tamboola prashne : ಮಳಲಿ ಮಸೀದಿಯಲ್ಲಿ ಹಿಂದೂ ದೇಗುಲ ಕುರುಹು ಪತ್ತೆ ವಿವಾದ : ತಾಂಬೂಲ ಪ್ರಶ್ನೆ

ಮಂಗಳೂರು : tamboola prashne : ದೇಶದಲ್ಲಿ ಸಧ್ಯ ಮಂದಿರ ಹಾಗೂ ಮಸೀದಿ ವಿವಾದಗಳು ಒಂದಾದ ಮೇಲೊಂದರಂತೆ ಬೆಳಕಿಗೆ ಬರುತ್ತಲೇ ಇದೆ. ಉತ್ತರ ಪ್ರದೇಶದ ಜ್ಞಾನವಾಪಿ ಮಸೀದಿ ವಿವಾದದ ಬೆನ್ನಲ್ಲೇ ಮಂಗಳೂರಿನ ಹೊರವಲಯದಲ್ಲಿರುವ ಗಂಜಿಮಠದ ಸಮೀಪದಲ್ಲಿರುವ ಮಳಲಿ ಎಂಬಲ್ಲಿ ಮಸೀದಿ ನವೀಕರಣದ ವೇಳೆಯಲ್ಲಿ ಹಿಂದೂ ದೇಗುಲ ಶೈಲಿಯ ಕುರುಹುಗಳು ಪತ್ತೆಯಾದ ಬಳಿಕ ರಾಜ್ಯದಲ್ಲಿಯೂ ವಿವಾದ ಸೃಷ್ಟಿಯಾಗಿತ್ತು. ಏಪ್ರಿಲ್​ 21ರಂದು ಮಸೀದಿ ನವೀಕರಣ ವೇಳೆ ಪತ್ತೆಯಾದ ಹಿಂದೂ ದೇಗುಲದ ಕುರುಹುಗಳು ಮಸೀದಿಯ ಇತಿಹಾಸವನ್ನು ಕೆದಕುವಂತೆ ಮಾಡಿದೆ. ಅದರಂತೆ ಇಂದು ವಿಶ್ವ ಹಿಂದೂ ಪರಿಷತ್​, ಬಜರಂಗದಳ ಇಂದು ತಾಂಬೂಲ ಪ್ರಶ್ನಾ ಚಿಂತನೆಯನ್ನು ಆಯೋಜಿಸಿವೆ.


ಹಿಂದೂ ಧರ್ಮದಲ್ಲಿ ಜ್ಯೋತಿಷ್ಯಕ್ಕೆ ಅತ್ಯುನ್ನತ ಸ್ಥಾನವನ್ನು ನೀಡಲಾಗಿದೆ. ಹೀಗಾಗಿ ಜ್ಯೋತಿಷ್ಯದ ಮೂಲಕವೇ ಮಳಲಿ ಮಸೀದಿ ಇತಿಹಾಸವನ್ನು ಕೆದಕುವ ಪ್ರಯತ್ನಕ್ಕೆ ಭಜರಂಗದಳ ಹಾಗೂ ವಿಶ್ವ ಹಿಂದೂ ಪರಿಷತ್​ ಕೈ ಹಾಕಿವೆ. ಅಷ್ಟಮಂಗಲದ ಮೂಲಕ ಪುರಾಣ ಕಾಲದ ಸತ್ಯವನ್ನು ಅನ್ವೇಷಿಸಬಹುದು ಎನ್ನುವುದು ಹಿಂದೂ ಧರ್ಮದ ನಂಬಿಕೆಯಾಗಿದೆ. ಹೀಗಾಗಿ ಈ ಅಷ್ಟಮಂಗಳವನ್ನು ಯಾವಾಗ ನಡೆಸಬೇಕು, ಎಲ್ಲಿ ನಡೆಸಬೇಕು ಹಾಗೂ ಈ ಮಸೀದಿಯಲ್ಲಿ ಪತ್ತೆಯಾದ ಹಿಂದೂ ದೇಗುಲದ ಕುರುಹುಗಳು ಯಾವ ದೇವರಿಗೆ ಸೇರಿದ್ದು ಎಂಬುದನ್ನು ತಿಳಿದುಕೊಳ್ಳಲು ತಾಂಬೂಲ ಪ್ರಶ್ನೆ ನಡೆಯುತ್ತಿದೆ.


ಈ ತಾಂಬೂಲ ಪ್ರಶ್ನೆಯು ರಾಜ್ಯಮಟ್ಟದಲ್ಲಿ ತೀವ್ರ ಕುತೂಹಲವನ್ನು ಕೆರಳಿಸಿದೆ. ಇನ್ನೇನು ಕೆಲವೇ ಕ್ಷಣಗಳಲ್ಲಿ ಆರಂಭಗೊಳ್ಳಲಿರುವ ತಾಂಬೂಲ ಪ್ರಶ್ನೆ ಕಾರ್ಯಕ್ರಮಕ್ಕೆ ವಿಶ್ವ ಹಿಂದೂ ಪರಿಷತ್​, ಭಜರಂಗದಳದ ವಿವಿಧ ಮುಖಂಡರು ಹಾಗೂ ಬಿಜೆಪಿಯ ಶಾಸಕರು ಹಾಜರಿರಲಿದ್ದಾರೆ. ಕೇರಳದ ಪುರೋಹಿತರು ಈ ತಾಂಬೂಲ ಪ್ರಶ್ನೆಯನ್ನು ನಡೆಸಲಿದ್ದಾರೆ. ಮಳಲಿ ಮಸೀದಿಯ ಸಮೀಪದಲ್ಲೇ ಇರುವ ಶ್ರೀರಾಮಾಂಜನೇಯ ಭಜನಾ ಮಂದಿರದಲ್ಲಿ ಈ ತಾಂಬೂಲ ಪ್ರಶ್ನೆ ನಡೆಯಲಿದ್ದು ಇದೊಂದು ಧಾರ್ಮಿಕ ಸೂಕ್ಷ್ಮ ವಿವಾದವಾಗಿರುವ ಹಿನ್ನೆಲೆಯಲ್ಲಿ ಮಳಲಿಯಲ್ಲಿ ಬಿಗಿ ಪೊಲೀಸ್​ ಬಂದೋಬಸ್ತ್​ ಮಾಡಲಾಗಿದೆ. ಮಂಗಳೂರು ನಗರ ಪೊಲೀಸ್​ ಕಮಿಷನರ್​​ ಶಶಿಕುಮಾರ್ ಮಸೀದಿಯ ಸುತ್ತ 500 ಮೀಟರ್​ ವ್ಯಾಪ್ತಿಯಲ್ಲಿ​ ನಿಷೇಧಾಜ್ಞೆ ಜಾರಿಗೊಳಿಸಿದ್ದಾರೆ.

ಇದನ್ನು ಓದಿ : SSLC question paper leak : ಎಸ್‌ಎಸ್‌ಎಲ್‌ಸಿ ಪ್ರಶ್ನೆ ಪತ್ರಿಕೆ ಸೋರಿಕೆ : ಎಸ್‌ಪಿಗೆ ದೂರುಕೊಟ್ಟ ಡಿಡಿಪಿಐ

ಇದನ್ನೂ ಓದಿ : KL Rahul Captain : IND vs SA ENG ಸರಣಿಗೆ ಟೀಂ ಇಂಡಿಯಾ ಆಯ್ಕೆ : T20 ಸರಣಿಗೆ ಕನ್ನಡಿಗ ರಾಹುಲ್‌ ನಾಯಕ

Comments are closed.