ಸೋಮವಾರ, ಏಪ್ರಿಲ್ 28, 2025
Homedistrict Newsಕೆ.ಆರ್.ಎಸ್ ಉಳಿಸಲು ಸುಮಲತಾ ಸರ್ಕಸ್...! ಕೇಂದ್ರ ಗೃಹ ಸಚಿವರ ಮೊರೆ ಹೋದ ಸಂಸದೆ...!!

ಕೆ.ಆರ್.ಎಸ್ ಉಳಿಸಲು ಸುಮಲತಾ ಸರ್ಕಸ್…! ಕೇಂದ್ರ ಗೃಹ ಸಚಿವರ ಮೊರೆ ಹೋದ ಸಂಸದೆ…!!

- Advertisement -

ಮೈಸೂರು : ಕೆ.ಆರ್.ಎಸ್ ಡ್ಯಾಂ ಸುರಕ್ಷತೆಗಾಗಿ ಅಕ್ರಮ ಗಣಿಗಾರಿಕೆ ವಿರುದ್ಧ ಸಮರ ಸಾರಿರುವ ಸಂಸದೆ ಸುಮಲತಾ ಅಂಬರೀಶ್ ಕೇಂದ್ರ ಗೃಹ ಸಚಿವರ ಮೊರೆ ಹೋಗಿದ್ದಾರೆ.

ದೆಹಲಿಯಲ್ಲಿ ಗೃಹ ಸಚಿವ ಅಮಿತ್ ಶಾ ಭೇಟಿ ಮಾಡಿದ ಸಂಸದೆ ಸುಮಲತಾ ಅಕ್ರಮ ಗಣಿಗಾರಿಕೆಯಿಂದ ಕೆಆರ್.ಎಸ್ ಡ್ಯಾಂ ಸುರಕ್ಷತೆಗೆ ಆತಂಕವಿದೆ.ಜೊತೆಗೆ ಸುತ್ತಲಿನ ಅರಣ್ಯ ಹಾಗೂ ಪ್ರಾಣಿ ಸಂಕುಲವೂ ಅಪಾಯದಲ್ಲಿದೆ ಎಂದು ಅಮಿತ್ ಶಾ ಅವರಿಗೆ ಮನವಿ ಮಾಡಿದ್ದಾರೆ. ಅಲ್ಲದೇ ಈ ಪ್ರಕರಣದ ಉನ್ನತ ಮಟ್ಟದ ತನಿಖೆಗೂ ಸುಮಲತಾ ಒತ್ತಾಯಿಸಿದ್ದಾರೆ.

ಕೆಲದಿನಗಳ ಹಿಂದೆಯಷ್ಟೇ ಕೆ.ಆರ್.ಎಸ್ ಡ್ಯಾಂ ಮತ್ತು ಬೇಬಿ ಬೆಟ್ಟ ಅಕ್ರಮ ಗಣಿಗಾರಿಕೆ ಪ್ರದೇಶಕ್ಕೂ ಭೇಟಿ ನೀಡಿದ ಸುಮಲತಾ ಅಧಿಕಾರಿಗಳಿಂದ ವಿವರಣೆ ಪಡೆದಿದ್ದರು. ಈಗ ಕೇಂದ್ರ‌ ಸರ್ಕಾರಕ್ಕೆ ಕೆ.ಆರ್.ಎಸ್ ಡ್ಯಾಂ ರಕ್ಷಣೆಗೆ ಸಹಾಯ ಕೋರಿದ್ದಾರೆ‌.

ಈಗಾಗಲೇ ಸುಮಲತಾ ಈ ಕುರಿತು ಸ್ಪೀಕರ್ ಓಂ ಬಿರ್ಲಾಗೂ ಮನವಿ ಸಲ್ಲಿಸಿದ್ದು ತನಿಖೆಗೆ ಆದೇಶಿಸುವಂತೆ ಕೋರಿದ್ದಾರೆ. ಜೆಡಿಎಸ್ ಶಾಸಕರು ಸೇರಿದಂತೆ ಹಲವು ಪ್ರಭಾವಿ ರಾಜಕಾರಣಿ ಗಳಿಂದಲೇ ಕೆ.ಆರ್.ಎಸ್ ಸುತ್ತುಮುತ್ತಲೂ ಅಕ್ರಮ ಗಣಿಗಾರಿಕೆ ನಡೆದಿದೆ ಎಂಬ ಅರೋಪ ಕೇಳಿಬಂದಿದೆ.

RELATED ARTICLES

Most Popular