ಜ್ಞಾನಾರ್ಜನೆಯ ಸ್ಥಳದಲ್ಲಿ ಧರ್ಮಾಚರಣೆ ಪಾಲನೆ ಸಹಿಸಲು ಅಸಾಧ್ಯ : ಶಿಕ್ಷಣ ಸಚಿವ ಬಿ.ಸಿ ನಾಗೇಶ್​

ಮೈಸೂರು :ಶಾಲೆ ಹಾಗೂ ಕಾಲೇಜುಗಳಲ್ಲಿ ಸಮಾನತೆ ಇರಬೇಕೆಂಬ ಉದ್ದೇಶವನ್ನು ಇಟ್ಟುಕೊಂಡು ಸಮವಸ್ತ್ರಗಳನ್ನು ಜಾರಿ ಮಾಡಲಾಗಿದೆ. ಹೀಗಾಗಿ ಸರ್ಕಾರಿ ಶಾಲಾ ಕಾಲೇಜುಗಳಲ್ಲಿ ಸಮವಸ್ತ್ರ ಧರಿಸಿ ಬಂದರೆ ಮಾತ್ರ ತರಗತಿಗಳಿಗೆ ಪ್ರವೇಶ ನೀಡಲಾಗುತ್ತದೆ. ಹಿಜಬ್​ (Hijab issue) ಧರಿಸಿದರೂ ತರಗತಿಗೆ ಪ್ರವೇಶವಿಲ್ಲ. ಕೇಸರಿ ಶಾಲು ಹಾಕಿಕೊಂಡು ತರಗತಿಗೆ ಬರುವುದು ಬೇಡ . ಕಾಲೇಜುಗಳಲ್ಲಿ ಸಮವಸ್ತ್ರವೇ ಕಡ್ಡಾಯ ಎಂದು ಮೈಸೂರಿನಲ್ಲಿ ಶಿಕ್ಷಣ ಸಚಿವ ಬಿ.ಸಿ ನಾಗೇಶ್​ ಹೇಳಿದ್ದಾರೆ.

ಶಾಲೆ ಹಾಗೂ ಕಾಲೇಜುಗಳಿಗೆ ವಿದ್ಯಾರ್ಥಿಗಳು ಜ್ಞಾನಾರ್ಜನೆ ಮಾಡಿಕೊಳ್ಳುವ ಕಾರಣಕ್ಕೆ ಬರಬೇಕು. ಇಲ್ಲಿ ನೀವು ಧರ್ಮಾಚಾರಣೆ ಪಾಲನೆ ಮಾಡುವುದಾಗಲಿ ಅಥವಾ ಮತೀಯ ಭಾವನೆಗಳಿಗೆ ಪ್ರೇರಣೆ ನೀಡುವ ಕೆಲಸ ಮಾಡಬಾರದು. ವಿದ್ಯಾರ್ಥಿಗಳು ಇಂತಹ ಯಾವುದೇ ವಿಚಾರಗಳಲ್ಲಿ ಪ್ರಚೋದನೆಗೆ ಒಳಗಾಗಬಾರದು. ಇಲ್ಲಿ ಜ್ಞಾನಾರ್ಜನೆ ಮಾಡಿಕೊಳ್ಳುವುದು ಮಾತ್ರ ನಿಮ್ಮ ಉದ್ದೇಶವಾಗಿರಲಿ ಎಂದು ಹೇಳಿದರು.
ಶಾಲೆಗಳಲ್ಲಿ ಸಮವಸ್ತ್ರವನ್ನು ಜಾರಿ ಮಾಡಿರುವುದೇ ಸಮಾನತೆಗೆ ಒತ್ತು ನೀಡಬೇಕು ಎಂಬ ಕಾರಣದಿಂದ. ಹೀಗಾಗಿ ನಾವು ಸಮವಸ್ತ್ರವನ್ನು ಕಡ್ಡಾಯಗೊಳಿಸಿದ್ದೇನೆ. ಜ್ಞಾನಾರ್ಜನೆಗೆಂದು ತರಗತಿಗಳಿಗೆ ಬರುವ ಮಕ್ಕಳಲ್ಲಿ ಜಾತಿ -ಧರ್ಮ, ಬಡವ – ಶ್ರೀಮಂತ, ಮೇಲು -ಕೀಳು ಹೀಗೆ ಯಾವುದೇ ಅಸಮಾನತೆಯ ವಿಚಾರಗಳು ತಲೆಗೆ ಬರಬಾರದು. ನೀವು ಶಿಕ್ಷಣ ಪಡೆಯಲು ಶಾಲೆಗೆ ಬರುತ್ತಿದ್ದೀರಿ. ಹೀಗಾಗಿ ವಿದ್ಯಾರ್ಥಿಗಳು ದಯಮಾಡಿ ಹಿಜಬ್​ , ಕೇಸರಿ ಶಾಲುಗಳೆಂಬ ವಿವಾದಕ್ಕೆ ಸಿಲುಕಬೇಡಿ ಎಂದು ಮನವಿ ಮಾಡಿದರು.


ಹಿಜಬ್​ ವಿವಾದ ಹುಟ್ಟಿಕೊಳ್ಳುವುದರ ಹಿಂದೆ ಕೆಲವು ರಾಜಕೀಯ ನಾಯಕರ ಕೈವಾಡವಿದೆ. ಇವರೆಲ್ಲ ವಿದ್ಯಾರ್ಥಿಗಳ ದಿಕ್ಕು ತಪ್ಪಿಸುವ ಕಾರ್ಯ ಮಾಡುತ್ತಿದ್ದಾರೆ. ಇದು ಯಾವುದೋ ರಾಜಕೀಯ ಪಕ್ಷದ ಪಿತೂರಿ ಅಲ್ಲ. ಬದಲಾಗಿ ಕೆಲವು ರಾಜಕೀಯ ನಾಯಕರ ಹುನ್ನಾರ ಇದಾಗಿದೆ. ಶಾಲೆ – ಕಾಲೇಜು ಅಂದಮೇಲೆ ಅಲ್ಲಿ ಸಮವಸ್ತ್ರ ಕಡ್ಡಾಯ. ಇಲ್ಲಿ ವಸ್ತ್ರ ಸಂಹಿತೆಗೆ ಅವಕಾಶ ನೀಡಲು ಸಾಧ್ಯವೇ ಇಲ್ಲ ಎಂದು ಸ್ಪಷ್ಟನೆ ನೀಡಿದರು.

Education Minister BC Nagesh on Hijab issue

ಇದನ್ನು ಓದಿ : Hijab Explainer: ಹಿಜಾಬ್ ಎಂದರೇನು? ಬುರ್ಖಾ, ನಿಕಾಬ್‌ಗೂ ಹಿಜಾಬ್‌ಗೂ ಇರುವ ವ್ಯತ್ಯಾಸವೇನು?

ಇದನ್ನೂ ಓದಿ : Best Smartphones Under 5000: ಕಡಿಮೆ ಬೆಲೆಗೆ ಹೆಚ್ಚು ಫೀಚರ್ಸ್‌; 5 ಸಾವಿರದೊಳಗಿನ ಉತ್ತಮ ಸ್ಮಾರ್ಟ್‌ಫೋನ್‌ಗಳಿವು


Comments are closed.