Gardening Tips : ನಿಮ್ಮ ಗಾರ್ಡನ್‌ನಲ್ಲಿಯ ಗಿಡಗಳನ್ನು ರಕ್ಷಿಸುವುದು ಹೇಗೆ ಎಂಬ ಚಿಂತೆ ಕಾಡುತ್ತಿದೆಯೇ? ಚಿಂತಿಸಬೇಡಿ, ಇಲ್ಲಿದೆ ಅದಕ್ಕೆ ಪರಿಹಾರ

ಜಾಗತಿಕ ಸಾಂಕ್ರಾಮಿಕ ರೋಗ ಕೋವಿಡ್‌ ಬಂದಾಗ ನಾವೆಲ್ಲರೂ ಲಾಕ್‌ಡೌನ್‌ ವೇಳೆಯಲ್ಲಿ ಮನೆಯಲ್ಲಿಯೇ ಕಳೆಯವು ಅನಿವಾರ್ಯ ಉಂಟಾಯಿತು. ನಮ್ಮಲ್ಲಿ ಹಲವರು ಅಡುಗೆ ಮಾಡುವುದು, ತೂಕ ಇಳಿಸುವ ಪ್ರಯಾಣ, ಅಥವಾ ಹಳೆಯ ಹವ್ಯಾಸಗಳಿಗೆ ಕೈಹಾಕುವುದು ಹೀಗೆ ಮುಂತಾದವುಗಳನ್ನು ಮಾಡತೊಡಗಿದರು. ಆದರೆ ಕೆಲವರು ಗಾರ್ಡನ್‌ ಅಥವಾ ಹೂದೋಟಗಳ(Gardening Tips) ಕಡೆಗೆ ಗಮನ ಹರಿಸಿದರು. ಅವರು ಮಾಡಿದ್ದು ಸರಿಯೆ. ಏಕೆಂದರೆ ಗಿಡಗಳು ತಾವು ಬೆಳೆದ ಜಾಗಕ್ಕೆ ಜೀವ ತುಂಬುತ್ತವೆ.

ಆದರೆ, ಈಗ ನಮ್ಮ ವರ್ಕ್‌ ಫ್ರಾಮ್‌ ಹೋಮ್‌ ದಿನಗಳು ಮುಗಿದಿದೆ ಮತ್ತು ದುಃಖದ ಸಂಗತಿಯೆಂದರೆ ಹಲವರು ಗಿಡಗಳನ್ನು ಸಾಯಿಸಿದವರು ಎಂಬ ಹಣೆಪಟ್ಟಿಯುನ್ನು ಪಡೆದುಕೊಂಡಿದ್ದಾರೆ. ಏಕೆಂದರೆ, ಅವರಿಗೆ ಮೊದಲಿನ ತರಹ ಗಿಡಗಳನ್ನು ನೋಡಿಕೊಳ್ಳಲು ಸಮಯ ಸಿಗುತ್ತಲ್ಲ. ಅದಕ್ಕಾಗಿಯೇ ನಾವು ನಿಮಗೆ ಕೆಲವು ಗಾರ್ಡನ್‌ ಟಿಪ್ಸ್‌ ಹೇಳುತ್ತಿದ್ದೇವೆ. ಅದನ್ನು ಅನುಸರಿಸಿ, ಇಡೀ ದಿವಸ ಗಾರ್ಡನ್‌ಗೆ ಸಮಯ ಮೀಸಲಡಿದೇ ನಿಮ್ಮ ಗಿಡಗಳನ್ನು ಜೀವಂತವಾಗಿರಿಸಿಕೊಳ್ಳಿ.

ನಿಧಾನವಾಗಿ ಪ್ರಾರಂಭಿಸಿ:
ನೀವು ಗಾರ್ಡನಿಂಗ್‌ನಲ್ಲಿ ಈಗ ತಾನೆ ತೊಡಗಿಸಿಕೊಂಡವರಾಗಿದ್ದರೆ ಮತ್ತು ಹಲವು ಗಂಟೆ ಅದಕ್ಕಾಗಿ ಸಮಯ ಮೀಸಲಿಡಲು ಸಾಧ್ಯವಾಗದಿದ್ದರೆ, ಮನಿ ಪ್ಲಾಂಟ್‌, ಸ್ನೇಕ್‌ ಪ್ಲಾಂಟ್‌ ಮತ್ತು ಅಲೋವೆರಾಗಳಂತಹ ಅಷ್ಟು ಸುಲಭವಾಗಿ ಸಾಯದ ಗಿಡಗಳನ್ನು ಆಯ್ದುಕೊಳ್ಳುವುದು ಉತ್ತಮ. ಈ ಗಿಡಗಳಿಗೆ ಹೆಚ್ಚಿನ ಗಮನ ಅಗತ್ಯವಿಲ್ಲ. ಅವುಗಳಿಗೆ ಪ್ರತಿದಿನ ನೀರು ಹಾಕುವ ಅಗತ್ಯವಿಲ್ಲ, ಮತ್ತು ಅವು ಮನೆಯೊಳಗೂ ಬದಕುಬಲ್ಲವು.

ನೀರಿನ ಮಟ್ಟ ಗಮನಿಸಿ:
ಗಿಡಗಳಿಗೆ ನೀರು ಹಾಕುವಾಗ ಪಾಟ್‌ನಲ್ಲಿಯ ನೀರಿನ ಮಟ್ಟವನ್ನು ಪರೀಕ್ಷಿಸುವುದು ಅತೀ ಅವಶ್ಯಕ. ಏಕೆದಂರೆ, ಅತಿಯಾಗಿ ನೀರುಹಾಕುವುದರಿಂದ ಗಿಡಗಳು ಸಾಯುತ್ತವೆ. ಒಳ್ಳೆಯ ವಿಚಾರವೇನೆಂದರೆ, ಯಾವಾಗಲೂ ನಿಮ್ಮ ಗಿಡಗಳು ಅವುಗಳಿಗೆ ಏನಾದರೂ ತೊಂದರೆಯಾದರೆ ನಿಮಗೆ ಸಂಕೇತವನ್ನು ಕೊಡುತ್ತದೆ. ಗಿಡದ ಆರೈಕೆ ಮಾಡುವಾಗ, ಅವುಗಳ ಎಲೆಗಳನ್ನು ಗಮನಿಸುತ್ತಿರುವುದು ಒಳ್ಳೆಯ ಅಭ್ಯಾಸ. ಪಾಟ್‌ನಲ್ಲಿಯ ಮಣ್ಣು ತೇವಾಂಶದಿಂದ ಕೂಡಿದ್ದರೆ, ನೀರು ಹಾಕಬೇಡಿ.

ಸೂರ್ಯನ ಬಿಸಿಲಿಗೆ ಇಡಿ:
ನಿಮಗೆ ಒಳಾಂಗಣ ಗಿಡಗಳನ್ನೇ ಬೆಳೆಸಿದ್ದೀರಿ ಎಂದಾದರೂ ಸಹ ಪಾಟ್‌ಗಳನ್ನು ನಿಮ್ಮ ಮನೆಯಲ್ಲಿ ಸೂರ್ಯನ ಬೆಳಕು ಬರುವ ಉತ್ತಮ ಜಾಗವಾದ ಕಿಟಕಿ ಅಥವಾ ಬಾಲ್ಕನಿಯಲ್ಲಿ ಇಡಿ. ಆದರೆ ಅತಿಯಾದ ಸೂರ್ಯನ ಶಾಖವು ಗಿಡಗಳನ್ನು ಸುಡುವುದು ಎಂಬುದು ತಿಳಿದಿರಲಿ. ಆದ್ದರಿಂದ ಅತಿಯಾದ ಶಾಖದಿಂದ ಗಿಡಗಳನ್ನು ರಕ್ಷಿಸಿ.

ಕಳೆಗಳನ್ನು ತೆಗೆಯಿರಿ:
ಕೆಲವು ದಿವಸಗಳ ನಂತರ, ಪಾಟ್‌ಗಳಲ್ಲಿ ಹೊಸದಾದ ಅಥವಾ ಬೇರೆ ತರಹದ ಎಲೆಗಳನ್ನು ಕಾಣಬಹುದು. ಅವುಗಳನ್ನು ಕಳೆ ಎನ್ನುತ್ತಾರೆ. ಈ ಕಳೆಗಳನ್ನು ಗಾರ್ಡನ್‌ ಕಿಲ್ಲರ್‍ಸ ಎನ್ನುತ್ತಾರೆ. ಅವುಗಳನ್ನು ಆದಷ್ಟು ಬೇಗ ತೆಗೆದುಹಾಕಿ. ಏಕೆಂದರೆ ಅವು ನಿಮ್ಮ ಗಿಡಗಳ ಮೂಲ ಬೇರುಗಳನ್ನು ಉಸಿರುಗಟ್ಟಿಸುವ, ಕೀಟಗಳಿಗೆ ಆಶ್ರಯ ನೀಡುವ ಮತ್ತು ಮುಖ್ಯ ಗಿಡದ ಪೋಷಣೆಯನ್ನು ಕುಂದಿಸುವ ಸಾಮರ್ಥವನ್ನು ಹೊಂದಿವೆ.

ಇದನ್ನೂ ಓದಿ : House Cooling Tips : ಬೇಸಿಗೆಯಲ್ಲಿ ನಿಮ್ಮ ಮನೆಯ ಒಳಾಂಗಣವನ್ನು ತಂಪಾಗಿರಿಸಬೇಕೆ? ಅದಕ್ಕೆ ಇಲ್ಲಿದೆ ಟಿಪ್ಸ್‌

ಇದನ್ನೂ ಓದಿ : protect your kids from heatwaves : ಉಷ್ಣ ಅಲೆಯಿಂದ ಮಕ್ಕಳನ್ನು ರಕ್ಷಿಸಲು ಪೋಷಕರಿಗೆ ಇಲ್ಲಿದೆ ಸಲಹೆ

(Gardening Tips how to protect your loved plants)

Comments are closed.