ಲಿಷಾ ಕೊಕ್ಕರ್ಣೆಗೆ ‘ವಾಯ್ಸ್ ಆಫ್ ಕರಾವಳಿ’ ಕಿರೀಟ : ಡಾ.ಪಿ.ವಿ.ಭಂಡಾರಿ ಅವರಿಗೆ ವರ್ಷದ ವ್ಯಕ್ತಿ ಪ್ರಶಸ್ತಿ ಗೌರವ

0

ಬ್ರಹ್ಮಾವರ : ರಾಜ್ಯ ಮಟ್ಟದ ಅಪ್ರತಿಮ ಸಂಗೀತ ರಿಯಾಲಿಟಿ ಸ್ಪರ್ಧೆ ವಾಯ್ಸ್ ಆಫ್ ಕರಾವಳಿ ಪ್ರಶಸ್ತಿಯನ್ನು ಕೊಕ್ಕರ್ಣೆಯ 13 ವರ್ಷದ ಬಾಲಕಿ ಲಿಷಾ ಜಯಿಸಿದ್ದಾರೆ, ಹೊಸಪೇಟೆಯ ವಿ.ಪಿ.ಶ್ರೀಹರಿ ಹೊಳ್ಳ ರನ್ನರ್ಸ್ ಅಪ್ ಹಾಗೂ ಚಿನ್ಮಯಿ ಭಟ್ ತೃತೀಯ ಸ್ಥಾನವನ್ನು ಪಡೆದುಕೊಂಡಿದ್ದಾರೆ. ತ್ರಾಸಿಯ ನಿಶಾ ಕಂಚುಗೋಡು ಚತುರ್ಥ ಹಾಗೂ ಶಿವಮೊಗ್ಗದ ಸಮರ್ಥ ಚತುರ್ವೇದಿ ಐದನೇ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ.

ರೋಟರಿ ಬ್ರಹ್ಮಾವರದ ಯೂಟ್ಯೂಬ್ ಆಧಾರಿತ ಸಂಗೀತ ಸ್ಪರ್ಧೆ ಸ್ಟಾರ್ ‘singar-2020’ ವಿಜೇತರಾಗಿ ಕಾರ್ತಿಕ್ .ವಿ ಬಂಟಕಲ್ಲು ಆಯ್ಕೆಯಾಗಿದ್ದಾರೆ, ಸೆಮಿಫೈನಲ್ ನಲ್ಲಿ ಸ್ಪರ್ಧೆಯಿಂದ ನಿರ್ಗಮಿಸಿದ್ದ ಕಿರಿಮಂಜೇಶ್ವರದ ಅಂಧ ಗಾಯಕಿ ಮೇಘನಾ ಇವರಿಗೆ ರೋಟರಿ ಕ್ಲಬ್ ಬ್ರಹ್ಮಾವರದ ವತಿಯಿಂದ ಸಹಾಯಧನ ವಿತರಿಸಲಾಯಿತು. ಸಂಗೀತ ವಿಶ್ಲೇಷಕ ಯಶವಂತ್ ಎಂ.ಜಿ. ಹಾಗೂ ಸಂಗೀತದಲ್ಲಿ ಡಾಕ್ಟರೇಟ್ ಪಡೆದಿರುವ ಡಾ. ಕಿರಣ್ ಕುಮಾರ್ ಗಾನಸಿರಿ ತೀರ್ಪುಗಾರರಾಗಿ ಸಹಕರಿಸಿದರು. ಫೈನಲ್ ಸ್ಪರ್ಧೆಯ ಎಲ್ಲಾ ಸ್ಪರ್ಧಾಳುಗಳಿಗೂ ಸಮಾಧಾನಕರ ಬಹುಮಾನ ನೀಡಿ ಗೌರವಿಸಲಾಯಿತು. ಖ್ಯಾತ ನಿರೂಪಕ ಅವಿನಾಶ್ ಕಾಮತ್ ಕಾರ್ಯಕ್ರಮ ನಿರೂಪಿಸಿದರು.
ಬ್ರಹ್ಮಾವರ ನಿರ್ಮಲಾ ಪದವಿ ಪೂರ್ವ ಕಾಲೇಜಿ ಮೈದಾನದಲ್ಲಿ ನಡೆದ ಕಾರ್ಯಕ್ರಮದಲ್ಲಿ ನಾಡುಕಂಡ ಖ್ಯಾತ ಮನೋರೋಗ ತಜ್ಞರಾದ ಡಾ.ಪಿ.ವಿ. ಭಂಡಾರಿ ಅವರು ವೈದ್ಯಕೀಯ ಲೋಕದಲ್ಲಿ ಮಾಡಿರೋ ಅಪ್ರತಿಮ ಸಾಧನೆ, ಸಮಾಜಸೇವೆಯನ್ನು ಗುರುತಿಸಿ, ರೋಟರಿ ಬ್ರಹ್ಮಾವರದ ವತಿಯಿಂದ ನೀಡಲಾಗುವ “ವರ್ಷದ ವ್ಯಕ್ತಿ ಪ್ರಶಸ್ತಿ” ಪ್ರಧಾನ ಮಾಡಲಾಯಿತು. ರೋಟರಿ ಗವರ್ನರ್ ರಾಜಾರಾಮ್ ಭಟ್ ಕಾರ್ಯಕ್ರಮವನ್ನು ಉದ್ಘಾಟಿಸಿದರು. ರೋಟರಿ ಬ್ರಹ್ಮಾವರದ ಅಧ್ಯಕ್ಷ ಎಸ್.ಕೆ.ಪ್ರಾಣೇಶ್ ಅಧ್ಯಕ್ಷತೆ ವಹಿಸಿದ್ದರು. ವಲಯ 3ರ ಸಹಾಯಕ ಗವರ್ನರ್ ರೊ.ಅಶೋಕ್ ಕುಮಾರ್ ಶೆಟ್ಟಿ, ವಲಯ ಸೇನಾನಿ ದೇವದಾಸ್ ಶೆಟ್ಟಿಗಾರ್, ನಿರ್ಮಲ ಶಾಲೆಯ ಕರೆಸ್ಪಾಂಡೆಂಟ್ ಸಿಸ್ಟರ್ ರೋಸ್ ಫ್ಲೋರಿನ್, ಅಕ್ಷಯ ಫರ್ನಿಚರ್ ಮಾಲಕರಾದ ರಮೇಶ್ ಭಟ್, ರೋಟರಿ ಕಾರ್ಯದರ್ಶಿ ಸತೀಶ್ ಶೆಟ್ಟಿ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದರು. ರೊ.ಆರೂರು ತಿಮ್ಮಪ್ಪ ಶೆಟ್ಟಿ ಕಾರ್ಯಕ್ರಮವನ್ನು ನಿರೂಪಿಸಿದರು. ವಿಜಯ ಬಾಲನಿಕೇತನ ಸಂಸ್ಥೆಗೆ ರೋಟರಿ ಬ್ರಹ್ಮಾವರದ ವತಿಯಿಂದ 50 ಸಾವಿರ ರೂಪಾಯಿ ಸಹಾಯಧನ ವಿತರಿಸಲಾಯಿತು. ರೋಟರಿ ಹಿರಿಯ ಸದಸ್ಯರಾದ ರೊ.ಭಾಸ್ಕರ್ ರೈ, ರೋಟರಿ ಟ್ರಸ್ಟ್ ಅಧ್ಯಕ್ಷರಾದ W.C.ಪಿಂಟೋ, ಬ್ರಹ್ಮಾವರ ವ್ಯವಸಾಯ ಬ್ಯಾಂಕಿನ ಅಧ್ಯಕ್ಷರಾದ ತಿಮ್ಮಪ್ಪ ಹೆಗ್ಡೆ ಸೇರಿದಂತೆ ಹಲವರು ಉಪಸ್ಥಿತರಿದ್ದರು. ಕಾರ್ಯಕ್ರಮದ ನಿರ್ದೇಶಕ ರೊ.ಅಲ್ವಿನ್ ಅಂದ್ರಾದೆ ಕಾರ್ಯಕಮಕ್ಕೆ ಸಹಕರಿಸಿದ ಎಲ್ಲರಿಗೂ ಧನ್ಯವಾದ ಸಮರ್ಪಿಸಿದರು. ಕಾರ್ಯಕ್ರಮಕ್ಕೆ ಆಗಮಿಸಿದ ಪ್ರೇಕ್ಷಕರಿಗೆ 10ಕ್ಕೂ ಹೆಚ್ಚು ಬಹುಮಾನಗಳು, ಅದ್ರಷ್ಟಶಾಲಿ ಪ್ರೇಕ್ಷಕರಿಗೆ ವಿಕ್ಕಿ ಮೊಬೈಲ್ಸ್ ನ ಲಕ್ಕಿ ಮೊಬೈಲ್ ಹಾಗೂ ಮಲಬಾರ್ ಗೋಲ್ಡ್ ವತಿಯಿಂದ ಮೂರು ಬೆಳ್ಳಿ ನಾಣ್ಯಗಳನ್ನು ವಿತರಿಸಲಾಯಿತು.

Leave A Reply

Your email address will not be published.