Shepherds stuck :ನಿರಂತರ ಮಳೆಗೆ ನಲುಗಿದ ಕರುನಾಡು : 12 ದಿನಗಳಿಂದ ನಡುಗಡ್ಡೆಯಲ್ಲೇ ಸಿಲುಕಿದ ಕುರಿಗಾಹಿಗಳು

ಚಿತ್ರದುರ್ಗ : Shepherds stuck : ಉತ್ತರ ಕರ್ನಾಟಕ ಭಾಗದಲ್ಲಿ ಕಳೆದ ಕೆಲ ದಿನಗಳಿಂದ ನಿರಂತರ ಮಳೆಯಾಗುತ್ತಿದೆ. ರಣ ಭೀಕರ ಮಳೆಯಿಂದ ಜನ ಜೀವನವೇ ಅಸ್ತವ್ಯಸ್ತಗೊಂಡಿದೆ‌. ಚಿತ್ರದುರ್ಗ ಜಿಲ್ಲೆ ಹೊಸದುರ್ಗ ತಾಲೂಕಿನ ವಿ.ವಿ ಸಾಗರ ಹಿನ್ನೀರು ಗ್ರಾಮಗಳ ಕುರಿಗಾಹಿಗಳು ನೆರೆಯಿಂದಾಗಿ ಗುಡ್ಡದಲ್ಲೆ ಸಿಲುಕಿಕೊಂಡಿದ್ದಾರೆ. ವಿವಿ ಸಾಗರಕ್ಕೆ ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿದುಬಂದಿದ್ದರಿಂದ ಗುಡ್ಡದ ಸುತ್ತ ನೀರು‌ ಆವರಿಸಿಕೊಂಡು ಕಳೆದ 12 ದಿನಗಳಿಂದ ಗುಡ್ಡದಲ್ಲಿ ಕುರಿಗಾಹಿಗಳು ಸಿಕ್ಕಿಹಾಕಿಕೊಂಡಿದ್ದಾರೆ.

ಇಂದು ಕುರಿಗಾಹಿಳು ಸಿಲುಕಿಕೊಂಡಿದ್ದ ಗುಡ್ಡ ಪ್ರದೇಶಕ್ಕೆ ಹೊಸದುರ್ಗ ಶಾಸಕ ಗೂಳಿಹಟ್ಟಿ ಡಿ ಶೇಖರ್ ಮತ್ತು ತಹಶಿಲ್ದಾರ್ ಮಲ್ಲಿಕಾರ್ಜುನಪ್ಪ ಭೇಟಿ ನೀಡಿದರು. ತೆಪ್ಪದ ಮೂಲಕ ತೆರಳಿದವ ಇವರು ಆಹಾರ ಕಿಟ್, ದಿನ ಬಳಕೆ ವಸ್ತುಗಳು, ಶೆಡ್ ನಿರ್ಮಾಣ ಮಾಡಿಕೊಳ್ಳಲು ಬೇಕಾದ ಸಲಕರಣೆಗಳನ್ನು ವಿತರಣೆ ಮಾಡಿದರು. 50 ಜನ ಕುರಿಗಾಹಿಗಳು ಈ ತಂಡದಲ್ಲಿ ಇದ್ದು ಇವರ ಜೊತೆ 2500 ಕುರಿಗಳು ಸಹ ಇದ್ದ ಕಳೆದ ಹನ್ನೆರಡು ದಿನಗಳಿಂದ ಗುಡ್ಡದಲ್ಲೆ ವಾಸ ಮಾಡುತ್ತಿದ್ದಾರೆ. ಇವರೆಲ್ಲರೂ ಹೊಸದುರ್ಗ ತಾಲ್ಲೂಕಿನ ಹೊಸತಿಮ್ಮಪ್ಪಹಟ್ಟಿ, ನಾಗತಿಹಳ್ಳಿ, ಈರಣ್ಣನಹಟ್ಟಿ ಗ್ರಾಮದ ಕುರಿಗಾಯಿಗಳಾಗಿದ್ದಾರೆ.

ಗುಡ್ಡದಲ್ಲಿ ಕರಡಿ, ಚಿರತೆಗಳ ಹಾವಳಿ ಹೆಚ್ಚಾಗಿ ಇದ್ದು ಕುರಿಗಾಹಿಗಳ ಕುಟುಂಬಸ್ಥರು ಮನೆಯವರಿಗೆ ಏನಾಗುತ್ತೆ ಎಂಬ ಆತಂಕದಲ್ಲಿದ್ದಾರೆ. ಸದ್ಯ ತಾಲ್ಲೂಕು ಆಡಳಿತದಿಂದ ಆಹಾರ ತಯಾರಿಸಿಕೊಳ್ಳಲು ಬೇಕಾದ ವಸ್ತುಗಳು ಹಾಗೂ ದವಸಧಾನ್ಯವನ್ನು ಪೂರೈಕೆ ಮಾಡಲಾಗಿದೆ. ಗುಡ್ಡದ ಸುತ್ತ ನಿಂತಿರುವ ನೀರಿನ‌ ಪ್ರಮಾಣ ಸದ್ಯಕ್ಕೆ ಇಳಿಯುವ ಲಕ್ಷಣ ಕಂಡುಬರುತ್ತಿಲ್ಲವಾದರಿಂದ ಇನ್ನು ಕೆಲ ದಿನಗಳ‌ ಕಾಲ ಕುರಿಗಾಹಿಗಳು ಬೆಟ್ಟದಲ್ಲೇ ಇರಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.

ಇದನ್ನೂ ಓದಿ : World Suicide Prevention Day:ಇಂದು ವಿಶ್ವ ಆತ್ಮಹತ್ಯೆ ತಡೆ ದಿನ : ಏನಿದರ ಉದ್ದೇಶ ?

ಇದನ್ನು ಓದಿ : Kohinoor’s return : ಕ್ವೀನ್​ ಎಲೆಜೆಬೆತ್​​ II ಮರಣದ ಬೆನ್ನಲ್ಲೇ ಕೊಹಿನೂರ್​ ವಜ್ರ ಮರಳಿ ಕೊಡುವಂತೆ ಭಾರತೀಯರಿಂದ ಬೇಡಿಕೆ

ಇದನ್ನೂ ಓದಿ : Dhoni Kapil Dev US Open tennis : ಯುಎಸ್ ಓಪನ್ ಟೆನಿಸ್ ಅಂಗಣದಲ್ಲಿ 3 ವಿಶ್ವಕಪ್ ವಿಜೇತ ನಾಯಕರು ; ಟೆನಿಸ್ ಎಂಜಾಯ್ ಮಾಡಿದ ಧೋನಿ, ಕಪಿಲ್ ದೇವ್

Karnataka hit by incessant rains: Shepherds stuck in the middle

Comments are closed.