International Dance Day 2022 : ನೃತ್ಯದಿಂದ ಆರೋಗ್ಯ ವೃದ್ಧಿ! ದೇಹ ಮತ್ತು ಮನಸ್ಸಿಗೆ ಇದೆ ಭಾರೀ ಪ್ರಯೋಜನ

ಇಂದು ವಿಶ್ವ ನೃತ್ಯ ದಿನ (International Dance Day 2022). ಈ ದಿನದ ಉದ್ದೇಶವವೇನೆಂದರೆ ನೃತ್ಯದ ಅರಿವು ಮೂಡಿಸುವುದು ಮತ್ತು ಅದನ್ನು ಆರಾಧನೆ ಮಾಡುವುದು. ನೃತ್ಯವನ್ನು ಇಷ್ಟಪಡುವವರಿಗೆ ಈ ಕಲಾ ಪ್ರಕಾರವು ಸಂಪೂರ್ಣವಾಗಿ ಬೇರೆಯ ಅನುಭೂತಿ ನೀಡುತ್ತದೆ. ನೀವು ನಿಮ್ಮ ಸುತ್ತ ಮುತ್ತ ಇರವವರಿಗೆ ನಿಮ್ಮಇಷ್ಟದ ಕಲೆ ಯಾವುದು ಎಂದು ಪ್ರಶ್ನಿಸಿದರೆ, ಅವರಲ್ಲಿ ಅರ್ಧದಷ್ಟು ಜನರು ಹೇಳುವುದು ನೃತ್ಯ ಎಂದು. ಮನೆಯ ಒಳಗೆ ಒಬ್ಬರೇ ಅಥವಾ ಸಾವಿರಾರು ನೋಡುಗರ ಮಧ್ಯೆ ಸ್ಟೇಜ್‌ ಅಲ್ಲಿ, ಯಾವುದೇ ಇರಬಹುದು ನೃತ್ಯ ನಮ್ಮಲ್ಲಿ ಹಲವರಿಗೆ ಸಂತೋಷ ನೀಡುವ ಕಲೆಯಾಗಿದೆ. ಆದ್ದರಿಂದ ಈ ಸುಂದರ ಕಲಾ ಪ್ರಕಾರವನ್ನು 1982 ರಿಂದ ವಿಶ್ವ ನೃತ್ಯ ದಿನವೆಂದು ಆಚರಿಸುತ್ತ ಬಂದಿದ್ದಾರೆ. ಇದು ಮನಸ್ಸು ಮತ್ತು ದೇಹ ಎರಡನ್ನೂ ಸಂತೋಷಗೊಳಿಸುತ್ತದೆ.

ನೃತ್ಯ ಬರೀ ಕಲಾ ಪ್ರಕಾರವೊಂದೇ ಅಲ್ಲ. ಅದರಿಂದ ಅನೇಕ ಆರೋಗ್ಯದ ಪ್ರಯೋಜನಗಳು ಇವೆ. ಇದು ದೇಹ ಮತ್ತು ಮನಸ್ಸನ್ನು ಉಲ್ಲಾಸಗೊಳಿಸುತ್ತದೆ. ನೃತ್ಯದಿಂದಾಗುವ ಕೆಲವು ಪ್ರಯೋಜನಗಳು ಇಲ್ಲಿವೆ:

  • ನೃತ್ಯವು ಒಂದು ದೈಹಿಕ ಚಟುವಟಿಕೆಯಾಗಿದೆ. ನಿಯಮಿತವಾಗಿ ನೃತ್ಯ ಮಾಡುವುದು ಆರೋಗ್ಯಕರ ತೂಕವನ್ನು ನಿರ್ವಹಿಸಲು ಸಹಾಯ ಮಾಡುತ್ತದೆ.
  • ನೃತ್ಯವು ಸಹನಾ ಶಕ್ತಿ ಹೆಚ್ಚಿಸಲು ಸಹಾಯ ಮಾಡುತ್ತದೆ.
  • ಇದು ಆಲಸ್ಯವನ್ನು ಹೋಗಲಾಡಿಸಿ ಚುರುಕುತನವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ ಮತ್ತು ದೇಹವು ಫ್ಲೆಕ್ಸಿಬಲ್‌ ಆಗುವಂತೆ ಮಾಡುತ್ತದೆ.
  • ಮೂಳೆಗಳ ಬಲವರ್ಧನೆಗೆ ಸಹಾಯ ಮಾಡುತ್ತದೆ. ಆರ್ಥ್ರೈಟೀಸ್‌ ಮತ್ತು ಓಸ್ಟಿಯೋಪೊರೊಸಿಸ್‌ ನಂತಹ ಮೂಳೆ ಸಂಬಂಧಿ ಖಾಯಿಲೆಗಳ ಅಪಾಯ ಕಡಿಮೆ ಮಾಡುತ್ತದೆ.
  • ನೃತ್ಯವು ಸ್ನಾಯುವಿನ ಆರೋಗ್ಯದ ಮೇಲೆ ಪ್ರಯೋಜನಕಾರಿ ಪರಿಣಾಮ ಬೀರುತ್ತದೆ ಮತ್ತು ಸ್ನಾಯುಗಳನ್ನು ಬಲಪಡಿಸಲು ಸಹಾಯ ಮಾಡುತ್ತದೆ.
  • ನಿಯಮಿತವಾಗಿ ನೃತ್ಯ ಮಾಡುವುದರಿಂದ ಉಸಿರಾಟ ಮತ್ತು ಹೃದಯದ ರಕ್ತನಾಳದ ಆರೋಗ್ಯ ಹೆಚ್ಚುತ್ತದೆ.
  • ಇದು ಏರೋಬಿಕ್‌ ಫಿಟ್ನೆಸ್‌ ಅನ್ನು ಸುಲಭಗೊಳಿಸುತ್ತದೆ.
  • ನೃತ್ಯವು ದೇಹ ಮತ್ತು ಮನಸ್ಸಿನ ಸಮಮತೋಲನ ಹೆಚ್ಚಿಸುತ್ತದೆ.
  • ನೃತ್ಯವು ಮಾನಸಿಕ ಆರೋಗ್ಯದ ಮೇಲೆ ಪ್ರಯೋಜನಕಾರಿ ಪರಿಣಾಮವನ್ನು ಬೀರುತ್ತದೆ.
  • ಇದು ಸಾಮಾಜಿಕ ಕೌಶಲ್ಯಗಳು, ಆತ್ಮ ವಿಶ್ವಾಸ ಮತ್ತು ಗೌರವವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಒಟ್ಟಾರೆ ಮಾನಸಿಕ ಆರೋಗ್ಯ ಸುಧಾರಿಸುತ್ತದೆ.

ಇದನ್ನೂ ಓದಿ : Mental Health Tips : ನಿಮ್ಮ ಮನಸ್ಸು ಶುದ್ಧಿಕರಿಸಲು ಈ 5 ಸರಳ ದಾರಿಗಳನ್ನು ಅಳವಡಿಸಿಕೊಳ್ಳಿ!!

ಇದನ್ನೂ ಓದಿ : Parenting Tips: ನಿಮ್ಮ ಮಕ್ಕಳನ್ನು ಸ್ವಾವಲಂಬಿಗಳನ್ನಾಗಿ ಮಾಡಬೇಕೆ? ಹಾಗಾದರೆ ಈ ಟಿಪ್ಸ್‌ ಅನುಸರಿಸಿ

(International Dance Day 2022 body and mental health benefits of doing dance)

Comments are closed.