Tomato fever scare :ಭಾರತದಲ್ಲಿ ಟೊಮೆಟೋ ಜ್ವರದ ಭೀತಿ : 26 ಮಕ್ಕಳಲ್ಲಿ ಪತ್ತೆಯಾಯ್ತು ಅಪಾಕಾರಿ ಜ್ವರ

ನವದೆಹಲಿ : ಭಾರತದಲ್ಲೀಗ ಟೊಮೆಟೋ ಜ್ವರದ ಭೀತಿ (Tomato fever scare) ಎದುರಾಗಿದೆ. ಒಡಿಶಾದಲ್ಲಿ ಒಟ್ಟು 26 ಮಕ್ಕಳಿಗೆ ಟೊಮೆಟೋ ಜ್ವರ ಪತ್ತೆಯಾಗಿದೆ. ಈ ಮಕ್ಕಳ ಕೈ, ಕಾಲು ಮತ್ತು ಬಾಯಿ ರೋಗ (ಎಚ್‌ಎಫ್‌ಎಂಡಿ) ಇರುವುದು ಪತ್ತೆಯಾಗಿದ್ದು, ಎಲ್ಲಾ ಮಕ್ಕಳ ಆರೋಗ್ಯ ಸ್ಥಿರವಾಗಿದೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.

ಸಾಮಾನ್ಯವಾಗಿ ‘ಟೊಮೆಟೋ ಜ್ವರ’ (Tomato Flu)ಎಂದು ಕರೆಯಲ್ಪಡುವ ಸಾಂಕ್ರಾಮಿಕ ರೋಗವು ಕರುಳಿನ ವೈರಸ್‌ಗಳಿಂದ ಉಂಟಾಗುತ್ತದೆ ಮತ್ತು ಹೆಚ್ಚಾಗಿ ಮಕ್ಕಳಲ್ಲಿ ಕಂಡುಬರುತ್ತದೆ. ವಯಸ್ಕರಲ್ಲಿ ಟೊಮೆಟೋ ಜ್ವರ ಹೆಚ್ಚಾಗಿ ಬಾಧಿಸುತ್ತಿಲ್ಲ. ಸಾಮಾನ್ಯವಾಗಿ ವೈರಸ್‌ನಿಂದ ರಕ್ಷಿಸಲು ಸಾಕಷ್ಟು ಪ್ರಬಲವಾದ ಪ್ರತಿರಕ್ಷಣಾ ವ್ಯವಸ್ಥೆಯನ್ನು ಹೊಂದಿರುತ್ತಾರೆ. ಹೆಚ್ಚಿನ ಸಂದರ್ಭಗಳಲ್ಲಿ, ವೈರಲ್ ಕಾಯಿಲೆಯು ಜ್ವರ, ಬಾಯಿಯಲ್ಲಿ ನೋವಿನ ಹುಣ್ಣುಗಳು ಮತ್ತು ಕೈಗಳು, ಪಾದಗಳು ಮತ್ತು ಪೃಷ್ಠದ ಮೇಲೆ ಗುಳ್ಳೆಗಳೊಂದಿಗೆ ದದ್ದುಗಳಂತಹ ಲಕ್ಷಣಗಳನ್ನು ಹೊಂದಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ.

ಒಡಿಶಾದ ಭುವನೇಶ್ವರದ ಪ್ರಾದೇಶಿಕ ವೈದ್ಯಕೀಯ ಸಂಶೋಧನಾ ಕೇಂದ್ರದಲ್ಲಿ 36 ಮಾದರಿಗಳನ್ನು ಸಂಗ್ರಹಿಸಿ ಪರೀಕ್ಷಿಸಲಾಗಿದ್ದು, 26 ಪಾಸಿಟಿವ್ ಎಂದು ಕಂಡುಬಂದಿದೆ ಎಂದು ಆರೋಗ್ಯ ಸೇವೆಗಳ ನಿರ್ದೇಶಕ ಬಿಜಯ್ ಮೊಹಾಪಾತ್ರ ಸುದ್ದಿಗಾರರಿಗೆ ತಿಳಿಸಿದ್ದಾರೆ. ಎಚ್‌ಎಫ್‌ಎಂಡಿ-ಸೋಂಕಿತ ಮಕ್ಕಳ 19 ಮಂದಿ ಭುವನೇಶ್ವರದಿಂದ, ಮೂವರು ಪುರಿಯಿಂದ ಮತ್ತು ತಲಾ ಇಬ್ಬರು ಕಟಕ್ ಮತ್ತು ಪುರಿಯಿಂದ ಬಂದವರು ಎಂದು ಮೊಹಾಪಾತ್ರ ಹೇಳಿದ್ದಾರೆ.

ಸೋಂಕಿತರು 1 ರಿಂದ 9 ವಯಸ್ಸಿನವರಾಗಿದ್ದಾರೆ. ಅಲ್ಲದೇ ಐದರಿಂದ ಏಳು ದಿನಗಳ ಕಾಲ ಪ್ರತ್ಯೇಕವಾಗಿರಲು ಸೂಚನೆಯನ್ನು ನೀಡಲಾಗಿದೆ . ಟೊಮೆಟೋ ಜ್ವರಕ್ಕೆ (Tomato Flu)ತುತ್ತಾಗಿರುವ ಮಕ್ಕಳ ಸ್ಥಿತಿ ಗಂಭೀರವಾಗಿಲ್ಲ, ಎಲ್ಲರ ಮೇಲೂ ನಿಗಾ ಇರಿಸಲಾಗಿದೆ ಎಂದು ಅವರು ಹೇಳಿದರು. ಈ ತಿಂಗಳ ಆರಂಭದಲ್ಲಿ, ಕೇರಳದ ಕೊಲ್ಲಂ ಜಿಲ್ಲೆಯಿಂದ 80 ಕ್ಕೂ ಹೆಚ್ಚು ಎಚ್‌ಎಫ್‌ಎಂಡಿ ಪ್ರಕರಣಗಳು ವರದಿಯಾಗಿದ್ದು, ನೆರೆಯ ರಾಜ್ಯಗಳಾದ ತಮಿಳುನಾಡು ಮತ್ತು ಕರ್ನಾಟಕ ಗಡಿ ಜಿಲ್ಲೆಗಳಲ್ಲಿ ಕಟ್ಟೆಚ್ಚರವನ್ನು ವಹಿಸುವಂತೆ ಸೂಚಿಸಲಾಗಿದೆ.

ಇದನ್ನೂ ಓದಿ : PM Kisan eKYC deadline extended: ಪಿಎಂ ಕಿಸಾನ್ ಇಕೆವೈಸಿ ಗಡುವು ವಿಸ್ತರಣೆ, ಇಲ್ಲಿದೆ ಹೆಚ್ಚಿನ ಮಾಹಿತಿ

ಇದನ್ನೂ ಓದಿ : Punjab CM: ಕಮಿಷನ್​ ಆರೋಪ ಹೊತ್ತ ಸಚಿವರನ್ನು ಸಂಪುಟದಿಂದ ವಜಾಗೊಳಿಸಿದ ಪಂಜಾಬ್​ ಸಿಎಂ

Tomato fever scare starts in India: 26 children detected in this state

Comments are closed.