Kohinoor’s return : ಕ್ವೀನ್​ ಎಲೆಜೆಬೆತ್​​ II ಮರಣದ ಬೆನ್ನಲ್ಲೇ ಕೊಹಿನೂರ್​ ವಜ್ರ ಮರಳಿ ಕೊಡುವಂತೆ ಭಾರತೀಯರಿಂದ ಬೇಡಿಕೆ

Kohinoor’s return : ಬ್ರಿಟನ್​​ನ ದೀರ್ಘಾವಧಿಯ ರಾಣಿ ಎಲೆಜೆಬೆತ್​​ II ಮರಣದ ಬಳಿ ಭಾರತದಲ್ಲಿ ಹೊಸದೊಂದು ಚರ್ಚೆ ಆರಂಭವಾಗಿದೆ. ಬ್ರಿಟೀಷರ ಕಾಲದಲ್ಲಿ ಭಾರತದಲ್ಲಿದ್ದ ಅತ್ಯಮೂಲ್ಯ ಕೊಹಿನೂರ್​ ವಜ್ರವನ್ನು ಬ್ರಿಟನ್​ ರಾಣಿಗಾಗಿ ಇವರು ಕದ್ದೊಯ್ದಿದ್ದು ನೆನಪಿದ್ದಿರಬಹುದು. ಇದೀಗ ಎಲೆಜಬೆತ್​ ಮರಣದ ಬೆನ್ನಲ್ಲೇ ಕೊಹಿನೂರ್​ ವಜ್ರವನ್ನು ಭಾರತಕ್ಕೆ ಮರಳಿಸಿ ಎಂಬ ಬೇಡಿಕೆ ಹೊಸ ಜನ್ಮ ಪಡೆದುಕೊಂಡಿದೆ. 105.6 ಕ್ಯಾರಟ್​​ನ ಕೊಹಿನೂರ್​ ವಜ್ರವು 2800 ಇತರೆ ವಜ್ರಗಳು ಹಾಗೂ ನೀಲಮಣಿಗಳು ಮತ್ತ ಇತರೆ ಬೆಲೆಬಾಳುವ ಲೋಹಗಳ ಜೊತೆಯಲ್ಲಿ 1937ರಲ್ಲಿ ವಿನ್ಯಾಸಗೊಳಿಸಲಾದ ಬ್ರಿಟಿಷ್​ ಮೊನಾರ್ಚ್​ ಕಿರೀಟದಲ್ಲಿತ್ತು. ರಾಣಿಯ ಮರಣದವರೆಗೂ ಇದು ಅವರ ಜೊತೆಯಲ್ಲೇ ಇತ್ತು.


ಎಲೆಜಬೆತ್​ ಮರಣದ ಬಳಿಕ ಇದೀಗ ಈ ಬೆಲೆಬಾಳುವ ಅತ್ಯಾಕರ್ಷಕ ಕಿರೀಟವು ರಾಣಿ ಕ್ಯಾಮಿಲ್ಲಾಗೆ ಸೇರಲಿದೆ ಎಂದು ವರದಿಯಾಗಿದೆ. ಪಟ್ಟಾಭಿಷೇಕದ ಸಂದರ್ಭದಲ್ಲಿ ಸಮಯದಲ್ಲಿ ಕಿಂಗ್ ಚಾರ್ಲ್ಸ್ III ಜೊತೆಗೆ ಅಭಿಷೇಕಿಸಲಾಗುತ್ತದೆ.


ಹೀಗಾಗಿ ಕೆಲವು ಟ್ವಿಟರ್​ ಬಳಕೆದಾರರು ಕೊಹಿನೂರ್​ ವಜ್ರದ ವಾಪಸ್ಸಾತಿಗೆ ಸಂಬಂಧಿಸಿದಂತೆ ಕೆಲವು ಗಂಭೀರವಾದ ಮನವಿಗಳನ್ನು ಮಾಡ್ತಿದ್ದಾರೆ. ಇನ್ನು ಕೆಲವರು ತಮಾಷೆಯ ಮಾರ್ಗದ ಮೂಲಕ ಕೊಹಿನೂರ್​ ವಜ್ರವನ್ನು ಲೂಟಿ ಮಾಡುವ ಬಗ್ಗೆ ಯೋಚಿಸುತ್ತಿದ್ದಾರೆ. ಧೂಮ್​ 2 ಸಿನಿಮಾದಲ್ಲಿ ಹೃತಿಕ್​ ರೋಷನ್​ ವಜ್ರವನ್ನು ಕಳ್ಳತನ ಮಾಡುತ್ತಿರುವ ವಿಡಿಯೋವಂತೂ ಇದೀಗ ಸಿಕ್ಕಾಪಟ್ಟೆ ವೈರಲ್​ ಆಗಿದೆ.


ಈಗ ನಮ್ಮ ಕೊಹಿನೂರ್​ ವಜ್ರವನ್ನು ನಮಗೆ ಮರಳಿಸಬಹುದಲ್ಲವೇ..? ಎಂದು ಭಾರತೀಯ ನೆಟ್ಟಿಗರು ಇದೀಗ ಸೋಶಿಯಲ್​ ಮೀಡಿಯಾದಲ್ಲಿ ಆಗ್ರಹಿಸುತ್ತಿದ್ದಾರೆ.

ಇದನ್ನು ಓದಿ : Six drown : 2 ಪ್ರತ್ಯೇಕ ಘಟನೆಗಳಲ್ಲಿ ಗಣಪತಿ ವಿಸರ್ಜನೆ ವೇಳೆ ಮುಳುಗಿ ಆರು ಮಂದಿ ಜಲಸಮಾಧಿ

ಇದನ್ನೂ ಓದಿ : Sonu Sood : ರಕ್ತದಲ್ಲಿ ತನ್ನ ಕಲಾಕೃತಿ ಬಿಡಿಸಿದವನಿಗೆ ನಟ ಸೋನು ಸೂದ್​ ಬುದ್ಧಿಮಾತು

As Queen departs, Twitterati now demands Kohinoor’s return to India

Comments are closed.