Bommai will visit Bhatkal : ಇಂದು ಭಟ್ಕಳ ನೆರೆಪೀಡಿತ ಪ್ರದೇಶಗಳಿಗೆ ಸಿಎಂ ಬಸವರಾಜ ಬೊಮ್ಮಾಯಿ ಭೇಟಿ

ಉತ್ತರ ಕನ್ನಡ : Bommai will visit Bhatkal : ಉತ್ತರ ಕನ್ನಡ ಜಿಲ್ಲೆ ಭಟ್ಕಳ ಜಿಲ್ಲೆಯಲ್ಲಿ ಸುರಿದ ಭಾರೀ ಮಳೆಯಿಂದಾಗಿ ಸಾಕಷ್ಟು ಅನಾಹುತಗಳೇ ನಡೆದಿದೆ. ಕಳೆದ ಎರಡು ವಾರಗಳಿಂದ ತಣ್ಣಗೆ ಇದ್ದ ಭಟ್ಕಳ ಹಾಗೂ ಸುತ್ತ ಮುತ್ತಲ ಊರುಗಳಲ್ಲಿ ಸೋಮವಾರ ಮಧ್ಯರಾತ್ರಿ ಸುರಿದ ಭಾರೀ ಮಳೆಯು ಜಲದಿಗ್ಬಂಧನವನ್ನೇ ಸೃಷ್ಟಿಸಿತ್ತು. ಭಾರೀ ಮಳೆಯಿಂದಾಗಿ ಭಟ್ಕಳದ ಸುತ್ತಮುತ್ತಲ ಅನೇಕ ಗ್ರಾಮಗಳು ಜಲಾವೃತವಾಗಿದೆ.

ಮಹಾ ಮಳೆಗೆ ಭಟ್ಕಳ, ಶಿರೂರು , ಬೈಂದೂರು ಭಾಗದ ಜನರು ತತ್ತರಿಸಿ ಹೋಗಿದ್ದರು. ಮನೆಗಳ ತುಂಬೆಲ್ಲ ನೀರು ತುಂಬಿದ್ದು ಜನ ಜೀವನ ಸಂಪೂರ್ಣ ಅಸ್ತವ್ಯಸ್ತವಾಗಿತ್ತು. ಭಟ್ಕಳದ ಮುಂಡಳ್ಳಿ, ಮುಟ್ಟಳ್ಳಿ, ಬೇಂಗ್ರೆ, ಚೌಥನಿ, ಮಣ್ಣಕುಳ್ಳಿ, ಮೂಡಭಟ್ಕಳ ಸೇರಿ ಹತ್ತಾರು ಗ್ರಾಮಗಳು ಮುಳುಗಡೆಯಾಗಿದ್ದವು. ಹೀಗಾಗಿ ಇಂದು ಭಟ್ಕಳಕ್ಕೆ ಸಿಎಂ ಬಸವರಾಜ ಬೊಮ್ಮಾಯಿ ಭೇಟಿ ನೀಡಲಿದ್ದಾರೆ.

ಭಟ್ಕಳ ನೆರೆಪೀಡಿತ ಪ್ರದೇಶಗಳಿಗೆ ಇಂದು ಸಿಎಂ ಬಸವರಾಜ ಬೊಮ್ಮಾಯಿ ಪ್ರವಾಸ ಕೈಗೊಳ್ಳಲಿದ್ದಾರೆ. ಇಂದು ಸಂಜೆ ಐದು ಗಂಟೆಗೆ ಭಟ್ಕಳದ ವಿವಿಧ ನೆರೆಪೀಡಿತ ಪ್ರದೇಶಗಳಲ್ಲಿ ಸಿಎಂ ಬೊಮ್ಮಾಯಿ ಭೇಟಿ ನೀಡಲಿದ್ದಾರೆ. ಬೆಂಗಳೂರಿನಿಂದ ಗೋವಾಗೆ ವಿಮಾನದ ಮೂಲಕ ಆಗಮಿಸಲಿರುವ ಬಸವರಾಜ ಬೊಮ್ಮಾಯಿ ಅಲ್ಲಿಂದ ರಸ್ತೆ ಮಾರ್ಗದಲ್ಲಿ ಭಟ್ಕಳಕ್ಕೆ ಆಗಮಿಸಲಿದ್ದಾರೆ.

ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲೂಕು ಹಿಂದೆಂದು ಕಾಣದ ಮಟ್ಟಿಗೆ ಪ್ರವಾಹವನ್ನು ಕಂಡಿದೆ. ಏಕಾ ಏಕಿ ಸುರಿದ ಮಳೆಯಿಂದಾಗಿ ಭಟ್ಕಳ ತಾಲೂಕಿನಲ್ಲಿ ಅಲ್ಲೋಲ ಕಲ್ಲೋಲವೇ ಉಂಟಾಗಿದೆ. ಅಗ್ನಿಶಾಮಕ ಸಿಬ್ಬಂದಿ, SDRF, ಪೋಲಿಸ್ ಇಲಾಖೆ ಸಿಬ್ಬಂದಿ ರಕ್ಷಣಾ ಕಾರ್ಯವನ್ನು ನಡೆಸಿದೆ. ಭಟ್ಕಳ ತಾಲೂಕಿನ ಸುರಿದ ಭಾರೀ ಮಳೆಯಿಂದಾಗಿ ನಾಲ್ವರು ಸಾವನ್ನಪ್ಪಿದ್ದಾರೆ.

ಇದನ್ನು ಓದಿ : Monkeypox Vs Chickenpox : ಮಂಕಿಪಾಕ್ಸ್‌ ಮತ್ತು ಚಿಕನ್‌ಪಾಕ್ಸ್‌ ನ ವ್ಯತ್ಯಾಸ ನಿಮಗೆ ಗೊತ್ತೇ? ಇವೆರಡರ ರೋಗಲಕ್ಷಣಗಳೇನು?

ಇದನ್ನೂ ಓದಿ : Ankola Crime Report : ಸ್ನಾನ ಮಾಡುತ್ತಿದ್ದ ಮಹಿಳೆಯ ವಿಡಿಯೋ ಶೂಟ್‌ : ಆರೋಪಿ ಬಂಧನ

ಇದನ್ನೂ ಓದಿ : Siddaramaiahs birthday : ವೇದಿಕೆಯೇರುವ ಮುನ್ನ ದರ್ಗಾಕ್ಕೆ ಸಿದ್ದರಾಮಯ್ಯ ವಿಸಿಟ್​ : ಸಿದ್ದು ಜನ್ಮದಿನದ ಪ್ರಯುಕ್ತ ಸಿದ್ಧಗೊಂಡಿದೆ 3ಕಿಮೀ ಉದ್ದದ ಬ್ಯಾನರ್​

ಇದನ್ನೂ ಓದಿ : Monsoon Skin Care:ಮಾನ್ಸೂನ್ ಸಮಯದಲ್ಲಿ ಮೊಡವೆಗಳೊಂದಿಗೆ ಹೋರಾಡುತ್ತಿದ್ದೀರಾ? ಚರ್ಮದ ಆರೋಗ್ಯವನ್ನು ಸುಧಾರಿಸಲು ಇಲ್ಲಿವೆ ಸಲಹೆಗಳು

CM Basavaraja Bommai will visit Bhatkal taluk today

Comments are closed.