ನಿತ್ಯಭವಿಷ್ಯ: 24-03-2020

0

ಮೇಷರಾಶಿ
ಕುಟುಂಬ ಸೌಖ್ಯ, ನೂತನ ಉದ್ಯೋಗ ಪ್ರಾಪ್ತಿ, ತೀರ್ಥಯಾತ್ರೆ ದರ್ಶನ, ಶ್ರಮಕ್ಕೆ ತಕ್ಕ ಫಲ, ಆರ್ಥಿಕ ಪರಿಸ್ಥಿತಿ ಚೇತರಿಕೆ. ವೃತ್ತಿರಂಗದಲ್ಲಿ ಒತ್ತಡಗಳಿಂದ ಕೆಲಸಕಾರ್ಯಗಳು ವಿಳಂಬವಾದಾವು. ದಂಪತಿಗಳಿಗೆ ಶುಭವಾರ್ತೆ ಸಂತಸ ತರಲಿದೆ. ವಿದ್ಯಾರ್ಥಿಗಳಿಗೆ ಗೊಂದಲಗಳು ಕಿರಿಕಿರಿಯೆನಿಸುವುದು.

ವೃಷಭರಾಶಿ
ಆರೋಗ್ಯಭಾಗ್ಯ ವರ್ಧಿಸಲಿದೆ. ವೃತ್ತಿರಂಗದಲ್ಲಿ ಚಟುವಟಿಕೆಯ ದಿನಗಳಿವು. ನಿರುದ್ಯೋಗಿಗಳಿಗೆ ಉದ್ಯೋಗದ ಅವಕಾಶಗಳು ವಿಳಂಬ ತಂದಾವು. ಹಿತಶತ್ರುಗಳು ನಿಮ್ಮಿಂದ ದೂರವಾಗಲಿದ್ದಾರೆ. ಜಾಗ್ರತೆ ಇರಲಿ. ಸ್ಥಗಿತ ಕಾರ್ಯಗಳಲ್ಲಿ ಮುನ್ನಡೆ, ಋಣ ಬಾಧೆ, ಯತ್ನ ಕಾರ್ಯದಲ್ಲಿ ಜಯ, ರೋಗ ಬಾಧೆ, ಹಿತ ಶತ್ರುಗಳಿಂದ ತೊಂದರೆ.

ಮಿಥುನರಾಶಿ
ವೈಯಕ್ತಿಕ ಕೆಲಸಗಳಲ್ಲಿ ಭಾಗಿ, ಹಣಕಾಸು ವಿಚಾರದಲ್ಲಿ ಎಚ್ಚರ, ಹಿರಿಯರ ಆಗಮನ, ಆರೋಗ್ಯದಲ್ಲಿ ಏರುಪೇರು. ಈದಿನವು ಮಿಶ್ರಫ‌ಲದಾಯಕವಾಗಿರು ದೆ. ವೈವಾಹಿಕ ಪ್ರಸ್ತಾವಗಳು ಕಂಕಣಬಲವನ್ನು ತಂದುಕೊಟ್ಟರೂ ಪ್ರಯತ್ನಬಲದ ಅಗತ್ಯವಿದೆ. ಮಾತಿನಿಂದ ವಾದ, ವಿವಾದಕ್ಕೆ ಕಾರಣರಾಗದಂತೆ ವರ್ತಿಸುವುದು.

ಕಟಕರಾಶಿ
ಮನಸ್ಸಿನಲ್ಲಿ ನಾನಾ ರೀತಿಯ ತೊಂದರೆ, ಕಳೆದು ಹೋದ ವಸ್ತು ಸಿಗುವುದು, ಶ್ರೀದೇವರ ಪ್ರಾರ್ಥನೆ, ಶಾಂತಿ ಸಮಾಧಾನವನ್ನು ತಂದುಕೊಡಲಿದೆ. ಆರ್ಥಿಕವಾಗಿ ನಾನಾ ರೀತಿಯಲ್ಲಿ ಖರ್ಚುವೆಚ್ಚಗಳು ಆತಂಕ ತಂದಾವು. ಅನಾವಶ್ಯಕ ಅಧಿಕ ಖರ್ಚುವೆಚ್ಚಗಳು ಕಂಡು ಬಂದಾವು. ಆತ್ಮೀಯರಿಂದ ಸಹಕಾರ, ಮಗನ ವಿದ್ಯಾಭ್ಯಾಸಕ್ಕೆ ನೆರವು.

ಸಿಂಹರಾಶಿ
ವಾಹನ ಲಾಭ, ಶುಭಮಂಗಲ ಕಾರ್ಯಗಳಿಗೆ ಪ್ರತಿಬಂಧಕಗಳು ಕಂಡು ಬರುತ್ತವೆ. ಸಂಚಾರದಲ್ಲಿ ವಾಹನ ಚಾಲನೆಯಲ್ಲಿ ಹೆಚ್ಚಿನ ಜಾಗ್ರತೆ ವಹಿಸಿರಿ. ಹಿತಶತ್ರುಗಳು ನಿಮಗೆ ತೊಂದರೆಕೊಟ್ಟರೂ ಚೇತರಿಸಿಕೊಳ್ಳುವ ಭೀತಿ ನಿಮಗಿದೆ. ಯೋಚಿಸಿ ನಿರ್ಧಾರ ಕೈಗೊಳ್ಳುವುದು ಉತ್ತಮ, ಅನಗತ್ಯ ವಿಚಾರಗಳಿಂದ ದೂರವಿರಿ, ಶರೀರದಲ್ಲಿ ತಳಮಳ.

ಕನ್ಯಾರಾಶಿ
ಉದ್ಯೋಗ ವರ್ಗದವರಿಗೆ ಬದಲಾವಣೆಗಳು ಕಂಡು ಬಂದಾವು. ನಡೆದ ಘಟನೆಗಳನ್ನು ಸೂಕ್ಷ್ಮವಾಗಿ ಅವಲೋಕಿಸಿ, ಹಳೆಯ ಬಂಧುಬಾಂದವರ ಸಮಾಗಮ ತುಸು ಸಮಾಧಾನ ತರಲಿದೆ. ಆರೋಗ್ಯದ ಬಗ್ಗೆ ಯೋಚಿಸುವಂತಾದೀತು. ರಾಜಕೀಯದವರಿಗೆ ನೆಮ್ಮದಿ ಇರದು. ಅಧಿಕವಾದ ಖರ್ಚು, ದುಷ್ಟ ಜನರ ಸಹವಾಸದಿಂದ ತೊಂದರೆ, ಕೆಲಸ ಕಾರ್ಯಗಳಲ್ಲಿ ಎಚ್ಚರಿಕೆ.

ತುಲಾರಾಶಿ
ಹೊಸ ಕೆಲಸ ಹುಡುಕಾಟಕ್ಕೆ ಅವಕಾಶ, ಸಾಮಾಜಿಕ ಕಾರ್ಯರಂಗದಲ್ಲಿ ನಿಮ್ಮ ಕಾರ್ಯಗಳು ಫ‌ಲ ನೀಡಲಿವೆ. ಭೂಸಂಬಂಧಿ ವ್ಯವಹಾರಗಳು ಲಾಭಕರವಾಗಬಹುದು. ಯುವತಿಯರ ಪ್ರೇಮಪಾಶಕ್ಕೆ ಕಂಕಣಬಲದ ಯೋಗವಿದೆ. ವಿದ್ಯಾರ್ಥಿಗಳಿಗೆ ಶುಭವಿದೆ. ದೇವರ ಅನುಗ್ರಹದಿಂದ ಅನುಕೂಲ, ಶುಭ ಫಲ ಯೋಗ, ಮಾನಸಿಕ ನೆಮ್ಮದಿ.

ವೃಶ್ಚಿಕರಾಶಿ
ಕುಟುಂಬಸ್ಥರಿಂದ ಸಹಾಯ, ವೈವಾಹಿಕ ಮಾತುಕತೆ ಮುಂದುವರಿಯಲಿದೆ. ಆರ್ಥಿಕ ಮುನ್ನಡೆಯನ್ನು ನಾನಾ ರೀತಿಯಲ್ಲಿ ಸಾಧಿಸಲಿದ್ದೀರಿ. ವಿದ್ಯಾರ್ಥಿಗಳು ಮಾಡಿದ ಪ್ರಯತ್ನಬಲಕ್ಕೆ ನಿಶ್ಚಿತವಾದ ಫ‌ಲ ಸಿಗಲಿದೆ. ವ್ಯಾಪಾರ, ವ್ಯವಹಾರದಲ್ಲಿ ಉನ್ನತಿ ಇದೆ. ಸುಖ ಭೋಜನ ಪ್ರಾಪ್ತಿ, ವ್ಯಾಪಾರದಲ್ಲಿ ಲಾಭ, ಶತ್ರುಗಳ ನಾಶ, ರೋಗ ಬಾಧೆ.

ಧನಸ್ಸುರಾಶಿ
ಹಿರಿಯರಿಗೆ ಮನೆಯಲ್ಲಿ ಮಾನಸಿಕ ಶಾಂತಿ, ಸಮಾಧಾನ ಸಿಗಲಿದೆ. ಹಳೆಯಬಾಕಿ ವಸೂಲಿ ಆಗಲೂ ಪ್ರಯತ್ನ ಇರಲಿ. ಕೆಲಸಕಾರ್ಯಗಳು ಹಣದ ಮುಗ್ಗಟ್ಟಿನಿಂದ ವಿಳಂಬ ತಂದಾವು. ಕೆಲಸದಲ್ಲಿ ನೆಮ್ಮದಿ ಸಿಗಲಿದೆ. ದೇವತಾ ಕಾರ್ಯಗಳಲ್ಲಿ ಭಾಗಿ, ಇತರರಿಗೆ ಸಹಾಯ ಮಾಡುವಿರಿ, ದಾನ ಮಾಡುವ ಪರಿಸ್ಥಿತಿ ನಿರ್ಮಾಣ, ಕೆಲಸ ಕಾರ್ಯಗಳಲ್ಲಿ ಮುನ್ನಡೆ.

ಮಕರರಾಶಿ
ಮಕ್ಕಳ ಪ್ರಗತಿಯಿಂದ ಸಂತೋಷ, ಕೆಲಸಕಾರ್ಯಗಳಲ್ಲಿ ಅಡಚಣೆಗಳು ಕಂಡು ಬಂದಾವು. ಸಂಗ್ರಹಿಸಿಟ್ಟ ಹಣವು ನೀರಿನಂತೆ ಖರ್ಚಾಗಲಿದೆ. ಹಳೆಯ ವ್ಯಾಜ್ಯಗಳು ನ್ಯಾಯಾಲಯದ ದರ್ಶನ ಮಾಡಿಸಬಹುದು. ನೂತನ ಕೆಲಸಕಾರ್ಯಗಳಿಗೆ ಉತ್ತಮ ಸಮಯವಲ್ಲ. ಇಷ್ಟಪಟ್ಟಂತೆ ಕಾರ್ಯಗಳು ನೆರವೇರುವುದು, ಸುಖ ಭೋಜನ, ಉದ್ಯೋಗದಲ್ಲಿ ಬಡ್ತಿ.

ಕುಂಭರಾಶಿ
ವಿದ್ಯಾರ್ಥಿಗಳಲ್ಲಿ ಗೊಂದಲ, ಹಣದ ಅಪವ್ಯಯ, ಮುನ್ನಡೆಗೆ ಕಷ್ಟವಾಗುತ್ತದೆ. ಸರಕಾರದ ಕೆಲಸ ಕಾರ್ಯಗಳಲ್ಲಿ ಅಪಜಯದ ಛಾಯೆ ಕಾಣಿಸಲಿದೆ. ನಿರುದ್ಯೋಗಿಗಳಿಗೆ ತಾತ್ಕಾಲಿಕ ಉದ್ಯೋಗ ದೊರಕಲಿದೆ. ದಾಂಪತ್ಯದಲ್ಲಿ ಅಭಿಪ್ರಾಯ ಭೇದ ಕಾಣಿಸಲಿದೆ. ನೀವಾಡುವ ಮಾತಿನಲ್ಲಿ ಎಚ್ಚರ, ಮಾನಸಿಕ ವ್ಯಥೆ, ವಿವಿಧ ಮೂಲಗಳಿಂದ ಹಣಕಾಸು ಪ್ರಾಪ್ತಿ.

ಮೀನರಾಶಿ
ಸ್ತ್ರೀಯರಿಗೆ ಲಾಭ, ನಾನಾ ವಿಚಾರಗಳಲ್ಲಿ ಆಸಕ್ತಿ, ಅನ್ಯರಲ್ಲಿ ದ್ವೇಷ, ವೃತ್ತಿರಂಗದಲ್ಲಿ ಲಂಚ ಆಮಿಷಕ್ಕೆ ಕಾರಣರಾಗ ದಂತೆ ಜಾಗ್ರತೆ ವಹಿಸಿರಿ. ಸಾಂಸಾರಿಕವಾಗಿ ಆಗಾಗ ಸಾಮರಸ್ಯದ ಕೊರತೆ ಕಾಣಿಸಬಹುದು. ಸಂಚಾರ ವೃತ್ತಿಯವರಿಗೆ ಚೇತರಿಕೆ ತರುತ್ತದೆ. ಮಿತ್ರರ ಸಹಕಾರದಿಂದ ಕಾರ್ಯಸಿದ್ದಿ ಇದೆ. ಆರೋಗ್ಯದಲ್ಲಿ ಏರುಪೇರು, ಸದಾ ತಿರುಗಾಟ, ಹೊಸ ಪ್ರಯತ್ನದಲ್ಲಿ ಜಯ

Leave A Reply

Your email address will not be published.