Minister Madhuswamy clarified : ಆಡಿಯೋ ವೈರಲ್​​ ವಿಚಾರದಲ್ಲಿ ಮೊದಲ ಬಾರಿಗೆ ಮೌನ ಮುರಿದ ಮಾಧುಸ್ವಾಮಿ: ಸಹೋದ್ಯೋಗಿಗಳ ನಡೆಗೆ ಅಸಮಾಧಾನ

ತುಮಕೂರು: Minister Madhuswamy clarified : ಸರ್ಕಾರದ ಕೈಯಲ್ಲಿ ಏನೂ ಆಗ್ತಿಲ್ಲ. ಇನ್ನೂ ಆರೇಳು ತಿಂಗಳು ಬಾಕಿ ಇದೆ ಅಂತಾ ಹೇಗೋ ತಳ್ಳಿಕೊಂಡು ಹೋಗ್ತಿದ್ದೇವೆ ಎಂದು ಕಾನೂನು ಸಚಿವ ಮಾಧುಸ್ವಾಮಿ ಹೇಳಿಕೆ ಇದೀಗ ರಾಜಕೀಯ ವಲಯದಲ್ಲಿ ಭಾರೀ ಸಂಚಲನಕ್ಕೆ ಕಾರಣವಾಗಿದೆ. ಈ ವಿಚಾರವಾಗಿ ವಿಪಕ್ಷಗಳು ಹಾಗೂ ಬಿಜೆಪಿ ನಾಯಕರ ಆರೋಪ ಪ್ರತ್ಯಾರೋಪಗಳ ನಡುವೆಯೇ ಇಂದು ಸ್ವತಃ ಕಾನೂನು ಸಚಿವ ಮಾಧುಸ್ವಾಮಿ ಈ ಬಗ್ಗೆ ಸ್ಪಷ್ಟನೆಯನ್ನು ನೀಡಿದ್ದಾರೆ.


ತುಮಕೂರಿನಲ್ಲಿ ಈ ವಿಚಾರವಾಗಿ ಮಾತನಾಡಿದ ಕಾನೂನು ಸಚಿವ ಮಾಧುಸ್ವಾಮಿ, ನಾನು ಈ ವಿಷಯದ ಬಗ್ಗೆ ಮಾತನಾಡಬಾರದು ಎಂದುಕೊಂಡಿದ್ದೆ. ಆದರೆ ಇದರಲ್ಲಿ ಎರಡು ಪ್ರಮುಖ ಅಂಶವಿದೆ. ಒಂದು ರೈಟ್​ ಟು ಪ್ರೈವೆಸಿ ಮತ್ತೊಂದು ಟೈಮಿಂಗ್​ . ನಾನು ಯಾರ ಬಳಿ ಈ ರೀತಿ ಮಾತನಾಡಿದೆ , ಯಾವಾಗ ಮಾತನಾಡಿದೆ ಅಂತಾ ಗೊತ್ತಿಲ್ಲ. ಚೆನ್ನಪಟ್ಟಣದ ಭಾಸ್ಕರ್​​ ಎಂಬರ ಬಳಿಯಲ್ಲಿ ಈ ರೀತಿ ಮಾತನಾಡಿದೆ ಅಂತಾ ಮಾಧ್ಯಮಗಳಲ್ಲಿ ಸುದ್ದಿಯಾಗಿದೆ. ನಾನು ವೈರಲ್​ ಆಗಿರುವ ವಿಡಿಯೋದ ಬಗ್ಗೆ ಮಾತನಾಡಲೇಬಾರದು ಅಂತಾ ಅಂದುಕೊಂಡಿದ್ದೆ.

ಸೋಮಶೇಖರ್​ ಬಗ್ಗೆ ನಾನು ಕೆಟ್ಟದಾಗಿ ಮಾತನಾಡಿಲ್ಲ. ಯಾರು ಅಶಕ್ತರು, ಯಾರು ಕೆಲಸ ಮಾಡಿಲ್ಲ ಅಂತಾ ನಾನು ಹೇಳಿಲ್ಲ. ಡಿಸಿ ಬ್ಯಾಂಕ್​ನಲ್ಲಿ ಹೆಚ್ಚುವರಿ ಬಡ್ಡಿ ವಸೂಲಿ ಮಾಡ್ತಾರೆ ಅಂತಾ ಹೇಳಿದ್ದು ನಿಜ. ನೀವು ಸರ್ಕಾರ ನಡೆಸ್ತಿಲ್ಲ ಅಂತಾ ಅವನು ಕೇಳಿದ್ದಾಗ ನಾನು ಮಾತನಾಡಿರಬಹುದು. ಮೂರನೇ ವ್ಯಕ್ತಿ ಬಳಿ ಹೋಗಿ ಸರ್ಕಾರ ನಡೀತಾ ಇಲ್ಲ ಎಂದು ಹೇಳುವ ಪರಿಸ್ಥಿತಿ ನನಗಿಲ್ಲ. ಅವರು ಅಂತಹ ಗುರುತಿಸಿಕೊಳ್ಳುವ ವ್ಯಕ್ತಿ ಕೂಡ ಅಲ್ಲ. ಅವನು ಯಾರೋ ಅನಾಮಿಕ. ಈ ಘಟನೆ ಎಷ್ಟು ದಿನದ ಕೆಳಗೆ ನಡೀತು ಅಂತಾ ಕೂಡ ನನಗೆ ತಿಳಿದಿಲ್ಲ. ಈಗ ಯಾಕೆ ಈ ಆಡಿಯೋ ವೈರಲ್​ ಆಯ್ತು ಅಂತಾ ಕೂಡ ನನಗೆ ತಿಳಿದಿಲ್ಲ ಎಂದು ಹೇಳಿದರು.


ನಾನು ಸಿಎಂ ಜೊತೆ ಮಾತನಾಡಿದ್ದೇನೆ. ಸರ್ಕಾರದ ಬಗ್ಗೆ ಗೌರವ ಇಟ್ಟುಕೊಂಡಿರುವ ವ್ಯಕ್ತಿ ನಾನು. ನನ್ನ ಜೊತೆ ಆತ ವಾದ ಮಾಡುತ್ತಿದ್ದ ಸಂದರ್ಭದಲ್ಲಿ ನಾನು ನಾವು ಮ್ಯಾನೇಜ್​​​ ಮಾಡ್ತಿದ್ದೀವಿ ಕಣಯ್ಯ ಎಂದು ಹೇಳಿರಬಹುದು. ಸರ್ಕಾರದಲ್ಲಿ ಇದ್ದುಕೊಂಡು ಸರ್ಕಾರ ನಡೀತಾ ಇಲ್ಲ ಅಂತಾ ಹೇಳೋಕೆ ಆಗುತ್ತಾ..? ಸಿಎಂ ನನ್ನ ಮಾತನ್ನು ಒಪ್ಪಿಕೊಂಡಿದ್ದಾರೆ. ನಾನೇನಾದರೂ ಸ್ಪಷ್ಟನೆ ಕೊಡಬೇಕು ಅಂದರೆ ಸಿಎಂಗೆ ಕೊಡಬೇಕು. ಸಿಎಂಗೆ ಸ್ಪಷ್ಟನೆ ನಾನು ಕೊಡುತ್ತೇನೆ ಎಂದು ಹೇಳಿದರು.


ಸಹೋದ್ಯೋಗಿಗಳ ಬಗ್ಗೆಯೂ ಇದೇ ವೇಳೆ ಅಸಮಾಧಾನ ಹೊರ ಹಾಕಿದ ಮಾಧುಸ್ವಾಮಿ, ನಮ್ಮ ಸಹೋದ್ಯೋಗಿಗಳು ಕನಿಷ್ಟ ನನಗೆ ಒಂದು ಮಾತು ಕಾಲ್​ ಮಾಡಿ ಕೇಳಬಹುದಿತ್ತು. ಯಾಕೆ ಮಾಧುಸ್ವಾಮಿ ಈ ರೀತಿ ಮಾತನಾಡಿದ್ದೀರಿ ಎಂದು ಕೇಳಬಹುದಿತ್ತು. ಆಗ ಸಹೋದ್ಯೋಗಿಗಳು ಎಂಬ ಪದಕ್ಕೆ ಒಂದು ಅರ್ಥ ಉಳಿಯುತ್ತಿತ್ತು. ಆಡಿಯೋದಲ್ಲಿ ನಾನು ಏಕವಚನ ಪದ ಬಳಕೆ ಮಾಡಿಲ್ಲ. ಸನ್ಮಾನ್ಯ ಸೋಮಶೇಖರ್​ ಎಂದೇ ಹೇಳಿದ್ದೇನೆಂದು ಪುನರುಚ್ಛರಿಸಿದರು.

ಇದನ್ನು ಓದಿ : Assault case in Bhadravati:ಭದ್ರಾವತಿ ಹಲ್ಲೆ ಪ್ರಕರಣ : ಆರೋಪಿ ಬಂಧನ; ಗೃಹ ಸಚಿವರಿಂದ ಶಿವಮೊಗ್ಗದಲ್ಲಿ ಹೈಲೆವೆಲ್​ ಮೀಟಿಂಗ್​

ಇದನ್ನೂ ಓದಿ : Pramod Muthalik’s outrage : ಬಿಜೆಪಿಗರ ಕೈಲಾಗದೇ ಇದ್ದರೆ ಮನೆ ಹೋಗಲಿ : ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್​ ಮುತಾಲಿಕ್​ ಕಿಡಿ

Law Minister Madhuswamy clarified about the audio viral issue

Comments are closed.