ನಿತ್ಯಭವಿಷ್ಯ : 26-06-2020

0

ಮೇಷರಾಶಿ
ಸರಕಾರಿ ಅಧಿಕಾರಿಗಳಿಗೆ ಸರಕಾರದ ಸಹಕಾರ ಸಿಗಲಿದೆ. ವ್ಯಾಪಾರ ವ್ಯವಹಾರದಲ್ಲಿ ಲಾಭ, ಅಧಿಕ ಧನಾಗಮನ, ಕೃಷಿಕರಿಗೆ ಅನುಕೂಲ, ಉದ್ಯೋಗಸ್ಥರಿಗೆ ಉತ್ತಮ, ಪ್ರೇಮದ ಬಲೆಗೆ ಸಿಲುಕುವಿರಿ, ಸಂಗಾತಿಯೊಂದಿಗೆ ವಿಹಾರ. ಆಗಾಗ ವೈದ್ಯಕೀಯವಾಗಿ ಧನವ್ಯಯ ಅಧಿಕವಾದೀತು. ವಾಹನ ಸಂಚಾರದಲ್ಲಿ ಜಾಗ್ರತೆ ಇರಬೇಕು.

ವೃಷಭರಾಶಿ
ಕಲಾವಿದರಿಗೆ ಅನುಕೂಲ, ಯಂತ್ರೋಪಕರಣಗಳಿಗೆ ಖರ್ಚು, ಶೀತ ಸಂಬಂಧಿತ ರೋಗ, ಗರ್ಭದೋಷ, ಆರೋಗ್ಯದಲ್ಲಿ ಏರುಪೇರು, ಸಾಲಬಾಧೆಯಿಂದ ಮಾನಹಾನಿ, ವ್ಯವಹಾರದಲ್ಲಿ ಅಡೆತಡೆ. ವಿಲಾಸಿ ಸಾಮಾನುಗಳಿಗಾಗಿ ಖರ್ಚು ತಂದೀತು. ವಿದ್ಯಾರ್ಥಿಗಳಿಗೆ ಉತ್ತಮ ಫ‌ಲಿತಾಂಶ ಸಿಗಲಿದೆ. ಆರೋಗ್ಯಭಾಗ್ಯ ಸ್ಥಿರವಾದೀತು. ದಾಂಪತ್ಯದಲ್ಲಿ ಸಂತಸ ತರಲಿದೆ.

ಮಿಥುನರಾಶಿ
ಕಾರ್ಮಿಕ ವರ್ಗದವರಿಗೆ ಆರ್ಥಿಕವಾಗಿ ಮುನ್ನಡೆ ತರಲಿದೆ. ನ್ಯಾಯಾಲಯದ ಕೆಲಸಗಳು ಉತ್ತಮ ರೀತಿಯಲ್ಲಿ ಮುಂದುವರಿಯಲಿವೆ. ಆಸೆ-ಆಕಾಂಕ್ಷೆಗಳಲ್ಲಿ ವಿಹಾರ, ನೆರೆಹೊರೆಯವರಿಂದ ಸಂಬಂಧ ವೃದ್ಧಿ, ಮಕ್ಕಳಿಂದ ನಷ್ಟ, ಅಲಂಕಾರಿಕ ವಸ್ತುಗಳ ಖರೀದಿಗಾಗಿ ಖರ್ಚು. ದಿನಾಂತ್ಯ ಶುಭವಾರ್ತೆ

ಕಟಕರಾಶಿ
ವ್ಯಾಪಾರ-ವ್ಯವಹಾರದಲ್ಲಿ ಲಾಭ, ಅಧಿಕ ಧನಾಗಮನ, ಸಂಪಾದನೆಯಲ್ಲಿ ವಿಪರೀತ ಖರ್ಚು, ಭೂ ವ್ಯವಹಾರದಲ್ಲಿ ಎಚ್ಚರಿಕೆ, ನಂಬಿಕಸ್ಥರಿಂದ ಮೋಸ ಸಾಧ್ಯತೆ, ಸಮುದ್ರ ಪ್ರದೇಶಗಳಲ್ಲಿ ಎಚ್ಚರಿಕೆ, ಗುಪ್ತ ವಿಚಾರಗಳು ಬಯಲು. ವೃತ್ತಿರಂಗದಲ್ಲಿ ಆರ್ಥಿಕವಾಗಿ ಸಮಸ್ಯೆಗಳು ತೋರಿ ಬಂದಾವು. ವಿದ್ಯಾರ್ಥಿಗಳು ತಮ್ಮ ಮನೋಕಾಮನೆಗಳನ್ನು ಪಡೆಯಲಿದ್ದಾರೆ.

ಸಿಂಹರಾಶಿ
ಕೌಟುಂಬಿಕವಾಗಿ ಆಗಾಗ ಸಮಸ್ಯೆಗಳನ್ನು ಪರಿಹರಿಸಬೇಕಾಗುತ್ತದೆ. ನೆರೆಹೊರೆಯ ಸ್ತ್ರೀಯರಿಂದ ಕಿರಿಕಿರಿ, ಉದ್ಯೋಗ ಸ್ಥಳದಲ್ಲಿ ಲಾಭ, ಮಿತ್ರರಿಂದ ಅನುಕೂಲ, ಮನರಂಜನೆಗಾಗಿ ಪ್ರವಾಸ, ಕಲಾವಿದರಿಗೆ ಸದಾವಕಾಶ, ಉದ್ಯೋಗ ಪ್ರಾಪ್ತಿ. ವ್ಯಾಪಾರ, ವ್ಯವಹಾರಗಳಲ್ಲಿ ಹೆಚ್ಚಿನ ಲಾಭವಾದೀತು. ಅನಿರೀಕ್ಷಿತವಾಗಿ ಶುಭಸುದ್ಧಿ ಅಚ್ಚರಿ ತಂದೀತು. ದೂರ ಸಂಚಾರದಲ್ಲಿ ಜಾಗ್ರತೆ ಅಗತ್ಯವಿದೆ.

ಕನ್ಯಾರಾಶಿ
ನಿಮ್ಮ ದುಡುಕುತನದಿಂದ ಸಮಸ್ಯೆಗಳು ಕಂಡು ಬರಲಿದೆ. ಮಿತ್ರರೊಂದಿಗೆ ಮೋಜು-ಮಸ್ತಿ, ಮಹಿಳೆಯರೊಂದಿಗೆ ಕಲಹ, ಉದ್ಯೋಗದಲ್ಲಿ ಕಿರಿಕಿರಿ, ಅಧಿಕ ಒತ್ತಡ, ಪ್ರಯಾಣದಲ್ಲಿ ಅಡೆತಡೆ, ಆಕಸ್ಮಿಕ ಶಕ್ತಿದೇವತೆಯ ದರ್ಶನ. ವೈಯಕ್ತಿಕವಾಗಿ ಮಾಡಿದ ತಪ್ಪುಗಳ ಬಗ್ಗೆ ಯೋಚಿಸುವುದು ಉತ್ತಮ. ಗ್ರಹಗಳ ಪ್ರತಿಕೂಲತೆಯಿಂದ ಅನೇಕ ರೀತಿಯ ಗೊಂದಲಗಳನ್ನನುಭವಿಸುವಿರಿ.

ತುಲಾರಾಶಿ
ಆರ್ಥಿಕ ಪರಿಸ್ಥಿತಿಯು ಸುಧಾರಿಸುತ್ತಾ ಹೋಗಲಿದೆ. ಸ್ನೇಹಿತರಿಂದ ಸಹಕಾರ, ಪಾಲುದಾರಿಕೆಯಲ್ಲಿ ಅನುಕೂಲ, ಮಹಿಳಾ ಮಿತ್ರರೊಂದಿಗೆ ಮನಃಸ್ತಾಪ, ಕೆಲಸ ಕಾರ್ಯಗಳಲ್ಲಿ ಯಶಸ್ಸು, ವ್ಯಾಪಾರ-ಉದ್ಯೋಗದಲ್ಲಿ ಅನುಕೂಲ, ವಾಹನಗಳಿಂದ ತೊಂದರೆ, ಆರೋಗ್ಯದಲ್ಲಿ ಏರುಪೇರು. ವೃಥಾ ಅವಮಾನಕ್ಕೆ ಗುರಿಯಾಗಲಿದ್ದೀರಿ. ಉದ್ಯೋಗಿಗಳು ತಮ್ಮ ಉದ್ಯೋಗದಲ್ಲಿ ಸಮಾಧಾನ ಪಡೆಯಲಿದ್ದಾರೆ. ಕಾರ್ಯಸಾಧನೆಯಿಂದ ಸಮಾಧಾನ.

ವೃಶ್ಚಿಕರಾಶಿ
ವಿಶೇಷ ಸಂಚಾರದಿಂದ ಕಾರ್ಯಸಿದ್ಧಿ ಇದೆ. ಸಂಗಾತಿಯೊಂದಿಗೆ ಶತ್ರುತ್ವ, ಪಾಲುದಾರಿಕೆ ಉದ್ಯಮದಲ್ಲಿ ತೊಂದರೆ, ಮಕ್ಕಳೊಂದಿಗೆ ಮನಃಸ್ತಾಪ, ಕಾರ್ಮಿಕರಿಂದ ತೊಂದರೆ, ಕೆಲಸ ಕಾರ್ಯಗಳಲ್ಲಿ ಒತ್ತಡ, ದೂರ ಪ್ರದೇಶ ಉದ್ಯೋಗಾವಕಾಶ. ವೈವಾಹಿಕ ಪ್ರಸ್ತಾವಗಳಿಗೆ ಅನುಕೂಲವಾಗಲಿದೆ. ಆರ್ಥಿಕವಾಗಿ ಹಣ ಸಂಪಾದನೆಯ ಸಾಧ್ಯತೆ ಇದೆ. ಉದ್ಯೋಗಿಗಳಿಗೆ ಮುಂಭಡ್ತಿಯ ಅವಕಾಶ ತಂದೀತು.

ಧನುರಾಶಿ
ವೈಯಕ್ತಿಕ ಆರೋಗ್ಯದ ಬಗ್ಗೆ ಗಮನವಿರಲಿ. ವೃತ್ತಿರಂಗದಲ್ಲಿ ನಿಮ್ಮ ಆಕಾಂಕ್ಷೆಗಳು ನೆರವೇರಲಿವೆ. ಶೀತ ಸಂಬಂಧಿತ ರೋಗಬಾಧೆ, ಆರೋಗ್ಯದಲ್ಲಿ ವ್ಯತ್ಯಾಸ, ಸಂತಾನ ದೋಷ, ಮಕ್ಕಳಿಂದ ಅನುಕೂಲ, ಭೂ ವ್ಯವಹಾರಗಳಲ್ಲಿ ಲಾಭ, ಅಮೂಲ್ಯ ವಸ್ತುಗಳನ್ನ ಕಳೆದುಕೊಳ್ಳುವಿರಿ. ಮನೆ ಬದಲಾವಣೆಯ ಸಾಧ್ಯತೆ ಇದೆ. ಕಾರ್ಯಕ್ಷೇತ್ರದಲ್ಲಿ ಒತ್ತಡದಿಂದ ದೇಹಾರೋಗ್ಯದಲ್ಲಿ ಪರಿಣಾಮ ಬೀರಬಹುದು.

ಮಕರರಾಶಿ
ಅವಿವಾಹಿತರ ವೈವಾಹಿಕ ಪ್ರಸ್ತಾವಗಳಿಗೆ ಕಂಕಣಬಲದ ಸಾಧ್ಯತೆ ಕಂಡು ಬರುತ್ತದೆ. ದೂರದ ವ್ಯಕ್ತಿಗಳು ನಿಮ್ಮ ಕಾರ್ಯಸಾಧನೆಗೆ ನೆರ‌ವಾಗಲಿದ್ದಾರೆ. ಆಕಸ್ಮಿಕವಾಗಿ ಪ್ರೀತಿ-ಪ್ರೇಮಕ್ಕೆ ಮನಸ್ಸು, ಮಕ್ಕಳು ಶತ್ರುವಾಗುವರು, ಒತ್ತಡಕ್ಕೆ ಸಿಲುಕುವಿರಿ, ಉದ್ಯೋಗ ನಷ್ಟದ ಭೀತಿ, ಮನಸ್ಸಿನಲ್ಲಿ ಆತಂಕ, ದಾಂಪತ್ಯದಲ್ಲಿ ಕಲಹ. ವ್ಯಾಪಾರ, ವ್ಯವಹಾರದಲ್ಲಿ ತುಸು ಚೇತರಿಕೆ ಇದೆ.

ಕುಂಭರಾಶಿ
ಅನಾವಶ್ಯಕವಾಗಿ ಚಿಂತಾಕ್ರಾಂತರಾಗಿ ಕೆಲಸಕಾರ್ಯಗಳಲ್ಲಿ ಹಿನ್ನಡೆಯನ್ನು ಅನುಭವಿಸಲಿದ್ದೀರಿ. ಸ್ಥಿರಾಸ್ತಿ-ವಾಹನ ಖರೀದಿಸುವ ಆಸೆ, ಸ್ನೇಹಿತರೊಂದಿಗೆ ತೀರ್ಥಯಾತ್ರೆ, ಶತ್ರುಗಳಿಂದ ಉತ್ತಮ ಅವಕಾಶ, ತಲೆ ನೋವು, ಉಸಿರಾಟದ ತೊಂದರೆ. ಸಾಂಸಾರಿಕವಾಗಿ ಪತ್ನಿಯ ಆರೋಗ್ಯದ ಬಗ್ಗೆ ಕಾಳಜಿ ವಹಿಸಿರಿ. ವಿದ್ಯಾರ್ಥಿಗಳು ಪ್ರಯತ್ನಬಲವನ್ನು ಹೆಚ್ಚಿಸಿರಿ.

ಮೀನರಾಶಿ
ಆಗಾಗ ಕಂಡು ಬರುವ ಸಮಸ್ಯೆಗಳನ್ನು ನೀವೇ ಪರಿಹ‌ರಿಸಬೇಕಾಗುತ್ತದೆ. ಮಕ್ಕಳೊಂದಿಗೆ ವಾಗ್ವಾದ, ಭೂ ವ್ಯವಹಾರ ನಿಮಿತ್ತ ಪ್ರಯಾಣ, ಭಾವನೆ-ಕಲ್ಪನೆಗಳಿಗೆ ಧಕ್ಕೆ, ಸರ್ಕಾರಿ ಅಧಿಕಾರಿಗಳಿಂದ ತೊಂದರೆ, ವಿದ್ಯುತ್ ಉಪಕರಣಗಳಿಂದ ನಷ್ಟ. ಹಿರಿಯರ ಆರೋಗ್ಯದ ಬಗ್ಗೆ ಹೆಚ್ಚಿನ ಗಮನ ಹರಿಸಬೇಕಾದೀತು. ನಿಮ್ಮ ದಾರಾಳತನ ಆರ್ಥಿಕವಾಗಿ ಸಮಸ್ಯೆಗಳನ್ನು ತಂದೊಡ್ಡಲಿದೆ. ಜಾಗ್ರತೆ.

Leave A Reply

Your email address will not be published.