Tilak Varma : IPL ಮೂಲಕ ಕನಸು ಬೆನ್ನತ್ತಿರುವ ಯುವ ಆಟಗಾರ ತಿಲಕ್ ವರ್ಮ


ನಮ್ಮ ದೇಶದಲ್ಲಿ ಕ್ರಿಕೇಟ್ ಇಷ್ಟ ಪಡದ ವ್ಯಕ್ತಿಗಳು ಕಾಣಸಿಗುವುದು ಅಪರೂಪದಲ್ಲಿ ಅಪರೂಪ. ಕೆಲವರು ನಮ್ಮ ಮನೋರಂಜನೆಗಾಗಿ ಕ್ರಿಕೇಟ್ ನೋಡಿದರೆ ಇನ್ನು ಕೆಲವರು ತಮ್ಮ ನೆಚ್ಚಿನ ಕ್ರಿಕೇಟ್ ಆಟಗಾರನಿಗಾಗಿ ಕ್ರಿಕೇಟ್ ನೋಡುತ್ತಾರೆ. ಅದರಲ್ಲೂ ಐಪಿಎಲ್ ಬಂತೆಂದರೆ ಸಾಕು ದೇಶದೆಲ್ಲೆಡೆಯ ಕ್ರಿಕೇಟ್ ಅಭಿಮಾನಿಗಳಿಗೆ ಹಬ್ಬವೇ ಸರಿ. ಆದರೆ ಈ ಐಪಿಎಲ್ ಕೇವಲ ಅಭಿಮಾನಿಗಳನ್ನಷ್ಟೇ ಖುಷಿ ಪಡಿಸುವುದಲ್ಲದೆ ಹಲವಾರು ಯುವ ಆಟಗಾರರ ಕನಸನ್ನು ಪೂರೈಸಲು ನೆರವಾಗಿದೆ. ಇದಕ್ಕೆ ಉತ್ತಮ ಉದಾಹರಣೆ ನೀಡುವುದಾದರೆ ಮುಂಬೈ ಇಂಡಿಯನ್ಸ್ (Mumbai Indians) ತಂಡದ ಉದಯೋನ್ಮುಖ ಆಟಗಾರ ತಿಲಕ್ ವರ್ಮ.(Tilak Varma)

ಹೌದು. ಹೈದರಬಾದ್ ಮೂಲದ ತಿಲಕ್ ವರ್ಮ ಬಾಲ್ಯದಿಂದಲೇ ಬಡತನದ ರುಚಿ ಕಂಡವರು. ತಂದೆ ಸಾಮಾನ್ಯ ಎಲೆಕ್ಟ್ರಿಷಿಯನ್ ಉದ್ಯೋಗಿಯಾಗಿದ್ದು ಸ್ವಂತ ಮನೆಯನ್ನು ಕೂಡಾ ಹೊಂದಿಲ್ಲ. ಈಗಲೂ ಇವರು ಬಾಡಿಗೆ ಮನೆಯಲ್ಲೆ ಇದ್ದಾರೆ. ಬಡತನ ಮಧ್ಯೆಯು ತಿಲಕ್ ತಾನೊಬ್ಬ ಪ್ರಸಿದ್ದ ಕ್ರಿಕೇಟ್ ಆಟಗಾರ ಆಗಬೇಕೆಂಬ ಕನಸನ್ನು ಹೊತ್ತುಕೊಂಡು, ಕನಸಿನ ಇಡೇರಿಕೆಗಾಗಿ ಪರಿಶ್ರಮ ಪಡುತ್ತಿರುವವರು.

ಉತ್ತಮ ಕ್ರೀಡಾ ಪ್ರದರ್ಶನದೊಂದಿಗೆ ಭಾರತದ ಅಂಡರ್ ೧೯ ಅನ್ನು ಪ್ರತಿನಿಧಿಸಿದ್ದ ತಿಲಕ್ 2020 ರಲ್ಲಿ ಅಂಡರ್ 19 ರನ್ನರ್‌ಅಪ್ ತಂಡದ ಭಾಗವಾಗಿದ್ದರು. ಇವರ ಜೊತೆಗಿದ್ದ ಆಟಗಾರರೆಲ್ಲ ಐಪಿಎಲ್ ತಂಡಗಳಿಗೆ ಆಯ್ಕೆಯಾದರು, ಆದರೆ ತಿಲಕ್ ಎರಡು ವರ್ಷಗಳ ಕಾಲ ಪರಿತಪಿಸುತ್ತಲೇ ಇದ್ದರು. ಇತ್ತಕಡೆ ಮನೆಯ ಆರ್ಥಿಕ ಪರಿಸ್ಥಿತಿಯು ತೀರಾ ಹದಗೆಟ್ಟಿತ್ತು. ಆ ಸಮಯದಲ್ಲಿ ಇವರ ನೆರವಿಗೆ ಬಂದವರು ಕೋಚ್. ಎಲ್ಲ ಖರ್ಚು ವೆಚ್ಚವನ್ನು ಭರಿಸಿ ತರಬೇತಿಯನ್ನು ನೀಡಿ, ಅಕಾಡೆಮಿಯ ಶುಲ್ಕವನ್ನು ಕೂಡಾ ಅವರೇ ನೀಡಿದರು.

ಕೊನೆಗೂ ತಿಲಕ್ ಪಾಲಿನ ಅದೃಷ್ಟದ ಬಾಗಿಲು ತೆರೆಯಿತು. ಮುಂಬೈ ಇಂಡಿಯನ್ಸ್ ತಂಡ 1.7 ಕೋಟಿ ರೂ.ಗಳಿಗೆ ತಿಲಕ್ ನನ್ನು ಖರೀದಿಸಿತು. ಉತ್ತಮವಾದ ಬ್ಯಾಟಿಂಗ್ ಪ್ರದರ್ಶನದ ಮೂಲಕ ಕ್ರಿಕೇಟ್ ಅಭಿಮಾನಿಗಳ ಮನಗೆದ್ದಿರುವ ತಿಲಕ್ ಮುಂಬೈ ಇಂಡಿಯನ್ಸ್ ತಂಡದ ಅಗ್ರಮಾನ್ಯ ಆಟಗಾರನಾಗಿ ಹೊರಹೊಮ್ಮಿದ್ದಾನೆ. ಫಸ್ಟ್ಕ್ಲಾಸ್, ಲಿಸ್ಟ್ ಏ ಮುಂತಾದ ಪಂದ್ಯಗಳಲ್ಲಿ ತಿಲಕ್ ಮಿಂಚು ಹರಿಸಿದ್ದಾರೆ. ಈವರೆಗೆ ಆಡಿರುವ 14 ಲಿಸ್ಟ್ ಏ ಪಂದ್ಯಗಳಲ್ಲಿ 52 ಸರಾಸರಿಯಂತೆ ಒಟ್ಟು 784 ರನ್‌ಗಳನ್ನು ಕಲೆ ಹಾಕಿದ್ದಾರೆ. ಇದರೊಂದಿಗೆ 25 ಟಿ-20 ಪಂದ್ಯಗಳಲ್ಲಿ ಒಟ್ಟು 700 ಕ್ಕೂ ಹೆಚ್ಚು ರನ್‌ಗಳನ್ನು ಬಾಚಿಕೊಂಡಿದ್ದಾರೆ.

ತಿಲಕ್ ಜೀವನದ ಬಹುದೊಡ್ಡ ಕನಸು ಹೊಸ ಮನೆಯೊಂದನ್ನು ಖರೀದಿ ಮಾಡಬೇಕೆಂಬುದು. ಇದೇ ರೀತಿ ಐಪಿಎಲ್ ಅಂಗಳದಲ್ಲಿ ರಣಬೇರಿ ಬಾರಿಸುತ್ತಿದ್ದಾರೆ. ತಿಲಕ್ ಕ್ರಿಕೆಟ್ ರಂಗದ ಸಾಧಕರ ಪಟ್ಟಿಗೆ ತನ್ನ ಕನಸನ್ನು ನನಸಾಗಿಸಿಕೊಳ್ಳುವುದಂತು ನಿಶ್ಚಿತ.

ಇದನ್ನೂ ಓದಿ: tamboola prashne : ಮಳಲಿ ಮಸೀದಿಯಲ್ಲಿ ಹಿಂದೂ ದೇಗುಲ ಕುರುಹು ಪತ್ತೆ ವಿವಾದ : ತಾಂಬೂಲ ಪ್ರಶ್ನೆ

ಇದನ್ನೂ ಓದಿ: SSLC question paper leak : ಎಸ್‌ಎಸ್‌ಎಲ್‌ಸಿ ಪ್ರಶ್ನೆ ಪತ್ರಿಕೆ ಸೋರಿಕೆ : ಎಸ್‌ಪಿಗೆ ದೂರುಕೊಟ್ಟ ಡಿಡಿಪಿಐ

Tilak Varma is Going to be All Format Player

Comments are closed.