Monday the worst day:‘ಸೋಮವಾರ ವಾರದ ಅತ್ಯಂತ ಕೆಟ್ಟ ದಿನ’ : ಗಿನ್ನೆಸ್​ ವಿಶ್ವ ದಾಖಲೆಯಲ್ಲಿ ಅಧಿಕೃತ ಘೋಷಣೆ

Monday the worst day : ನೀವು ಕೂಡ ಒಂಬತ್ತರಿಂದ ಐದು ಗಂಟೆಗಳವರೆಗೆ ಕಚೇರಿಯಲ್ಲಿ ಕೆಲಸ ಮಾಡುವವರಾಗಿದ್ದರೆ ನಿಮಗೆ ಸೋಮವಾರ ಎನ್ನುವುದು ಎಷ್ಟು ಕಷ್ಟದ ದಿನ ಎನ್ನುವುದನ್ನು ಹೆಚ್ಚಾಗಿ ವಿವರಿಸಿ ಹೇಳಬೇಕಾಗಿಲ್ಲ. ವೀಕೆಂಡ್​ನಲ್ಲಿ ಸಖತ್​ ಮಜಾ ಮಾಡಿ ಸೋಮವಾರ ಎಂದಿನಂತೆ ಕಚೇರಿ ಕೆಲಸದಲ್ಲಿ ತೊಡಗಿಸಿಕೊಳ್ಳುವುದು ಅನೇಕರ ಪಾಲಿಗೆ ದುಸ್ವಪ್ನವೇ ಸರಿ. ಹೀಗಾಗಿ ಬಹುತೇಕ ಉದ್ಯೋಗಿಗಳು ಸೋಮವಾರವನ್ನು ದ್ವೇಷಿಸುತ್ತಾರೆ. ಸೋಮವಾರ ಬಂತು ಎಂದರೆ ಸಾಕು ಯಾಕಾದರೂ ಈ ದಿನ ಬಂತೋ ಎಂದು ಗೋಳಾಡುವವರಿದ್ದಾರೆ.


ಸೋಮವಾರದ ಈ ಗೋಳು ಗಿನ್ನೆಸ್​ ವಿಶ್ವ ದಾಖಲೆ ಪುಸ್ತಕಕ್ಕೂ ಅರ್ಥವಾದಂತಿದೆ. ಹೀಗಾಗಿ ಗಿನ್ನೆಸ್​ ವಿಶ್ವ ದಾಖಲೆಯಲ್ಲಿಯೂ ಸೋಮವಾರವನ್ನು ಅತ್ಯಂತ ಕೆಟ್ಟ ದಿನ ಎಂದು ಅಧಿಕೃತವಾಗಿ ಘೋಷಣೆ ಮಾಡಲಾಗಿದೆ. ಗಿನ್ನೆಸ್​ ವಿಶ್ವ ದಾಖಲೆಯೇ ಸೋಮವಾರವನ್ನು ಕೆಟ್ಟ ದಿನ ಎಂದು ಘೋಷಿಸಿದ ಬಳಿಕ ನೆಟ್ಟಿಗರು ಕೂಡ ಇದಕ್ಕೆ ಬೆಂಬಲ ನೀಡಿದ್ದು ತಮಗೆ ಸೋಮವಾರ ಯಾಕೆ ಕಷ್ಟ ಅನ್ನೋದನ್ನು ವಿವರಿಸಿದ್ದಾರೆ.


ನಾವು ಸೋಮವಾರವನ್ನು ವಾರದ ಅತ್ಯಂತ ಕೆಟ್ಟ ದಿನ ಎಂದು ಘೋಷಿಸುತ್ತಿದ್ದೇವೆ ಎಂದು ಗಿನ್ನೆಸ್​ ವಿಶ್ವ ದಾಖಲೆಯು ಅಧಿಕೃತ ಪೇಜ್​ನಲ್ಲಿ ಘೋಷಣೆ ಮಾಡಲಾಗಿದೆ. ಗಿನ್ನೆಸ್​ ವಿಶ್ವ ದಾಖಲೆಯ ಈ ಟ್ವೀಟ್​ಗೆ ವ್ಯಾಪಕ ಪ್ರತಿಕ್ರಿಯೆ ವ್ಯಕ್ತವಾಗಿದ್ದು 4.28 ಲಕ್ಷ ಲೈಕ್ಸ್​ ಹಾಗೂ 79 ಸಾವಿರಕ್ಕೂ ಅಧಿಕ ರಿಟ್ವೀಟ್​ಗಳನ್ನು ಸಂಪಾದಿಸಿದೆ.


ಇದೇ ಕಾರಣಕ್ಕೆ ನಾನು ಸೋಮವಾರ ರಜೆ ತೆಗೆದುಕೊಳ್ಳುತ್ತೇನೆ ಅಂತಾ ಒಬ್ಬರು ಕಮೆಂಟ್​ ಮಾಡಿದ್ದಾರೆ. ಮತ್ತೊಬ್ಬರು ಬುಧವಾರದ ಬಗ್ಗೆ ಏನು ಹೇಳುತ್ತೀರಿ..? ಇದು ನಿಮಗೆ ವಿಚಿತ್ರ ಎನಿಸಬಹುದು ಎಂದು ಬರೆದುಕೊಂಡಿದ್ದಾರೆ. ಸೋಮವಾರವನ್ನು ಬ್ಯಾನ್​ ಮಾಡೋಣ. ಆಗ ನಮಗೆ ರವಿವಾರವಾದ ಬಳಿಕ ಸೀದಾ ಮಂಗಳವಾರ ಸಿಗುತ್ತೆ ಅಂತಾ ಇನ್ನೊಬ್ಬರು ತಮ್ಮ ಅಭಿಪ್ರಾಯವನ್ನು ಶೇರ್​ ಮಾಡಿದ್ದಾರೆ. ಈ ರೀತಿಯಾಗಿ ಅನೇಕರು ತರಹೇವಾರಿ ರೀತಿಯಲ್ಲಿ ಗಿನ್ನೆಸ್​ ವಿಶ್ವ ದಾಖಲೆಯ ಈ ಅಧಿಕೃತ ಘೋಷಣೆಗೆ ತಮ್ಮ ಬೆಂಬಲವನ್ನು ಸೂಚಿಸಿದ್ದಾರೆ.

ಇದನ್ನು ಓದಿ : India vs New Zealand playing XI : ನಾಳೆ ಭಾರತ Vs ನ್ಯೂಜಿಲೆಂಡ್ ಅಭ್ಯಾಸ ಪಂದ್ಯ, ಇಲ್ಲಿದೆ ಮ್ಯಾಚ್ ಟೈಮಿಂಗ್ಸ್, ಪ್ಲೇಯಿಂಗ್ XI ಡೀಟೇಲ್ಸ್

ಇದನ್ನೂ ಓದಿ : Third FIR registered :ಮುರುಘಾ ಶರಣರಿಗೆ ಮತ್ತೊಂದು ಆಘಾತ : ಗ್ರಾಮೀಣ ಠಾಣೆಯಲ್ಲಿ ಶ್ರೀಗಳ ವಿರುದ್ಧ ದಾಖಲಾಯ್ತು ಮೂರನೇ ಎಫ್​ಐಆರ್​

Guinness World Records declares Monday the worst day of the week. Netizens react

Comments are closed.