Virat Kohli : 3-2-1 ಕತಾರ್ ಒಲಿಂಪಿಕ್ ಮ್ಯೂಸಿಯಂಗೆ ಭೇಟಿ ಕೊಟ್ಟ ಕೊಹ್ಲಿಗೆ ಜೆರ್ಸಿ ಉಡುಗೊರೆ

ದೋಹಾ: (Virat Kohli Sports Museum in Doha) ಏಷ್ಯಾ ಕಪ್ ಟೂರ್ನಿಗಾಗಿ ದುಬೈನಲ್ಲಿರುವ ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ವಿರಾಟ್ ಕೊಹ್ಲಿ 3-2-1 ಕತಾರ್ ಒಲಿಂಪಿಕ್ ಹಾಗೂ ಸ್ಪೋರ್ಟ್ಸ್ ಮ್ಯೂಸಿಯಂಗೆ (3-2-1 Qatar Olympic and Sports Museum in Doha) ಭೇಟಿ ನೀಡಿದ್ದಾರೆ.

ಇದೇ ವೇಳೆ ವಿರಾಟ್ ಕೊಹ್ಲಿ ಅವರಿಗೆ ಕತಾರ್ ಕ್ರಿಕೆಟ್ ಸಂಸ್ಥೆಯ ಅಧ್ಯಕ್ಷ ಶೇಖ್ ಅಬ್ದುಲ್ಲಜೀಜ್ ಬಿನ್ ಸೌದ್ ಅಲ್ ಥಾನಿ ನಂ.18 ಜರ್ಸಿಯೊಂದನ್ನು ಉಡುಗೊರೆಯಾಗಿ ನೀಡಿದ್ದಾರೆ. ನಂ.18 ವಿರಾಟ್ ಕೊಹ್ಲಿ ಅವರ ಜರ್ಸಿ ನಂಬರ್. ದೋಹಾ ಭೇಟಿಯ ವೇಳೆ ವಿರಾಟ್ ಕೊಹ್ಲಿ ಇಸ್ಲಾಮಿಕ್ ಆರ್ಟ್ & ಆಸ್ಪೆಟರ್ ಮ್ಯೂಸಿಯಂಗೂ ( Museum of Islamic Art and Aspetar) ಭೇಟಿ ಕೊಟ್ಟಿದ್ದಾರೆ. ಅಷ್ಟೇ ಅಲ್ಲ, ಅಲ್ಲಿದ್ದ ತಮ್ಮ ಅಭಿಮಾನಿಗಳೊಂದಿಗೆ ಸೆಲ್ಫಿ ಕ್ಲಿಕ್ಕಿಸಿಕೊಂಡಿದ್ದಾರೆ. ತಮ್ಮ ದೋಹಾ ಭೇಟಿಯ ಬಗ್ಗೆ ಟ್ವೀಟ್ ಮಾಡಿರುವ ವಿರಾಟ್ ಕೊಹ್ಲಿ, ಅದ್ಭುತ ಕ್ಷಣಗಳನ್ನು ಕಳೆದಿದ್ದಾರೆ ತಿಳಿಸಿದ್ದಾರೆ.

ಆಧುಕಿನ ಕ್ರಿಕೆಟ್ ಜಗತ್ತಿನ ಶ್ರೇಷ್ಠ ಬ್ಯಾಟ್ಸ್’ಮನ್ ವಿರಾಟ್ ಕೊಹ್ಲಿ ಅವರಿಗೆ ದುಬೈನಲ್ಲಿ ದೊಡ್ಡ ಸಂಖ್ಯೆಯ ಅಭಿಮಾನಿಗಳಿದ್ದಾರೆ. ಇನ್’ಸ್ಟಾಗ್ರಾಂನಲ್ಲಿ ವಿರಾಟ್ ಕೊಹ್ಲಿ ಅವರ ಫಾಲೋವರ್ಸ್ ಸಂಖ್ಯೆ 212 ಮಿಲಿಯನ್, ಅಂದ್ರೆ ಬರೋಬ್ಬರಿ 21 ಕೋಟಿ.

ಏಷ್ಯಾ ಕಪ್ ಟೂರ್ನಿಗೆ ಈಗಾಗ್ಲೇ ಭರ್ಜರಿ ಅಭ್ಯಾಸ ನಡೆಸಿರುವ ವಿರಾಟ್ ಕೊಹ್ಲಿ, ಟೂರ್ನಿಯಲ್ಲಿ ಉತ್ತಮ ಪ್ರದರ್ಶನ ತೋರುವ ವಿಶ್ವಾಸದಲ್ಲಿದ್ದಾರೆ. ಇತ್ತೀಚಿನ ದಿನಗಳಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್’ನಲ್ಲಿ ವಿರಾಟ್ ಕೊಹ್ಲಿ ದಯನೀಯ ವೈಫಲ್ಯ ಎದುರಿಸಿದ್ದು, ಏಷ್ಯಾ ಕಪ್’ನಲ್ಲಿ ಕೊಹ್ಲಿ ಆಟದ ಮೇಲೆ ಎಲ್ಲರ ಗಮನ ನೆಟ್ಟಿದೆ. ಕಿಂಗ್ ಕೊಹ್ಲಿ ಕಳೆದ 34 ತಿಂಗಳುಗಳಿಂದ ಅಂತಾರಾಷ್ಟ್ರೀಯ ಕ್ರಿಕೆಟ್’ನಲ್ಲಿ ಶತಕ ಬಾರಿಸಿಲ್ಲ. 2019ರ ನವೆಂಬರ್ ತಿಂಗಳಲ್ಲಿ ಕೋಲ್ಕತಾದ ಈಡನ್ ಗಾರ್ಡನ್ಸ್ ಮೈದಾನದಲ್ಲಿ ನಡೆದ ಬಾಂಗ್ಲಾದೇಶ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ಶತಕ ಬಾರಿಸಿದ್ದೇ ಕೊನೆ. ನಂತರ ಕೊಹ್ಲಿ ಬ್ಯಾಟ್’ನಿಂದ ಶತಕ ಸಿಡಿದಿಲ್ಲ. ಅಂತಾರಾಷ್ಟ್ರೀಯ ಕ್ರಿಕೆಟ್’ನಲ್ಲಿ ಅತೀ ವೇಗವಾಗಿ 70 ಶತಕ ಸಿಡಿಸಿದ ವಿಶ್ವದಾಖಲೆ ವಿರಾಟ್ ಕೊಹ್ಲಿ ಹೆಸರಲ್ಲಿದೆ.

ಏಷ್ಯಾ ಕಪ್ ಟೂರ್ನಿಯಲ್ಲಿ ಫಾರ್ಮ್ ಕಂಡುಕೊಳ್ಳುವ ವಿಶ್ವಾಸದಲ್ಲಿರುವ ಕೊಹ್ಲಿ, 3ನೇ ಕ್ರಮಾಂಕದಲ್ಲಿ ಆಡಲಿದ್ದಾರೆ. ನಾಳೆ (ಭಾನುವಾರ) ದುಬೈ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯಲಿರುವ ತನ್ನ ಮೊದಲ ಪಂದ್ಯದಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ತಂಡದ ವಿರುದ್ಧ ಆಡುವ ಮೂಲಕ ಹಾಲಿ ಚಾಂಪಿಯನ್ ಭಾರತ ತಂಡ ಏಷ್ಯಾ ಕಪ್’ನಲ್ಲಿ ತನ್ನ ಅಭಿಯಾನ ಆರಂಭಿಸಲಿದೆ.

ಇದನ್ನೂ ಓದಿ : Virat Kohli MS Dhoni: 7+18 ಧೋನಿ ಜೊತೆಗಿನ ಬಾಂಧವ್ಯದ ಬಗ್ಗೆ ಕುತೂಹಲಕಾರಿ ಸಂಗತಿ ಬಿಚ್ಚಿಟ್ಟ ವಿರಾಟ್ ಕೊಹ್ಲಿ

ಇದನ್ನೂ ಓದಿ : Asia Cup 2022 start from today: ಇಂದಿನಿಂದ ಏಷ್ಯಾ ಕಪ್ 2022 ಆರಂಭ, IND vs PAK Playing 11

Virat Kohli visit 3-2-1 Qatar Olympic and Sports Museum in Doha

Comments are closed.