Rashmika Mandanna : ಸ್ನೇಹಿತೆಯ ಮದುವೆಯಲ್ಲಿ ರಶ್ಮಿಕಾ ಮಿಂಚಿಂಗ್​​ : ಕೊಡವರ ಶೈಲಿಯ ಸೀರೆ ಧರಿಸಿದ ಕಿರಿಕ್​ ಬೆಡಗಿ

Rashmika Mandanna : ಕಿರಿಕ್​ ಹುಡುಗಿ ರಶ್ಮಿಕಾ ಮಂದಣ್ಣ ಸದ್ಯ ಯಶಸ್ಸಿನ ಉತ್ತುಂಗದಲ್ಲಿದ್ದಾರೆ. ಸಾಲು ಸಾಲು ಸಿನಿಮಾಗಳ ಶೂಟಿಂಗ್​ನಲ್ಲಿ ಬ್ಯುಸಿಯಾಗಿರುವ ಗೀತ ಗೋವಿಂದಂ ಬೆಡಗಿ ಭಾನುವಾರ ಆತ್ಮೀಯ ಸ್ನೇಹಿತರ ಮದುವೆಯಲ್ಲಿ ಕಾಣಿಸಿಕೊಂಡರು. ಸ್ನೇಹಿತೆಯ ಮದುವೆ ಫೋಟೋಗಳನ್ನು ನಟಿ ರಶ್ಮಿಕಾ ಸೋಶಿಯಲ್​ ಮೀಡಿಯಾದಲ್ಲಿ ಶೇರ್​ ಮಾಡಿದ್ದಾರೆ. ಈ ಸಮಾರಂಭಕ್ಕೆ ರಶ್ಮಿಕಾ ಮಂದಣ್ಣ ಕೊಡವರ ಶೈಲಿಯಲ್ಲಿ ಸೀರೆ ಧರಿಸಿದ್ದಾರೆ.


ಸ್ಟಡ್​ ಕಿವಿಯೋಲೆ, ವಾಚ್​​ , ಸ್ಟೇಟ್​ಮೆಂಟ್​ ಚಿನ್ನದ ನೆಕ್​ಲೇಸ್​ನ್ನು ಕೊಡವರ ಸೀರೆಯ ಜೊತೆ ಧರಿಸಿದ್ದ ನಟಿ ರಶ್ಮಿಕಾ ಸಖತ್​ ಕ್ಯೂಟ್​ ಆಗಿ ಕಂಡಿದ್ದಾರೆ. ಎತ್ತರದ ಪೋನಿ ಟೇಲ್​ ಹಾಕುವ ಮೂಲಕ ಅತ್ಯಂತ ಸರಳವಾಗಿ ಕೇಶ ವಿನ್ಯಾಸ ಮಾಡಿಕೊಂಡಿದ್ದಾರೆ. ಈ ಫೋಟೋಗಳನ್ನು ಇನ್​ಸ್ಟಾಗ್ರಾಂನಲ್ಲಿ ಹಂಚಿಕೊಂಡಿರುವ ನಟಿ ರಶ್ಮಿಕಾ ಬಹಳ ಸಮಯದ ಬಳಿಕ ನಾನು ಬಾಲ್ಯದ ಸ್ನೇಹಿತೆಯರನ್ನು ಭೇಟಿಯಾಗಿದ್ದೇನೆ. ಅಲ್ಲದೇ ತಾನು 4 ಗಂಟೆಯ ವಿಮಾನವನ್ನು ಮಿಸ್​ ಮಾಡಿಕೊಂಡ ಬಳಿಕ ಮದುವೆ ಕಾರ್ಯಕ್ರಮಕ್ಕೆ ಬಂದು ತಲುಪಲು ಏನೆಲ್ಲ ಹರಸಾಹಸ ಪಟ್ಟೆ ಎಂಬುದನ್ನೂ ವಿವರಿಸಿದ್ದಾರೆ.


ನನ್ನ ಸ್ನೇಹಿತೆ ರಾಗಿಣಿ ಮುದ್ದಯ್ಯ ವೈವಾಹಿಕ ಜೀವನಕ್ಕೆ ಕಾಲಿರಿಸಿದ್ದಾಳೆ. ಆಕೆಯ ಜೊತೆ ನನ್ನ ಇಂದಿನ ಫೋಟೋಗಳಿಲ್ಲ. ಆದರೆ ನಾನು ಇವುಗಳಲ್ಲಿ ಯಾವುದೇ ಕ್ಷಣವನ್ನೂ ಮಿಸ್​ ಮಾಡಿಕೊಳ್ಳಲು ಬಯಸಿಲ್ಲ. ನಾಲ್ಕು ಗಂಟೆಯ ವಿಮಾನ ಮಿಸ್​ ಆದ ಬಳಿಕ ನಾಲ್ಕರಿಂದ ಐದು ಸಲ ವಿಮಾನ ವಿಳಂಬಗೊಂಡ ಬಳಿಕವೂ ನಾನು ದೇವರ ದಯೆಯಿಂದ ಅವಳ ಮದುವೆಗೆ ಆಗಮಿಸಿದ್ದೇನೆ. ಈಕೆ ಎಷ್ಟು ಸುಂದರವಾಗಿ ಕಾಣುತ್ತಿದ್ದಾಳೆ. ಇವರನ್ನೆಲ್ಲ ನಾನು ಕಳೆದ 17 ವರ್ಷಗಳಿಂದ ನೋಡುತ್ತಿದ್ದೇನೆ. ಆದರೆ ಏನೂ ಬದಲಾವಣೆಯಾಗಿಲ್ಲ ಎಂದು ತಮ್ಮ ಇನ್​ಸ್ಟಾಗ್ರಾಂ ಪೋಸ್ಟ್​ಗೆ ಶೀರ್ಷಿಕೆ ನೀಡಿದ್ದಾರೆ.

ಇದನ್ನು ಓದಿ : KL Rahul, Rohit Sharma :ಕೆಎಲ್ ರಾಹುಲ್, ರೋಹಿತ್ ಶರ್ಮಾ ವಿಶ್ರಾಂತಿ; ದಕ್ಷಿಣ ಆಫ್ರಿಕಾ ಟಿ20ಗೆ ಟೀಂ ಇಂಡಿಯಕ್ಕೆ ನೂತನ ನಾಯಕ

ಇದನ್ನೂ ಓದಿ : Andrew Symonds Dies : ಆಸ್ಟ್ರೇಲಿಯಾದ ಕ್ರಿಕೆಟ್‌ ದಿಗ್ಗಜ ಆಂಡ್ರ್ಯೂ ಸೈಮಂಡ್ಸ್ ಕಾರು ಅಪಘಾತದಲ್ಲಿ ನಿಧನ

Rashmika Mandanna looks stunning as she dons silk saree in Coorgi style during a friend’s wedding

Comments are closed.