KGF Babu IT Raid : ಕೆಜಿಎಫ್‌ ಬಾಬುಗೆ ಐಟಿ ಶಾಕ್‌ : ಏಳು ಕಡೆ ದಾಳಿ ನಡೆಸಿದ ಅಧಿಕಾರಿಗಳು

ಬೆಂಗಳೂರು : ಐಟಿ ದಾಳಿ ಕೇವಲ ಕಾಂಗ್ರೆಸ್ ನಾಯಕರ ಮೇಲೆ ಮಾತ್ರ ನಡೆಯುತ್ತದೇ, ಬಿಜೆಪಿ ತನಿಕಾ ಸಂಸ್ಥೆಗಳನ್ನು ಅಸ್ತ್ರವಾಗಿ ಬಳಸಿಕೊಳ್ಳುತ್ತಿದೆ ಎಂಬ ಕಾಂಗ್ರೆಸ್ ಆರೋಪದ ನಡುವೆಯೇ ಕಾಂಗ್ರೆಸ್ ನಾಯಕ ಹಾಗೂ ವಿಧಾನಪರಿಷತ್ ನ ಪರಾಜಿತ ಅಭ್ಯರ್ಥಿ ಯೂಸೂಪ್ ಖಾನ್ ಅಲಿಯಾಸ್ ಕೆಜಿಎಫ್ ಬಾಬು ಮನೆ ಮೇಲೆ ಐಟಿ ದಾಳಿ (KGF Babu IT Raid) ನಡೆದಿದೆ.

ಬೆಂಗಳೂರಿನ ವಸಂತನಗರದಲ್ಲಿರೋ ಕೆಜಿಎಫ್ ಬಾಬು ನಿವಾಸ ಹಾಗೂ ಅವರಿಗೆ ಸಂಬಂಧಿಸಿದ ಇತರ ಕಚೇರಿಗಳ ಮೇಲೂ ಐಟಿ ಅಧಿಕಾರಿಗಳ ತಂಡ ದಾಳಿ ನಡೆಸಿದೆ. ಬೆಳಗ್ಗೆ 6.30 ರ ವೇಳೆಗೆ ದಾಳಿ ನಡೆದಿದ್ದು, ಆರು ಇನ್ನೋವಾ ಕಾರಿನಲ್ಲಿ ಬಂದ ೨೦ ಕ್ಕೂ ಅಧಿಕ ಅಧಿಕಾರಿಗಳು ಪರಿಶೀಲನೆಯಲ್ಲಿ ತೊಡಗಿದ್ದಾರೆ.

ಕೆಜಿಎಫ್ ಬಾಬುಗೆ ಸೇರಿದ ವಸಂತನಗರದ ರುಕ್ಸಾನಾ ಪ್ಯಾಲೇಸ್, ಹಾಗೂ ಎದುರುಗಡೆ ಇರುವ ಮನೆ ಮೇಲೆ ದಾಳಿ ನಡೆದಿದ್ದು ಪರಿಶೀಲನೆ ನಡೆದಿದೆ. ಕೆಜಿಎಫ್ ಬಾಬು ಘೋಷಿತ ಆಸ್ತಿಯೇ 1741 ಕೋಟಿಗಳಷ್ಟಿದ್ದು, ವಿಧಾನಪರಿಷತ್ ಚುನಾವಣೆಗೆ ಸ್ಪರ್ಧೆ ಮಾಡಿದ್ದ ವೇಳೆ ಬಾಬು ಆಸ್ತಿ ಘೋಷಣೆ ಮಾಡಿಕೊಂಡಿದ್ದರು. ನಾಮಪತ್ರ ಸಲ್ಲಿಕೆ ವೇಳೆ 1741 ಕೋಟಿ ಆಸ್ತಿವಿವರ ಘೋಷಿಸಿದ್ದ ಬಾಬು ಆಸ್ತಿ ವಿವರ ಹಾಗೂ ಆದಾಯ ತೆರಿಗೆಯಲ್ಲಿ ಪಾವತಿಯಲ್ಲಿ ವ್ಯತ್ಯಯ ಶಂಕೆ ಹಿನ್ನಲೆ ದಾಳಿ ನಡೆಸಿರೋ ಐಟಿ ಅಧಿಕಾರಿಗಳು ಮಹತ್ವದ ದಾಖಲೆ ಕಲೆ ಹಾಕಿದ್ದಾರೆ.

ಮೊದಲು ಕೋಲಾರದ ಕೆಜಿಎಫ್ ನಲ್ಲಿ ಸ್ಕ್ರಾಪ್ ಬ್ಯುಸಿನೆಸ್ ನಡೆಸುತ್ತಿದ್ದ ಕೆಜಿಎಫ್ ಬಾಬು, ಬಳಿಕ ರಿಯಲ್ ಎಸ್ಟೇಟ್ ವ್ಯವಹಾರ ಶುರು ಮಾಡಿದ್ದರು. ಉಮ್ರಾ ಡೆವಲಪರ್ಸ್ ಹೆಸರಲ್ಲಿ ರಿಯಲ್ ಎಸ್ಟೇಟ್ ವ್ಯವಹಾರ ನಡೆಸುತ್ತಿದ್ದ ಬಾಬು ಕಳೆದ ವರ್ಷ ಎಂಎಲ್ ಸಿ ಚುನಾವಣೆಗೆ ಕಾಂಗ್ರೆಸ್ ನಿಂದ ಸ್ಪರ್ಧಿಸಿ ಸೋಲು ಕಂಡಿದ್ದರು. ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್ ಗೆ ನಡೆದ ಚುನಾವಣೆಯಲ್ಲಿ ಸ್ಪರ್ಧೆಯಲ್ಲಿ ಕಣಕ್ಕಿಳಿದಿದ್ದ ಬಾಬು ನಾಮಪತ್ರ‌ಸಲ್ಲಿಕೆಗೆ ರೋಲ್ಸ್ ರಾಯ್ಸ್ ಕಾರಿನಲ್ಲಿ ಬಂದಿದ್ದರು. ಬಳಿಕ ಎಂಎಲ್ ಸಿ ಚುನಾವಣೆಯಲ್ಲಿ ಸೋಲುಂಡಿದ್ದ ಕೆಜಿಎಫ್ ಬಾಬು ಅಟೋದಲ್ಲಿ ತೆರಳಿದ್ದು ದೊಡ್ಡ ಸುದ್ದಿಯಾಗಿತ್ತು.

ಕೇವಲ ಆಸ್ತಿ ಮಾತ್ರವಲ್ಲದೇ, ಅಮಿತಾಭ್ ಬಚ್ಚನ್ ಬಳಸ್ತಿದ್ದ ರೋಲ್ಸ್ ರಾಯ್ಸ್ ಕಾರು ಖರೀದಿಸಿದ್ದ ಬಾಬು ಈ ಕಾರಣಕ್ಕೂ ಸುದ್ದಿಯಾಗಿದ್ದರು. ಕೆಲ ವರ್ಷಗಳ ಹಿಂದೆ ಮುಂಬೈನಲ್ಲಿ MH02-BB2 ಸಂಖ್ಯೆಯ ರೋಲ್ಸ್ ರಾಯ್ಸ್ ಖರೀದಿಸಿದ್ದ ಬಾಬು ಅದನ್ನು ಬೆಂಗಳೂರಿಗೆ ತಂದು ಬಳಸುತ್ತಿದ್ದರು. ಬಿಗ್ ಬಿ ಅಮಿತಾಭ್ ಬಳಸ್ತಿದ್ದ ಕಾರನ್ನ ಮಧ್ಯವರ್ತಿ ಮೂಲಕ ಖರೀದಿ ಮಾಡಿದ್ದ ಕೆಜಿಎಫ್ ಬಾಬು ಬಿಗ್ ಬೀ ಮೇಲಿನ ಅಭಿಮಾನದಿಂದ ಕಾರು ಖರೀದಿಸಿರುವುದಾಗಿ ಹೇಳಿಕೊಂಡಿದ್ದರು. ಕಳೆದ ವರ್ಷ ಆಗಸ್ಟ್ ನಲ್ಲಿ ಯುಬಿ ಸಿಟಿ ಬಳಿ ಇದೇ ರೋಲ್ಸ್ ರಾಯ್ಸ್ ಕಾರನ್ನು ಸೂಕ್ತ ದಾಖಲಾತಿಗಳಿಲ್ಲ ಎಂಬ ಕಾರಣಕ್ಕೆ ಸೀಜ್ ಮಾಡಿದ್ದರು.

ಇದನ್ನೂ ಓದಿ : newlywed bride :ಆರತಕ್ಷತೆ ಕಾರ್ಯಕ್ರಮದಲ್ಲಿ ಬಿಗ್​ ಟ್ವಿಸ್ಟ್​ : ವಧು ಅವಳಲ್ಲ ಅವನು ಎಂದು ತಿಳಿದು ಶಾಕ್ ​

ಇದನ್ನೂ ಓದಿ : ಶಾಲಾರಂಭ ಮಾಡಿ ಸಮಯ ವ್ಯರ್ಥ ಮಾಡಿದ ಸರಕಾರ : ಮುದ್ರಣವೇ ಗೊಂಡಿಲ್ಲ ಪಠ್ಯಪುಸ್ತಕ, ತಲುಪೋಕೆ ಬೇಕು ಒಂದು ತಿಂಗಳು

it officers raid on congress leader kgf babu house

Comments are closed.