ದಿನಭವಿಷ್ಯ : ಈ ರಾಶಿಯವರಿಗೆ ಅದೃಷ್ಟದ ದಿನ

Today Horoscope : ಮೇಷ ರಾಶಿ
ನಿಮ್ಮ ಪಾಲಿಗೆ ಇಂದು ಉತ್ತಮವಾದ ದಿನ. ನೀವು ಮಾಡುವ ಕೆಲಸಗಳಲ್ಲಿ ಸ್ಪಷ್ಟತೆ ಇರುತ್ತದೆ. ಮಹತ್ವದ ನಿರ್ಧಾರಗಳನ್ನು ತೆಗೆದುಕೊಳ್ಳುವಲ್ಲಿ ಯಶಸ್ವಿಯಾಗುತ್ತೀರಿ. ದೀರ್ಘಕಾಲದಿಂದ ಬಾಕಿ ಉಳಿದಿರುವ ಕೆಲಸಗಳು ಪೂರ್ಣಗೊಳ್ಳುತ್ತವೆ. ಆರ್ಥಿಕ ಸ್ಥಿತಿ ಉತ್ತಮವಾಗಿರುತ್ತದೆ. ಹಳೆಯ ಹೂಡಿಕೆಗಳಿಂದಲೂ ಲಾಭ ಆಗಬಹುದು.

ವೃಷಭ ರಾಶಿ
ಇಂದಿನ ದಿನವು ಮಿಶ್ರಫಲವನ್ನು ನೀಡುತ್ತದೆ. ಭಾವನಾತ್ಮಕವಾಗಿ ಅಸ್ಥಿರತೆ ಇರಬಹುದು. ಆದರೆ ತಾಳ್ಮೆಯಿಂದ ಇರಬೇಕು. ದಿನದ ಆರಂಭದಲ್ಲಿ ಸ್ವಲ್ಪ ಆಲಸ್ಯ ಇರಬಹುದು. ಕೆಲಸದ ಸ್ಥಳದಲ್ಲಿ ನಿಮ್ಮ ಮಾತಿನ ಮೇಲೆ ಹಿಡಿತವಿರಲಿ. ಸಹೋದ್ಯೋಗಿಗಳ ಸಹಕಾರದಿಂದ ಕೆಲಸ ಸುಗಮವಾಗುತ್ತದೆ.

ಮಿಥುನ ರಾಶಿ
ನಿಮಗೆ ಇಂದು ದೂರ ಪ್ರಯಾಣದ ಯೋಗವಿದೆ. ಸ್ನೇಹಿತರು ಮತ್ತು ಸಹೋದರರಿಂದಲೂ ಬೆಂಬಲ ಸಿಗಲಿದೆ. ನಿಮ್ಮ ಯೋಚನೆಗಳು ಫಲ ನೀಡಲಿದೆ.ಹಣಕಾಸಿನ ವಿಚಾರದಲ್ಲಿ ಯೋಚಿಸಿ ಮುಂದುವರಿಯಿರಿ. ಅನಗತ್ಯ ಖರ್ಚುಗಳನ್ನು ನಿಯಂತ್ರಿಸಿ. ನಿಮ್ಮ ಆರೋಗ್ಯದ ಬಗ್ಗೆ ಗಮನ ಹರಿಸಿ.

ಕರ್ಕಾಟಕ ರಾಶಿ
ನಿಮ್ಮಲ್ಲಿ ಆತ್ಮವಿಶ್ವಾಸ ಹೆಚ್ಚಲಿದೆ. ಸುತ್ತಮುತ್ತಲಿನ ಜನರ ಮೇಲೆ ನೀವು ಧನಾತ್ಮಕ ಪ್ರಭಾವ ಬೀರುತ್ತೀರಿ. ನಿಮ್ಮ ಆಸೆಗಳನ್ನು ಈಡೇರಿಸಿಕೊಳ್ಳಲು ಉತ್ತಮವಾದ ದಿನ. ಕಾರ್ಯಕ್ಷೇತ್ರದಲ್ಲಿ ನೀವು ಕೈಗೊಂಡ ನಿರ್ಧಾರಗಳು ಯಶಸ್ವಿ ಆಗುತ್ತವೆ. ಹೊಸ ಯೋಜನೆಗಳನ್ನು ಆರಂಭಿಸಲು ಇಂದು ಉತ್ತಮವಾದ ದಿನ.

ಸಿಂಹ ರಾಶಿ
ನಿಮ್ಮ ಮಾತು, ನಿಮ್ಮ ವ್ಯಕ್ತಿತ್ವ ನಿಮ್ಮನ್ನು ಪ್ರಭಾವಶಾಲಿಯನ್ನಾಗಿ ಮಾಡುತ್ತದೆ. ನಿಮ್ಮ ನಾಯಕತ್ವದ ಗುಣಗಳು ಮೆಚ್ಚುಗೆಗೆ ಪಾತ್ರವಾಗುತ್ತದೆ. ಸಾರ್ವಜನಿಕ ಜೀವನದಲ್ಲಿ ನಿಮ್ಮ ಗೌರವ ಹೆಚ್ಚಲಿದೆ. ಆರ್ಥಿಕ ವಿಚಾರದಲ್ಲಿ ಸಮಾಧಾನ ಇರಲಿದೆ. ವ್ಯಾಪಾರಸ್ಥರಿಗೆ ಲಾಭದಾಯಕವಾದ ದಿನ.

ಕನ್ಯಾ ರಾಶಿ
ದೂರ ಪ್ರಯಾಣ ಕೈಗೊಳ್ಳುತ್ತೀರಿ. ಧಾರ್ಮಿಕ ಕಾರ್ಯಗಳಲ್ಲಿ ಪಾಲ್ಗೊಳ್ಳುತ್ತೀರಿ. ದಾನ-ಧರ್ಮ ಕಾರ್ಯಗಳಲ್ಲಿ ಆಸಕ್ತಿ ತೋರುವಿರಿ. ಮನಸ್ಸಿಗೆ ಶಾಂತಿ ಇರಲಿದೆ. ಸಹೋದ್ಯೋಗಿಗಳು ನಿಮಗೆ ಬೆಂಬಲ ಸೂಚಿಸುತ್ತಾರೆ. ವಿದೇಶಕ್ಕೆ ಸಂಬಂಧಿಸಿದ ಕೆಲಸ ಮಾಡುವವರಿಗೆ ಇಂದು ಶುಭದಿನ.

ತುಲಾ ರಾಶಿ
ನಿಮ್ಮ ಪಾಲಿಗೆ ಇಂದು ಅನಿರೀಕ್ಷಿತ ಲಾಭದ ದಿನ. ಹಿರಿಯ ಅಧಿಕಾರಿಗಳಿಂದ ಬೆಂಬಲ ದೊರೆಯುತ್ತದೆ. ಸಾಮಾಜಿಕ ವಲಯದಲ್ಲಿ ಸಕ್ರೀಯವಾಗಿ ಇರುತ್ತೀರಿ. ಹಣಕಾಸಿನ ನಿರ್ವಹಣೆ ಉತ್ತಮವಾಗಿ ಇರಲಿದೆ. ಹೊಸ ಆದಾಯದ ಮೂಲಗಳು ಗೋಚರಕ್ಕೆ ಬರಲಿದೆ. ಸಾಲವಾಗಿ ಕೊಟ್ಟ ಹಣ ಕೂಡ ನಿಮ್ಮ ಕೈ ಸೇರಲಿದೆ.

ವೃಶ್ಚಿಕ ರಾಶಿ
ಕಾರ್ಯಕ್ಷೇತ್ರದಲ್ಲಿ ಒಂದು ಒಳ್ಳೆಯ ಫಲ ಗೋಚರಿಸಲಿದೆ. ಮಾಡುವ ಕೆಲಸಕ್ಕೆ ತಕ್ಕ ಪ್ರತಿಫಲ ಸಿಗಲಿದೆ.ಉದ್ಯೋಗದಲ್ಲಿ ಬಡ್ತಿಯ ಜೊತೆಗೆ ಹೊಸ ಅವಕಾಶಗಳು ದೊರೆಯಲಿದೆ. ನಿಮ್ಮ ಗುರಿ ಸಾಧಿಸಲು ಇದು ಸಕಾಲ. ಮಾನಸಿಕ ಒತ್ತಡ ಕಡಿಮೆ ಮಾಡಿಕೊಳ್ಳಲು ಯೋಗ ಅಥವಾ ಧ್ಯಾನ ಮಾಡಿ.

ಧನುಸ್ಸು ರಾಶಿ
ಅದೃಷ್ಟ ಇಂದು ನಿಮ್ಮ ಕೈ ಹಿಡಿಯಲಿದೆ. ನಿಂತು ಹೋಗಿದ್ದ ಕೆಲಸ ಕಾರ್ಯಗಳಿಗೆ ಮತ್ತೆ ಚಾಲನೆ ಸಿಗಲಿದೆ. ಉನ್ನತ ಶಿಕ್ಷಣ, ಸಂಶೋಧಕರು ಯಶಸ್ಸು ಕಾಣಲಿದ್ದಾರೆ. ದೂರ ಪ್ರಯಾಣದ ಯೋಗವಿದೆ. ಗುರುಗಳ ಆಶೀರ್ವಾದದ ಜೊತೆಗೆ ಹಿರಿಯ ಮಾರ್ಗದರ್ಶನದಲ್ಲಿ ಮುನ್ನೆಡೆಯಿರಿ.

ಮಕರ ರಾಶಿ
ನಿಮ್ಮ ಪಾಲಿಗೆ ಇಂದು ಸವಾಲಿನ ದಿನ. ಆದರೆ ನೀವು ಪರಿಶ್ರಮದಿಂದ ಎಲ್ಲವನ್ನೂ ನಿಭಾಯಿಸುತ್ತೀರಿ. ಯಾವುದೇ ವಿಚಾರದಲ್ಲಿಯೂ ಗೌಪ್ಯತೆಯನ್ನು ಕಾಪಾಡಿಕೊಳ್ಳುವುದು ಮುಖ್ಯ. ಸಾಲ ಅಥವಾ ಹೂಡಿಕೆ ವಿಚಾರದಲ್ಲಿ ಎಚ್ಚರಿಕೆಯಿಂದ ಇರಿ. ಪಾಲುದಾರಿಕೆ ವ್ಯವಹಾರದಲ್ಲಿ ಜಾಗೃತೆ ಅಗತ್ಯ.

Today Horoscope : ಕುಂಭ ರಾಶಿ
ನಿಮ್ಮ ದಾಂಪತ್ಯ ಜೀವನ ಉತ್ತಮವಾಗಿ ಇರುತ್ತದೆ. ನೀವು ಪಾಲುದಾರಿಕೆ ವ್ಯವಹಾರ ಮಾಡುತ್ತಿದ್ರೆ, ನಿಮಗೆ ಲಾಭವನ್ನು ತರುತ್ತದೆ. ಸಂಗಾತಿಯ ಜೊತೆಗಿನ ಭಿನ್ನಾಭಿಪ್ರಾಯ ಬಗೆ ಹರಿಯಲಿದೆ. ಹೊಸ ಒಪ್ಪಂದಗಳಿಗೆ ಸಹಿ ಹಾಕಲು ಶುಭ ಸಮಯ. ಸಹೋದ್ಯೋಗಿಗಳ ಜೊತೆಗೆ ಸೌಹಾರ್ದತೆಯಿಂದ ಇರಿ.

ಮೀನ ರಾಶಿ
ನಿಮ್ಮ ಆರೋಗ್ಯದ ಬಗ್ಗೆ ಹೆಚ್ಚಿನ ಗಮನಹರಿಸಿ. ಅನಗತ್ಯ ಕೆಲಸಗಳನ್ನು ಮುಂದೂಡಿ. ಕೆಲಸದ ಸ್ಥಳದಲ್ಲಿ ಹೆಚ್ಚು ಶ್ರಮ ಪಡಬೇಕಾಗಿ ಬರಬಹುದು. ಕೌಶಲ್ಯಗಳನ್ನು ಸುಧಾರಿಸಿಕೊಳ್ಳಲು ಇದು ಉತ್ತಮವಾದ ಸಮಯ. ವೈಯಕ್ತಿಕ ಜೀವನ ಹಾಗೂ ವೃತ್ತಿಯ ನಡುವೆ ಸಮತೋಲನ ಕಾಯ್ದುಕೊಳ್ಳಿ. ಸಾಧ್ಯವಾದಷ್ಟು ವಿವಾದಗಳಿಂದ ದೂರವಿರಿ.

Kannada News Next Desk

Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021

Related Stories