Groin Injury Virat Kohli : ಇಂಗ್ಲೆಂಡ್ ವಿರುದ್ಧದ 1 ನೇ ಏಕದಿನ ಪಂದ್ಯದಿಂದ ವಿರಾಟ್‌ ಕೊಹ್ಲಿ ಔಟ್‌

ನವದೆಹಲಿ : ಟೀಂ ಇಂಡಿಯಾದ ಮಾಜಿ ನಾಯಕ ವಿರಾಟ್‌ ಕೊಹ್ಲಿ ಅವರ ಫಾರ್ಮ್‌ ಕುರಿತು ಚರ್ಚೆ ನಡೆಯುತ್ತಿರುವ ಬೆನ್ನಲ್ಲೇ ಶಾಕಿಂಗ್‌ ಸುದ್ದಿಯೊಂದು ಹೊರಬಿದ್ದಿದೆ. ತೊಡೆಸಂದು ಸೆಳೆತದಿಂದ ಬಳಲುತ್ತಿರುವ ವಿರಾಟ್‌ ಕೊಹ್ಲಿ (Groin Injury Virat Kohli), ಇಂದಿನಿಂದ ಆರಂಭಗೊಳ್ಳಲಿರುವ ಇಂಗ್ಲೆಂಡ್‌ ವಿರುದ್ದದ ಮೊದಲನೇ ಏಕದಿನ ಪಂದ್ಯದಿಂದ ಹೊರಗುಳಿಯಲಿದ್ದಾರೆ ಎನ್ನಲಾಗುತ್ತಿದೆ.

ಇಂಗ್ಲೆಂಡ್‌ ವಿರುದ್ದ ಅಂತಿಮ ಟಿ೨೦ ಪಂದ್ಯದ ವೇಳೆಯಲ್ಲಿ ವಿರಾಟ್‌ ಕೊಹ್ಲಿ ಅವರಿಗೆ ತೊಡೆಸಂದು ಸೆಳೆತ ಕಾಣಿಸಿಕೊಂಡಿತ್ತು. ಈ ಹಿನ್ನೆಲೆಯಲ್ಲಿ ವೈದ್ಯರು ವಿಶ್ರಾಂತಿ ಪಡೆಯುವಂತೆ ಸೂಚನೆಯನ್ನು ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಕೊಹ್ಲಿ ಮೊದಲ ಏಕದಿನ ಪಂದ್ಯಕ್ಕೆ ಅಲಭ್ಯರಾಗಲಿದ್ದಾರೆ. ಆದರೆ ಟೀಂ ಇಂಡಿಯಾದ ಆಡಳಿತ ಮಂಡಳಿಗೆ ವಿರಾಟ್‌ ಕೊಹ್ಲಿ ಅವರನ್ನು ತಂಡದಿಂದ ಹೊರಗೆ ಇಡಲು ಮನಸ್ಸಿಲ್ಲ. ಇದೇ ಕಾರಣಕ್ಕೆ ಲಾರ್ಡ್ಸ್ (ಜುಲೈ 14) ಮತ್ತು ಮ್ಯಾಂಚೆಸ್ಟರ್‌ನಲ್ಲಿ (ಜುಲೈ 17) ಮುಂದಿನ ಎರಡು ಪಂದ್ಯಗಳಿಗೆ ಲಭ್ಯವಿರಲಿದ್ದಾರೆ.

ವಿಶ್ರಾಂತಿಯ ಹಿನ್ನೆಲೆಯಲ್ಲಿ ವಿರಾಟ್‌ ಕೊಹ್ಲಿ ಟೀಂ ಇಂಡಿಯಾದ ಬಸ್ಸಿನಲ್ಲಿ ನಾಟಿಂಗ್‌ಹ್ಯಾಮ್‌ನಿಂದ ಲಂಡನ್‌ಗೆ ಪ್ರಯಾಣಿಸಿಲ್ಲ. ವೈದ್ಯಕೀಯ ತಪಾಸಣೆಗೆ ಒಳಗಾಗಬೇಕಾಗಿರುವ ಹಿನ್ನೆಲೆಯಲ್ಲಿ ಅವರು ಪ್ರಯಾಣಿಸಿಲ್ಲ ಎಂದು ಹೇಳಲಾಗುತ್ತಿದೆ. ಇನ್ನು ಶಿಖರ್‌ ಧವನ್‌, ಶಾರ್ದೂಲ್‌ ಠಾಕೂರ್‌ ಹಾಗೂ ಪ್ರಸಿದ್ದ ಕೃಷ್ಣ ಮಾತ್ರವೇ ಲಂಡನ್‌ನ ಓವೆಲ್‌ ಮೈದಾನದಲ್ಲಿ ಪ್ರಾಕ್ಟಿಸ್‌ ನಡೆಸಿದ್ದಾರೆ.

ಇನ್ನು ವೆಸ್ಟ್ ಇಂಡೀಸ್ ಮತ್ತು USA ನಲ್ಲಿ ನಡೆಯಲಿರುವ ವೆಸ್ಟ್‌ ಇಂಡಿಸ್‌ ವಿರುದ್ದದ ಐದು ಪಂದ್ಯಗಳ T20I ಸರಣಿಗಾಗಿ ಭಾರತ ತಂಡದ ಆಯ್ಕೆಯನ್ನು ಮುಂದೂಡಲಾಗಿದ್ದು, ಇಂದು ತಂಡದ ಆಯ್ಕೆ ನಡೆಯುವ ಸಾಧ್ಯತೆಯಿದೆ. ಇನ್ನೊಂದೆಡೆಯಲ್ಲಿ ಟೀಂ ಇಂಡಿಯಾದ ನಾಯಕ ರೋಹಿತ್ ಶರ್ಮಾ ವಿರಾಟ್‌ ಕೊಹ್ಲಿ ಅವರನ್ನು ಬೆಂಬಲಿಸಿದ್ದಾರೆ. ಆದರೆ ಟಿ 20 ತಂಡದಲ್ಲಿ ಕೊಹ್ಲಿಯ ಸ್ಥಾನವನ್ನು ಮಾಜಿ ಶ್ರೇಷ್ಠರಾದ ಕಪಿಲ್ ದೇವ್ ಮತ್ತು ವೀರೇಂದ್ರ ಸೆಹ್ವಾಗ್ ಸೇರಿದಂತೆ ತಜ್ಞರು ಪದೇ ಪದೇ ಪ್ರಶ್ನಿಸುತ್ತಿದ್ದಾರೆ. ಇನ್ನು ವೆಸ್ಟ್‌ ಇಂಡಿಸ್‌ ವಿರುದ್ದ ಸರಣಿಯಿಂದ ತನಗೆ ವಿಶ್ರಾಂತಿ ನೀಡುವಂತೆ ಈಗಾಗಲೇ ವಿರಾಟ್‌ ಕೊಹ್ಲಿ ಕೇಳಿಕೊಂಡಿದ್ದಾರೆ ಎನ್ನಲಾಗುತ್ತಿದೆ. ಹೀಗಾಗಿ ಅವರು ವೆಸ್ಟ್‌ ವಿರುದ್ದದ ಸರಣಿಯಿಂದ ವಿಶ್ರಾಂತಿ ನೀಡುವ ಸಾಧ್ಯತೆಯಿದೆ.

ಇದನ್ನೂ ಓದಿ : ಗಂಗೂಲಿ, ಸೆಹ್ವಾಗ್, ಯುವಿಗೊಂದು ನ್ಯಾಯ.. ಕೊಹ್ಲಿಗೊಂದು ನ್ಯಾಯನಾ..? ಗಂಭೀರ ಪ್ರಶ್ನೆ ಎತ್ತಿದ್ದ ಕರ್ನಾಟಕದ ದಿಗ್ಗಜ

ಇದನ್ನೂ ಓದಿ : “ನಮ್ಮವರಿಗೆ ನಮ್ಮವರೇ ವಿಲನ್..” ಕೆ.ಎಲ್ ರಾಹುಲ್ ಬಗ್ಗೆ ದೊಡ್ಡ ಗಣೇಶ್ ಬಾಯಲ್ಲಿ ಇದೆಂಥಾ ಮಾತು?

Groin Injury Virat Kohli Set to Miss 1st ODI Against England

Comments are closed.