First Maruti 800 Car : ಮಾರುತಿ 800 ಮಾದರಿಯ ಮೊಟ್ಟ ಮೊದಲ ಕಾರನ್ನು ಪ್ರದರ್ಶನಕ್ಕೆ ಇಟ್ಟ ಮಾರುತಿ ಸುಜುಕಿ

ಒಂದು ಕಾಲವಿತ್ತು, ಕಾರು (Car) ಅಂದರೆ ನೆನಪಾಗುವುದೇ ಮಾರುತಿ 800 (Maruti 800). ಇದು ಜನಸಾಮಾನ್ಯರ ಕಾರು ಎಂದೇ ಹೆಸರುವಾಸಿಯಾಗಿತ್ತು. ಭಾರತದ ರಸ್ತೆಗಳಲ್ಲಿ ಅತ್ಯಂತ ಯಶಸ್ವಿಯಾಗಿ ಓಡಾಡಿದ ಕಾರು ಇದಾಗಿತ್ತು. ಬರೋಬ್ಬರಿ 39 ವರ್ಷಗಳ ಹಿಂದೆ 1983 ರಲ್ಲಿ ಮಾರುತಿ ಸುಜುಕಿ, ಮೊದಲ ಮಾರುತಿ 800 ಮಾದರಿಯ ಕಾರನ್ನು ಬಿಡುಗಡೆ ಮಾಡಿತ್ತು. ಮಧ್ಯಮ ವರ್ಗದ ಜನರ ಕನಸಾದ ಕಾರನ್ನು ಖರೀದಿಸಲು ಅನುವು ಮಾಡಿಕೊಟ್ಟಿತ್ತು. ಈಗ ಮಾರುತಿ ಸುಜುಕಿ ಹರಿಯಾಣದ ಪ್ರಧಾನ ಕಛೇರಿಯಲ್ಲಿ ಮಾರುತಿ 800ನ ಮೊದಲ ಮಾದರಿಯ ಕಾರನ್ನು ಅದರ ಮೂಲ ಸ್ವರೂಪದಲ್ಲಿಯೇ ಪ್ರದರ್ಶನಕ್ಕೆ ಇರಿಸಿದೆ.

ಇಂತಿಪ್ಪ ಭವ್ಯ ಕಾರಿಗೆ ಗೌರವ ಸಲ್ಲಿಸಿದ ಮಾರುತಿ ಸುಜುಕಿ ಮಾರಾಟ ಮತ್ತು ಮಾರುಕಟ್ಟೆಯ ಹಿರಿಯ ಕಾರ್ಯನಿರ್ವಾಹಕ ನಿರ್ದೇಶಕ ಶಶಾಂಕ್‌ ಶ್ರೀವಾಸ್ತವ ಮಾತನಾಡಿ, 75 ವರ್ಷಗಳ ಹಿಂದೆ ಭಾರತ ಸ್ವತಂತ್ರ ರಾಷ್ಟ್ರವಾಗಿ ತನ್ನ ಮೊದಲ ಹೆಜ್ಜೆ ಇಟ್ಟಂತೆ, ಮಾರುತಿ ಸುಜುಕಿ 40 ವರ್ಷಗಳ ಹಿಂದೆ ಮೊದಲ ಮಾರುತಿ ಸುಜುಕಿ 800 ಅನ್ನು ಬಿಡುಗಡೆ ಮಾಡಿತ್ತು ಎಂದು ಹೇಳಿದರು. ಕಾರನ್ನು ಅದರ ಮೂಲ ಸ್ವರೂಪದಲ್ಲಿಯೆ, ಮಾರುತಿ ಸುಜುಕಿಯ ಪ್ರಧಾನ ಕಛೇರಿಯಲ್ಲಿ ಪ್ರದರ್ಶನಕ್ಕೆ ಇಡಲಾಗಿದೆ.

ಇದನ್ನೂ ಓದಿ : Massive increase in gold price: ಚಿನ್ನದ ಬೆಲೆಯಲ್ಲಿ ಭಾರೀ ಏರಿಕೆ; ಇಂದಿನ ಬೆಲೆ ಎಷ್ಟು ಗೊತ್ತಾ

ಮಾರುತಿ 800 ಬಿಡುಗಡೆಯಾದಾಗ ಅದರ ಬೆಲೆ 47,500 ರೂ. ಆಗಿತ್ತು. ಅದನ್ನು ಹರಿಯಾಣದ ಮಾರುತಿ ಉದ್ಯೋಗ್‌ ಲಿಮಿಟೆಡ್‌ ಘಟಕದಲ್ಲಿ ತಯಾರಿಸಲಾಯಿತು. ಈಗ ಇದನ್ನು ಮಾರುತಿ ಸುಜುಕಿ ಇಂಡಿಯಾ ಲಿಮಿಟೆಡ್‌ ಎಂದು ಕರೆಯಲಾಗುತ್ತದೆ. ಈ ಕಾರಿನ ಮೊದಲ ಮಾಲಿಕರು ನವದೆಹಲಿಯ ಹರ್ಪಾಲ್‌ ಸಿಂಗ್‌. ಇವರು ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರಿಂದ ಕಾರಿನ ಕೀ ಪಡೆದುಕೊಂಡಿದ್ದರು. ಹರ್ಪಾಲ್‌ ಸಿಂಗ್‌ ಅವರು 2010 ರಲ್ಲಿ ಮರಣ ಹೊಂದುವವರೆಗೂ ಈ ಕಾರನ್ನು ಹೊಂದಿದ್ದರು ಎಂಬುದು ವಿಶೇಷ. ಈ ಕಾರಿನ ನೋಂದಣಿ ಸಂಖ್ಯೆಯು DIA 6479.

ಈ ಕಾರನ್ನು ದೆಹಲಿಯ ರಸ್ತೆಗಳಲ್ಲಿ ಓಡಿಸಲು ಅರ್ಹತೆ ಇಲ್ಲದ ಕಾರಣ ಸಿಂಗ್‌ ಅವರ ಕುಟುಂಬವು ಅದನ್ನು ಬಳಸುತ್ತಿರಲಿಲ್ಲ. ನಂತರ ಕಂಪನಿಯು ತನ್ನ ಮೊದಲ ಯಶಸ್ಸಿನ ಕಥೆಯಾಗಿ ಕಾರನ್ನು ಪ್ರಧಾನ ಕಛೇರಿಯಲ್ಲಿ ಪ್ರದರ್ಶನಕ್ಕೆ ಇಡಲು ನಿರ್ಧರಿಸಿತು. ಹಲವಾರು ಸುದ್ದಿಗಳ ಪ್ರಕಾರ ಅವಸಾನದ ಸ್ಥಿತಿಯಲ್ಲಿದ್ದ ಕಾರನ್ನು ಕಂಪನಿಯು ಮರುಸ್ಥಾಪಿಸಿದೆ.

ಜನಪ್ರಿಯ ಕಾರು
2004 ರ ವರೆಗೆ ಭಾರತದಲ್ಲಿ ಹೆಚ್ಚು ಮಾರಾಟವಾದ ಕಾರು ಮಾರುತಿ 800 ಆಗಿತ್ತು. ಮಾರುತಿ ಅಲ್ಟೊ ಪರಿಚಯಿಸುವವರೆಗೂ ಇದು ಜನಪ್ರಿಯತೆಯ ಉತ್ತುಂಗದಲ್ಲೆ ಇತ್ತು. 2010 ರಲ್ಲಿ ಕಂಪನಿಯ ಮಾರುತಿ ಅಲ್ಟೊವನ್ನು ಜನಪ್ರಿಯಗೊಳಿಸುವ ಸಲುವಾಗಿ ಮಾರುತಿ 800ನ ಉತ್ಪಾದನೆಯನ್ನು ನಿಲ್ಲಿಸಿತು. ವರದಿಯ ಪ್ರಕಾರ ಕಂಪನಿಯು ಭಾರತದಲ್ಲಿ 27 ಲಕ್ಷಕ್ಕೂ ಹೆಚ್ಚು ಯುನಿಟ್‌ಗಳನ್ನು ಮಾರಾಟ ಮಾಡಿದೆ ಎನ್ನಲಾಗುತ್ತಿದೆ.

ಇದನ್ನೂ ಓದಿ : LIC Policy : ಎಲ್‌ಐಸಿಯ ಈ ಪಾಲಿಸಿ ಮಾಡಿ; ತಿಂಗಳಿಗೆ 12,000 ರೂಪಾಯಿ ಪೆನ್ಷನ್‌ ಪಡೆಯಿರಿ

(First Maruti 800 Car displayed at maruti suzuki hq Haryana)

Comments are closed.