ಸೂರ್ಯಗ್ರಹಣ 2023 : ಅಕ್ಟೋಬರ್ 14ರಂದು ನಡೆಯುವ ವರ್ಷದ ಕೊನೆಯ ಸೂರ್ಯಗ್ರಹಣ ಭಾರತದಲ್ಲಿ ಗೋಚರಿಸುತ್ತಾ ?

ಅಕ್ಟೋಬರ್ 14 ರಂದು ಸಂಭವಿಸುವ ಸೂರ್ಯಗ್ರಹಣವು (Solar eclipse )ಭಾರತದಲ್ಲಿ ಗೋಚರಿಸುವುದಿಲ್ಲ. ಇದೇ ತಿಂಗಳಲ್ಲಿ ಸೂರ್ಯಗ್ರಹಣ ಹಾಗೂ ಚಂದ್ರಗ್ರಹಣ ಸಂಭವಿಸುತ್ತಿರುವುದು ವಿಶೇಷ. ಖಗೋಳದಲ್ಲಿ ಅಕ್ಟೋಬರ್‌ ತಿಂಗಳಿನಲ್ಲಿ 2 ಅದ್ಬುತಗಳಿಗೆ ಸಾಕ್ಷಿಯಾಗಲಿದೆ.

ಅಕ್ಟೋಬರ್ 14 ರಂದು ಸಂಭವಿಸುವ ಸೂರ್ಯಗ್ರಹಣವು (Solar eclipse )ಭಾರತದಲ್ಲಿ ಗೋಚರಿಸುವುದಿಲ್ಲ. ಇದೇ ತಿಂಗಳಲ್ಲಿ ಸೂರ್ಯಗ್ರಹಣ ಹಾಗೂ ಚಂದ್ರಗ್ರಹಣ ಸಂಭವಿಸುತ್ತಿರುವುದು ವಿಶೇಷ. ಖಗೋಳದಲ್ಲಿ ಅಕ್ಟೋಬರ್‌ ತಿಂಗಳಿನಲ್ಲಿ 2 ಅದ್ಬುತಗಳಿಗೆ ಸಾಕ್ಷಿಯಾಗಲಿದೆ. ಅಕ್ಟೋಬರ್‌ 14 ರಂದು ಸೂರ್ಯಗ್ರಹಣ ಸಂಭವಿಸುತ್ತಿದ್ದು, ಈ ವರ್ಷದ ಕೊನೆಯ ಸೂರ್ಯಗ್ರಹಣವಾಗಿರಲಿದೆ. ಅಲ್ಲದೇ ಇದೇ ತಿಂಗಳಲ್ಲಿ ಚಂದ್ರಗ್ರಹಣ ಸಂಭವಿಸುತ್ತಿರುವುದು ವಿಶೇಷ.

Solar eclipse 2023 Will the last solar eclipse ring of fire eclipse 2023 on October 14 be Visible In india
Image Credit to Original Source

ರಿಂಗ್‌ ಆಫ್‌ ಫೈರ್‌ (ring of fire eclipse 2023) ಎಂದು ಕರೆಯಲಾಗುವ ಸೂರ್ಯಗ್ರಹಣವು ಭಾರತದಲ್ಲಿ ಗೋಚರಿಸುವುದಿಲ್ಲ. ಇದೊಂದು ವಿಶೇಷವಾಗಿರುವ ಸೂರ್ಯಗ್ರಹಣ ಎಂದೇ ಪರಿಗಣಿಸಲಾಗುತ್ತದೆ. ಈ ಸೂರ್ಯಗ್ರಹಣದಲ್ಲಿ ಸೂರ್ಯನು ಚಂದ್ರನ ಸುತ್ತ ಬೆಂಕಿಯ ಉಂಗುರವನ್ನು ರಚಿಸುತ್ತಾನೆ. ಭಾರತದಲ್ಲಿ ಈ ಗ್ರಹಣ ಗೋಚರವಾಗದೇ ಇದ್ದರೂ ಕೂಡ ಪಶ್ಚಿಮ ಗೋಳಾರ್ಧದ ಜನರು ಈ ಗ್ರಹಣವನ್ನು ವಿಕ್ಷಿಸಲಿದ್ದಾರೆ.

ಇದನ್ನೂ ಓದಿ : ಒಂದೇ ಹೆಣ್ಣು ಮಗಳಿರುವ ದಂಪತಿಗಳಿಗೆ ಸಿಗುತ್ತೆ 2 ಲಕ್ಷ ರೂ.: ಸರಕಾರದಿಂದ ಘೋಷಣೆಯಾಯ್ತು ಹೊಸ ಯೋಜನೆ

ಸೂರ್ಯಗ್ರಹಣವು ಈ ಬಾರಿ ಅಮೇರಿಕಾದಲ್ಲಿ ಗೋಚರಿಸಲಿದೆ. ಅದ್ರಲ್ಲೂ ಒರೆಗಾನ್‌ನಿಂದ ಟೆಕ್ನಾಸ್ ನಲ್ಲಿ ಕಾಣಿಸಲಿದೆ. ನಂತರದಲ್ಲಿ ಮೆಕ್ಸಿಕೋದ ಯುಕಾಟಾನ್ ಪೆನಿನ್ಸುಲಾ, ಬೆಲೀಜ್, ಗ್ವಾಟೆಮಾಲಾ, ಹೊಂಡುರಾಸ್, ನಿಕರಾಗುವಾ, ಕೋಸ್ಟರಿಕಾ, ಪನಾಮ, ಕೊಲಂಬಿಯಾ ಮತ್ತು ಬ್ರೆಜಿಲ್‌ನ ಭಾಗಗಳಲ್ಲಿ ಗ್ರಹಣ ಗೋಚರಿಸಲಿದೆ.

ಅಮೇರಿಕಾದ ಅನಾಸ್ಕಾದಿಂದ ಅರ್ಜೆಂಟೀನಾದ ವರೆಗೆ ಸೂರ್ಯಗ್ರಹಣ ಗೋಚರಿಸಲಿದೆ. ಅಕ್ಟೋಬರ್ 14, ಶನಿವಾರದಂದು ಸೂರ್ಯಗ್ರಹಣವು ಒಂದು ಸ್ಥಳದಲ್ಲಿ ಗೋಚರಿಸಿ ಮತ್ತೊಂದು ಸ್ಥಳದಲ್ಲಿ ಕೊನೆಗೊಳ್ಳಲಿದೆ ಎಂದು ನಾಸಾ ಹೇಳಿಕೆ ನೀಡಿದೆ. ನಾಸಾ ನೀಡಿರುವ ಮಾಹಿತಿಯ ಪ್ರಕಾರ ಗ್ರಹಣವು ಒರೆಗಾನ್‌ನಲ್ಲಿ ಬೆಳಿಗ್ಗೆ 9:13 ಗಂಟೆಗೆ (ಪಿಡಿಟಿ) ಮತ್ತು ಟೆಕ್ಸಾಸ್‌ನಲ್ಲಿ ಮಧ್ಯಾಹ್ನ 12:03 ಗಂಟೆಗೆ (ಸಿಡಿಟಿ) ಕೊನೆಗೊಳ್ಳುತ್ತದೆ.

ಇದನ್ನೂ ಓದಿ : ಹೊಸ ಕಾರ್ಮಿಕ ನೀತಿ : ವಾರಕ್ಕೆ ಮೂರೂವರೆ ದಿನ ಕೆಲಸ, ಮೂರೂವರೆ ದಿನ ರಜೆ

ಅಕ್ಟೋಬರ್‌ ೧೪ರಂದು ಸಂಭವಿಸುವ ಸೂರ್ಯಗ್ರಹಣವು ಅತ್ಯಂತ ಅಪರೂಪದ ಸೂರ್ಯಗ್ರಹಣವಾಗಿದೆ. ಈ ಗ್ರಹಣವನ್ನು ಮತ್ತೆ ನೋಡಲು ಮುಂದಿನ ೧೫ ವರ್ಷಗಳ ಕಾಲ ಕಾಯಬೇಕಾಗಿದೆ. ಇದೇ ಗ್ರಹಣವು ಜೂನ್ 21, 2039 ರಂದು ಯುಎಸ್‌‌ನಲ್ಲಿ ಮುಂದಿನ ಸೂರ್ಯಗ್ರಹಣ ಸಂಭವಿಸಲಿದೆ.

Solar eclipse 2023 Will the last solar eclipse ring of fire eclipse 2023 on October 14 be Visible In india
Image Credit to Original Source

ಆದರೆ ಸೂರ್ಯಗ್ರಹಣವನ್ನು ಬರಿಗಣ್ಣಿನಿಂದ ವೀಕ್ಷಿಸಲು ಅವಕಾಶವಿಲ್ಲ. ಸೌರ ಮಂಡಲದಲ್ಲಿನ ಕೌತಕವನ್ನು ವೀಕ್ಷಿಸಲು ವಿಶೇಷ ಯಂತ್ರಗಳನ್ನು ಬಳಸಿ ಸೂರ್ಯಗ್ರಹಣವನ್ನು ವೀಕ್ಷಿಸಬಹುದಾಗಿದೆ. ಗ್ರಹಣದ ಸಮಯದಲ್ಲಿ ನೇರವಾಗಿ ಸೂರ್ಯನನ್ನು ವೀಕ್ಷಣೆ ಮಾಡುವುದು ಸುರಕ್ಷಿತವಲ್ಲ.

ಇದನ್ನೂ ಓದಿ : ಸಪ್ತಪದಿ ತುಳಿಯದಿದ್ದರೆ ಹಿಂದೂ ವಿವಾಹ ಮಾನ್ಯವಲ್ಲ: ಹೈಕೋರ್ಟ್ ಆದೇಶ

ಸೂರ್ಯಗ್ರಹಣ ಗೋಚರಿಸಿದ ಕೆಲವೇ ದಿನಗಳಲ್ಲಿ ಚಂದ್ರಗ್ರಹಣವು ಸಂಭವಿಸಲಿದೆ. ಈ ವರ್ಷದ ಎರಡನೇ ಹಾಗೂ ಕೊನೆಯ ಸೂರ್ಯಗ್ರಹಣವು ಅಕ್ಟೋಬರ್ 28, 29 ರಂದು ಸಂಭವಿಸುತ್ತದೆ. ಈ ಗ್ರಹಣವು ಭಾರತದಲ್ಲಿ ಕಂಡು ಬರಲಿದೆ. ಚಂದ್ರನು ಭೂಮಿಯ ನೆರಳಿನ ಮೂಲಕ 1.06 ಮತ್ತು 2.23 ಭಾರತೀಯ ಪ್ರಮಾಣಿತ ಸಮಯದ ನಡುವೆ ಹಾದುಹೋದಾಗ ಸ್ಥಿರ ಚಂದ್ರಗ್ರಹಣ ಸಂಭವಿಸಿದೆ.

ಸೂರ್ಯಗ್ರಹಣ ಹೇಗೆ ಸಂಭವಿಸುತ್ತದೆ ?

ಸಾಮಾನ್ಯವಾಗಿ ಸೂರ್ಯಗ್ರಹಣವು ಸೌರ ಮಂಡಲದಲ್ಲಿ ನಡೆಯುವ ಅದ್ಬುತ ಖಗೋಳ ಪ್ರಕ್ರಿಯೆ. ಸೂರ್ಯ, ಚಂದ್ರ ಹಾಗೂ ಭೂಮಿಯ ನಡುವೆ ಈ ಕ್ರೀಯೆ ಸಂಭವಿಸುತ್ತದೆ. ಅದ್ರಲ್ಲೂ ಅಮಾವಾಸ್ಯೆಯ ದಿನದಂದು ಮಾತ್ರವೇ ಸೂರ್ಯಗ್ರಹಣ ಸಂಭವಿಸಲು ಸಾಧ್ಯ. ಸೂರ್ಯ ಮತ್ತು ಭೂಮಿಯ ನಡುವೆ ಚಂದ್ರ ಬಂದಾಗ ಸೂರ್ಯ ಗ್ರಹಣ ಸಂಭವಿಸುತ್ತದೆ.

Solar eclipse 2023 Will the last solar eclipse ring of fire eclipse 2023 on October 14 be Visible In india

Comments are closed.