ನಿತ್ಯ ಭವಿಷ್ಯ : 08-04-2020

0

ಮೇಷರಾಶಿ
ಪ್ರಯತ್ನ ಬಲದಿಂದ ಕಾರ್ಯಸಾಧನೆಗೆ ಅನುಕೂಲ. ನೌಕರ ವರ್ಗದವರಿಗೆ ಜೀವನ ಅಸಹನೀಯವಾಗಲಿದೆ. ಆರ್ಥಿಕವಾಗಿ ಕಷ್ಟನಷ್ಟಗಳು ಕಂಡು ಬಂದಾವು. ನಿರೀಕ್ಷಿತ ಯೋಜನೆ ಫಲಕೊಡಲಿದೆ. ಹಳೇಬಾಕಿ ಸಾಲಗಾರರು ಅಂತಹವನ್ನು ಸೃಷ್ಟಿಸಿಯಾರು. ಸಂಚಾರದಲ್ಲಿ ಜಾಗ್ರತೆ.

ವೃಷಭರಾಶಿ
ಆರ್ಥಿಕ ಸಂಕಷ್ಟ ಸಮಸ್ಯೆಗೆ ಸಿಲುಕಿಸಲಿದೆ. ಮನಸ್ಸು ನಿಯಂತ್ರಣಕ್ಕೆ ಸಿಗದ ಕುದುರೆಯಾಯಿತು. ಸಾಂಸಾರಿಕ ಹೊಂದಾಣಿಕೆ ಅತೀ ಅಗತ್ಯವಿದೆ. ವ್ಯವಹಾರ ಕ್ಷೇತ್ರದಲ್ಲಿಯೂ ಕಿರಿಕಿರಿ ಎನಿಸಲಿದೆ. ಸಾಂಸಾರಿಕವಾಗಿ ಅನಾವಶ್ಯಕವಾಗಿ ಸಮಸ್ಯೆಗಳನ್ನು ಸೃಷ್ಟಿಸದಿರಿ. ದೇವರ ಧಾನದಲ್ಲಿ ಶಾಂತಿ ಸಿಗಲಿದೆ.

ಮಿಥುನರಾಶಿ
ವೃತ್ತಿರಂಗದಲ್ಲಿ ಕೆಲಸ ಮಾಡಲೇ ಬೇಕಾದ ಅನಿವಾರ್ಯತೆ ಕಂಡು ಬಂದೀತು. ಅಧಿಕಾರಿ ವರ್ಗದವರಿಂದ ಕಿರಿಕಿರಿ, ನೌಕರ ವರ್ಗದವರಿಗೆ ವಿದ್ಯಾರ್ಥಿಗಳಿಗೆ ನಿರುತ್ಸಾಹ ಕಂಡು ಬರಲಿದೆ. ನಿಮ್ಮ ವಿಶ್ವಾಸದ ದುರುಪಯೋಗವಾಗದಂತೆ ನೋಡಿಕೊಳ್ಳಿ. ದಿನಾಂತ್ಯಕ್ಕೆ ಶುಭ ಸುದ್ದಿಯನ್ನು ಕೇಳುವಿರಿ.

ಕಟಕರಾಶಿ
ಖಾಸಗಿ ಕೆಲಸಗಾರರಿಗೆ ವೇತನದಲ್ಲಿ ಭಡ್ತಿ ದೊರಕಲಿದೆ. ಹೊಸ ಯೋಜನೆಯನ್ನು ರೂಪಿಸಲು ಸಕಾಲ, ವೃತ್ತಿರಂಗದಲ್ಲಿ ಸಮಸ್ಯೆಗಳು ಕಂಡು ಬಂದಾವು. ಹಳೆಯ ಯೋಜನೆಯ ಕುರಿತು ಮಾತುಕತೆ ನಡೆಸುವಿರಿ. ವಿತ್ತ ಖಾತೆಯ ಕೆಲಸಗಾರರಿಗೆ ಕೈತುಂಬಾ ಕೆಲಸವಿದೆ. ವ್ಯಾಸಂಗದಲ್ಲಿ ಭಂಗ ಬಂದೀತು.

ಸಿಂಹರಾಶಿ
ಸ್ವಂತ ಉದ್ಯೋಗಿಗಳಿಗೆ ಬದಲಾವಣೆಯ ಸಾಧ್ಯತೆ ಕಂಡು ಬರಲಿದೆ. ಹಿರಿಯರ ಆರೋಗ್ಯದ ಬಗ್ಗೆ ಗಮನ ಹರಿಸಿರಿ. ಯೋಜಿತ ಕೆಲಗಳಲ್ಲಿ ಗೆಲುವು, ನಿರೀಕ್ಷಿತ ಧನಾಗಮನ, ಸರಕಾರಿ ಕೆಲಸದಲ್ಲಿ ವಿಳಂಬ ತಂದೀತು. ಕೃಷಿ ಕಾರ್ಯದಲ್ಲಿ ಸರಕಾರದ ಸಹಕಾರವು ದೊರಕೀತು.

ಕನ್ಯಾರಾಶಿ
ದೂರ ಪ್ರಯಾಣ ಶುಭ ತರಲಾರದು. ಆರೋಗ್ಯದ ಬಗ್ಗೆ ಎಚ್ಚರಿಕೆ ಅಗತ್ಯ, ವ್ಯಾಪಾರ, ವ್ಯವಹಾರದಲ್ಲಿ ನೌಕರ ವರ್ಗದವರಿಂದ ವಿರೋಧ ಕಂಡು ಬಂದೀತು. ಮಕ್ಕಳ ಬಗ್ಗೆ ಜಾಗೃತೆವಹಿಸಿ, ಸಿಟ್ಟಿನ ನಿರ್ಣಯಗಳಿಂದ ಅನಾವಶ್ಯಕ ತೊಂದರೆಗಳನ್ನು ಅನುಭವಿಸಿ ವ್ಯಥೆ ಪಡುವಿರಿ.

ತುಲಾರಾಶಿ
ಸಾಂಸಾರಿಕವಾಗಿ ಐಕ್ಯಮತ್ಯಕ್ಕೆ ಕೊರತೆ ಇದ್ದು ಭಿನ್ನಾಭಿಪ್ರಾಯವು ಉಲ್ಬಣಿಸಲಿದೆ. ಮಂಗಲ ಕಾರ್ಯದ ಮಾತುಕತೆ ಮುಂದುವರಿಯಲಿದೆ. ಅನಾರೋಗ್ಯ ಸಮಸ್ಯೆ ನಿಮ್ಮನ್ನು ಚಿಂತೆಗೀಡು ಮಾಡಲಿದೆ. ಹಳೆ ಗೀಳು ವ್ಯಸನಿಗಳಿಗೆ ಪುನಃ ಆರಂಭದ ಭೀತಿ ತಂದೀತು.

ವೃಶ್ಚಿಕರಾಶಿ
ಆರ್ಥಿಕ ಸಮಸ್ಯೆ ನಿಮ್ಮನ್ನು ಕಾಡಲಿದೆ. ಬರಬೇಕಾದ ಹಣ ಕೈ ಸೇರದೆ ಚಿಂತೆಗೆ ಸಿಲುಕುವಿರಿ. ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಖರ್ಚು ಹೆಚ್ಚಲಿದೆ. ಅನಿರೀಕ್ಷಿತ ಪ್ರಯಾಣದಲ್ಲಿ ಅಪಘಾತ ಭೀತಿ ತಂದೀತು. ಬಂಡವಾಳ ಹೂಡಿಕೆ ಬಗ್ಗೆ ಹೆಚ್ಚಿನ ಜಾಗ್ರತೆ ವಹಿಸಿರಿ. ಆರೋಗ್ಯದಲ್ಲಿ ಸುಧಾರಣೆ ಇದೆ.

ಧನುರಾಶಿ
ಮೇಲಾಧಿಕಾರಿಗಳಿಂದ ಕಿರಿಕಿರಿ, ಆರ್ಥಿಕವಾಗಿ ಪರಾಶ್ರಯಕ್ಕೆ ಒಡ್ಡ ಬೇಕಾದೀತು. ನಿರುದ್ಯೋಗಿಗಳಿಗೆ ತಾತ್ಕಾಲಿಕ ಉದ್ಯೋಗ ಲಾಭವಾದೀತು. ಸಾಂಸಾರಿಕವಾಗಿ ತುಸು ನೆಮ್ಮದಿ ನೀಡಲಿದೆ. ಮನೆಯಲ್ಲಿ ಮಡದಿಯ ಸಹಕಾರ ಕಾರ್ಯಸಾಧನೆಗೆ ಅನುಕೂಲವಾಗಲಿದೆ.

ಮಕರರಾಶಿ
ಆರೋಗ್ಯದ ಏರುಪೇರಿನಿಂದ ಮನಸ್ಸಿಗೆ ಕ್ಷೇಶವಾದೀತು. ದೂರ ಪ್ರಯಾಣ ಮಾಡುವಿರಿ, ವೃತ್ತಿರಂಗ ಕಾರ್ಯ ಒತ್ತಡವು ಸುಖ, ನೆಮ್ಮದಿಯನ್ನು ಹಾಳು ಮಾಡಲಿದೆ. ಮಾತಿನಲ್ಲಿ ಆದಷ್ಟು ಕಡಿವಾಣವಿರಲಿ; ಸಂಯಮವಿರಲಿ. ನಿರೀಕ್ಷಿತ ಕೆಲಸಗಳಲ್ಲಿ ಯಶಸ್ಸು ನಿಮ್ಮದಾಗಲಿದೆ.

ಕುಂಭರಾಶಿ
ಅನಿರೀಕ್ಷಿತ ಕಿರು ಪ್ರಯಾಣ, ವಿದ್ಯಾರ್ಥಿಗಳಿಗೆ ವಿದ್ಯಾರ್ಜನೆಯಲ್ಲಿ ಅಡಚಣೆಗಳು ತೋರಿಬಂದಾವು. ಜ್ಞಾನದಾಯಿಗಳಿಗೆ ಸಕಾಲ. ಸಮಯವನ್ನು ಸದುಪಯೋಗಿಸಿಕೊಳ್ಳಿರಿ. ಸಾಂಸಾರಿಕವಾಗಿ ನೆಮ್ಮದಿ ಮನೆಯಲ್ಲಿ ಮಂಗಲ ಕಾರ್ಯದ ಚಿಂತನೆ ಕಾರ್ಯಗತವಾಗಲಿದೆ. ದಿನಾಂತ್ಯಕ್ಕೆ ಶುಭಸುದ್ದಿ.

ಮೀನರಾಶಿ
ಹಳೇ ಬಾಕಿ ಮರುಪಾವತಿಯಾಗಿ ಸಂತಸ ತರಲಿದೆ. ವ್ಯವಹಾರದಲ್ಲಿ ತುಸು ಚೇತರಿಕೆಯನ್ನು ಕಾಣುವಿರಿ. ಆರೋಗ್ಯದ ಬಗ್ಗೆ ಕಾಳಜಿ ಅಗತ್ಯ. ಹೊಸ ಯೋಜನೆಯನ್ನು ನಿಮ್ಮ ಕೈ ಸೇರಲಿದೆ.ಯೋಗ್ಯ ವಯಸ್ಕರಿಗೆ ಅನಿರೀಕ್ಷಿತ ರೂಪದಲ್ಲಿ ಧನಾಗಮವಿದೆ. ದಿನಾಂತ್ಯ ಅನಿರೀಕ್ಷಿತ ಶುಭವಾರ್ತೆ ಕೇಳುವಿರಿ.

Leave A Reply

Your email address will not be published.