Amitabh Bachchan : 1000ನೇ ಕಂತು ಪೂರೈಸಿದ ಕೌನ್​ ಬನೇಗಾ ಕರೋಡ್​ಪತಿ : ಕೆಬಿಸಿ ಆಯ್ಕೆ ಮಾಡಿಕೊಂಡಿದ್ದರ ಹಿಂದಿನ ಕಾರಣ ಬಿಚ್ಚಿಟ್ಟ ಅಮಿತಾಬ್​ ಬಚ್ಚನ್​

ಕೌನ್​ ಬನೇಗಾ ಕರೋಡ್​ಪತಿ (Kaun Banega Crorepati) ಕಾರ್ಯಕ್ರಮವು ಯಶಸ್ವಿ 1000ನೇ ಕಂತನ್ನು ಪೂರೈಸಿದೆ. ಈ ವಿಶೇಷ ಸಂದರ್ಭದಲ್ಲಿ ಮಾತನಾಡಿದ ಕಾರ್ಯಕ್ರಮದ ನಿರೂಪಕ ಅಮಿತಾಬ್​ ಬಚ್ಚನ್ (Amitabh Bachchan)​ ತಾವು ಯಾಕೆ ಕೆಬಿಸಿಯನ್ನು ಆಯ್ಕೆ ಮಾಡಿಕೊಂಡೆ ಎಂಬುದನ್ನು ರಿವೀಲ್​ ಮಾಡಿದ್ದಾರೆ. 2000ನೇ ಇಸ್ವಿಯಲ್ಲಿ ನನಗೆ ಯಾವುದೇ ಸಿನಿಮಾಗಳಲ್ಲಿ ಅವಕಾಶ ಸಿಗುತ್ತಿರಲಿಲ್ಲ. ಹೀಗಾಗಿ ನಾನು ಕೆಬಿಸಿ ನಿರೂಪಣೆ ಮಾಡುವ ನಿರ್ಧಾರ ಕೈಗೊಂಡೆ ಎಂದಿದ್ದಾರೆ.

1000ನೇ ಕಂತಿಗೆ ವಿಶೇಷ ಅತಿಥಿಯಾಗಿ ಆಗಮಿಸಿದ ಅಮಿತಾಬ್​ ಪುತ್ರಿ ಶ್ವೇತಾ ಹಾಗೂ ಅವರ ಪುತ್ರಿ ನವ್ಯಾ ನವೇಲಿ ನಂದಾ ಹಾಟ್​ ಸೀಟ್​ನಲ್ಲಿ ಕುಳಿತಿದ್ದಾರೆ. ಕಾರ್ಯಕ್ರಮದಲ್ಲಿ ಶ್ವೇತಾ ಕೇಳಿದ ಪ್ರಶ್ನೆಗಳಿಗೆ ಉತ್ತರಿಸಿದ ಬಿಗ್​ ಬಿ, ಅಂದಹಾಗೆ ಈ ಶೋಗೆ ಇದೀಗ 21 ವರ್ಷ ಪೂರ್ಣಗೊಂಡಿದೆ. 2000ನೇ ಇಸ್ವಿಯಲ್ಲಿ ಇದರ ಆರಂಭವಾಗಿತ್ತು. ಆ ಸಮಯದಲ್ಲಿ ನಮಗೆ ಈ ಶೋ ಇಷ್ಟು ದೊಡ್ಡ ಮಟ್ಟದಲ್ಲಿ ಬೆಳೆಯಬಹುದು ಎಂಬ ಊಹೆ ಇರಲಿಲ್ಲ. ಅನೇಕರು ನನಗೆ ನೀವು ಬೆಳ್ಳಿ ತೆರೆಯಿಂದ ಕಿರುತೆರೆಗೆ ಏಕೆ ಹೋಗುತ್ತಿದ್ದೀರಿ ಎಂದು ಕೇಳಿದ್ದರು. ಇದರಿಂದ ನಿಮ್ಮ ಇಮೇಜ್​ ಹಾಳಾಗುತ್ತೆ ಎಂದೂ ಅನೇಕರು ಕಳವಳ ಹೊರಹಾಕಿದ್ದರು.

ಆದರೆ ನನ್ನ ಪರಿಸ್ಥಿತಿ ಬೇರೆಯದ್ದೇ ಇತ್ತು. ನನಗೆ ಆಗ ಸಿನಿಮಾಗಳಲ್ಲಿ ಅವಕಾಶಗಳು ನಿಂತು ಹೋಗಿತ್ತು. ಹೀಗಾಗಿ ಈ ಶೋಗೆ ನಡೆಸಿಕೊಡಲು ಒಪ್ಪಿದೆ. ಈ ಕಾರ್ಯಕ್ರಮಕ್ಕೆ ಸಿಕ್ಕ ಸ್ಪಂದನೆಯು ನನ್ನ ಜಗತ್ತನ್ನೇ ಬದಲಾಯಿಸಿತು ಎಂದು ಹೇಳಿದ್ರು. ಈ ಕಾರ್ಯಕ್ರಮಕ್ಕೆ ಬಂದ ಪ್ರತಿಯೊಬ್ಬ ಸ್ಪರ್ಧಿಯಿಂದಲೂ ನಾನು ಏನನ್ನಾದರೂ ಕಲಿತಿದ್ದೇನೆ ಎಂದು ಅಮಿತಾಬ್​ ಹೇಳಿದ್ರು. ಅಮಿತಾಬ್​​ರ ಈ ಮಾತುಗಳಿಗೆ ಪ್ರೇಕ್ಷಕರು ಸೇರಿದಂತೆ ಶ್ವೇತಾ ಹಾಗೂ ನವ್ಯಾ ಚಪ್ಪಾಳೆಯನ್ನು ಹೊಡೆದರು. ಅಮಿತಾಬ್​ ಬಚ್ಛನ್​​​ ಮಾತಿನ ಬಳಿಕ ಅವರ ಕೆಬಿಸಿ ಜರ್ನಿಯನ್ನು ವಿಟಿ ಮೂಲಕ ಪ್ರದರ್ಶಿಸಲಾಯ್ತು. ವಿಡಿಯೋ ನೋಡಿದ ಅಮಿತಾಬ್​ ಕಣ್ಣಂಚಲ್ಲಿ ನೀರು ಜಿನುಗಿತ್ತು. ಕೆಬಿಸಿ 1000ನೇ ಎಪಿಸೋಡ್​ ಸಂಪೂರ್ಣ ಭಾವುಕ ಕ್ಷಣವಾಗಿ ಬದಲಾಗಿತ್ತು.

ಕೌನ್​ ಬನೇಗಾ ಕರೋಡ್​ ಪತಿ ಕಾರ್ಯಕ್ರಮ ಸದ್ಯ 13ನೇ ಆವೃತ್ತಿಯನ್ನು ನಡೆಸುತ್ತಿದೆ. ಅನಾರೋಗ್ಯದ ಕಾರಣದಿಂದಾಗಿ ಅಮಿತಾಬ್​​ 3ನೇ ಸೀಸನ್​ನಿಂದ ಹೊರ ನಡೆದಿದ್ದರು. ಹಾಗೂ ಈ ಆವೃತ್ತಿಯನ್ನು ಶಾರೂಕ್​ ಖಾನ್​ ನಡೆಸಿಕೊಟ್ಟಿದ್ದರು. ಇದನ್ನು ಹೊರತುಪಡಿಸಿ ಮಿಕ್ಕೆಲ್ಲ ಆವೃತ್ತಿಯನ್ನು ಅಮಿತಾಬ್​ ನಡೆಸಿಕೊಟ್ಟಿದ್ದಾರೆ. ಸೀಸನ್​ 1 ರಿಂದ 6ರರವರೆಗೆ ವಿಜೇತರಿಗೆ 1 ಕೋಟಿ ರೂಪಾಯಿಯನ್ನು ನೀಡಲಾಗುತ್ತಿತ್ತು. ಆದರೆ ಸೀಸನ್​ 7ರಿಂದ ಅಂದರೆ 2013ರಿಂದ 7 ಕೋಟಿ ರೂಪಾಯಿ ಹಣದವರೆಗೂ ಸ್ಪರ್ಧಿ ಆಟವಾಡಬಹುದಾಗಿದೆ.

ಇದನ್ನು ಓದಿ : The Omicron Variant : ಒಮಿಕ್ರಾನ್​ ರೂಪಾಂತರಿ ಹೆಸರಿನಲ್ಲಿ ಸಿನಿಮಾ ತೆರೆಕಂಡಿತ್ತೇ..? ಫ್ಯಾಕ್ಟ್​ಚೆಕ್​​ನಲ್ಲಿ ಬಯಲಾಯ್ತು ಅಸಲಿಯತ್ತು

Amitabh Bachchan breaks down, reveals he was compelled to host Kaun Banega Crorepati in 2000: ‘Wasn’t getting films’

Comments are closed.