Sprouted Seeds : ನಿಮಗೆ ಪ್ರೊಟೀನ್‌ ಅಗತ್ಯವಿದೆಯೇ; ಹಾಗಾದರೆ ಮೊಳಕೆಯೊಡೆದ ಕಾಳು ತಿನ್ನಿ

ಮೊಳಕೆಯೊಡೆದ ಕಾಳುಗಳು (Sprouted Seeds) ಎಲ್ಲರಿಗೂ ಇಷ್ಟವೇ. ಸಾಮಾನ್ಯವಾಗಿ ಹೆಸರು ಕಾಳು, ಮಡಿಕೆ ಕಾಳು, ಕಡ್ಲೆಕಾಳು, ಹುರುಳಿಕಾಳು ಮುಂತಾದವುಗಳನ್ನು ಮೊಳಕೆ ತರಿಸುತ್ತಾರೆ. ಇದರಿಂದ ತಯಾರಿಸುವ ಸಲಾಡ್‌, ಪಲ್ಯ, ಸಾಗುಗಳು ಚಪಾತಿ, ದೋಸೆ, ಪೂರಿ ಎಲ್ಲವುಗಳಿಗೂ ಹೊಂದಿಕೆಯಾಗುತ್ತದೆ. ಕೆಲವರು ಮೊಳಕೆಯೊಡೆದ ಕಾಳುಗಳಿಗೆ ಸ್ವಲ್ಪ ಉಪ್ಪು ಮತ್ತು ಪೆಪ್ಪರ್‌ ಪುಡಿ ಸೇರಿಸಿ ಸ್ನಾಕ್ಸ್‌ ರೀತಿಯಲ್ಲಿ ಸೇವಿಸುತ್ತಾರೆ.

ಮೊಳಕೆಯೊಡದ ಕಾಳುಗಳು ಬಹಳ ಉತ್ತಮ ಎಂದು ಪರಿಗಣಿಸಲಾಗಿದೆ. ಅವುಗಳನ್ನು ದಿನದ ಯಾವುದೇ ಸಮಯದಲ್ಲಿ ಸೇವಿಸಬಹುದು. ಅವು ಹೊಟ್ಟೆ ತುಂಬಿಸಿ, ಹಸಿವೆಯನ್ನು ನೀಗಿಸುತ್ತದೆ. ಮೊಳಕೆಯೊಡೆದ ಕಾಳುಗಳನ್ನು ಸೂಪರ್‌ಫುಡ್‌ ಎಂದು ಕರೆದರೆ ಆಶ್ಚರ್ಯವಿಲ್ಲ. ಪ್ರೋಟೀನ್, ಕ್ಯಾಲ್ಸಿಯಂ ಮತ್ತು ಫೈಬರ್ ಹೊಂದಿರುವ ಕಾಳುಗಳು ಬಹಳ ಪ್ರಯೋಜನಕಾರಿಯಾಗಿದೆ ಮತ್ತು ದೇಹಕ್ಕೆ ಅವಶ್ಯಕವಾಗಿದೆ. ನೀರಿನಲ್ಲಿ ನೆನೆಸಿ, ಮೊಳಕೆಯೊಡೆದಿರುವ ಕಾಳುಗಳು ಸುಲಭವಾಗಿ ಜೀರ್ಣವಾಗಿ, ಶಕ್ತಿಯನ್ನು ಬಿಡುಗಡೆ ಮಾಡುತ್ತದೆ. ಮೊಳಕೆಯೊಡೆದ ಕಾಳುಗಳಿಂದ ಹಲವಾರು ಪ್ರಯೋಜನಗಳಿವೆ. ಮೊಳಕೆಯೊಡೆದ ಕಾಳುಗಳನ್ನು ನಿತ್ಯದ ಡಯಟ್‌ನಲ್ಲಿ ಸೇರಿಸಿಕೊಳ್ಳುವುದರಿಂದ ಅನೇಕ ಪ್ರಯೋಜನಗಳನ್ನು ಪಡೆಯಬಹುದಾಗಿದೆ.

ಕಡಿಮೆ ಕ್ಯಾಲೋರಿ ಹೊಂದಿರುತ್ತವೆ :
ಹೆಚ್ಚಿನ ಕ್ಯಾಲೋರಿ ಹೊಂದಿರುವ ಆಹಾರಗಳು ದೇಹದ ತೂಕವನ್ನು ಹೆಚ್ಚಿಸಬಹುದು. ಆದ್ದರಿಂದ ಕಡಿಮೆ ಕ್ಯಾಲೋರಿಯ ಆಹಾರಗಳನ್ನು ಸೇವಿಸಬೇಕು. ಮೊಳಕೆಯೊಡೆದ ಕಾಳುಗಳಲ್ಲಿ ಕ್ಯಾಲೋರಿ ಕಡಿಮೆಯಿರುವುದರಿಂದ ಅವುಗಳನ್ನು ನಿತ್ಯದ ಡಯಟ್‌ನಲ್ಲಿ ಸೇರಿಸಿಕೊಂಡರೂ ತೂಕ ಹೆಚ್ಚಾಗುವುದಿಲ್ಲ.

ಹೆಚ್ಚಿನ ಪ್ರಮಾಣದ ಪ್ರೊಟೀನ್‌ ಹೊಂದಿರುತ್ತವೆ :
ಪ್ರೋಟೀನ್‌ ನಮ್ಮ ದೇಹದ ಆರೋಗ್ಯಕ್ಕೆ ಪ್ರಯೋಜನಕಾರಿಯೂ ಮತ್ತು ಅಗತ್ಯವೂ ಆಗಿದೆ. ನಮ್ಮ ದೇಹದ ಸ್ನಾಯುಗಳನ್ನು ನಿರ್ಮಿಸಲು ಪ್ರೋಟೀನ್‌ ಅತ್ಯಗತ್ಯವಾಗಿದೆ. ಪ್ರೋಟೀನ್‌ಯುಕ್ತ ಆಹಾರವು ಹಸಿವನ್ನು ತಡೆಯುತ್ತದೆ. ಮೊಳಕೆಯೊಡೆದ ಕಾಳುಗಳು ದೇಹಕ್ಕೆ ಅಗತ್ಯವಿರುವ ಪ್ರೋಟೀನ್‌ಗಳನ್ನು ಒದಗಿಸುತ್ತವೆ.

ಫೈಬರ್‌ ಹೊಂದಿರುತ್ತವೆ :
ಫೈಬರ್‌ ಅಂಶ ಸಮೃದ್ಧವಾಗಿರುವ ಆಹಾರಗಳನ್ನು ಸೇವಿಸುವುದರಿಂದ ಕರುಳಿನ ಚಲನೆಯನ್ನು ಸುಧಾರಿಸಬಹುದಾಗಿದೆ. ಇದು ಕರುಳಿನಲ್ಲಿರುವ ಸೂಕ್ಷ್ಮ ಜೀವಿಗಳಿಗೆ ಉಪಯುಕ್ತವಾಗಿದೆ. ಮೊಳಕೆಯೊಡೆದ ಕಾಳುಗಳು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಇವುಗಳನ್ನು ನಿತ್ಯದ ಆಹಾರದಲ್ಲಿ ಸೇರಿಸಿಕೊಳ್ಳುವುದರಿಂದ ಮಲಬದ್ಧತೆಯಂತಹ ಸಾಮಾನ್ಯ ಕಾಯಿಲೆಗಳಿಂದ ದೂರವಿರಬಹುದು.

ತೂಕ ಇಳಿಸಲು ಸಹಾಯ ಮಾಡುತ್ತದೆ :
ಮೊಳಕೆಯೊಡೆದ ಕಾಳುಗಳಲ್ಲಿ ಹೆಚ್ಚಿನ ಪ್ರಮಾಣದ ಫೈಬರ್‌ ಮತ್ತು ಪ್ರೋಟೀನ್‌ ಇರುವುದರಿಂದ ಅತಿಯಾಗಿ ತಿನ್ನುವುದನ್ನು ತಡೆಯಲು ಸಹಾಯ ಮಾಡುತ್ತದೆ. ಇದರಿಂದ ಅನಗತ್ಯ ಬೊಜ್ಜು ಶೇಖರಣೆಗೊಳ್ಳುವುದು ತಪ್ಪುತ್ತದೆ ಮತ್ತು ತೂಕ ಇಳಿಕೆಗೆ ಸಹಕಾರಿಯಾಗಿದೆ.

ಇದನ್ನೂ ಓದಿ : Haldi Doodh: ಅರಿಶಿಣ ಹಾಲಿನ ಪ್ರಯೋಜನಗಳೇನು ಗೊತ್ತಾ!

ಇದನ್ನೂ ಓದಿ : Custard Apple Benefits : ಈ ಋತುವಿನ ಹಣ್ಣು ‘ಸೀತಾಫಲ’ ತಿನ್ನುವುದರಿಂದ ಏನೆಲ್ಲಾ ಲಾಭ ಇದೆ ಗೊತ್ತಾ

(Sprouted Seeds Benefits. Add these seeds to your diet)

Comments are closed.