snake crawled : ಮಲಗಿದ್ದ ಮಹಿಳೆಯ ಮೈ ಮೇಲೆ ಹೆಡೆಯೆತ್ತಿದ್ದ ಸರ್ಪ : ಎದೆ ಝಲ್​ ಎನ್ನಿಸುತ್ತೆ ಈ ವಿಡಿಯೋ

ಕಲಬುರಗಿ : snake crawled : ಹಾವುಗಳ ಹೆಸರು ಕೇಳಿದರೆ ಸಾಕು ಮೈ ಎಲ್ಲಾ ಝುಂ ಅನ್ನುತ್ತೆ. ಅದರಲ್ಲೂ ಸರ್ಪ ಎಂದರೆ ಸಾಕು ಜೀವವೇ ಬಾಯಿಗೆ ಬಂದಂತೆ ಆಗೋದರಲ್ಲಿ ಆಶ್ಚರ್ಯವೇನಿಲ್ಲ. ಎಂದಾದರೂ ನೀವು ಹೆಡೆ ಎತ್ತಿ ನಿಂತ ಸರ್ಪವನ್ನು ದೂರದಿಂದ ನೋಡಿದ್ದು ಇರಬಹುದು. ಆದರೆ ಅದೇ ಸರ್ಪ ನಿಮ್ಮ ಸಮೀಪದಲ್ಲಿ ಅಲ್ಲಲ್ಲ ನಿಮ್ಮ ಮೈ ಮೇಲೆಯೇ ಬಂದು ಹೆಡೆಯೆತ್ತಿ ನಿಂತರ ನಿಮ್ಮ ಸ್ಥಿತಿ ಹೇಗಿರಬಹುದು ಎಂಬುದನ್ನು ನಿಮ್ಮಿಂದ ಊಹಿಸಿಕೊಳ್ಳಲಿಕ್ಕಾದರೂ ಸಾಧ್ಯವೇ..? ಇಲ್ಲ ಎಂದಾದಲ್ಲಿ ನೀವು ಈ ಸ್ಟೋರಿಯನ್ನು ಓದಲೇ ಬೇಕು.

ನೀವು ಕನಸಿನಲ್ಲೂ ಊಹಿಸಿಕೊಳ್ಳಲು ಸಾಧ್ಯವಿಲ್ಲಪ್ಪಾ ಎನ್ನುತ್ತಿರುವ ಘಟನೆಯೊಂದು ಕಲಬುರಗಿ ಜಿಲ್ಲೆಯ ಅಫಜಲಪುರ ತಾಲೂಕಿನ ಮಲ್ಲಬಾದ್​ ಎಂಬಲ್ಲಿ ನಡೆದಿದೆ. ಮಲ್ಲಾಬಾದ್​​ ಗ್ರಾಮದವರೇ ಆದ ಭಾಗಮ್ಮ ಹಣಮಂತರಾಯ ಬಡದಾಳ ಎಂಬ ಮಹಿಳೆ ತಮ್ಮ ಜಮೀನಿನಲ್ಲಿ ಹಾಯಾಗಿ ಮಲಗಿದ್ದರು. ಇವರ ನಿದ್ದೆ ಎಷ್ಟು ಗಾಢವಾಗಿತ್ತು ಅಂದರೆ ಮೈ ಮೇಲೆ ಹಾವು ಬಂದಿದೆ ಎಂಬುದೂ ಸಹ ಇವರ ಗಮನಕ್ಕೆ ಬಂದಿಲ್ಲ .

ಜಮೀನಿನಲ್ಲಿ ಹಾಯಾಗಿ ನಿದ್ರೆ ಮಾಡುತ್ತಿದ್ದ ಭಾಗಮ್ಮ ಹಣಮಂತರಾಯ ಬಡದಾಳ ಮೈ ಮೇಲೆ ಎಲ್ಲಿಂದಲೂ ಬಂದ ಸರ್ಪವೊಂದು ಹೆಡೆಯೆತ್ತಿ ನಿಂತಿದೆ. ಮಲ್ಲಾಬಾದ್​ ಗ್ರಾಮದ ಹೊರವಲಯದಲ್ಲಿರುವ ಜಮೀನಿನಲ್ಲಿ ಕೆಲಸ ಮಾಡಿ ಸುಸ್ತಾಗಿದ್ದ ಭಾಗಮ್ಮ ಹಣಮಂತರಾಯ ಬಡದಾಳ ಅಲ್ಲೇ ಜಮೀನಿನಲ್ಲೇ ವಿಶ್ರಾಂತಿ ಪಡೆಯುತ್ತಿದ್ದ ಸಂದರ್ಭದಲ್ಲಿ ಈ ಘಟನೆ ನಡೆದಿದೆ.

https://youtu.be/DUAQzWpE_Fs

ಮೈ ಮೇಲೆ ನಾಗರ ಹಾವು ಹೆಡೆಯೆತ್ತಿ ನಿಂತಿದ್ದೇ ತಡ ಭಾಗಮ್ಮ ಕೂಡಲೇ ಎಚ್ಚರಗೊಂಡಿದ್ದಾರೆ .ಭಯಗೊಂಡ ಭಾಗಮ್ಮ ಕೂಡಲೇ ಶ್ರೀಶೈಲ ಮಲ್ಲಯ್ಯ ಕಾಪಾಡಪ್ಪ ಅಂತಾ ಬೇಡಿಕೊಂಡಿದ್ದಾರೆ. ಆದರೆ ಮಹಿಳೆಗೆ ಒಂದಿಂಚೂ ಹಾನಿ ಮಾಡದ ಸರ್ಪ ಸುಮ್ಮನೇ ಆಕೆಯ ಮೈಯಿಂದ ಕೆಳಗಿಳಿದು ತೆರಳಿದೆ. ಸ್ಥಳೀಯರ ಮೊಬೈಲ್​ ಕ್ಯಾಮರಾದಲ್ಲಿ ಈ ಎದೆ ಝಲ್​ ಎನ್ನಿಸುವ ದೃಶ್ಯ ಸೆರೆಯಾಗಿದ್ದು ಸ್ಥಳೀಯ ಸೋಶಿಯಲ್​ ಮೀಡಿಯಾ ಬಳಕೆದಾರರ ನಡುವೆ ಈ ವಿಡಿಯೋ ಹಾಟ್​ ಕೇಕ್​ನಂತೆ ಶೇರ್​ ಆಗ್ತಿದೆ. ವಿಡಿಯೋ ನೋಡಿದ ನೆಟ್ಟಿಗರು ಭಾಗಮ್ಮನಿಗೆ ಇಂದು ಅದೃಷ್ಟ ಚೆನ್ನಾಗಿತ್ತು ಅಂತಾ ಮಾತನಾಡಿಕೊಳ್ತಿದ್ದಾರೆ.

ಇದನ್ನು ಓದಿ : loudspeakers : ‘ಸರ್ಕಾರದ ಆದೇಶವನ್ನು ಮೀರಿ ಧ್ವನಿವರ್ಧಕ ಬಳಸುತ್ತೇವೆ’ : ಪ್ರಮೋದ್​ ಮುತಾಲಿಕ್​ ಸವಾಲ್​

ಇದನ್ನೂ ಓದಿ : Heavy rainfall:ಭಾರಿ ಮಳೆ: ಈ ರಾಜ್ಯಗಳಿಗೆ ಐಎಂಡಿ ಹಳದಿ ಎಚ್ಚರಿಕೆ

A snake crawled on a woman’s body: video viral

Comments are closed.