಅಕ್ಟೋಬರ್‌ 08 2023 ಭಾನುವಾರ. ದ್ವಾದಶ ರಾಶಿಗಳ ಮೇಲೆ ಇಂದು ಪುಷ್ಯ ನಕ್ಷತ್ರದ ಪ್ರಭಾವ ಇರುತ್ತದೆ. ಇನ್ನು ಸಿದ್ದಿಯೋಗ, ಸರ್ವಾರ್ಥ ಸಿದ್ದಿಯೋಗಗಳು ಹಲವು ರಾಶಿಯವರಿಗೆ ಆರ್ಥಿಕ ಲಾಭ ತರಲಿದೆ. ಮೇಷ ರಾಶಿಯಿಂದ ಹಿಡಿದು ಮೀನ ರಾಶಿಯ ವರೆಗೆ ಹೇಗಿದೆ ಇಂದಿನ 12 ದ್ವಾದಶ ರಾಶಿಗಳ ದಿನಭವಿಷ್ಯ (Horoscope Today).

ಮೇಷರಾಶಿ ದಿನಭವಿಷ್ಯ
ಅನುಭವಿಗಳ ಸಲಹೆಯನ್ನು ಪಡೆದುಕೊಳ್ಳಿ. ಇಲ್ಲವಾದ್ರೆ ಹೂಡಿಕೆಯಲ್ಲಿ ನೀವು ನಷ್ಟವನ್ನು ಅನುಭವಿಸುವ ಸಾಧ್ಯತೆಯಿದೆ. ಹೊಸ ಉದ್ಯೋಗವನ್ನು ಹುಡುಕುತ್ತಿರುವವರಿಗೆ ಇಂದು ನಿರೀಕ್ಷಿತ ಫಲಿತಾಂಶ ದೊರೆಯಲಿದೆ. ಮಕ್ಕಳಿಗೆ ವಿದೇಶಿ ಶಿಕ್ಷಣಕ್ಕೆ ಸಂಬಂಧಿಸಿದಂತೆ ಶುಭ ಸುದ್ದಿಯೊಂದು ದೊರೆಯಲಿದೆ.

ವೃಷಭರಾಶಿ ದಿನಭವಿಷ್ಯ
ಧಾರ್ಮಿಕ ಕಾರ್ಯಗಳಲ್ಲಿ ಭಾಗಿಯಾಗುವಿರಿ. ಕೌಟುಂಬಿಕ ಸಮಸ್ಯೆ ಇಂದು ಪರಿಹಾರವನ್ನು ಕಾಣಲಿದೆ. ತಂದೆಯ ಸಹಕಾರದಿಂದ ಕೆಲಸ ಕಾರ್ಯಗಳಲ್ಲಿ ಯಶಸ್ಸು ದೊರೆಯಲಿದೆ. ಅನಿರೀಕ್ಷಿತವಾಗಿ ಶುಭ ವಾರ್ತೆಯೊಂದನ್ನು ನೀವು ಕೇಳುವಿರಿ. ಹೊಂದಾಣಿಕೆಯಿಂದ ಕಾರ್ಯಾನುಕೂಲವಾಗಲಿದೆ.

ಮಿಥುನರಾಶಿ ದಿನಭವಿಷ್ಯ
ಕೆಲಸ ಕಾರ್ಯಗಳಲ್ಲಿ ಹೆಚ್ಚಿನ ಪ್ರಯತ್ನದ ಅಗತ್ಯವಿದೆ. ಇಂದು ಯಾರನ್ನೂ ನೋಯಿಸುವ ಕೆಲಸವನ್ನು ಮಾಡಬೇಡಿ. ನಿಮ್ಮ ಮಾತು ಇತರರಿಗೆ ತೊಂದರೆಯನ್ನು ಕೊಡುವ ಸಾಧ್ಯತೆಯಿದೆ. ಆರ್ಥಿಕ ಪರಿಸ್ಥಿತಿಯನ್ನು ಸುಧಾರಿಸಲು ಹಲವು ದಾರಿಗಳು ಗೋಚರಕ್ಕ ಬರಲಿದೆ. ದೂರ ಪ್ರಯಾಣದಿಂದ ನಿಮಗೆ ಲಾಭವಲಿದೆ.

ಇದನ್ನೂ ಓದಿ : ವಿಶ್ವಕಪ್‌ 2023: ಜಿಯೋ ಹೊಸ 6 ಪ್ರಿಪೇಯ್ಡ್‌ ಫ್ಲಾನ್‌ : ಡಿಸ್ನಿ+ಹಾಟ್‌ಸ್ಟಾರ್ ಉಚಿತ ಜೊತೆ ಅನ್‌ಲಿಮಿಟೆಡ್‌ ಡೇಟಾ

ಕರ್ಕಾಟಕರಾಶಿ ದಿನಭವಿಷ್ಯ
ಭೂಮಿಗೆ ಸಂಬಂಧಿಸಿದಂತೆ ನ್ಯಾಯಾಲಯದಲ್ಲಿನ ವ್ಯಾಜ್ಯವು ಇಂದು ಪರಿಹಾರ ಕಾಣಲಿದೆ. ಇತರರ ಪ್ರಭಾವದಿಂದ ನೀವು ಕೆಲಸ ಕಾರ್ಯಗಳನ್ನು ಮಾಡುವುದನ್ನು ತಪ್ಪಿಸಿ. ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಯನ್ನು ನೀವು ಇಂದು ಎದುರಿಸುವ ಸಾಧ್ಯತೆಯಿದೆ.

ಸಿಂಹರಾಶಿ ದಿನಭವಿಷ್ಯ
ನೀವು ಎಲ್ಲಾ ಕೆಲಸ ಕಾರ್ಯಗಳಲ್ಲಿಯೂ ಆತ್ಮವಿಶ್ವಾಸವನ್ನು ಬೆಳೆಸಿಕೊಳ್ಳಿ. ನ್ಯಾಯಾಲಯದಲ್ಲಿನ ವಿವಾದ ಇತ್ಯರ್ಥವಾಗುವ ಸಾಧ್ಯತೆಯಿದೆ. ಯಾವುದೇ ಕೆಲಸ ಕಾರ್ಯಗಳನ್ನು ಮಾಡಿದರೂ ಕೂಡ ಪ್ರಗತಿಯನ್ನು ಸಾಧಿಸುತ್ತಾರೆ. ವಿದ್ಯಾರ್ಥಿಗಳಿಗೆ ಸಾಕಷ್ಟು ಅನುಕೂಲಕರ. ಉದ್ಯೋಗಿಗಳು ಇಂದು ಭಡ್ತಿಯನ್ನು ಪಡೆಯುವ ಸಾಧ್ಯತೆಯಿದೆ.

Horoscope Today October 08 2023 Zordic sign
Image Credit to Original Source

ಕನ್ಯಾರಾಶಿ ದಿನಭವಿಷ್ಯ
ನೀವಿಂದು ಸಾಕಷ್ಟು ಹಣವನ್ನು ಗಳಿಸುತ್ತೀರಿ. ಉದ್ಯೋಗಿಗಳು ಶತ್ರುಗಳ ಬಗ್ಗೆ ಹೆಚ್ಚು ಜಾಗೃತರಾಗಿ ಇರಬೇಕು. ಇಲ್ಲವಾದ್ರೆ ದೊಡ್ಡ ಮಟ್ಟದಲ್ಲಿ ನಷ್ಟವನ್ನು ಅನುಭವಿಸುವ ಸಾಧ್ಯತೆಯಿದೆ. ಹೆತ್ತವರ ಸಲಹೆಯನ್ನು ಪಡೆದು ಕೆಲಸ ಕಾರ್ಯಗಳನ್ನು ಮಾಡಿ. ಇದರಿಂದ ನಿಮಗೆ ಯಶಸ್ಸು ದೊರೆಯಲಿದೆ.

ತುಲಾರಾಶಿ ದಿನಭವಿಷ್ಯ
ಸಂಗಾತಿಯೊಂದಿಗೆ ಘರ್ಷಣೆಯನ್ನು ತಪ್ಪಿಸಿ. ಕೆಲವು ವಿಷಯಗಳಲ್ಲಿ ನೀವು ಇಂದು ಚಿಂತೆ ಮಾಡುವ ಸಾಧ್ಯತೆಯಿದೆ. ಕೆಲಸ ಕಾರ್ಯಗಳಲ್ಲಿ ನೀವು ನಿರಾಸೆಗೊಳ್ಳುವ ಸಾಧ್ಯತೆಯಿದೆ. ಹಿರಿಯ ಸಲಹೆಯಂತೆ ಕೆಲಸ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಿ. ಮಕ್ಕಳಿಂದ ಶುಭ ಸುದ್ದಿಯೊಂದನ್ನು ಕೇಳುವಿರಿ.

ವೃಶ್ಚಿಕರಾಶಿ ದಿನಭವಿಷ್ಯ
ಬಿಡುವಿಲ್ಲದ ಕೆಲಸದ ನಡುವಲ್ಲೇ ಕುಟುಂಬಕ್ಕಾಗಿ ಸ್ವಲ್ಪ ಸಮಯವನ್ನು ಮೀಸಲಿಡಿ. ತಂದೆಯ ಕಣ್ಣಿನ ಸಮಸ್ಯೆಗೆ ಇಂದು ವೈದ್ಯರನ್ನು ಕಾಣಿ. ವ್ಯವಹಾರ ಕ್ಷೇತ್ರದಲ್ಲಿ ತೊಡಗಿಸಿಕೊಂಡವರಿಗೆ ಸ್ವಲ್ಪ ಚಿಂತೆಯನ್ನು ಎದುರಿಸಬೇಕಾಗುತ್ತದೆ. ಹೊಂದಾಣಿಕೆಯಿಂದ ಕಾರ್ಯಾನುಕೂಲವಾಗಲಿದೆ.

ಇದನ್ನೂ ಓದಿ : ಒಂದೇ ಹೆಣ್ಣು ಮಗಳಿರುವ ದಂಪತಿಗಳಿಗೆ ಸಿಗುತ್ತೆ 2 ಲಕ್ಷ ರೂ.: ಸರಕಾರದಿಂದ ಘೋಷಣೆಯಾಯ್ತು ಹೊಸ ಯೋಜನೆ

ಧನಸ್ಸುರಾಶಿ ದಿನಭವಿಷ್ಯ
ವ್ಯವಹಾರದಲ್ಲಿನ ಯಾವುದೇ ಒಪ್ಪಂದವನ್ನು ಅಂತಿಮಗೊಳಿಸುವ ಮೊದಲು ಸಾಕಷ್ಟು ಯೋಚಿಸಿ. ತರಾತುರಿಯಲ್ಲಿ ಮಾಡುವ ಕೆಲಸ ಕಾರ್ಯಗಳಿಂದ ನಷ್ಟ ಅನುಭವಿಸುವ ಸಾಧ್ಯತೆಯಿದೆ. ಜೀವನ ಸಂಗಾತಿಯಿಂದ ತೊಂದರೆ ಅನುಭವಿಸುವಿರಿ. ಭವಿಷ್ಯದ ಯೋಜನೆಗಳ ಬಗ್ಗೆ ನೀವು ಗಮನ ಹರಿಸಬೇಕಾದ ಅಗತ್ಯವಿದೆ.

ಮಕರರಾಶಿ ದಿನಭವಿಷ್ಯ
ವ್ಯವಹಾರದಲ್ಲಿ ಯಾವುದೇ ಒಪ್ಪಂದವನ್ನು ಅಂತಿಮಗೊಳಿಸುವ ಮೊದಲು ಸಾಕಷ್ಟು ಯೋಚಿಸಿ. ಕುಟುಂಬ ವಿಚಾರದಲ್ಲಿ ಹಲವು ಸಮಸ್ಯೆಗಳನ್ನು ಎದುರಿಸುವ ಸಾಧ್ಯತೆಯಿದೆ. ಉದ್ಯೋಗ ಮಾಡುವವರಿಗೆ ಹಲವಾರು ಅವಕಾಶಗಳು ಗೋಚರಿಸಲಿದೆ. ದೂರ ಪ್ರಯಾಣ ಆರ್ಥಿಕ ಲಾಭವನ್ನು ತರಲಿದೆ.

ಇದನ್ನೂ ಓದಿ :  ಹೊಸ ಕಾರ್ಮಿಕ ನೀತಿ : ವಾರಕ್ಕೆ ಮೂರೂವರೆ ದಿನ ಕೆಲಸ, ಮೂರೂವರೆ ದಿನ ರಜೆ

ಕುಂಭರಾಶಿ ದಿನಭವಿಷ್ಯ
ದೈನಂದಿನ ಅಗತ್ಯಗಳಿಗೆ ಹಣವನ್ನು ವ್ಯಯಿಸಬೇಕಾಗುತ್ತದೆ. ಆದಾಯ ಮತ್ತು ಖರ್ಚನ್ನು ಸಮತೋಲನದಲ್ಲಿ ಇರಿಸಿಕೊಳ್ಳಿ. ನಿಮ್ಮ ಆರ್ಥಿಕ ಪರಿಸ್ಥಿತಿ ಬದಲಾವಣೆ ಆಗುವ ಸಾಧ್ಯತೆಯಿದೆ. ಸಂಗಾತಿಯೊಂದಿಗಿನ ವೈಮನಸ್ಸು ದೂರವಾಗಲಿದೆ. ದೂರದ ಬಂಧುಗಳ ಆಗಮನ ಮನಸಿಗೆ ಮುದವನ್ನು ನೀಡಲಿದೆ.

ಮೀನರಾಶಿ ದಿನಭವಿಷ್ಯ
ಧಾರ್ಮಿಕ ಕ್ಷೇತ್ರಗಳ ಭೇಟಿಯಿಂದ ಮನಸ್ಸಿನ ದುಗುಡ ದೂರವಾಗಲಿದೆ. ಪತ್ನಿಯ ಕಡೆಯಿಂದ ನಿಮಗೆ ಇಂದು ಆರ್ಥಿಕ ಸಹಕಾರ ದೊರೆಯಲಿದೆ. ಹಳೆಯ ಸ್ನೇಹಿತರ ಭೇಟಿಯಿಂದ ವ್ಯವಹಾರಕ್ಕೆ ಸಂಬಂಧಿಸಿದಂತೆ ಉಪಯುಕ್ತ ಸಲಹೆ ದೊರೆಯಲಿದೆ. ಸಹೋದ್ಯೋಗಿಗಳ ಕಿರಿಕಿರಿಯಿಂದ ಮನಸ ನೆಮ್ಮದಿಗೆ ಭಂಗ ತರಲಿದೆ.

Horoscope Today October 08 2023 Zordic sign

Comments are closed.