ವಿಶ್ವಕಪ್‌ನಲ್ಲಿ ಗರಿಷ್ಠ ಸ್ಕೋರ್‌ ದಾಖಲಿಸಿದ ದಕ್ಷಿಣ ಆಫ್ರಿಕಾ : ವೇಗದ ಶತಕ ಸಿಡಿಸಿದ ಮಕ್ರಮ್‌

ಐಸಿಸಿ ಕ್ರಿಕೆಟ್ ವಿಶ್ವಕಪ್‌ನ ಶ್ರೀಲಂಕಾ ವಿರುದ್ದ ದಕ್ಷಿಣ ಆಫ್ರಿಕಾ (Srilanka Vs South Africa) ಕ್ವಿಂಟನ್‌ ಡಿಕಾಕ್‌ (Quinton de Kock) , ವಾನ್ ಡೆರ್ ಡುಸ್ಸೆನ್ (Rassie van der Dussen) , ಮಕ್ರಮ್‌ (Aiden Markram) ಶತಕ ಸಿಡಿಸುವ ಮೂಲಕ  ವಿಶ್ವಕಪ್‌ನಲ್ಲಿಯೇ ಗರಿಷ್ಠ ಸ್ಕೋರ್‌ (Highest score in World Cup) ದಾಖಲಿಸಿದ ಸಾಧನೆಯನ್ನು ಮಾಡಿದೆ. ಈ ಮೂಲಕ ಆಸ್ಟ್ರೇಲಿಯಾ ದಾಖಲೆಯನ್ನು ಉರುಳಿಸಿದೆ.

ನವದೆಹಲಿ : ಐಸಿಸಿ ಕ್ರಿಕೆಟ್ ವಿಶ್ವಕಪ್‌ನ (ICC Cricket World Cup 2023) 4ನೇ ಪಂದ್ಯದಲ್ಲಿ ಶ್ರೀಲಂಕಾ ವಿರುದ್ದ ದಕ್ಷಿಣ ಆಫ್ರಿಕಾ (Srilanka Vs South Africa) ಬ್ಯಾಟ್ಸ್‌ಮನ್‌ಗಳು ಅಬ್ಬರಿಸಿದ್ದಾರೆ. ಕ್ವಿಂಟನ್‌ ಡಿಕಾಕ್‌ (Quinton de Kock) , ವಾನ್ ಡೆರ್ ಡುಸ್ಸೆನ್ (Rassie van der Dussen) , ಮಕ್ರಮ್‌ (Aiden Markram) ಶತಕ ಸಿಡಿಸುವ ಮೂಲಕ  ವಿಶ್ವಕಪ್‌ನಲ್ಲಿಯೇ ಗರಿಷ್ಠ ಸ್ಕೋರ್‌ (Highest score in World Cup) ದಾಖಲಿಸಿದ ಸಾಧನೆಯನ್ನು ಮಾಡಿದೆ. ಈ ಮೂಲಕ ಆಸ್ಟ್ರೇಲಿಯಾ ದಾಖಲೆಯನ್ನು ಉರುಳಿಸಿದೆ.

ದೆಹಲಿಯ ಅರುಣ್‌ ಜೇಟ್ಲಿ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಟಾಸ್‌ ಗೆದ್ದ ಶ್ರೀಲಂಕಾ ತಂಡ ದಕ್ಷಿಣ ಆಫ್ರಿಕಾ ತಂಡವನ್ನು ಮೊದಲು ಬ್ಯಾಟಿಂಗ್‌ಗೆ ಆಹ್ವಾನಿಸಿತ್ತು. ಆರಂಭಿಕ ಆಟಗಾರ ಕ್ಲಿಂಟಾನ್‌ ಡಿಕಾಕ್‌ ಆರಂಭದಿಂದಲೇ ಆರ್ಭಟಿಸಿದ್ದಾರೆ. ಆದರೆ ನಾಯಕ ತೆಂಬ ಬವುಮ ಕೇವಲ 8 ರನ್‌ಗೆ ವಿಕೆಟ್‌ ಒಪ್ಪಿಸಿದ್ದಾರೆ.

Highest score in World Cup South Africa break all-time record Srilanka Vs South Africa
Image Credit : cricketworldcup.com

ನಂತರ ಡಿಕಾಕ್‌ಗೆ ಜೊತೆಯಾದ ವಾನ್ ಡೆರ್ ಡುಸ್ಸೆನ್ ಸ್ಪೋಟಕ ಶತಕ ಸಿಡಿಸಿದ್ದಾರೆ. ಇಬ್ಬರು ಆಟಗಾರರು ಶ್ರೀಲಂಕಾ ಬೌಲರ್‌ಗಳನ್ನು ಮನಬಂದಂತೆ ಥಳಿಸಿದ ಡಿಕಾಕ್‌ ಹಾಗೂ ಡುಸ್ಸೆನ್‌ ದ್ವಿಶತಕದ ಜೊತೆಯಾಟ ಆಡಿದ್ದಾರೆ. ಡಿಕಾಕ್‌ ಕೇವಲ 84 ಎಸೆತಗಳಲ್ಲಿ 3 ಸಿಕ್ಸರ್‌ ಹಾಗೂ 12 ಬೌಂಡರಿ ನೆರವಿನಿಂದ 100 ರನ್‌ ಗಳಿಸಿ ಮತೀಶ್‌ ಪರಿತಿರಣಗೆ ವಿಕೆಟ್‌ ಒಪ್ಪಿಸಿದ್ದಾರೆ.

ಇದನ್ನೂ ಓದಿ : ಏಷ್ಯನ್‌ ಗೇಮ್ಸ್‌ ಕ್ರಿಕೆಟ್‌ ಫೈನಲ್‌ ಮಳೆಯಿಂದ ರದ್ದು : ಅಫ್ಘಾನಿಸ್ತಾನದ ವಿರುದ್ದ ಐತಿಹಾಸಿಕ ಚಿನ್ನ ಗೆದ್ದ ಭಾರತ

ಆದರೆ ಮತ್ತೊಂದೆಡೆಯಲ್ಲಿ ಬ್ಯಾಟಿಂಗ್‌ ನಡೆಸುತ್ತಿದ್ದ ವಾನ್ ಡೆರ್ ಡುಸ್ಸೆನ್ 110 ಎಸೆತಗಳನ್ನು ಎದುರಿಸಿ 2 ಸಿಕ್ಸರ್‌ ಹಾಗೂ 13 ಬೌಂಡರಿ ನೆರವಿನಿಂದ ಬರೋಬ್ಬರಿ 108 ರನ್‌ ಸಿಡಿಸಿದ್ದಾರೆ. ಡಿಕಾಕ್‌ ಔಟಾಗುತ್ತಲೇ ಜೊತೆಯಾದ ಮಕ್ರಮ್‌ ಸ್ಪೋಟಕ ಆಟಕ್ಕೆ ಮನ ಮಾಡಿದ್ರು. ಕೇವಲ 54  ಎಸೆತಗಳನ್ನು ಎದುರಿಸಿ 3 ಸಿಕ್ಸರ್‌ ಹಾಗೂ 14 ಬೌಂಡರಿ ನೆರವಿನಿಂದ 106 ರನ್‌ ಸಿಡಿಸಿದ್ದಾರೆ.

Highest score in World Cup South Africa break all-time record Srilanka Vs South Africa
Image Credit : cricketworldcup.com

ಕ್ಲಸೇಲ್‌ 20 ಎಸೆತಗಳಲ್ಲಿ 36 ರನ್‌ ಸಿಡಿಸಿದ್ರೆ, ಡೇವಿಡ್‌ ಮಿಲ್ಲರ್‌ 21 ಎಸೆತಗಳನ್ನು ಎದುರಿಸಿ 39 ರನ್‌ ಬಾರಿಸಿದ್ದಾರೆ. ಅಂತಿಮವಾಗಿ ದಕ್ಷಿಣ ಆಫ್ರಿಕಾ ತಂಡ 50 ಓವರ್‌ಗಳಲ್ಲಿ 5 ವಿಕೆಟ್‌ ಕಳೆದುಕೊಂಡು 428 ರನ್‌ ಬಾರಿಸಿದೆ. ಈ ಮೂಲಕ ದಕ್ಷಿಣ ಆಫ್ರಿಕಾ ವಿಶ್ವಕಪ್‌ನಲ್ಲಿ ಗರಿಷ್ಠ ರನ್‌ ದಾಖಲಿಸಿದ ಸಾಧನೆಯನ್ನು ಮಾಡಿದೆ.

ಇದನ್ನೂ ಓದಿ : ವಿಶ್ವಕಪ್ 2023 : ಟೀಂ ಇಂಡಿಯಾ ನಾಯಕತ್ವ ಕಳೆದುಕೊಂಡ ರೋಹಿತ್‌ ಶರ್ಮಾ !

ವಿಶ್ವಕಪ್‌ನಲ್ಲೇ ದಕ್ಷಿಣ ಆಫ್ರಿಕಾ ಗರಿಷ್ಠ ಸ್ಕೋರ್‌ 

ವಿಶ್ವಕಪ್‌ನಲ್ಲಿ ಇದುವರೆಗೆ ಅತೀ ಹೆಚ್ಚು ರನ್‌ ದಾಖಲಿಸಿದ ಸಾಧನೆಯ ಆಸ್ಟ್ರೇಲಿಯಾದ ಹೆಸರಲ್ಲಿತ್ತು. ಆಸ್ಟ್ರೇಲಿಯಾ ತಂಡ ಅಫ್ಘಾನಿಸ್ತಾನ್‌ ವಿರುದ್ದ 2015 ರಲ್ಲಿ 417 ರನ್‌ ಬಾರಿಸಿತ್ತು. ಈ ಹಿಂದೆ ಭಾರತ ಬರ್ಮುಡಾ ವಿರುದ್ದ 2007 ರಲ್ಲಿ ದಾಖಲಿಸಿದ್ದ 413 ರನ್‌ ಗರಿಷ್ಟ ಮೊತ್ತದ ದಾಖಲೆಯನ್ನು ಅಳಿಸಿ ಹಾಕಿತ್ತು.

ದಕ್ಷಿಣ ಆಫ್ರಿಕಾ ಈ ಹಿಂದೆ 2015 ರಲ್ಲಿ ವೆಸ್ಟ್‌ ಇಂಡಿಸ್‌ ತಂಡದ ವಿರುದ್ದ 408  ರನ್‌ ಹಾಗೂ ಐರ್ಲೆಂಡ್‌ ವಿರುದ್ದ 411 ರನ್‌ ದಾಖಲಿಸಿತ್ತು. ಇದೀಗ ವಿಶ್ವಕಪ್‌ ನಲ್ಲಿ ಇದುವರೆಗೆ ದಾಖಲಾಗಿರುವ ಗರಿಷ್ಠ ಮೊತ್ತದ ಸಾರ್ವತ್ರಿಕ ದಾಖಲೆಯನ್ನು ತನ್ನ ಹೆಸರಿಗೆ ಬರೆಯಿಸಿಕೊಂಡಿದೆ. ಈ ಮೂಲಕ ವಿಶ್ವಕಪ್‌ ನಲ್ಲಿ ಭರ್ಜರಿಯಾಗಿಯೇ ಆರಂಭಿಸಿದೆ.

Highest score in World Cup South Africa break all-time record Srilanka Vs South Africa
Image Credit : Twitter

ಐಸಿಸಿ ವಿಶ್ವಕಪ್ 2023 : ದಕ್ಷಿಣ ಆಫ್ರಿಕಾ ತಂಡದ ವೇಳಾಪಟ್ಟಿ :

7-ಅಕ್ಟೋಬರ್ ದಕ್ಷಿಣ ಆಫ್ರಿಕಾ ಶ್ರೀಲಂಕಾ ಅರುಣ್ ಜೇಟ್ಲಿ ಸ್ಟೇಡಿಯಂ 2:00 PM
12-ಅಕ್ಟೋಬರ್ ಆಸ್ಟ್ರೇಲಿಯಾ ದಕ್ಷಿಣ ಆಫ್ರಿಕಾ ಎಕಾನಾ ಸ್ಟೇಡಿಯಂ 2:00 PM
17-ಅಕ್ಟೋ ದಕ್ಷಿಣ ಆಫ್ರಿಕಾ ನೆದರ್ಲ್ಯಾಂಡ್ಸ್ HPCA ಸ್ಟೇಡಿಯಂ 2:00 PM
21-ಅಕ್ಟೋಬರ್ ಇಂಗ್ಲೆಂಡ್ ದಕ್ಷಿಣ ಆಫ್ರಿಕಾ ವಾಂಖೆಡೆ ಸ್ಟೇಡಿಯಂ 2:00 PM
24-ಅಕ್ಟೋಬರ್ ದಕ್ಷಿಣ ಆಫ್ರಿಕಾ ಬಾಂಗ್ಲಾದೇಶ ವಾಂಖೆಡೆ ಸ್ಟೇಡಿಯಂ 2:00 PM
27-ಅಕ್ಟೋ ಪಾಕಿಸ್ತಾನ್ ದಕ್ಷಿಣ ಆಫ್ರಿಕಾ MA ಚಿದಂಬರಂ ಸ್ಟೇಡಿಯಂ 2:00 PM
1-ನವೆಂಬರ್ ನ್ಯೂಜಿಲೆಂಡ್ ದಕ್ಷಿಣ ಆಫ್ರಿಕಾ MCA ಸ್ಟೇಡಿಯಂ 2:00 PM
5-ನವೆಂಬರ್ ಭಾರತ ದಕ್ಷಿಣ ಆಫ್ರಿಕಾ ಈಡನ್ ಗಾರ್ಡನ್ಸ್ 2:00 PM
10-ನವೆಂಬರ್ ದಕ್ಷಿಣ ಆಫ್ರಿಕಾ ಅಫ್ಘಾನಿಸ್ತಾನ ನರೇಂದ್ರ ಮೋದಿ ಸ್ಟೇಡಿಯಂ 2:00 PM

Highest score in World Cup South Africa break all-time record Srilanka Vs South Africa

Comments are closed.