Corona case to Omicron test : ಇನ್ಮುಂದೆ ಎಲ್ಲಾ ಕೊರೋನಾ ಪ್ರಕರಣವೂ ಓಮೈಕ್ರಾನ್ ಟೆಸ್ಟ್ ಗೆ: ಆರೋಗ್ಯ ಇಲಾಖೆ ಮಹತ್ವದ ಆದೇಶ

ರಾಜ್ಯದಲ್ಲಿ ಹೊಸ ವರ್ಷಾಚರಣೆಗೆ ಭರ್ಜರಿ ಸಿದ್ಧತೆ ನಡೆದಿತ್ತಾದರೂ ಹೆಚ್ಚಿದ ಕೊರೋನಾ ಹಾಗೂ ಓಮೈಕ್ರಾನ್ ಪ್ರಕರಣದ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ನೈಟ್ ಕರ್ಪ್ಯೂ ಹೇರಲಾಗಿದ್ದು, ನಾಳೆಯಿಂದಲೇ ಜಾರಿಗೆ ಬರಲಿದೆ. ಇದರ ಜೊತೆಗೆ ಆರೋಗ್ಯ ಇಲಾಖೆಯೂ ವರ್ಷಾಚರಣೆಯನ್ನು ಗಂಭೀರವಾಗಿ ಪರಿಗಣಿಸಿದ್ದು ಈ ಹೊಸ ವರ್ಷಾಚರಣೆಯ ಸಂದರ್ಭದಲ್ಲಿ ಪತ್ತೆಯಾಗುವ ಕೊರೋನಾ ಪ್ರಕರಣಗಳನ್ನು(Corona case to Omicron test) ಗಂಭೀರವಾಗಿ ಪರಿಗಣಿಸುವಂತೆ ಆದೇಶಿಸಿದೆ.

ಈಗಾಗಲೇ ರಾಜ್ಯದಲ್ಲಿ ಹಾಗೂ ಬೆಂಗಳೂರಿನಲ್ಲಿ 30 ಕ್ಕೂ ಹೆಚ್ಚು ಓಮೈಕ್ರಾನ್ ಪ್ರಕರಣಗಳು ಪತ್ತೆಯಾಗಿವೆ. ಮುನ್ನೆಚ್ಚರಿಕೆ‌ ಕ್ರಮವಾಗಿ ಇದುವರೆಗೂ ಏರಪೋರ್ಟ್ ಗಳಲ್ಲಿ ಕೊರೋನಾ ಪರೀಕ್ಷೆಗೆ ಒಳಪಡಿಸಲಾಗುತ್ತಿದೆ. ಒಂದೊಮ್ಮೆ ಯಾರಾದ್ರೂ ಕೊರೊನಾ ಪಾಸಿಟಿವ್ ಬಂದರೇ ಅವರನ್ನು ಜಿನೋಮಿಕ್ ಸಿಕ್ವೆನ್ಸ್ ಟೆಸ್ಟ್ ಗೆ ಕಳುಹಿಸಲಾಗುತ್ತಿತ್ತು.

ಆದರೆ ಈಗ ಹೊಸ ವರ್ಷಾಚರಣೆಯ ಸಂದರ್ಭದಲ್ಲಿ ಒಟ್ಟು 11 ದಿನಗಳ ಕಾಲ ಪತ್ತೆಯಾಗುವ ಎಲ್ಲ ಕೊರೋನಾ ಪ್ರಕರಣಗಳನ್ನು ಜಿನೋಮಿಕ್ ಸಿಕ್ವೆನ್ಸಿಂಗ್ ಗೆ ರವಾನಿಸುವಂತೆ ಆರೋಗ್ಯ ಇಲಾಖೆ ಆದೇಶಿಸಿದೆ. ಮಾತ್ರವಲ್ಲದೇ ಈ 11 ದಿನದ ಅವಧಿಯಲ್ಲಿ ಬೆಂಗಳೂರು ನಗರ ಹಾಗೂ ಬೆಂಗಳೂರು ಗ್ರಾಮಾಂತರ ಪ್ರದೇಶಗಳಲ್ಲಿ ಪತ್ತೆಯಾಗುವ ಎಲ್ಲ ಕೊರೋನಾ ಪ್ರಕರಣಗಳ ವರದಿಯನ್ನು ಆರೋಗ್ಯ ಇಲಾಖೆಗೆ ಸಲ್ಲಿಸುವಂತೆಯೂ ಆದೇಶದಲ್ಲಿ ಹೇಳಲಾಗಿದೆ.

ಆರೋಗ್ಯ ಇಲಾಖೆಯ ಆಯುಕ್ತ ಡಿ.ರಂದೀಪ್ ಈ ಬಗ್ಗೆ ಆದೇಶ ಹೊರಡಿಸಿದ್ದಾರೆ.‌ ನಗರ ಹಾಗೂ ಬೆಂಗಳೂರು ಗ್ರಾಮಾಂತರದಲ್ಲಿ ನೈಟ್ ಕರ್ಪ್ಯೂ ಜಾರಿಯಾಗಿದ್ದರೂ ತಕ್ಕಮಟ್ಟಿಗೆ ಹೊಸ ವರ್ಷಾಚರಣೆ ನಡೆಯೋ ಸಾಧ್ಯತೆ ಇದೆ. ಹೀಗಾಗಿ ಸಹಜವಾಗಿಯೇ ಕೊರೋನಾ ಪ್ರಕರಣಗಳ ಸಂಖ್ಯೆಯಲ್ಲೂ ಏರಿಕೆಯಾಗಲಿದ್ದು ಇದರಿಂದ ಓಮೈಕ್ರಾನ್ ಪ್ರಕರಣ ಹೆಚ್ಚಲಿದೆ ಎಂಬ ನೀರಿಕ್ಷೆ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆ ಮುನ್ನೆಚ್ಚರಿಕೆ ಕ್ರಮ ವಹಿಸಿದೆ.

ಕೇವಲ ಅರೋಗ್ಯ ಇಲಾಖೆ ಮಾತ್ರವಲ್ಲ ನಗರ ಪೊಲೀಸ್ ಇಲಾಖೆಯೂ ಹೊಸ ವರ್ಷಾಚರಣೆ ಹಾಗೂ ಕೊರೋನಾ ನಿಯಮಗಳ ಪಾಲನೆಗೆ ಕಠಿಣ ಕ್ರಮ ರೂಪಿಸಿದ್ದು ನಾಳೆಯಿಂದ ರಾತ್ರಿ 10 ಗಂಟೆಯಿಂದ ಬೆಳಗ್ಗೆ 5 ಗಂಟೆಯವರೆಗೆ ನಿಷೇದಾಜ್ಞೆ ಹೊರಡಿಸಿದೆ. ಇದಲ್ಲದೇ ಕೇಂದ್ರದ ಸೂಚನೆ ಮೇರೆಗೆ ರಾಜ್ಯದಲ್ಲಿ ಹಾಗೂ ನಗರದಲ್ಲಿ ಆಕ್ಸಿಜನ್ ಸಪ್ಲೈ ಸೇರಿದಂತೆ ಎಲ್ಲ ಕ್ರಮಗಳನ್ನು ಕೈಗೊಳ್ಳಲು ಆರೋಗ್ಯ ಇಲಾಖೆ ಸಿದ್ಧತೆ ನಡೆಸಿದೆ. ನಾಳೆ ನಗರದ ಸಿ.ವಿ.ರಾಮನ್ ಆಸ್ಪತ್ರೆಯಲ್ಲಿ ಆಕ್ಸಿಜನ್ ಸಪ್ಲೈ ಪ್ಲ್ಯಾಂಟ್ ನಲ್ಲಿ ಡ್ರೈರನ್ ಕೂಡ ನಡೆಯಲಿದೆ. ಒಟ್ಟಿನಲ್ಲಿ ನಗರದಲ್ಲಿ ಆರೋಗ್ಯ ಇಲಾಖೆ ಹೈ ಅಲರ್ಟ್ ಆಗಿದ್ದು ಕೊರೋನಾ ಹಾಗೂ ಓಮೈಕ್ರಾನ್ ಪ್ರಕರಣಗಳ ಮೇಲೆ ವಿಶೇಷ ನಿಗಾವಹಿಸಿದೆ.

ಇದನ್ನೂ ಓದಿ : Night Curfew Preparation : ಸಿಲಿಕಾನ್ ಸಿಟಿಯ ನ್ಯೂ ಇಯರ್ ಸೆಲಿಬ್ರೇಶನ್ ಗೆ ಬ್ರೇಕ್ : ಹೇಗಿದೆ ಗೊತ್ತಾ ನೈಟ್ ಕರ್ಪ್ಯೂ ಜಾರಿಗೆ ಪೊಲೀಸರ ತಯಾರಿ

ಇದನ್ನೂ ಓದಿ : Omicron Cases India Surge: ಭಾರತದಲ್ಲಿ ಓಮಿಕ್ರಾನ್‌ ಸ್ಪೋಟ : 578 ಪ್ರಕರಣ

( All Corona case to Omicron test : Department of Health)

Comments are closed.