ಜನತಾ ಕರ್ಪ್ಯೂಗೆ ನಿಜಾರ್ಥ ಕೊಟ್ಟ ಚಪ್ಪಾಳೆ !

0

ನನಗೆ ಯಾರು ಚಪ್ಪಾಳೆ ತಟ್ಟಿದ್ದು ವಿಶೇಷ ಅನಿಸಲಿಲ್ಲ. ಚಪ್ಪಾಳೆ ತಟ್ಟದೆ ಸಾಮಾಜಿಕ ಜಾಲತಾಣದಲ್ಲಿ ಉದ್ದುದ್ದ ಬರೆದವರ ಬಗ್ಗೆಯಂತೂ ಪಾಪ ಎನ್ನುವ ಕನಿಕರದ ಭಾವನೆ ಮೂಡಿತು ಹೊರತಾಗಿ ಬೇರೆನೂ ಅನಿಸಲಿಲ್ಲ.! ಕಾರಣ ಏನಿಲ್ಲ, ಅವರು ಪಾಪ ಅಷ್ಟೇ! ! ಅಂತವರಿಗೆ ನಾಲ್ಕು ಅಕ್ಷರ ಗೀಚಲು ಸಿಗೋದು ಇಂತಹ ಸಮಯ ಮಾತ್ರ.! ಬೇರೆ ಸಮಯದಲ್ಲಿ ಅವರನ್ನು ಯಾರಾದರೂ ಸೀರಿಯಸ್ ಆಗಿ ತಗೊತೀವಾ ಹೇಳಿ. #ಈ #ವಿಡಿಯೊ #ನೋಡಿ. ಗೆಳೆಯರೊಬ್ಬರು ಕಳಿಸಿದ ವಿಡಿಯೊ. ಹೀಗೆ ಚಪ್ಪಾಳೆ ತಟ್ಟುತ್ತಾ ನಿಂತಿರುವ ವ್ಯಕ್ತಿ ಏನು ಕೆಲಸ ಮಾಡ್ತಾರೆ ಎನ್ನೋದು ಮುಖ್ಯ ಅಲ್ಲ. ಅವರನ್ನು ನೋಡಿದ್ರೆ ಅವರು ಏನು ಕೆಲಸ ಮಾಡುತ್ತಿರಬಹುದು ಎನ್ನೋದು ನಿಮಗೆ ಗೊತ್ತಾಗುತ್ತೆ. ಆತನ ಚಪ್ಪಾಳೆಯಲ್ಲಿ ಸ್ವಾರ್ಥ ಇಲ್ಲ. ಆತನ ಚಪ್ಪಾಳೆಯಲ್ಲಿ ವ್ಯಂಗ್ಯ ಇಲ್ಲ. ಆತನ ಚಪ್ಪಾಳೆಯಲ್ಲಿ ವಿಡಂಬನೆಯೂ ಇಲ್ಲ. ನನ್ನ ಸುತ್ತ ಮುತ್ತ ನಾಲ್ಕು ಜನ ಚಪ್ಪಾಳೆ ತಟ್ಟುತ್ತಿದ್ದಾರೆ. ಅವರು ಏನೊ ಒಳ್ಳೆಯದಕ್ಕೆ ಚಪ್ಪಾಳೆ ತಟ್ಟುತ್ತಿರಬಹುದು ಎಂದು ಭಾವಿಸಿ ಆತನ ಬೆನ್ನಿಗೆ ಜೋಳಿಗೆ ನೇತು ಬಿದ್ದಿದ್ದರು ಎರಡು ಕೈ ಜೋಡಿಸಿ ಚಪ್ಪಾಳೆ ಹಾಕಿದ. ಇದು ಅದ್ಭುತ, ಇದು ಅವಿಸ್ಮರಣೀಯ, ಇದು ಭಾರತದ ಶಕ್ತಿ. ನಾವೆಲ್ಲಾ ಒಂದು ಎಂದು ಬಾಯ್ ಮಾತಿಗೆ ಹೇಳೋದು ಅಲ್ಲ. ಅಥವಾ ಚಪ್ಪಾಳೆ ತಟ್ಟದೆ ಮೋದಿ ಮೇಲಿನ ಸಿಟ್ಟನ್ನು ಈ ಸಮಯದಲ್ಲಿ ಅಭಿವ್ಯಕ್ತ ಪಡಿಸೋದು ಒಗ್ಗಟ್ಟಲ್ಲ. ದೇಶದ ಒಳಿತಿಗೆ ಪ್ರಧಾನಿ ಕರೆ ಕೊಟ್ಟಿದ್ದು ನಿಮ್ಮ ದೃಷ್ಟಿಯಲ್ಲಿ ಅವರ ಸ್ವಾರ್ಥ ಎಂದೇ ಭಾವಿಸೋಣ. ಆದರೆ ಅದರೊಳಗಿರುವ ಉದ್ದೇಶ ಉತ್ತಮವಾಗಿದೆಯಲ್ಲ. ಒಂದು ವ್ಯವಸ್ಥೆ ಒಳಗಡೆ ಕೆಲಸ ಮಾಡಿದವರಿಗೆ ಚಪ್ಪಾಳೆಯ ಶಕ್ತಿ ಏನು ಎನ್ನೋದು ಅರ್ಥ ಆಗತ್ತೆ. ಚಪ್ಪಾಳೆಯೊಳಗೆ ಒಬ್ಬ ವ್ಯಕ್ತಿಯ ಧೈರ್ಯ ಸ್ಥೈರ್ಯ ಮನೋಬಲ ಹೆಚ್ಚಿಸುವ ಶಕ್ತಿ ಇದೆ. ಮಂತ್ರ ಇದೆ. ಅದನ್ನು ಬಲ್ಲವರಿಗೆ ಚಪ್ಪಾಳೆಯ ಸತ್ವ, ತತ್ವ, ಗಂಭೀರತೆ ಅರ್ಥವಾಗುತ್ತದೆ. ಮಾಜಿ ಪ್ರಧಾನಿ ದಿವಂಗತ ಲಾಲ್ ಬಹುದ್ದೂರ್ ಶಾಸ್ತ್ರಿಗಳು ವಾರದ ಮೊದಲ ದಿನ ಸೋಮವಾರ ಒಂದು ಹೊತ್ತು ಊಟ ಬಿಡಿ ಎಂದು ಮೊದಲು ದೇಶದ ಜನತೆಗೆ ಹೇಳಲಿಲ್ಲ. ತಮ್ಮ ಕುಟುಂಬದವರಿಗೆ ಹೇಳಿದ್ರು. ತಾನು ಪಾಲಿಸಿ ಬಳಿಕ ದೇಶದ ಜನತೆಯ ಮುಂದಿಟ್ಟರು. ಅದನ್ನು ದೇಶದ ಮಕ್ಕಳು ಚಾಚು ತಪ್ಪದೆ ಪಾಲಿಸಿದರು. ಸೋಮವಾರ ಒಂದು ಹೊತ್ತು ಯಾಕೆ ಹಳೆಯ ಜನರು ಊಟ ಬಿಡ್ತಾ ಇದ್ರು ಎನ್ನೋದು ಬಹುತೇಕರಿಗೆ ಗೊತ್ತಿಲ್ಲ. ಅದಕ್ಕೆ ಪಳಾರ ಅಂತಾರೆ, ಅಥವಾ ಒಪ್ಪತ್ತು ಅಂತಾರೆ. ಅಂದರೆ ಒಂದೇ ಹೊತ್ತು ಊಟ ಮಾಡೋದಕ್ಕೆ ಕರೆಯುವ ಹೆಸರದು. ಕೆಲವರು ಈಗಲೂ ಸೋಮವಾರ ಒಂದು ಹೊತ್ತು ಊಟ ಮಾಡ್ತಾರೆ ಅಂದ್ರೆ ಅದಕ್ಕೆ ಕಾರಣ ಲಾಲ್ ಬಹದ್ದೂರ್ ಶಾಸ್ತ್ರಿಗಳ ಕರೆ ಅದು. ಹಳ್ಳಿಗಳಲ್ಲಿ ಬಹಳಷ್ಟು ಕುಟುಂಬ ಈಗಲೂ ಅದನ್ನು ಮುಂದುರಿಸಿದ್ದಾರೆ. ನನ್ನ ಕುಟುಂಬದಲ್ಲೂ ಕೆಲವರು ಈಗಲೂ ಸೋಮವಾರ ಒಂದೇ ಹೊತ್ತು ಊಟ ಮಾಡ್ತಾರೆ. ಹೀಗಾಗಿ ಒಪ್ಪತ್ತಿನ ಉದ್ದೇಶದ ಬಗ್ಗೆ ಗೊತ್ತಿದೆ. ಹೀಗೆ ದೇಶಕ್ಕೆ ಕಷ್ಟ ಎದುರಾದಾಗೆಲ್ಲಾ ನಮ್ಮ ದೇಶ ಒಂದಾಗಿದೆ. ನಮ್ಮ ಜನ ಸ್ಪಂದಿಸಿದ್ದಾರೆ. ನಮ್ಮ ಮನಸ್ಸು ಒಂದು ಕರೆಗೆ ಕಿವಿಯಾಗಿದೆ. ಇಂದು ಕೂಡ ಅಂತಹುದೇ ಒಗ್ಗಟ್ಟಿನ ವೈಭವ ಕಂಡು ಬಂತು. ಇದು ಮುಂದುವರಿಯಲಿ. #ಜನತಾಕರ್ಫ್ಯು

  • ರವಿ ಶಿವರಾಮ್

Leave A Reply

Your email address will not be published.