COVID 19 : ಬೆಂಗಳೂರಲ್ಲಿ ಕೋವಿಡ್‌ ಸೋಂಕು ಬಾರೀ ಇಳಿಕೆ : ಒಂದು ಸಾವು

ಬೆಂಗಳೂರು : (Covid 19 Karnataka) ಕರ್ನಾಟಕದಲ್ಲಿ ಕೋರೋನಾ ಸೋಂಕಿನ ಪ್ರಮಾಣದಲ್ಲಿ ಬಾರೀ ಇಳಿಕೆ ಕಂಡಿದೆ. ಕಳೆದ ಆರು ತಿಂಗಳ ಬಳಿಕ ಕೋವಿಡ್‌ ಹೊಸ ಪ್ರಕರಣ ಸಂಖ್ಯೆಯಲ್ಲಿ ಇಳಿಮುಖವಾಗುತ್ತಿದೆ. ನಿನ್ನೆ ಆರೋಗ್ಯ ಇಲಾಖೆ ನೀಡಿರುವ ವರದಿಯ ಪ್ರಕಾರ ಒಟ್ಟು 43 ಹೊಸ ಪ್ರಕರಣ ಪತ್ತೆಯಾಗಿತ್ತು. ಅಲ್ಲದೇ ಚಿಕಿತ್ಸೆ ಫಲಕಾರಿಯಾಗದೇ ಓರ್ವ ವ್ಯಕ್ತಿ ಮೃತಪಟ್ಟಿದ್ದಾರೆ.

ಕೋವಿಡ್‌ ವೈರಸ್‌ ಸೋಂಕಿತ ಪ್ರಕರಣಗಳು ಏರಿಕೆಯಾಗದಂತೆ ಮುನ್ನೆಚ್ಚರಿಕೆ ಆರೋಗ್ಯ ಇಲಾಖೆ ನಿರಂತರವಾಗಿ ಕೋವಿಡ್‌ ಪರೀಕ್ಷೆಯನ್ನು ನಡೆಸುತ್ತಿದೆ. ದಿನ ಕಳೆದಂತೆ ಕೋವಿಡ್‌ ಸೋಂಕಿತರ ಸಂಖ್ಯೆಯಲ್ಲಿ ಇಳಿಮುಖವಾಗುತ್ತಿದೆ. ಆರೋಗ್ಯ ಇಲಾಖೆಯ ಅಂಕಿ ಅಂಶಗಳ ಪ್ರಕಾರ ಸೋಮವಾರ ಒಟ್ಟು 43 ಕೋವಿಡ್‌ ಸೋಂಕಿತ ಪ್ರಕರಣಗಳು ( COVID 19 ) ದಾಖಲಾಗಿದ್ದು, ಭಾನುವಾರ 78 ಪ್ರಕರಣಗಳು ದಾಖಲಾಗಿವೆ .ಕಳೆದ ಆರು ತಿಂಗಳಿಗೆ ಹೋಲಿಕೆ ಮಾಡಿದ್ರೆ, ಕೋವಿಡ್‌ ಸೋಂಕಿತರ ಸಂಖ್ಯೆಯಲ್ಲಿ ಇದೀಗ ಬಾರೀ ಇಳಿಕೆಯಾದಂತಾಗಿದೆ. ಸೋಮವಾರ ಒಟ್ಟು 3440 ಮಂದಿಯನ್ನು ಕೋವಿಡ್‌ ಪರೀಕ್ಷೆಗೆ ಒಳಪಡಿಸಲಾಗಿದ್ದು, ಭಾನುವಾರಕ್ಕೆ ಹೋಲಿಕೆ ಮಾಡಿದ್ರೆ, ಶೇಕಡಾ 35 ರಷ್ಟು ಇಳಿಕೆ ಕಂಡಿದೆ.

ಇದನ್ನೂ ಓದಿ : Yellow Alert : ಮತ್ತೆ ಶುರುವಾಯ್ತಾ ವರುಣನ ನರ್ತನ : ಹಳದಿ ಅಲರ್ಟ್‌ ಘೋಷಣೆ

ಇದನ್ನೂ ಓದಿ : Mysore Dussehra : ವಿಶ್ವ ವಿಖ್ಯಾತ ಮೈಸೂರು ದಸರಾದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳ ವೈಭ

ಇದನ್ನೂ ಓದಿ : Pramod Muthalik :ಇಂತಿಫಿದಾ ಎಂಬುದು ಆಘಾತಕಾರಿ ಸಂದೇಶ: ಪ್ರಮೋದ್ ಮುತಾಲಿಕ್

ರಾಜ್ಯದಲ್ಲಿ ಸದ್ಯ 796 ಮಂದಿ ಸೋಂಕಿತರಿದ್ದು, ಇವರಲ್ಲಿ 30 ಮಂದಿ ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನು ಪಡೆಯುತ್ತಿದ್ದಾರೆ. ಇನ್ನುಳಿದ 2763 ಸೋಂಕಿತ ಮಂದಿ ಮನೆಯಲ್ಲಿ ಆರೈಕೆಯಲ್ಲಿದ್ದಾರೆ. ಈ ಮೂಲಕ ರಾಜ್ಯದಲ್ಲಿ ಸದ್ಯ 1.1 ರಷ್ಟು ಪಾಸಿಟಿವಿಟಿ ದರ ಇದೆ. ಸೋಮವಾ 43 ಕೋವಿಡ್‌ ಸೋಂಕಿತ ಪ್ರಕರಣ ದಾಖಲಾಗಿದ್ದು, ಒಂದು ಸಾವು ಸಂಭವಿಸಿದೆ. ಇನ್ನು ಭಾನುವಾರ 78 ಸೋಂಕಿತ ಪ್ರಕರಣಗಳು ಪತ್ತೆಯಾಗಿದ್ದು, ಯಾವುದೇ ಸಾವಿನ ಪ್ರಕರಣ ದಾಖಲಾಗಿರಲಿಲ್ಲ.

ರಾಜ್ಯದಲ್ಲಿ ಇದುವರೆಗೆ ಒಟ್ಟು 69225988 ಮಂದಿಯನ್ನು ಕೋವಿಡ್‌ ಪರೀಕ್ಷೆಗೆ ಒಳಪಡಿಸಲಾಗಿದ್ದು, ಇದುವರೆಗೆ ಒಟ್ಟು4065100 ಮಂದಿಗೆ ಕೋವಿಡ್‌ ವೈರಸ್‌ ಸೋಂಕು ದೃಢಪಟ್ಟಿತ್ತು. ಇದುವರೆಗೆ ರಾಜ್ಯದಲ್ಲಿ 40243 ಮಂದಿ ಕೋವಿಡ್‌ ಸೋಂಕಿನಿಂದ ಮೃತಪಟ್ಟಿದ್ದಾರೆ.

Covid 19 Karnataka has seen a decrease in the rate of corona infection

Comments are closed.