Ajaz Patel : ಟೆಸ್ಟ್‌ ಕ್ರಿಕೆಟ್‌ನಲ್ಲಿ ಅಜಾಜ್‌ ಪಟೇಲ್‌ ವಿಶ್ವದಾಖಲೆ : ಕುಂಬ್ಳೆ, ಜಿಮ್‌ ಲೇಕರ್‌ ದಾಖಲೆ ಸರಿಗಟ್ಟಿದ ನ್ಯೂಜಿಲೆಂಡ್‌ ಸ್ಪಿನ್ನರ್‌

ಮುಂಬೈ : ಭಾರತ – ನ್ಯೂಜಿಲೆಂಡ್‌ ವಿರುದ್ದ ಟೆಸ್ಟ್‌ ಸರಣಿಯಲ್ಲಿ ನ್ಯೂಜಿಲೆಂಡ್‌ ಸ್ಪಿನರ್‌ ಅಜಾಜ್‌ ಪಟೇಲ್‌ (Ajaz Patel) ವಿಶ್ವ ದಾಖಲೆ ( World Record ) ಬರೆದಿದ್ದಾರೆ. ಭಾರತದ ಎಲ್ಲಾ 10 ವಿಕೆಟ್‌ಗಳನ್ನು ಕಬಳಿಸುವ ಮೂಲಕ ಭಾರತ ಖ್ಯಾತ ಸ್ಪಿನ್ನರ್‌ ಅನಿಲ್‌ ಕುಂಬ್ಳೆ ಹಾಗೂ ಜಿಮ್‌ ಲೇಕರ್‌ ದಾಖಲೆಯನ್ನು ಸರಿಗಟ್ಟಿದ್ದಾರೆ.

ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ಎರಡನೇ ಟೆಸ್ಟ್‌ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ನಡೆಸಿದ ಭಾರತ ತಂಡಕ್ಕೆ ಕನ್ನಡಿಗ ಮಯಾಂಕ್‌ ಅಗರ್‌ವಾಲ್‌ ಭರ್ಜರಿ ಬ್ಯಾಟಿಂಗ್‌ ನಡೆಸಿದ್ದಾರೆ. 311 ಎಸೆತಗಳನ್ನು ಭರ್ಜರಿ 150 ರನ್‌ ಬಾರಿಸುವ ಮೂಲಕ ಭಾರತ ತಂಡಕ್ಕೆ ನೆರವಾಗಿದ್ದಾರೆ. ಮಯಾಂಕ್‌ ಅಗರ್‌ವಾಲ್‌ ಹಾಗೂ ಶುಭಮನ್‌ ಗಿಲ್‌ ಜೋಡಿ 80 ರನ್‌ ಜೊತೆಯಾಟ ನೀಡುತ್ತಿದ್ದಂತೆಯೇ ಭಾರತಕ್ಕೆ ಅಜಾಜ್‌ ಪಟೇಲ್‌ ಮೊದಲ ಆಘಾತ ನೀಡಿದ್ರು. 44 ರನ್‌ ಗಳಿಸಿದ್ದ ಶುಭಮನ್‌ ಗಿಲ್‌ ಅಜಾಜ್‌ ಪಟೇಲ್‌ಗೆ ವಿಕೆಟ್‌ ಒಪ್ಪಿಸುತ್ತಲೇ ಚೇತೇಶ್ವರ ಪೂಜಾರ ಶೂನ್ಯಕ್ಕೆ ಔಟಾದ್ರು. ನಂತರ ಬಂದ ವಿರಾಟ್‌ ಕೊಯ್ಲಿ ಕೂಡ ಅಜಾಜ್‌ ಪಟೇಲ್‌ಗೆ ವಿಕೆಟ್‌ ಒಪ್ಪಿಸಿದ್ದಾರೆ. ಇನ್ನು ಶ್ರೇಯಸ್‌ ಅಯ್ಯರ್‌ 18, ವೃದ್ದಿಮಾನ್‌ ಸಾಹ 27ರನ್‌ ಗಳಿಸಿದ್ದಾರೆ.

ಭಾರತೀಯ ಆಟಗಾರರನ್ನು ಇನ್ನಿಲ್ಲದಂತೆ ಕಾಡಿದ ಅಜಾಜ್‌ ಪಟೇಲ್‌ ಆರ್.ಅಶ್ವಿನ್‌ ಅವರನ್ನು ಶೂನ್ಯಕ್ಕೆ ಫೆವಿಲಿಯನ್‌ ಹಾದಿ ತೋರಿಸಿದ್ದಾರೆ. ನಂತರ ಬಂದ ಅಕ್ಷರ್‌ ಪಟೇಲ್‌ ಮಯಾಂಕ್‌ ಅಗರ್‌ವಾಲ್‌ ಜೊತೆಗೂಡಿ ಉತ್ತಮ ಆಟ ಪ್ರದರ್ಶಿಸಿದ್ರು. ಬರೋಬ್ಬರಿ ಅರ್ಧಶತಕ ಬಾರಿಸಿದ್ದ ಅಕ್ಷರ್‌ ಪಟೇಲ್‌ ಅಜಾಜ್‌ ಪಟೇಲ್‌ಗೆ ವಿಕೆಟ್‌ ಒಪ್ಪಿಸಿದ್ದಾರೆ. ಅಂತಿಮವಾಗಿ ಭಾರತ ತಂಡ 109 ಓವರ್‌ಗಳಲ್ಲಿ 325 ರನ್‌ಗಳಿಗೆ ಆಲೌಟ್‌ ಆಗಿದೆ. ಆದ್ರೆ ಭಾರತದ ಎಲ್ಲಾ ಹತ್ತು ವಿಕೆಟ್‌ಗಳನ್ನು ಪಡೆಯುವ ಮೂಲಕ ಅಜಾಜ್‌ ಪಟೇಲ್‌ ಟೆಸ್ಟ್‌ ಕ್ರಿಕೆಟ್‌ನಲ್ಲಿ ವಿಶ್ವದಾಖಲೆಯನ್ನು ನಿರ್ಮಿಸಿದ್ದಾರೆ.

47.5 ಓವರ್‌ ಬೌಲ್‌ ಮಾಡಿದ್ದ ಅಜಾಜ್‌ ಪಟೇಲ್‌ 12 ಓವರ್‌ ಮೇಡನ್‌ ಮಾಡಿದ್ದು 119 ರನ್‌ ನೀಡಿ 10 ವಿಕೆಟ್‌ ಪಡೆದುಕೊಂಡಿದ್ದಾರೆ. ಈ ಮೂಲಕ ಕನ್ನಡಿಗ ಅನಿಲ್‌ ಕುಂಬ್ಳೆ ಹಾಗೂ ಜಿಮ್‌ ಲೇಕರ್‌ ದಾಖಲೆಯನ್ನು ಸರಿಗಟ್ಟಿದ್ದಾರೆ. ಈ ಹಿಂದೆ ಅನಿಲ್‌ ಕುಂಬ್ಳೆ 199 ರಲ್ಲಿ ಪಾಕಿಸ್ತಾನ ವಿರುದ್ದದ ಎರಡನೇ ಟೆಸ್ಟ್‌ ಪಂದ್ಯದ ಎರಡನೇ ಇನ್ನಿಂಗ್ಸ್‌ನಲ್ಲಿ ವಿಶ್ವದಾಖಲೆಯನ್ನು ನಿರ್ಮಿಸಿದ್ದರು. 26.3 ಓವರ್‌ಗಳನ್ನು ಎಸೆದಿದ್ದ ಕುಂಬ್ಳೆ 9 ಮೆಡನ್‌ ಓವರ್‌ ಮೂಲಕ ೭೪ರನ್‌ ನೀಡುವ ಮೂಲಕ ಪಾಕಿಸ್ತಾನದ ಎಲ್ಲಾ 10 ವಿಕೆಟ್‌ಗಳನ್ನು ಕಬಳಿಸಿದ್ದರು.

ಅನಿಲ್‌ ಕುಂಬ್ಳೆಗೂ ಮೊದಲು 1956ರಲ್ಲಿ ಇಂಗ್ಲೆಂಡ್‌ ಬೌಲರ್‌ ಆಗಿರುವ ಜಿಮ್‌ ಲೇಕರ್‌ ಆಸ್ಟ್ರೇಲಿಯಾ ವಿರುದ್ದದ ಪಂದ್ಯದಲ್ಲಿ10 ವಿಕೆಟ್‌ ಪಡೆಯುವ ಮೂಲಕ ದಾಖಲೆ ನಿರ್ಮಿಸಿದ್ದರು. ಮೊದಲು ಇನ್ನಿಂಗ್ಸ್‌ನಲ್ಲಿ ಜಿಮ್‌ ಲೇಕರ್‌ 9 ವಿಕೆಟ್‌ ಪಡೆದಿದ್ರೆ, ಎರಡನೇ ಇನ್ನಿಂಗ್ಸ್‌ನಲ್ಲಿ 51.2 ಓವರ್‌ ಎಸೆದಿದ್ದ ಜಿಲ್‌ ಲೇಕರ್‌ 23 ಮೇಡನ್‌ ಓವರ್‌ ಸೇರಿದಂತೆ 53 ರನ್‌ ನೀಡಿ ಎಲ್ಲಾ 10 ವಿಕೆಟ್‌ ಪಡೆಯುವ ಮೂಲಕ ವಿಶ್ವದಾಖಲೆಯನ್ನು ಬರೆದಿದ್ದಾರೆ.

ಇದನ್ನೂ ಓದಿ : RCB New Captain : ಕೆ.ಎಲ್.ರಾಹುಲ್‌, ಪಡಿಕ್ಕಲ್‌ ಅಲ್ಲ : ಆರ್‌ಸಿಬಿ ನಾಯಕನಾಗ್ತಾನೆ ಈ ಕನ್ನಡಿಗ

ಇದನ್ನೂ ಓದಿ : india vs newzealand Test : ಮಯಂಕ್ ಅಗರ್ವಾಲ್ ಭರ್ಜರಿ ಶತಕ; ಮೊದಲ ದಿನ ಟೀಂ ಇಂಡಿಯಾ 4 ವಿಕೆಟ್ ನಷ್ಟಕ್ಕೆ 221 ರನ್

(Ajaz Patel World Record becomes third bowler in Tests to take all 10 wickets in an innings)

Comments are closed.