signature right : ಆರ್ಥಿಕವಾಗಿ ಸದೃಢರಾಗಬೇಕೆಂದರೆ ನಿಮ್ಮ ಸಹಿಯಲ್ಲಿ ಮಾಡಿ ಈ ಬದಲಾವಣೆ

signature right  :ಜೀವನದಲ್ಲಿ ಯಶಸ್ಸು ಸಿಗಬೇಕು ಎಂಬ ಆಸೆ ಯಾರಿಗೆ ತಾನೇ ಇರೋದಿಲ್ಲ ಹೇಳಿ. ಅದರಲ್ಲೂ ನೀವು ಕೈ ಹಾಕಿದ ಕೆಲಸಗಳಲ್ಲೆಲ್ಲ ಲಕ್ಷ್ಮೀ ಒಲಿದು ಬರ್ತಾಳೆ ಅಂದರೆ ಅದಕ್ಕಿಂತ ಸಂತೋಷ ಬೇರೊಂದು ಇರೋಕೆ ಸಾಧ್ಯವಿದೆಯೇ..? ಆದರೆ ಇವೆಲ್ಲವೂ ಹೇಳಿದಷ್ಟು ಸುಲಭವಂತೂ ಅಲ್ಲವೇ ಅಲ್ಲ. ನಾವು ಅಂದಕೊಂಡ ಮಾತ್ರ ಹಣದ ಹೊಳೆ ಹರಿಯುವುದೂ ಇಲ್ಲ. ಆದರೆ ವಾಸ್ತುಶಾಸ್ತ್ರದಲ್ಲಿ ಇದಕ್ಕೊಂದು ಉಪಾಯವಿದೆ.

ಹೌದು..! ಕೇವಲ ನಿಮ್ಮದೊಂದು ಹಸ್ತಾಕ್ಷರವು ನಿಮ್ಮನ್ನು ಆರ್ಥಿಕವಾಗಿ ಸಬಲರನ್ನಾಗಿ ಮಾಡುತ್ತೆ ಎಂದು ಹೇಳುತ್ತೆ ವಾಸ್ತುಶಾಸ್ತ್ರ. ನಿಮ್ಮ ಎಲ್ಲಾ ಕೆಲಸಗಳು ಒಂದು ಸಹಿಯ ಮೇಲೆ ನಿಂತಿರುತ್ತದೆ. ನಿಮ್ಮ ಹಣಕಾಸಿನ ವಿಚಾರದಲ್ಲಿ ಸಹಿಯು ಬಹಳ ಪ್ರಮುಖ ಪಾತ್ರವನ್ನು ವಹಿಸುತ್ತದೆ. ಸಹಿ ನಿಮ್ಮ ಭವಿಷ್ಯವನ್ನು ಬಲಗೊಳಿಸುತ್ತದೆ.

ನೀವು ಸಹ ಹಣಕಾಸಿನ ಸಮಸ್ಯೆಗಳಿಂದ ತೊಂದರೆಗೀಡಾಗಿದ್ದರೆ, ವಾಸ್ತು ಶಾಸ್ತ್ರದ ಪ್ರಕಾರ, ನಿಮ್ಮ ಸಹಿಯಲ್ಲಿ ಕೆಲವು ಬದಲಾವಣೆಗಳನ್ನು ಮಾಡುವ ಮೂಲಕ, ನಿಮ್ಮ ಹಣಕಾಸಿನ ಸಮಸ್ಯೆಗಳನ್ನು ನೀವು ಸುಲಭವಾಗಿ ತೊಡೆದುಹಾಕಬಹುದಾಗಿದೆ.

ವಾಸ್ತು ಪ್ರಕಾರ, ನೀವು ಸಾಕಷ್ಟು ಹಣವನ್ನು ಗಳಿಸಿದರೂ ಒಂದು ರೂಪಾಯಿಯನ್ನೂ ಉಳಿಸಲು ನಿಮ್ಮಿಂದ ಸಾಧ್ಯವಾಗುವುದಿಲ್ಲ ಎಂದಾದರೆ ನೀವು ನಿಮ್ಮ ಸಹಿಯ ಕೆಳಗೆ ಒಂದು ನೇರ ಗೆರೆಯನ್ನು ಎಳೆಯಬೇಕು. ಮತ್ತು ಅದರ ಕೆಳಗೆ ಎರಡು ಚುಕ್ಕೆಗಳನ್ನು ಇಡಲು ಆರಂಭಿಸಿ. ನಿಮ್ಮ ಉಳಿತಾಯ ಹೆಚ್ಚಾಗುತ್ತಿದ್ದಂತೆಯೇ ಒಂದೊಂದೆ ಚುಕ್ಕಿಯನ್ನು ಹೆಚ್ಚಿಸುತ್ತಾ ಹೋಗಿ. ನೆನಪಿರಲಿ ಈ ಚುಕ್ಕಿಯಲ್ಲಿ ನಾಲ್ಕಕ್ಕಿಂತ ಹೆಚ್ಚಿರಬಾರದು. ಈ ರೀತಿ ಮಾಡುವುದರಿಂದ ನೀವು ನಿಮ್ಮ ಜೀವನದಲ್ಲಿ ಖಂಡಿತವಾಗಿಯೂ ಆರ್ಥಿಕವಾಗಿ ಸದೃಢರಾಗಲಿದ್ದೀರಿ.

ಇದನ್ನು ಓದಿ : Vaastu tips for bedroom : ಮಲಗುವ ಕೋಣೆಯ ವಿಚಾರದಲ್ಲಿ ಎಂದಿಗೂ ಮಾಡಬೇಡಿ ಈ ತಪ್ಪು

ಇದನ್ನೂ ಓದಿ : Kitchen Vaastu Tips : ಮನೆಯ ಯಾವ ದಿಕ್ಕಿನಲ್ಲಿ ಅಡುಗೆಕೋಣೆ ಇರಬೇಕು ಎಂಬುದಕ್ಕೆ ಇಲ್ಲಿದೆ ಮಾಹಿತಿ

ಇದನ್ನೂ ಓದಿ : ಬುಧನ ವಕ್ರಗತಿಯ ಚಲನೆ ಆರಂಭ; ಸಂವಹನ-ಸಂವಾದಗಳಲ್ಲಿ ಎಚ್ಚರಿಕೆ ಅತ್ಯಗತ್ಯ – ಸಂಪರ್ಕ ಸಾಧನಗಳೂ ತೊಂದರೆ ಕೊಡಬಹುದು

ಇದನ್ನೂ ಓದಿ : ಅಣ್ಣವ್ರ ಹುಟ್ಟೂರು ಸಿಂಗಾನಲ್ಲೂರಿನಲ್ಲೊಬ್ಬ ಕಪ‍ಟಿ , ಜಡೆ ಬಿಚ್ಚಿ ನಿಂತ್ರೆ ಮೈಮೇಲೆ ಬರ್ತಾಳೆ ಚೌಡಿ

Vaastu Tips: You can become financially strong by doing the signature right

Comments are closed.