ಭಾರತೀಯ ಸಂಸ್ಕೃತಿಯಲ್ಲಿ ಯಾವುದೇ ಕಟ್ಟಡ, ವಾಹನ ಅಥವಾ ಕಾಮಗಾರಿಗಳನ್ನು ಲೋಕಾರ್ಪಣೆಗೊಳಿಸುವಾಗ ತೆಂಗಿನ ಕಾಯಿಯನ್ನು ಒಡೆಯೋದು ಶುಭಸೂಚಕ ಎಂದು ಪರಿಗಣಿಸಲಾಗುತ್ತೆ. ಆದರೆ ಉತ್ತರ ಪ್ರದೇಶದಲ್ಲಿ(Uttar Pradesh) ಮಾತ್ರ ಈ ತೆಂಗಿನಕಾಯಿ ಒಡೆಯುವ ಕಾರ್ಯಕ್ರಮವು ಯೋಗಿ ಆದಿತ್ಯನಾಥ್ ಸರ್ಕಾರಕ್ಕೆ ಬಹುದೊಡ್ಡ ಮುಖಭಂಗ ಉಂಟು ಮಾಡಿದೆ.
ಹೌದು..! ಉತ್ತರ ಪ್ರದೇಶದ ಬಿಜ್ನೋರ್ ಎಂಬಲ್ಲಿ ಬರೋಬ್ಬರಿ 1.16 ಕೋಟಿ ರೂಪಾಯಿ ವೆಚ್ಚದಲ್ಲಿ 7 ಕಿಲೋಮೀಟರ್ ಉದ್ದದ ರಸ್ತೆಯನ್ನು ಮರು ನಿರ್ಮಾಣ ಮಾಡಲಾಗಿತ್ತು. ಈ ರಸ್ತೆಯ ಉದ್ಘಾಟನೆ ಕಾರ್ಯಕ್ರಮಕ್ಕೆ ಸ್ವತಃ ಬಿಜ್ನೋರ್ ಕ್ಷೇತ್ರ ಶಾಸಕಿ ಸುಚಿ ಮೌಸಮ್ ಚೌಧರಿ ಕೂಡ ಆಗಮಿಸಿದ್ದರು. ಉದ್ಘಾಟನೆ ಅಂಗವಾಗಿ ರಸ್ತೆಗೆ ಕಾಯಿ ಒಡೆಯುತ್ತಿದ್ದಂತೆಯೇ ರಸ್ತೆ ಬಿರುಕುಬಿಟ್ಟಿದೆ..! ಇದನ್ನು ನೋಡಿ ಶಾಸಕಿ ಸುಚಿ ಕೆಂಡಾಮಂಡಲರಾಗಿದ್ದಾರೆ.
ಮೂರು ಗಂಟೆಗಳ ಕಾಲ ಉದ್ಘಾಟನಾ ಕಾರ್ಯಕ್ರಮದಲ್ಲೇ ನಿಂತ ಶಾಸಕಿ ಸುಚಿ ಮೌಸಮ್ ಚೌದರಿ ಅಧಿಕಾರಿಗಳು ಸ್ಥಳಕ್ಕೆ ಆಗಮಿಸುವವರೆಗೂ ಕಾದಿದ್ದಾರೆ. ಅಧಿಕಾರಿಗಳು ಆಗಮಿಸುತ್ತಿದ್ದಂತೆಯೇ ಡಾಂಬರ್ ಮಾದರಿಯನ್ನು ತನಿಖೆಗೆ ಕಳುಹಿಸಿಕೊಡಲಾಗಿದೆ. ಕಳಪೆ ಕಾಮಗಾರಿ ಬಗ್ಗೆ ಆಕ್ರೋಶ ಹೊರಹಾಕಿದ ಶಾಸಕಿ ಸುಚಿ, ಬರೋಬ್ಬರಿ 1.16 ಕೋಟಿ ರೂಪಾಯಿ ವೆಚ್ಚದಲ್ಲಿ ಈ ರಸ್ತೆಯನ್ನು ನಿರ್ಮಾಣ ಮಾಡಲಾಗಿದೆ.
ಆದರೆ ಕಾರ್ಯಕ್ರಮದ ಉದ್ಘಾಟನೆಗೆ ಆಗಮಿಸಿದ್ದ ವೇಳೆ ಈ ಕಳಪೆ ಕಾಮಗಾರಿ ಬೆಳಕಿಗೆ ಬಂದಿದೆ. ಶೀಘ್ರದಲ್ಲೇ ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುತ್ತೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಇನ್ನು ಕಳಪೆ ಕಾಮಗಾರಿ ಆರೋಪವನ್ನು ತಳ್ಳಿ ಹಾಕಿದ ಬಿಜ್ನೋರ್ ಎಕ್ಸಿಕ್ಯೂಟಿವ್ ಎಂಜಿನಿಯರ್, ಇದು ಸತ್ಯಕ್ಕೆ ದೂರವಾದ ಆರೋಪವಾಗಿದೆ. ಸಂಬಂಧಪಟ್ಟ ಅಧಿಕಾರಿಗಳು ಸೂಕ್ತ ತನಿಖೆ ನಡೆಸಿ ನಿಜಾಂಶ ಹೊರತರಬೇಕಿದೆ ಎಂದು ಹೇಳಿದ್ರು.
ಇದನ್ನು ಓದಿ : Dog Viral Video : ವಿಭಿನ್ನ ಹವ್ಯಾಸದಿಂದ ಬಹು ಜನಪ್ರಿಯವಾದ ಲಾಯ್ಡ್ ನಾಯಿ ಮರಿ
ಇದನ್ನು ಓದಿ : Viral Video : ಸಖತ್ ವೈರಲ್ ಆದ ಬೆಕ್ಕು ಹಾಗೂ ಮಗುವಿನ ಆಟದ ವಿಡಿಯೋ
Instead Of Coconut, Brand-New UP Road Cracked Open in Uttar Pradesh