ದಿನಭವಿಷ್ಯ ಸಪ್ಟೆಂಬರ್‌ 29, 2023 : ಈ 3 ರಾಶಿಯವರಿಗೆ ಇಂದು ಅತ್ಯುತ್ತಮ ಆರ್ಥಿಕ ಲಾಭ

ದ್ವಾದಶ ರಾಶಿಗಳ ಮೇಲೆ ಉತ್ತರಾಭಾದ್ರ (uttarabadra) ನಕ್ಷತ್ರದ ಪ್ರಭಾವ ಇದ್ದು. ಸವಾರ್ಥ ಸಿದ್ದಿಯೋಗ (sarvartha Siddi Yoga), ಅಮೃತಯೋಗ (Amrutha Yoga) ಸೇರಿ ನಾಲ್ಕು ಶುಭಯೋಗಗಳು ರೂಪುಗೊಳ್ಳುತ್ತವೆ. ಮೇಷರಾಶಿ ಯಿಂದ ಹಿಡಿದು ಮೀನ ರಾಶಿಯ ವರೆಗೆ ಇಂದಿನ ದಿನಭವಿಷ್ಯ ( Horoscope Today) ಹೇಗಿದೆ.

ಇಂದು ಸೆಪ್ಟೆಂಬರ್‌ 29, 2023ನೇ ಶುಕ್ರವಾರ. ದ್ವಾದಶ ರಾಶಿಗಳ ಮೇಲೆ ಉತ್ತರಾಭಾದ್ರ (Uttarabadra)  ನಕ್ಷತ್ರದ ಪ್ರಭಾವ ಇರುತ್ತದೆ. ಈ ವೇಳೆಯಲ್ಲಿ ಸವಾರ್ಥ ಸಿದ್ದಿಯೋಗ (Sarvartha Siddi Yoga), ಅಮೃತಯೋಗ (Amrutha Yoga) ಸೇರಿ ನಾಲ್ಕು ಶುಭಯೋಗಗಳು ರೂಪುಗೊಳ್ಳುತ್ತವೆ. ವೃಷಭ, ಸಿಂಹ, ಧನಸ್ಸು ರಾಶಿಯವರಿಗೆ ಆರ್ಥಿಕ ಲಾಭ ದೊರೆಯಲಿದೆ. ಮೇಷರಾಶಿ ಯಿಂದ ಹಿಡಿದು ಮೀನ ರಾಶಿಯ ವರೆಗೆ ಇಂದಿನ ದಿನಭವಿಷ್ಯ ( Horoscope Today) ಹೇಗಿದೆ.

ಮೇಷ ರಾಶಿ
ಇಂದು ಸಂತೋಷವಾಗಿ ದಿನವನ್ನು ಕಳೆಯುವಿರಿ. ಉದ್ಯೋಗದಲ್ಲಿ ಸ್ಥಳದಲ್ಲಿ ಬದಲಾವಣೆ ಮನಸಿಗೆ ನೆಮ್ಮದಿ ತರಲಿದೆ. ವ್ಯವಹಾರ ಕ್ಷೇತ್ರದಲ್ಲಿ ಬದಲಾವಣೆ ಕಂಡು ಬರಲಿದೆ. ಹೊಸ ಜವಾಬ್ದಾರಿಯು ನಿಮ್ಮ ಹೆಗಲೇರಲಿದೆ. ದೂರದ ಸಂಬಂಧಿಕರ ಆಗಮನದಿಂದ ನೆಮ್ಮದಿ.

ವೃಷಭ ರಾಶಿ
ಸರಕಾರಿ ಉದ್ಯೋಗ ದೊರೆಯುವ ಸಾಧ್ಯತೆಯಿದೆ. ದೂರದ ಬಂಧುಗಳು ಇಂದು ಮನೆಗೆ ಆಗಮಿಸುತ್ತಾರೆ. ವ್ಯವಹಾರ ಕ್ಷೇತ್ರದಲ್ಲಿ ಯಶಸ್ಸು ದೊರೆಯಲಿದೆ. ಮಕ್ಕಳಿಂದ ಶುಭ ಸುದ್ದಿಯನ್ನು ಕೇಳುವಿರಿ. ಸ್ನೇಹಿತರ ಸಹಕಾರದಿಂದ ಕಾರ್ಯಕ್ಷೇತ್ರದಲ್ಲಿ ಯಶಸ್ಸು.

ಮಿಥುನ ರಾಶಿ
ವಿದ್ಯಾರ್ಥಿಗಳು ವಿದ್ಯಾಕ್ಷೇತ್ರದಲ್ಲಿ ನಿರೀಕ್ಷಿತ ಸಾಧನೆಯನ್ನು ಮಾಡಲಿದ್ದಾರೆ. ಬೆಲೆ ಬಾಳುವ ವಸ್ತುಗಳನ್ನು ಕಳೆದುಕೊಳ್ಳುವ ಸಾಧ್ಯತೆಯಿದೆ. ತಂದೆಯೊಂದಿಗೆ ವಾಗ್ವಾದ ನಡೆಯುವ ಸಾಧ್ಯತೆಯಿದೆ. ಹಿರಿಯ ಸಲಹೆಯನ್ನು ಪಾಲಿಸುವುದರಿಂದ ಯಶಸ್ಸು ದೊರೆಯಲಿದೆ. ವ್ಯವಹಾರ ಕ್ಷೇತ್ರದಲ್ಲಿ ಎಚ್ಚರಿಕೆವಹಿಸಿ.

ಕರ್ಕಾಟಕ ರಾಶಿ
ಆರ್ಥಿಕ ಪರಿಸ್ಥಿತಿ ಉತ್ತಮಗೊಳ್ಳುತ್ತದೆ. ಸಾಮಾಜಿಕವಾಗಿ ಗೌರವ ವೃದ್ದಿಸಲಿದೆ. ವ್ಯಾಪಾರಿಗಳಿಗೆ ಉತ್ತಮ ಯಶಸ್ಸು ದೊರೆಯಲಿದೆ. ಕುಟುಂಬ ಸದಸ್ಯರಿಂದ ಶುಭ ಸುದ್ದಿಯನ್ನು ಕೇಳುವಿರಿ. ಹೊಂದಾಣಿಕಯಿಂದ ಕಾರ್ಯಾನುಕೂಲ.

ಇದನ್ನೂ ಓದಿ : ಮಗನ ಜೊತೆ ಪ್ರಪಂಚ ಸುತ್ತುವಾಸೆ: ರಾಯನ್ ರಾಜ್‌ ಸರ್ಜಾ ಬಗ್ಗೆ ನಟಿ ಮೇಘನಾ ರಾಜ್‌ ಮಾತು

ಸಿಂಹ ರಾಶಿ
ಹೊಸ ಆದಾಯದ ಮೂಲಗಳು ದೊರೆಯಲಿವೆ. ವಿದ್ಯಾರ್ಥಿಗಳು ಶಿಕ್ಷಣ ಕ್ಷೇತ್ರದಲ್ಲಿನ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವರು. ಉದ್ಯೋಗದ ಸ್ಥಳದಲ್ಲಿ ನಿಮ್ಮ ಗೌರವ ವೃದ್ದಿಸಲಿದೆ. ಆರೋಗ್ಯದ ವಿಚಾರದಲ್ಲಿ ಎಚ್ಚರಿಕೆಯಿಂದ ಇರಿ. ನಿಮ್ಮ ಖ್ಯಾತಿಯು ಇಂದು ವೃದ್ದಿಸಲಿದೆ.

ಕನ್ಯಾ ರಾಶಿ
ನಿಮ್ಮ ಪ್ರಗತಿಯು ಶತ್ರುಗಳು ಅಸಮಾಧಾನಗೊಳ್ಳುವಂತೆ ಮಾಡುತ್ತದೆ. ಸಹೋದರ, ಸಹೋದರಿಯ ನಡುವಿನ ಸಂಬಂಧ ಗಟ್ಟಿಯಾಗುತ್ತದೆ. ಹಣವನ್ನು ಸಾಲವಾಗಿ ಪಡೆಯುವ ಸಾಧ್ಯತೆಯಿದೆ. ಸಂಬಂಧಿಕರ ನಡುವೆ ಜಗಳವಾಡಬಹುದು.

ತುಲಾ ರಾಶಿ
ಹಿರಿಯರ ಸಲಹೆಯಿಂದ ಸಮಸ್ಯೆಗಳು ಪರಿಹಾರವಾಗಲಿದೆ. ಕುಟುಂಬ ಸದಸ್ಯರ ನಡುವೆ ಸಂತೋಷ ವೃದ್ದಿಸಲಿದೆ. ಶುಭ ಕಾರ್ಯಗಳಲ್ಲಿ ಭಾಗಿಯಾಗುವಿರಿ. ಆರ್ಥಿಕ ಸಮಸ್ಯೆ ಎದುರಾಗಲಿದೆ. ಶುಭ ಸುದ್ದಿಯನ್ನು ಕೇಳುವ ಸಾಧ್ಯತೆಯಿದೆ. ದೂರದ ಊರಿನಲ್ಲಿರುವ ಬಂಧುಗಳು ಮನೆಗೆ ಆಗಮಿಸುವ ಸಾಧ್ಯತೆಯಿದೆ.

ವೃಶ್ಚಿಕ ರಾಶಿ
ಉದ್ಯೋಗ ಕ್ಷೇತ್ರದಲ್ಲಿ ಹೊಸ ಆಲೋಚನೆಗಳು ಫಲಕೊಡುತ್ತದೆ. ಯಾವುದೇ ನಿರ್ಧಾರವನ್ನು ಕೈಗೊಳ್ಳುವಾಗ ಎಚ್ಚರಿಕೆಯಿಂದ ಇರಿ, ಇಲ್ಲವಾದ್ರೆ ಸಮಸ್ಯೆ ಎದುರಾಗುವ ಸಾಧ್ಯತೆಯಿದೆ. ಆರೋಗ್ಯದಲ್ಲಿ ಸಮಸ್ಯೆ ಉಂಟಾಗುವ ಸಾಧ್ಯತೆಯಿದೆ. ಸಕಾಲದಲ್ಲಿ ವೈದ್ಯರ ಸಮಸ್ಯೆಯನ್ನು ಪಾಲಿಸಿ.

ಇದನ್ನೂ ಓದಿ : ತಾಂತ್ರಿಕ ಸಮಸ್ಯೆ 34 ಲಕ್ಷಕ್ಕೂ ಅಧಿಕ ಕಾರುಗಳನ್ನು ವಾಪಾಸ್‌ ಪಡೆಯಲಿದೆ ಹ್ಯುಂಡೈ, ಕಿಯಾ ಕಂಪೆನಿ

ಧನಸ್ಸು ರಾಶಿ
ಉದ್ಯಮಿಗಳು ಇಂದು ಶತ್ರುಗಳಿಂದಲೂ ಪ್ರಶಂಸೆಯನ್ನು ಪಡೆಯಲಿದ್ದಾರೆ. ದೂರದ ಬಂಧುಗಳಿಂದ ಆರ್ಥಿಕ ಲಾಭವನ್ನು ಪಡೆಯುವ ಸಾಧ್ಯತೆಯಿದೆ. ಬಾಕಿ ಉಳಿದಿರುವ ಸರಕಾರಿ ಕೆಲಸಗಳು ಇಂದು ಪೂರ್ಣಗೊಳ್ಳಲಿದೆ. ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುವಿರಿ. ಧಾರ್ಮಿಕ ಕ್ಷೇತ್ರಗಳಿಗೆ ಭೇಟಿ.

ಮಕರ ರಾಶಿ
ಹೊಸ ಹೂಡಿಕೆ ಮಾಡಲು ಇಂದು ಉತ್ತಮ ದಿನ. ಉದ್ಯೋಗ ಕ್ಷೇತ್ರದಲ್ಲಿ ಹೊಸ ಭರವಸೆ ಮೂಡಲಿದೆ. ಸಂಜೆಯ ವೇಳೆಗೆ ತಾಯಿಯ ಆರೋಗ್ಯದ ಬಗ್ಗೆ ಚಿಂತನೆ ನಡೆಸಲಿದ್ದೀರಿ. ಸಂಬಂಧದಲ್ಲಿ ಬಿರುಕು ಮೂಡಲಿದೆ. ಸ್ನೇಹಿತರ ಸಹಕಾರದಿಂದ ವ್ಯವಹಾರ ಕ್ಷೇತ್ರದಲ್ಲಿ ಯಶಸ್ಸು ದೊರೆಯಲಿದೆ.

ಕುಂಭ ರಾಶಿ
ಅನಿರೀಕ್ಷಿತವಾಗಿ ದೂರ ಪ್ರಯಾಣ ಸಾಧ್ಯತೆಯಿದೆ. ಪ್ರೀತಿ ಪಾತ್ರರಿಂದ ನಕಾರಾತ್ಕಕ ಸುದ್ದಿಗಳನ್ನು ಕೇಳ ಬೇಕಾಗುತ್ತದೆ. ಧಾರ್ಮಿಕ ಪುಣ್ಯಕ್ಷೇತ್ರಗಳ ಭೇಟಿಯಿಂದ ಮನಸಿಗೆ ಸಂತಸ. ಮನೆ ಹಾಗೂ ಉದ್ಯೋಗದ ಸ್ಥಳದಲ್ಲಿ ಕಿರಿಕಿರಿ ಉಂಟಾಗುವ ಸಾಧ್ಯತೆಯಿದೆ.

ಇದನ್ನೂ ಓದಿ : ಕೋಟದಲ್ಲಿ ಲಾರಿ ಚಾಲಕರು, ಮಾಲೀಕರ ಮುಷ್ಕರ : ಜಿಲ್ಲಾಡಳಿತ ವಿರುದ್ದ ತೀವ್ರ ಆಕ್ರೋಶ

ಇತರರ ಜೊತೆ ವ್ಯವಹಾರ ನಡೆಸುವ ವೇಳೆಯಲ್ಲಿ ಜಾಗರೂಕರಾಗಿ ಇರಬೇಕು. ಪ್ರವಾಸದ ವೇಳೆಯಲ್ಲಿ ಅಮೂಲ್ಯ ವಸ್ತುಗಳನ್ನು ಕಳೆದುಕೊಳ್ಳುವ ಸಾಧ್ಯತೆಯಿದೆ. ಮಕ್ಕಳ ಭವಿಷ್ಯದ ಬಗ್ಗೆ ಚಿಂತೆ ನಿಮ್ಮನ್ನು ಕಾಡಲಿದೆ. ಭವಿಷ್ಯದ ದೃಷ್ಟಿಯಿಂದ ಹೂಡಿಕೆ ಮಾಡಲು ಇಂದು ಸಕಾಲ. ಕೌಟುಂಬಿಕವಾಗಿ ನೆಮ್ಮದಿ ದೊರೆಯಲಿದೆ.

Horoscope today september 29 2023 Zordic Sign today Sarvartha Siddi Yoga and amrutha Yoga

Comments are closed.