love with transgender : ಯುವಕನೆಂದು ನಂಬಿ ಮಂಗಳಮುಖಿಯನ್ನು ಪ್ರೀತಿಸಿದ ಯುವತಿ: ತನಿಖೆಯಲ್ಲಿ ಬಯಲಾಯ್ತು FB ಲವ್​ ಅಸಲಿತ್ತು

ಮಂಗಳೂರು : love with transgender : ಫೇಸ್​ಬುಕ್​,ಇನ್​ಸ್ಟಾಗ್ರಾ ಹಾಗೂ ವಾಟ್ಸಾಪ್​ನಂತಹ ಸಾಮಾಜಿಕ ಜಾಲತಾಣ ವೇದಿಕೆಗಳು ಎಷ್ಟು ಪ್ರಯೋಜನಕಾರಿಯೋ ದಾರಿ ತಪ್ಪುವವರಿಗೆ ಅಷ್ಟೇ ಮಾರಕ ಕೂಡ ಹೌದು. ಫೇಸ್​ಬುಕ್​ನಲ್ಲಿ ಗುರುತು ಪರಿಚಯವಿಲ್ಲದ ಯುವಕನನ್ನು ಪ್ರೀತಿಸಿದ್ದ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಯುವತಿ ಆತನ ಅಸಲಿಯತ್ತನ್ನು ತಿಳಿದು ಬೆಚ್ಚಿ ಬಿದ್ದಿದ್ದಾಳೆ . ಪ್ರೀತಿಗಾಗಿ ಕುಟುಂಬಸ್ಥರನ್ನೇ ಎದುರು ಹಾಕಿಕೊಂಡಿದ್ದ ಈಕೆ ಇದೀಗ ಪಶ್ಚಾತಾಪದಿಂದ ಮರಗುವಂತಾಗಿದೆ.

ವಿಟ್ಲ ಪಡ್ನೂರು ಗ್ರಾಮದ ನಿವಾಸಿಯಾಗಿದ್ದ ಯುವತಿ ನಾಲ್ಕು ವರ್ಷಗಳ ಹಿಂದೆ ಫೇಸ್​ಬುಕ್​ನಲ್ಲಿ ಯುವಕನನ್ನು ಪರಿಚಯ ಮಾಡಿಕೊಂಡಿದ್ದಳು. ಪ್ರದೀಪ್​ ಎಂಬ ಹೆಸರಿನ ಈತ ಯುವತಿಯ ಜೊತೆ ಸ್ನೇಹ ಬೆಳೆಸಿಕೊಂಡಿದ್ದು ಮಾತ್ರವಲ್ಲದೇ ಪ್ರೇಮದ ಪಾಶಕ್ಕೂ ಬೀಳಿಸಿದ್ದ. ಯುವತಿಯು ಪ್ರದೀಪ್​ನೊಂದಿಗೆ ಎಷ್ಟರ ಮಟ್ಟಿಗೆ ಕ್ಲೋಸ್​ ಆಗಿದ್ದಳು ಅಂದರೆ ಫೇಸ್​ಬುಕ್​ ಲವ್​​ ಏನೂ ಬೇಡ ಎಂದು ಬುದ್ಧಿವಾದ ಹೇಳಿದ್ದ ಪೋಷಕರನ್ನೇ ಎದುರು ಹಾಕಿ ಕೊಂಡಿದ್ದಳು.

ಸಿವಿಲ್​ ಎಂಜಿನಿಯರ್​ ಎಂದು ಹೇಳಿಕೊಂಡಿದ್ದ ಪ್ರದೀಪ್​ನನ್ನು ಪ್ರೀತಿಸಬೇಡ ಎಂದು ಯುವತಿಯ ತಾಯಿ ಶೈಲಜಾ ರಾಜೇಶ್​ ಬುದ್ಧಿವಾದ ಹೇಳಿದರೆ ಮಗಳು ಕೇಳಿರಲಿಲ್ಲ. ವೃತ್ತಿಯಲ್ಲಿ ವಕೀಲೆಯಾಗಿದ್ದ ಶೈಲಜಾ ರಾಜೇಶ್​ ವಿಟ್ಲ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪ್ರದೀಪ್​ ವಿಚಾರಣೆ ನಡೆಸುವಂತೆ ಕೋರಿದ್ದರು. ಉಡುಪಿ ಶಂಕರನಾರಾಯಣ ಠಾಣೆ ಪೊಲೀಸರ ಜೊತೆ ಜಂಟಿ ಕಾರ್ಯಾಚರಣೆ ನಡೆಸಿದ ಪೊಲೀಸರು ಪ್ರದೀಪ್​ ಸಿದ್ದಾಪುರದವನು ಎಂಬ ವಿಚಾರವನ್ನು ಪತ್ತೆ ಮಾಡಿದ್ದಾರೆ.

ಆತನ ಊರನ್ನು ಹುಡುಕಿ ಹೋದ ಪೊಲೀಸರಿಗೆ ಅಸಲಿ ಪ್ರದೀಪ್​ನನ್ನು ಕಂಡು ಶಾಕ್​ ಆಗಿದೆ. ಏಕೆಂದರೆ ಅಸಲಿಗೆ ಈತ ಪ್ರದೀಪನೇ ಆಗಿರಲಿಲ್ಲ. ಜ್ಯೋತಿ ಎಂಬ ಹೆಸರಿನ ಮಂಗಳ ಮುಖಿ ಗಂಡಸಿನ ಧ್ವನಿಯಲ್ಲಿ ಮಾತನಾಡುತ್ತಾ ಯುವತಿಯನ್ನು ಪ್ರೀತಿಯ ಬಲೆಗೆ ಬೀಳಿಸಿದ್ದಳು. ಈ ಪ್ರಕರಣವನ್ನು ಭೇದಿಸಿದ ಪೊಲೀಸರು ಫೇಸ್​ಬುಕ್​ ಲವ್​ಗೆ ಕೊನೆ ಹಾಡಿದ್ದಾರೆ.

ತಾಜಾ ಸುದ್ದಿಗಾಗಿ ಇಲ್ಲಿ ಕ್ಲಿಕ್‌ ಮಾಡಿ

ಇದನ್ನು ಓದಿ : YouTube Remove Videos:ಗರ್ಭಪಾತದ ಬಗ್ಗೆ ತಪ್ಪು ಮಾಹಿತಿಯನ್ನು ಹೊಂದಿರುವ ವೀಡಿಯೊಗಳನ್ನು ತೆಗೆದುಹಾಕುವುದಾಗಿ ಯೂಟ್ಯೂಬ್ ಹೇಳಿಕೆ

ಇದನ್ನೂ ಓದಿ ; mla zameer ahmed : ‘ವೈಯಕ್ತಿಕ ಅಭಿಪ್ರಾಯವನ್ನು ಹೊರಹಾಕುವ ಸ್ವಾತಂತ್ರ್ಯ ನನಗಿದೆ’ : ಡಿಕೆಶಿಗೆ ಶಾಸಕ ಜಮೀರ್ ಅಹಮದ್​ ಟಾಂಗ್​​

young woman who fell in love with transgender

Comments are closed.