Boycott Amazon : ಪ್ರತಿಯೊಂದು ಧರ್ಮದಲ್ಲಿಯೂ ಆಯಾ ದೇವರಿಗೆ ಪವಿತ್ರವಾದ ಸ್ಥಾನಮಾನವನ್ನು ನೀಡಲಾಗಿದೆ.ಈ ವಿಚಾರದಲ್ಲಿ ಹಿಂದೂ ಧರ್ಮ ಕೂಡ ಹೊರತಾಗಿಲ್ಲ. ಆದರೆ ಈ ದಿನಗಳಲ್ಲಿ ಹಿಂದೂ ದೇವತೆಗಳಿಗೆ ಅವಮಾನ ಮಾಡುವಂತಹ ಸಾಕಷ್ಟು ಪೋಸ್ಟರ್ಗಳು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಕೆಲವು ತಿಂಗಳುಗಳ ಹಿಂದೆ ಧೂಮಪಾನ ಮಾಡುತ್ತಿರುವ ರೀತಿಯಲ್ಲಿ ದುರ್ಗಾಮಾತೆಯನ್ನು ಚಿತ್ರಿಸಿದ್ದು ಭಾರೀ ವಿವಾದಕ್ಕೆ ಕಾರಣವಾಗಿತ್ತು. ಇದೀಗ ಇ – ಕಾಮರ್ಸ್ ದೈತ್ಯ ಅಮೆಜಾನ್ ಶ್ರೀ ಕೃಷ್ಣ ಜನ್ಮಾಷ್ಟಮಿಯ ಸಂದರ್ಭದಲ್ಲಿ ತನ್ನ ಶಾಪಿಂಗ್ ವೆಬ್ಸೈಟ್ನಲ್ಲಿ ರಾಧಾ-ಕೃಷ್ಣರ ಅಶ್ಲೀಲ ಪೇಟಿಂಗ್ಗಳನ್ನು ಮಾರಾಟಕ್ಕೆ ಮುಂದಾಗಿದ್ದು ಹಿಂದೂಗಳ ಆಕ್ರೋಶಕ್ಕೆ ಕಾರಣವಾಗಿದೆ.
It was brought to our notice that an inappropriate image was uploaded on our website. The same was brought down immediately.
— Exotic India Art (@exoticindiaart) August 19, 2022
We sincerely apologise,Pls dont #Boycott_ExoticIndia #boycott_exoticlndia
Hare Krsna. 1/2 @HinduJagrutiOrg @SanatanPrabhat @mp_hjs
ರಾಧಾ ಹಾಗೂ ಕೃಷ್ಣನ ಪ್ರೀತಿಯನ್ನು ಈ ಜಗತ್ತಿನ ಅತ್ಯಂತ ಪವಿತ್ರವಾದ ಪ್ರೀತಿ ಎಂದು ಕರೆಯಲಾಗುತ್ತೆ. ಆದರೆ ಅಮೆಜಾನ್ನಲ್ಲಿ ಬಿಕರಿಗೆ ಇಡಲಾಗಿದ್ದ ರಾಧಾ -ಕೃಷ್ಣರ ಫೋಟೋದಲ್ಲಿ ಅಶ್ಲೀಲ ಭಂಗಿಯಲ್ಲಿ ರಾಧಾ ಕೃಷ್ಣ ಕುಳಿತಿರುವಂತೆ ಚಿತ್ರಿಸಲಾಗಿದೆ. ಇದು ಹಿಂದೂ ಜನ ಜಾಗೃತಿ ಸಮಿಯಿಯ ಗಮನಕ್ಕೆ ಬಂದಿದ್ದು ಸೋಶಿಯಲ್ ಮೀಟಿಯಾದಲ್ಲಿ ಬಾಯ್ಕಾಟ್ ಅಮೆಜಾನ್ ಎಂಬ ಅಭಿಯಾನ ನಡೆಯುತ್ತಿದೆ.
Hi @amazonIN it’s high time you check what you are selling . Else next time you won’t have your customers here. This seller is Inkologie, a Bengaluru based organization. pic.twitter.com/f04bzMXgXI
— Dr. Banarasi Kanya 🇮🇳 (@banarasikanya) August 18, 2022
ಹಿಂದೂ ಜನ ಜಾಗೃತಿ ಸಮಿತಿಯು ಹಿಂದೂ ಭಾವನೆಗಳಿಗೆ ಧಕ್ಕೆ ತಂದ ಆರೋಪದ ಅಡಿಯಲ್ಲಿ ಅಮೆಜಾನ್ ಇಂಡಿಯಾದ ವಿರುದ್ಧ ಸೂಕ್ತ ಕ್ರಮವನ್ನು ಕೈಗೊಳ್ಳುವಂತೆ ಆಗ್ರಹಿಸಿ ಬೆಂಗಳೂರಿನ ಪೊಲೀಸರಿಗೆ ಮನವಿ ಪತ್ರವನ್ನು ಸಲ್ಲಿಸಿದೆ. ಇಂಕೋಲೊಜಿ ಹಿಂದೂ ಗಾಡ್ಸ್ ಫೈನ್ ಆರ್ಟ್ಸ್ ಪೇಂಟಿಂಗ್ ಎಂಬ ಶೀರ್ಷಿಕೆಯ ಅಡಿಯಲ್ಲಿ ಈ ಅಶ್ಲೀಲ ರಾಧಾ ಕೃಷ್ಣರ ಫೋಟೋವನ್ನು ಬಿಕರಿ ಮಾಡಲಾಗಿದ್ದು ಇದು ಕೋಟ್ಯಂತರ ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ಧಕ್ಕೆಯುಂಟು ಮಾಡಿದೆ ಎಂದು ಸೋಶಿಯಲ್ ಮೀಡಿಯಾಗಳಲ್ಲಿ ಆಕ್ರೋಶವನ್ನು ಹೊರ ಹಾಕಲಾಗುತ್ತಿದೆ.
Have to see this on Janmashtami 😡 Boycott INKOLOGIE, Boycott Amazon#BoycottAmazon
— Boiled Anda 🥚🇮🇳 (@AmitLeliSlayer) August 19, 2022
🙏 Please spread this 🙏 pic.twitter.com/j3lXqeNlVn
ದೇಶದ ಕೋಟ್ಯಂತರ ಹಿಂದೂ ಶ್ರೀಕೃಷ್ಣ ಜನ್ಮಾಷ್ಟಮಿಯನ್ನು ಆಚರಿಸುತ್ತಿದ್ದ ಸಂದರ್ಭದಲ್ಲಿ ಅಶ್ಲೀಲ ಚಿತ್ರಗಳನ್ನು ಮಾರಾಟ ಮಾಡುತ್ತಿರುವ ಅಮೆಜಾನ್ ಭಾರತೀಯ ದಂಡ ಸಂಹಿತೆ 295, 295 ಎ ಮತ್ತು 298 ರ ಅಡಿಯಲ್ಲಿ ಕಾನೂನಿಗೆ ವಿರುದ್ಧವಾದ ಕೆಲಸ ಮಾಡಿದಂತಾಗಿದೆ.
ಇದನ್ನು ಓದಿ : Minister Ashwattha Narayan : ಮೊಟ್ಟೆ ರಾಜಕೀಯದಲ್ಲಿ ಡಿಕೆಶಿ ಹೇಳಿಕೆ ಅವರ ಸಂಸ್ಕೃತಿ ತೋರಿಸುತ್ತೆ : ಅಶ್ವತ್ಥ ನಾರಾಯಣ ವ್ಯಂಗ್ಯ
Amazon sells ‘obscene’ Radha-Krishna painting on Janmashtami? Angry netizens tweet Boycott Amazon