Soaked Almonds : ಹೃದಯದ ಆರೋಗ್ಯ ಕಾಪಾಡಲು ಸೇವಿಸಿ, ನೀರಿನಲ್ಲಿ ನೆನೆಸಿದ ಬಾದಾಮಿ

ಬಾದಾಮಿ ಅಥವಾ ಅಲ್ಮಂಡ್‌ (Almonds) ಎಂದು ಕರೆಯುವ ಕಂದು ಬಣ್ಣದ ಬೀಜ ಯಾರಿಗೆ ಗೊತ್ತಿಲ್ಲ. ಬಾದಾಮ್‌ ಬರ್ಫಿಯಂತು ಸಿಹಿ ತಿನಿಸುಗಳಲ್ಲಿ ಅತಿ ರುಚಿಯಾದದ್ದು. ಬಾದಾಮಿ ನೆನಪಿನ ಶಕ್ತಿ ಹೆಚ್ಚಿಸುತ್ತದೆ ಎಂಬುದು ನಮಗೆ ಗೊತ್ತು. ಇದು ಆರೋಗ್ಯಕರ ಫ್ಯಾಟ್‌, ವಿಟಮಿನ್‌ ಮತ್ತು ಮಿನರಲ್‌ಗಳ ಉತ್ತಮ ಮೂಲವೂ ಆಗಿದೆ. ಆದರೆ ಬಾದಾಮಿಯನ್ನು (Soaked Almonds) ಸೇವಿಸುವ ಸರಿಯಾದ ಕ್ರಮ ಯಾವುದು? ಅದರಲ್ಲಿರುವ ಸಂಪೂರ್ಣ ಪೋಷಕಾಂಶಗಳನ್ನು ಪಡೆದುಕೊಳ್ಳುವುದಾದರೂ ಹೇಗೆ?

ಬಾದಾಮಿ ಹೇಗೆ ಉತ್ತಮವಾಗಿದೆ?
ಸ್ಯಾಚುರೇಟೆಡ್‌ ಫ್ಯಾಟ್‌ಗಳು ದೇಹಕ್ಕೆ ಉತ್ತಮವಲ್ಲ ಎಂದು ತಿಳಿಯುವುದು ನಮ್ಮ ತಪ್ಪು ತಿಳುವಳಿಕೆ. ಅವುಗಳು ನಮ್ಮ ಹೃದಯದ ಆರೋಗ್ಯ ಕಾಪಾಡುವಲ್ಲಿ ಬಹುಮುಖ್ಯ ಪಾತ್ರವಹಿಸುತ್ತವೆ. ‘ಜರ್ನಲ್‌ ಆಪ್‌ ನ್ಯೂಟ್ರಿಷನ್‌’ ಬಿಡುಗಡೆ ಮಾಡಿದ ಅಧ್ಯಯನದ ಪ್ರಕಾರ, ಅನ್‌ಸ್ಯಾಚುರೇಟೆಡ್‌ ಫ್ಯಾಟ್‌ ಸೇವಿಸುವವರಿಗಿಂತ, ಸ್ಯಾಚುರೇಟೆಡ್‌ ಫ್ಯಾಟ್‌ ಸೇವಿಸುವವರಲ್ಲಿ ಶೇಕಡಾ 50 ರಷ್ಟು ಹೃದಯ ಸಂಬಂಧಿ ಕಾಯಿಲೆಗಳು ಕಡಿಮೆ ಎಂದು ತಿಳಿದುಬಂದಿದೆ. ನೆನೆಸಿದ ಬಾದಾಮಿಯು ಒಮೆಗಾ–3 ಫ್ಯಾಟಿ ಆಸಿಡ್‌ ಶೇಖರಣೆಯನ್ನು ಹೆಚ್ಚಿಸಿ, ಆರೋಗ್ಯಕ್ಕೆ ಪೂರಕವಲ್ಲದ ಒಮೆಗಾ–6 ಫ್ಯಾಟಿ ಆಸಿಡ್‌ ಶೇಖರಣೆಗೊಳ್ಳುವುದನ್ನು ತಪ್ಪಿಸುತ್ತದೆ. ಇದು ಹೃದಯದ ಆರೋಗ್ಯವನ್ನಷ್ಟೇ ಅಲ್ಲದೇ, ಉರಿಯೂತವನ್ನು ಕಡಿಮೆ ಮಾಡುತ್ತದೆ ಮತ್ತು ಬುದ್ಧಿಯನ್ನು ಚುರುಕುಗೊಳಿಸುತ್ತದೆ.

ನೆನೆಸಿದ ಬಾದಾಮಿ ಸೇವನೆಯಿಂದ ಆಗುವ ಪ್ರಯೋಜನಗಳು :

  • ಬಾದಾಮಿಯಲ್ಲಿ ಫೈಬರ್‌ ಮತ್ತು ಪ್ರೋಟೀನ್‌ ಅಧಿಕವಾಗಿದ್ದು, ನಿಮ್ಮ ಜೀರ್ಣಾಂಗ ವ್ಯವಸ್ಥೆಯು ಸರಿಯಾಗಿ ಕಾರ್ಯನಿರ್ವಹಿಸುವಂತೆ ಮಾಡುತ್ತದೆ.
  • ಇದರಲ್ಲಿ ಆಂಟಿಒಕ್ಸಿಡೆಂಟ್‌ ಅಧಿಕವಾಗಿದ್ದು, ದೇಹವನ್ನು ಸ್ವತಂತ್ರ ರಾಡಿಕಲ್‌ಗಳಿಂದ ಉಂಟಾಗುವ ಹಾನಿಯಿಂದ ರಕ್ಷಿಸುತ್ತದೆ.
  • ಬಾದಾಮಿಯನ್ನು ನೆನೆಸುವುದರಿಂದ ಮೆಗ್ನಿಸಿಯಮ್‌ ಮತ್ತು ವಿಟಮಿನ್‌ E ಪ್ರಯೋಜನಕಾರಿ ಗುಣಗಳನ್ನು ಬಿಡುಗಡೆ ಮಾಡಲು ಸಹಾಯ ಮಾಡುತ್ತದೆ.
  • ಬಾದಾಮಿಯನ್ನು ನೆನೆಸುವುದರಿಂದ ಅವುಗಳು ಮೃದುವಾಗಿ, ಸುಲಭವಾಗಿ ಜೀರ್ಣವಾಗುತ್ತದೆ.

ಬಾದಾಮಿಯನ್ನು ಸರಿಯಾಗಿ ನೆನೆಸುವುದು ಹೇಗೆ?
ಒಂದು ಪಾತ್ರೆಗೆ ಬಾದಾಮಿಯನ್ನು ಹಾಕಿ, ಅದಕ್ಕೆ ನೀರು ಸೇರಿಸಿ. ಬಾದಾಮಿ ಸಂಪೂರ್ಣವಾಗಿ ನೀರಿನಲ್ಲಿರುವಂತೆ ನೋಡಿಕೊಳ್ಳಿ. ಮುಚ್ಚಳವನ್ನು ಮುಚ್ಚಿ. ಕನಿಷ್ಟ ಎರಡು ಗಂಟೆಗಳ ಕಾಲ ನೆನೆಸಿ. ಹೆಚ್ಚೆಂದರೆ ಒಂದು ರಾತ್ರಿ ನೆನೆಸಿ, ಅದಕ್ಕಿಂತ ಹೆಚ್ಚು ನೆನೆಯಿಸಬೇಡಿ. ಏಕೆಂದರೆ ಅದರಲ್ಲಿರುವ ಪೋಷಕಾಂಶಗಳು ಕಡಿಮೆಯಾಗುತ್ತವೆ.

ಬಾದಾಮಿಯನ್ನು ತಿನ್ನುವ ಕ್ರಮ ಹೇಗೆ?
ನನೆಸಿದ ಬಾದಾಮಿಯನ್ನು ಸ್ನಾಕ್ಸ್‌ ರೀತಿಯಲ್ಲಿ ಸೇವಿಸಿ. ಬಾದಾಮಿಯು ಮೆಗ್ನೀಸಿಯಮ್, ಪೊಟ್ಯಾಸಿಯಮ್ ಮತ್ತು ವಿಟಮಿನ್ ಇ ಯ ಉತ್ತಮ ಮೂಲವಾಗಿದೆ. ಮೆಗ್ನೀಸಿಯಮ್ ಮೂಳೆಯ ಆರೋಗ್ಯವನ್ನು ಕಾಪಾಡಿಕೊಳ್ಳಲು ಉತ್ತಮವಾಗಿದೆ, ಪೊಟ್ಯಾಸಿಯಮ್ ರಕ್ತದೊತ್ತಡವನ್ನು ನಿಯಂತ್ರಿಸಲು ಮತ್ತು ಹೃದ್ರೋಗವನ್ನು ತಡೆಗಟ್ಟಲು ಅವಶ್ಯಕವಾಗಿದೆ ಮತ್ತು ವಿಟಮಿನ್ ಇ ಕ್ಯಾನ್ಸರ್ ಅಪಾಯವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

ಇದನ್ನೂ ಓದಿ : SSC Recruitment 2022 : ಸ್ಟೆನೋಗ್ರಾಫರ್ ಗ್ರೇಡ್ ‘C’ ಮತ್ತು ‘D’ ಹುದ್ದೆಗೆ ಅರ್ಜಿ ಆಹ್ವಾನ: ಸೆಪ್ಟೆಂಬರ್‌ 5 ಅರ್ಜಿ ಸಲ್ಲಿಸಲು ಕೊನೆದಿನ

ಇದನ್ನೂ ಓದಿ : Pistachios : ಪಿಸ್ತಾ : ಲಘು ಉಪಹಾರಕ್ಕೆ ಹೀಗೆ ಒಂದು ಸಣ್ಣ ಬದಲಾವಣೆ ಮಾಡಿಕೊಳ್ಳಿ

(Soaked Almonds, do you know the health benefits of soaked almonds)

Comments are closed.