Rohit Sharma : ದುಬೈನಲ್ಲಿ ರೋಹಿತ್‌ ಶರ್ಮಾ ಕಿಕ್ ಸ್ಕೂಟರ್ ರೈಡಿಂಗ್, ವೀಡಿಯೋ ಸೂಪರ್

ದುಬೈ: (Rohit Sharma Kick Scooter) ಏಷ್ಯಾ ಕಪ್ ಟೂರ್ನಿಯಲ್ಲಿ ಭಾರತ ತಂಡದ ನಾಯಕತ್ವ ವಹಿಸಿರುವ ಹಿಟ್ ಮ್ಯಾನ್ ಖ್ಯಾತಿಯ ರೋಹಿತ್ ಶರ್ಮಾ, ದುಬೈನಲ್ಲಿ ಕಿಕ್ ಸ್ಕೂಟರ್ ರೈಡಿಂಗ್ ಮಾಡಿದ್ದಾರೆ. ಸೂಪರ್ ಸಂಡೇ ನಡೆಯಲಿರುವ ಪಾಕಿಸ್ತಾನ ವಿರುದ್ಧದ ಹೈವೋಲ್ಟೇಜ್ ಪಂದ್ಯದಲ್ಲಿ ಭಾರತ ತಂಡ ಸಜ್ಜಾಗುತ್ತಿದ್ದು, ದುಬೈ ಅಂತಾರಾಷ್ಟ್ರೀಯ ಕ್ರಿಕೆಟ್ ಮೈದಾನದಲ್ಲಿ ಕಠಿಣ ಅಭ್ಯಾಸ ನಡೆಸುತ್ತಿದೆ. ಗುರುವಾರದ ಅಭ್ಯಾಸ ಮುಗಿದ ಕೂಡಲೇ ನಾಯಕ ರೋಹಿತ್ ಶರ್ಮಾ ಕಿಕ್ ಸ್ಕೂಟರ್ ರೈಡಿಂಗ್ ಮಾಡಿದ್ದಾರೆ.

ಕ್ರೀಡಾಂಗಣದಲ್ಲಿ ಕಿಕ್ ಸ್ಕೂಟರ್ ಏರಿದ ರೋಹಿತ್ ಶರ್ಮಾ ಬೌಂಡರಿ ಗೆರೆಯ ಹೊರಗೆ ಮೈದಾನಕ್ಕೆ ಒಂದು ಸುತ್ತು ಹಾಕಿದ್ದಾರೆ. ಅಷ್ಟೇ ಅಲ್ಲ, ಮೈದಾನದ ಒಳಗೂ ಕಿಕ್ ಸ್ಕೂಟರ್ ರೈಡ್ ಮಾಡಿದ್ದರೆ. ಈ ವೀಡಿಯೊವನ್ನ ಬಿಸಿಸಿಐ ತನ್ನ ಟ್ವಿಟರ್’ನಲ್ಲಿ ಪ್ರಕಟಿಸಿದೆ.

ಏಷ್ಯಾ ಕಪ್ ಟಿ20 ಟೂರ್ನಿಯಲ್ಲಿ (Asia Cup 2022) ಭಾರತ ತಂಡ ಗ್ರೂಪ್ ‘ಎ’ನಲ್ಲಿ ಪಾಕಿಸ್ತಾನ ಮತ್ತು ಹಾಂಕಾಂಗ್ ತಂಡಗಳ ಜೊತೆ ಸ್ಥಾನ ಪಡೆದಿದೆ. ಶ್ರೀಲಂಕಾ, ಅಫ್ಘಾನಿಸ್ತಾನ ಮತ್ತು ಬಾಂಗ್ಲಾದೇಶ ತಂಡಗಳು ಗ್ರೂಪ್ ‘ಬಿ’ನಲ್ಲಿ ಕಾಣಿಸಿಕೊಂಡಿವೆ. ಪ್ರತೀ ತಂಡಗಳು ಲೀಗ್ ಹಂತದಲ್ಲಿ ತಲಾ ಎರಡು ಪಂದ್ಯಗಳನ್ನಾಡಲಿದ್ದು, ಎರಡೂ ಗ್ರೂಪ್’ಗಳಲ್ಲಿ ಅಗ್ರ ಎರಡು ಸ್ಥಾನ ಪಡೆಯುವ ಒಟ್ಟು ನಾಲ್ಕು ತಂಡದಳು ಸೂಪರ್-4 ಹಂತಕ್ಕೇರಲಿವೆ. ಸೂಪರ್-4 ಹಂತದಲ್ಲಿ ನಾಲ್ಕೂ ತಂಡಗಳು ತಲಾ ಒಂದು ಬಾರಿ ಮುಖಾಮುಖಿಯಾಗಲಿದ್ದು, ಇಲ್ಲಿನ ಟಾಪ್-2 ತಂಡಗಳು ಫೈನಲ್ ಪ್ರವೇಶಿಸಲಿವೆ. ಫೈನಲ್ ಪಂದ್ಯ ಸೆಪ್ಟೆಂಬರ್ 11ರಂದು ದುಬೈ ಅಂತಾರಾಷ್ಟ್ರೀಯ ಕ್ರಿಕೆಟ್ ಮೈದಾನದಲ್ಲಿ ನಡೆಯಲಿದೆ.

ಏಷ್ಯಾಕಪ್ ಟಿ20 (Asia Cup 2022) ಟೂರ್ನಿಯ ವೇಳಾಪಟ್ಟಿ
Group A
ಭಾರತ Vs ಪಾಕಿಸ್ತಾನ: 28 ಆಗಸ್ಟ್, ದುಬೈ
ಭಾರತ Vs ಹಾಂಕಾಂಗ್ : 31 ಆಗಸ್ಟ್, ದುಬೈ
ಪಾಕಿಸ್ತಾನ Vs ಹಾಂಕಾಂಗ್: 02 ಸೆಪ್ಟೆಂಬರ್, ಶಾರ್ಜಾ

Group B
ಶ್ರೀಲಂಕಾ Vs ಅಫ್ಘಾನಿಸ್ತಾನ: 27 ಆಗಸ್ಟ್, ದುಬೈ
ಬಾಂಗ್ಲಾದೇಶ Vs ಅಫ್ಘಾನಿಸ್ತಾನ: 30 ಆಗಸ್ಟ್, ಶಾರ್ಜಾ
ಶ್ರೀಲಂಕಾ Vs ಬಾಂಗ್ಲಾದೇಶ: 01 ಸೆಪ್ಟೆಂಬರ್, ದುಬೈ

ಸೂಪರ್-4 ಹಂತ
B1 Vs B2: 03 ಸೆಪ್ಟೆಂಬರ್, ಶಾರ್ಜಾ
A1 Vs A2: 04 ಸೆಪ್ಟೆಂಬರ್, ದುಬೈ
A1 Vs B1: 06 ಸೆಪ್ಟೆಂಬರ್, ದುಬೈ
A2 Vs B2: 07 ಸೆಪ್ಟೆಂಬರ್, ದುಬೈ
A1 Vs B2: 08 ಸೆಪ್ಟೆಂಬರ್, ದುಬೈ
B1 Vs A2: 09 ಸೆಪ್ಟೆಂಬರ್, ದುಬೈ
ಫೈನಲ್: 11 ಸೆಪ್ಟೆಂಬರ್, ದುಬೈ

ಪಂದ್ಯಗಳ ಆರಂಭ: ರಾತ್ರಿ 7.30ಕ್ಕೆ (ಭಾರತೀಯ ಕಾಲಮಾನ)
ನೇರ ಪ್ರಸಾರ: ಸ್ಟಾರ್ ಸ್ಪೋರ್ಟ್ಸ್ ನೆಟ್’ವರ್ಕ್ (Star Sports network)
ಲೈವ್ ಸ್ಟ್ರೀಮಿಂಗ್: ಡಿಸ್ನಿ+ಹಾಟ್’ಸ್ಟಾರ್ (Disney + Hotstar)

ಇದನ್ನೂ ಓದಿ : Sheldon Jackson: “ನನ್ನ ವಯಸ್ಸು 35, 75 ಅಲ್ಲ” ಅವಕಾಶ ಸಿಗದಿದ್ದಕ್ಕೆ ಬಿಸಿಸಿಐ ವಿರುದ್ಧ ಆಕ್ರೋಶ ಹೊರ ಹಾಕಿದ ಕ್ರಿಕೆಟರ್

ಇದನ್ನೂ ಓದಿ : Shaheen Shah Afridi : ಕಾಲಿಗೆ ಸ್ಟ್ರೆಚರ್ ಕಟ್ಟಿಕೊಂಡಿದ್ದ ಪಾಕ್ ವೇಗಿ ಅಫ್ರಿದಿಯನ್ನು ಭೇಟಿ ಮಾಡಿದ ಕೊಹ್ಲಿ, ರಾಹುಲ್

Rohit Sharma Kick Scooter Riding In Dubai Video Viral

Comments are closed.