STUDENTS STOLEN BULLETS : ಐಷಾರಾಮಿ ಜೀವನಕ್ಕೆಂದು ಬೈಕ್​ ಕಳ್ಳತನಕ್ಕೆ ಇಳಿದ ವಿದ್ಯಾರ್ಥಿಗಳ ಬಂಧನ

ಚಿಕ್ಕಬಳ್ಳಾಪುರ : STUDENTS STOLEN BULLETS : ಹೈಫೈ ಜೀವನವನ್ನು ನಡೆಸಬೇಕೆಂಬ ಆಸೆ ಎಲ್ಲರಿಗೂ ಇರುತ್ತೆ. ಅನೇಕರು ತಮ್ಮಲ್ಲಿರುವ ಹಣದಿಂದಲೇ ಐಷಾರಾಮಿ ಜೀವನವನ್ನು ನಡೆಸಿದರೆ ಇನ್ನು ಕೆಲವರು ಶ್ರೀಮಂತಿಕೆಯ ಆಸೆಗೆ ಅಡ್ಡದಾರಿ ಹಿಡಿಯುತ್ತಾರೆ. ಅದೇ ರೀತಿ ಬೆಂಗಳೂರಿನಲ್ಲಿ ಬಿ.ಟೆಕ್​ ವ್ಯಾಸಂಗ ಮಾಡುತ್ತಿದ್ದ ಇಬ್ಬರು ವಿದ್ಯಾರ್ಥಿಗಳು ಬೈಕ್​ ಕಳ್ಳತನಕ್ಕೆ ಇಳಿದಿದ್ದು ಇದೀಗ ಪೊಲೀಸ್​ ಠಾಣೆಯ ಅತಿಥಿಗಳಾಗಿದ್ದಾರೆ.

ಬಂಧಿತ ಇಬ್ಬರು ಯುವಕರಲ್ಲಿ ಓರ್ವ ಚಿಕ್ಕ ಬಳ್ಳಾಪುರ ಮೂಲದವನಾಗಿದ್ದರೆ ಮತ್ತೊಬ್ಬ ಆಂಧ್ರ ಪ್ರದೇಶ ಮೂಲದವನಾಗಿದ್ದಾನೆ. ಇಬ್ಬರು ಚಿಕ್ಕಬಳ್ಳಾಪುರದ ಬಾಗೆಪಲ್ಲಿ ಪಟ್ಟಣದ ಹೊರ ವಲಯದಲ್ಲಿ ಟೋಲ್​ಪ್ಲಾಜಾ ಬಳಿಯಲ್ಲಿ ಬುಲೆಟ್​ ಬೈಕ್​​ನಲ್ಲಿ ಅನುಮಾನಾಸ್ಪದವಾಗಿ ಓಡಾಡುತ್ತಿದ್ದುದು ಪೊಲೀಸರ ಗಮನಕ್ಕೆ ಬಂದ ಹಿನ್ನೆಲೆಯಲ್ಲಿ ಇಬ್ಬರನ್ನು ಬಂಧಿಸಿದ್ದಾರೆ. ಬಂಧಿತರಿಂದ ಪೊಲೀಸರು 12 ಬುಲೆಟ್​ ಬೈಕ್​ಗಳು ಸೇರಿದಂತೆ ಒಟ್ಟ 15 ವಾಹನಗಳನ್ನು ಜಪ್ತಿ ಮಾಡಿದ್ದಾರೆ.

ಈ ಇಬ್ಬರು ಯುವಕರು ಬೆಂಗಳೂರಿನ ಬಿ.ಟೆಕ್​ ಕಾಲೇಜಿನ ವಿದ್ಯಾರ್ಥಿಗಳಾಗಿದ್ದರು. ಆದರೆ ಓರ್ವ ವಿದ್ಯಾರ್ಥಿಯು ಅರ್ಧದಲ್ಲಿಯೇ ತನ್ನ ವಿದ್ಯಾಭ್ಯಾಸವನ್ನು ಮೊಟಕುಗೊಳಿಸಿದ್ದು ಐಷಾರಾಮಿ ಜೀವನ ನಡೆಸಬೇಕೆಂದು ಬೈಕ್​ ಕಳ್ಳತನಕ್ಕೆ ಇಳಿದಿದ್ದ ಎನ್ನಲಾಗಿದೆ. ಬೆಂಗಳೂರು ಹಾಗೂ ಚಿಕ್ಕಬಳ್ಳಾಪುರದ ವಿವಿಧೆಡೆಗಳಲ್ಲಿ ಬೈಕ್​ ಕದಿಯುತ್ತಿದ್ದ ಕಳ್ಳರು ಕದ್ದ ಬೈಕುಗಳನ್ನು ಆಂಧ್ರ ಪ್ರದೇಶದಲ್ಲಿ ಮಾರಾಟ ಮಾಡಿ ಬಂದ ಹಣದಲ್ಲಿ ಮಜಾ ಮಾಡುತ್ತಿದ್ದರು ಎಂಬ ವಿಚಾರ ತನಿಖೆಯಲ್ಲಿ ತಿಳಿದು ಬಂದಿದೆ.

ಇಬ್ಬರು ಯುವಕರು ಅನುಮಾನಾಸ್ಪದವಾಗಿ ಓಡಾಡುತ್ತಿದ್ದುದು ಗಮನಕ್ಕೆ ಬಂದ ಬಳಿಕ ಪಟ್ಟಣದ ಪೊಲೀಸರು ಆರೋಪಿಗಳನ್ನು ವಶಕ್ಕೆ ಪಡೆಯು್ತಿದ್ದಂತೆಯೆ ಈ ಬೈಕ್​ ಕಳ್ಳತನದ ವಿಚಾರದ ಬೆಳಕಿಗೆ ಬಂದಿದೆ. ಇಬ್ಬರಿಂದ ಒಟ್ಟು 15 ವಾಹನಗಳನ್ನು ವಶಕ್ಕೆ ಪಡೆದಿರುವ ಪೊಲೀಸರು ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

ಇದನ್ನು ಓದಿ : Aradhana mahotsava in mantralaya : ಮಂತ್ರಾಲಯದಲ್ಲಿ ರಾಯರ ಅದ್ಧೂರಿ 351ನೇ ಆರಾಧನಾ ಮಹೋತ್ಸವ

ಇದನ್ನೂ ಓದಿ : First Child Via IVF : ಮದುವೆಗಾಗಿ 54 ವರ್ಷಗಳ ಬಳಿಕ ಮೊದಲ ಮಗುವನ್ನು ಬರಮಾಡಿಕೊಂಡ ವೃದ್ಧ ದಂಪತಿ

ಇದನ್ನೂ ಓದಿ : woman commits suicide : ಅವಳಿ ಮಕ್ಕಳೊಂದಿಗೆ ಬಾವಿಗೆ ಹಾರಿ ಮಹಿಳೆ ಆತ್ಮಹತ್ಯೆ

ಇದನ್ನೂ ಓದಿ : illicit relationship :ಸೋದರತ್ತೆಯೊಂದಿಗೆ ಅಳಿಯನ ಅಕ್ರಮ ಸಂಬಂಧ ಕೊಲೆಯಲ್ಲಿ ಅಂತ್ಯ

BTECH STUDENTS STOLEN BULLETS FOR LUXURY LIFE

Comments are closed.