international yoga day : ಅಂತಾರಾಷ್ಟ್ರೀಯ ಯೋಗ ದಿನ : ಮೈಸೂರಿನಲ್ಲಿ ನಮೋ ಯೋಗಾಯೋಗ

ಮೈಸೂರು : international yoga day : ಅಂತಾರಾಷ್ಟ್ರೀಯ ಯೋಗ ದಿನವಾದ ಇಂದು ಪ್ರಧಾನಿ ಮೋದಿ ಮೈಸೂರಿನ ಅರಮನೆ ಮೈದಾನದಲ್ಲಿ ಯೋಗಾಭ್ಯಾಸ ಮಾಡಿದರು. ಮೈಸೂರಿನಲ್ಲಿ ತಾವು ವಾಸ್ತವ್ಯ ಹೂಡಿದ್ದ ಹೋಟೆಲ್​ನಿಂದ ಬೆಳಗ್ಗೆ 6:30ಕ್ಕೆ ಸರಿಯಾಗಿ ಆಗಮಿಸಿದ ಪ್ರಧಾನಿ ಮೋದಿಯನ್ನು ಕೇಂದ್ರ ಸಚಿವರು ಬರ ಮಾಡಿಕೊಂಡರು. ಯೋಗಾಸನ ಮಾಡಲು ಹೊಂದಿಕೆಯಾಗುವಂತೆ ಬಿಳಿ ಬಣ್ಣದ ಶರ್ಟ್ ಹಾಗೂ ಪೈಜಾಮಾ ಧರಿಸಿ ಪ್ರಧಾನಿ ಮೋದಿ ಆಗಮಿಸಿದ್ದರು. ಪ್ರಧಾನಿ ಮೋದಿಗೆ ಕೇಂದ್ರ ಸಚಿವ ಸರ್ಬಾನಂದ ಸೋನಾವಾಲಾ, ಸಿಎಂ ಬಸವರಾಜ ಬೊಮ್ಮಾಯಿ ಸೇರಿದಂತೆ ಅನೇಕರು ಸಾಥ್​ ನೀಡಿದರು .


ಯೋಗಾಭ್ಯಾಸ ಮಾಡುವ ಮುನ್ನ ಮಾತನಾಡಿದ ಪ್ರಧಾನಿ ಮೋಡಿ ಯೋಗಾಭ್ಯಾಸದಿಂದ ಶಾಂತಿ ಸಿಗುತ್ತದೆ ಎಂದು ಹೇಳಿದರು , ದಿನಕ್ಕೆ ಕನಿಷ್ಟ 1 ನಿಮಿಷ ಯೋಗ ಮಾಡಿದರೂ ಸಹ ಮನಸ್ಸಿಗೆ ಶಾಂತಿ ಸಿಗುತ್ತದೆ. ಅಂತಾರಾಷ್ಟ್ರೀಯ ಯೋಗ ದಿನಾಚರಣೆಯ ಮೂಲಕ ಇಡೀ ವಿಶ್ವಕ್ಕೆ ಯೋಗದ ಮಹತ್ವವೇನು ಎಂಬುದು ತಿಳಿದಿದೆ. ಜಗತ್ತು ಆರಂಭಗೊಳ್ಳುವುದೇ ನಮ್ಮಿಂದ, ಯೋಗಾಸನದಿಂದ ನಮ್ಮ ಮನಸ್ಸು ಹಾಗೂ ದೇಹಕ್ಕೆ ನೆಮ್ಮದಿ ಸಿಗುತ್ತದೆ. ಯೋಗವು ನಮ್ಮೊಳಗೆ ಜಾಗೃತಿ ಮೂಡಿಸುತ್ತದೆ. ಜಾಗತಿಕ ಶಾಂತಿಯನ್ನು ಕಾಪಾಡುವಲ್ಲಿಯೂ ಸಹ ಯೋಗವು ಪ್ರಮುಖ ಪಾತ್ರವನ್ನು ವಹಿಸುತ್ತದೆ ಎಂದು ಹೇಳಿದರು .


ಯೋಗಾಸನವು ವಿವಿಧ ದೇಶಗಳ ನಡುವಿನ ಸಂಪರ್ಕ ಕೊಂಡಿ ಎಂದು ಹೇಳಿದ ಪ್ರಧಾನಿ ಮೋದಿ ಯೋಗಾಸನದ ಮೂಲಕ ನಮ್ಮೆಲ್ಲ ಸಮಸ್ಯೆಗಳನ್ನು ಪರಿಹಾರ ಮಾಡಿಕೊಳ್ಳಬಹುದು. ಶಾಂತಿಯನ್ನು ಕಾಪಾಡಿಕೊಳ್ಳಬಹುದು ಎಂದು ಹೇಳಿದರು. ಇದರ ಜೊತೆಯಲ್ಲಿ ಮೈಸೂರನ್ನೂ ಹಾಡಿ ಹೊಗಳಿದ ಪ್ರಧಾನಿ ಮೋದಿ ಸಾಂಸ್ಕೃತಿಕ ನಗರಿಗೆ ವೈಭೋಗದ ಇತಿಹಾಸವಿದೆ ಎಂದು ಹೇಳಿದರು.


ಯೋಗ ಭೂಮಿಯಾದ ಮೈಸೂರು ಕೇವಲ ಸಾಂಸ್ಕೃತಿಕ ರಾಜಧಾನಿ ಮಾತ್ರವಲ್ಲದೇ ಆಧ್ಯಾತ್ಮಿಕ ರಾಜಧಾನಿ ಕೂಡ ಆಗಿದೆ. ಈ ಸುದಿನದಂದು ಮೈಸೂರಿನಲ್ಲಿ ಯೋಗ ದಿನಾಚರಣೆ ಆಚರಿಸಿದ್ದಕ್ಕೆ ನನಗೆ ಖುಷಿಯಿದೆ ಎಂದು ಪ್ರಧಾನಿ ಮೋದಿ ಹೇಳಿದರು.


ಯೋಗಾಭ್ಯಾಸದ ಬಳಿಕ ಮಂಡಕಳ್ಳಿಯಲ್ಲಿರುವ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಪ್ರಧಾನಿ ಮೋದಿ ಬಿಸಿನೆಸ್​ ಬೋಯಿಂಗ್​ ಜೆಟ್​ ವಿಶೇಷ ವಿಮಾನದಲ್ಲಿ ದೆಹಲಿಗೆ ಪ್ರಯಾಣ ಬೆಳೆಸಿದರು .

ಇದನ್ನು ಓದಿ : Mobile Battery Save: ಮೊಬೈಲ್ ಚಾರ್ಜ್ ಉಳಿಸುವ ಸುಲಭ ಉಪಾಯಗಳು

ಇದನ್ನೂ ಓದಿ : Exclusive : KSCA ಆಯ್ಕೆ ಸಮಿತಿಯೊಂದಿಗೆ ಮನಸ್ತಾಪ ; ಕರ್ನಾಟಕ ತೊರೆಯಲು ಕೆ.ಗೌತಮ್ ನಿರ್ಧಾರ ?

international yoga day pm modi performs yoga in mysuru

Comments are closed.