cleared all flexes in shivamogga : ಶಿವಮೊಗ್ಗ ಗಲಾಟೆ ಪ್ರಕರಣ : ನಗರಾದ್ಯಂತ ಎಲ್ಲಾ ಫ್ಲೆಕ್ಸ್​ಗಳನ್ನು ತೆರವುಗೊಳಿಸಿದ ಪಾಲಿಕೆ

ಶಿವಮೊಗ್ಗ : cleared all flexes in shivamogga : ವೀರ ಸಾವರ್ಕರ್​ ಫೋಟೋ ವಿವಾದದ ಬಳಿಕ ಶಿವಮೊಗ್ಗ ನಗರವು ಬಿಕೋ ಎನ್ನುತ್ತಿದೆ. ಈ ನಡುವೆ ಶಿವಮೊಗ್ಗ ಮಹಾನಗರ ಪಾಲಿಕೆಯು ಆಪರೇಷನ್​ ಫ್ಲೆಕ್ಸ್​​ಗೆ ಕೈ ಹಾಕಿದೆ. ವೀರ ಸಾರ್ವಕರ್​ ಹಾಗೂ ಟಿಪ್ಪು ಸುಲ್ತಾನ್​ ಫ್ಲೆಕ್ಸ್​ ವಿಚಾರದಲ್ಲಿಯೇ ಮುಸ್ಲಿಂ ಯುವಕರು ಹಾಗೂ ಹಿಂದೂ ಸಂಘಟನೆಗಳಿಗೆ ಸಂಘರ್ಷ ಉಂಟಾದ ಬಳಿಕವೇ ಇಷ್ಟೆಲ್ಲ ಗಲಭೆ ಉಂಟಾಗಿರುವುದು ಪಾಲಿಕೆಯ ಗಮನಕ್ಕೂ ಬಂದಿರುವ ಹಿನ್ನೆಲೆಯಲ್ಲಿ ಆಪರೇಷನ್​ ಫ್ಲೆಕ್ಸ್​ ಕಾರ್ಯಾಚರಣೆ ಮಾಡಲಾಗುತ್ತಿದೆ.


ತಡರಾತ್ರಿಯಿಂದಲೇ ಕಾರ್ಯಾಚರಣೆಗೆ ಇಳಿದ ಶಿವಮೊಗ್ಗ ಪಾಲಿಕೆ ಸಿಬ್ಬಂದಿ ಶಿವಮೊಗ್ಗ ನಗರದಲ್ಲಿರುವ ಎಲ್ಲಾ ಫ್ಲೆಕ್ಸ್​ಗಳನ್ನು ತೆರವುಗೊಳಿಸಿದೆ. ಫ್ಲೆಕ್ಸ್​ ಕಾರಣದಿಂದಲೇ ಶಿವಮೊಗ್ಗದಲ್ಲಿ ಗೊಂದಲದ ವಾತಾವರಣ ಮೂಡಿರುವ ಹಿನ್ನೆಲೆಯಲ್ಲಿ ಪಾಲಿಕೆ ಸಿಬ್ಬಂದಿಯು ಒಂದು ಫ್ಲೆಕ್ಸ್​ನ್ನೂ ಬಿಡದೇ ಎಲ್ಲಾ ಫ್ಲೆಕ್ಸ್​ಗಳನ್ನು ತೆರವು ಮಾಡಿದೆ.


75 ವರ್ಷಗಳ ಸ್ವಾತಂತ್ರ್ಯ ಸಂಭ್ರಮ ಹಿನ್ನೆಲೆ ಶಿವಮೊಗ್ಗ ನಗರದಾದ್ಯಂತ ಫ್ಲೆಕ್ಸ್​ಗಳೇ ತುಂಬಿ ಹೋಗಿದ್ದವು. ಆದರೆ ನಿನ್ನೆ ಸಾವರ್ಕರ್ ಫ್ಲೆಕ್ಸ್​ ಕಾರಣಕ್ಕೆ ಇಷ್ಟೆಲ್ಲ ರಾದ್ಧಾಂತವಾಗಿರುವ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ. ಇನ್ನೊಂದು ಕುತೂಹಲಕಾರಿ ವಿಚಾರವೆಂದರೆ ಈ ಫ್ಲೆಕ್ಸ್​ಗಳನ್ನು ಅಳವಡಿಸಲು ಯಾರು ಕೂಡ ಪಾಲಿಕೆಯ ಅನುಮತಿ ಕೇಳಿರಲಿಲ್ಲ ಎಂಬ ಮಾಹಿತಿ ಲಭ್ಯವಾಗಿದೆ. ಹೀಗಾಗಿ ಇನ್ಯಾವುದೇ ಗಲಾಟೆಗಳು ನಗರದಲ್ಲಿ ನಡೆಯದಂತೆ ತಡೆಯಲು ಪಾಲಿಕೆ ಈ ದಿಟ್ಟ ಕ್ರಮ ಕೈಗೊಂಡಿದೆ.

ನಿನ್ನೆ ಆಜಾದಿ ಕಾ ಅಮೃತ್​ ಮಹೋತ್ಸವದ ಸಂಭ್ರಮದ ಹಿನ್ನೆಲೆಯಲ್ಲಿ ಹಿಂದೂ ಸಂಘಟನೆ ಕಾರ್ಯಕರ್ತರು ಶಿವಮೊಗ್ಗ ನಗರಾದ್ಯಂತ ವೀರ ಸಾವರ್ಕರ್​ ಫೋಟೋಗಳನ್ನು ಅಳವಡಿಸಿದ್ದರು. ಆದರೆ ಇದಕ್ಕೆ ತಗಾದೆ ತೆಗೆದ ಮುಸ್ಲಿಂ ಯುವಕರು ಸಾರ್ವಕರ್​ ಫೋಟೋ ಇರುವ ಜಾಗದಲ್ಲಿ ಟಿಪ್ಪು ಸುಲ್ತಾನನ ಫೋಟೊ ಅಳವಡಿಸುವಂತೆ ಆಗ್ರಹಿಸಿದ್ದರು. ಅಲ್ಲದೇ ಅನೇಕ ಕಡೆಗಳಲ್ಲಿ ಸಾವರ್ಕರ್​ ಫ್ಲೆಕ್ಸ್​ಗಳನ್ನು ತೆರವುಗೊಳಿಸಲೂ ಸಹ ಮುಂದಾಗಿದ್ದರು. ಸಾವರ್ಕರ್​ ಫೋಟೋ ತೆರವುಗೊಳಿಸಲು ಒಪ್ಪಿದ ಪೊಲೀಸರು ಆ ಜಾಗದಲ್ಲಿ ಟಿಪ್ಪು ಸುಲ್ತಾನನ ಫೋಟೊ ಅಳವಡಿಸಲು ನಿರಾಕರಿಸಿದ್ದರು.

ಈ ವಿಚಾರ ಹಿಂದೂ ಹಾಗೂ ಮುಸ್ಲಿಂ ಸಂಘಟನೆ ಕಾರ್ಯಕರ್ತರ ನಡುವೆ ಗಲಾಟೆಗೆ ಕಾರಣವಾಗಿತ್ತು. ಮುಂಜಾಗ್ರತಾ ಕ್ರಮವಾಗಿ ಶಿವಮೊಗ್ಗ ಪೊಲೀಸರು ನಿಷೇಧಾಜ್ಞೆ ಜಾರಿ ಮಾಡಿದ್ದರೂ ಸಹ ಗಾಂಧಿ ಬಜಾರ್​ ಹಾಗೂ ಅಹಮದ್​ ನಗರ ಬಡಾವಣೆಯಲ್ಲಿ ಇಬ್ಬರು ಯುವಕರ ಮೇಲೆ ಕೊಲೆ ಪ್ರಯತ್ನವನ್ನು ಮಾಡಲಾಗಿದೆ. ಪ್ರೇಮ್​ ಸಿಂಗ್​ ಹಾಗೂ ಪ್ರವೀಣ್​ ಕುಮಾರ್​​ ಇಬ್ಬರಿಗೂ ಚಾಕು ಇರಿತ ಮಾಡಲಾಗಿದ್ದು ಇಬ್ಬರನ್ನು ಶಿವಮೊಗ್ಗ ಮೆಗ್ಗಾನ್​ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗ್ತಿದೆ.

ಇದನ್ನು ಓದಿ : BCCI mahendra Dhoni: ದೇಶಕ್ಕೆ 2 ವಿಶ್ವಕಪ್ ಗೆದ್ದು ಕೊಟ್ಟ ನಾಯಕ ಧೋನಿಗೆ ಬಿಸಿಸಿಐ ಶಾಕ್ !

ಇದನ್ನೂ ಓದಿ : Bigg boss Kannada OTT : ರಾಕೇಶ್​ ಅಡಿಗನಿಂದ ಅಂತರ ಕಾಯ್ದುಕೊಳ್ಳಲು ನಿರ್ಧರಿಸಿದ ಸ್ಫೂರ್ತಿ ಗೌಡ

The Municipal Corporation has cleared all flexes in shivamogga city

Comments are closed.