Bride Marries Sisters Groom : ಮದುವೆ ಸಮಾರಂಭದ ವೇಳೆ ಕೈ ಕೊಟ್ಟ ಕರೆಂಟ್​: ವಧು – ವರರು ಅದಲುಬದಲು

ಮಧ್ಯ ಪ್ರದೇಶ :Bride Marries Sisters Groom  : ಮದುವೆ ಸಂಬಂಧ ಅನ್ನೋದು ಏಳೇಳು ಜನ್ಮಗಳ ಋಣಾನುಬಂಧ ಎಂದು ಹೇಳುತ್ತಾರೆ. ಆದರೆ ಮಧ್ಯಪ್ರದೇಶದ ಗ್ರಾಮವೊಂದರಲ್ಲಿ ನಡೆದ ಘಟನೆಯನ್ನು ನೋಡಿದರೆ ಈ ರೀತಿಯಲ್ಲೆಲ್ಲ ಋಣಾನುಬಂಧ ಬೆಸೆಯುತ್ತದೆಯೇ ಎಂದು ಎನಿಸದೇ ಇರಲು ಸಾಧ್ಯವಿಲ್ಲ. ಕಲ್ಯಾಣ ಮಂಟಪದಲ್ಲಿ ಒಂದು ಕ್ಷಣ ಕರೆಂಟ್​ ಹೋಗಿದ್ದೇ ತಡ ಆ ಮದುವೆ ಮಂಪಟಲ್ಲೊಂದು ವಿಲಕ್ಷಣ ಘಟನೆಯೊಂದು ನಡೆದೇ ಹೋಗಿದೆ.


ಮಧ್ಯಪ್ರದೇಶದ ಉಜ್ಜಯಿನಿಯ ಗ್ರಾಮಾಂತರ ಪ್ರದೇಶದಲ್ಲಿ ಸಹೋದರಿಯರ ಮದುವೆ ಸಮಾರಂಭದಲ್ಲಿ ದೀರ್ಘಾವಧಿಗೆ ವಿದ್ಯುತ್​ ಸಂಪರ್ಕ ಕಡಿತಗೊಂಡಿತ್ತು. ಕತ್ತಲಲ್ಲಿಯೇ ಮದುವೆಯ ಶಾಸ್ತ್ರಗಳು ನಡೆದ ಪರಿಣಾಮ ವಧು ವರರು ಅದಲು ಬದಲಾದ ವಿಚಿತ್ರ ಘಟನೆಯೊಂದು ಬೆಳಕಿಗೆ ಬಂದಿದೆ.


ಮದುವೆ ಶಾಸ್ತ್ರಗಳನ್ನು ಮುಗಿಸಿದ ವಧು ವರರು ತಮ್ಮ ತಮ್ಮ ಮನೆಗೆ ತೆರಳಿದ ಬಳಿಕ ವಧು ವರರು ಅದಲುಬದಲಾಗಿದ್ದಾರೆ ಎಂಬ ವಿಚಾರ ಸಂಬಂಧಿಗಳ ಕಣ್ಣಿಗೆ ಬಿದ್ದಿದೆ. ಈ ವಿಚಾರ ಬೆಳಕಿಗೆ ಬರುತ್ತಿದ್ದಂತೆಯೇ ದಿಗ್ಭ್ರಮೆಗೊಳಗಾದ ವಧು – ವರರು ಬಳಿಕ ದೊಡ್ಡ ವಿವಾದವನ್ನೇ ಸೃಷ್ಟಿಸಿದರು.


ಇದಾದ ಬಳಿಕ ಎರಡೂ ಕುಟುಂಬಗಳ ನಡುವೆ ಒಪ್ಪಂದ ಮಾಡಲಾಯ್ತು. ಸಪ್ತಪದಿ ತುಳಿಯುವ ವೇಳೆ ಆಗಿದ್ದ ತಪ್ಪನ್ನು ಸರಿಪಡಿಸಲಾಯ್ತು. ಉಜ್ಜಯಿನಿ ಜಿಲ್ಲೆಯ ಅಸ್ಲಾನಾ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ರಮೇಶ್‌ಲಾಲ್ ಅವರ ಇಬ್ಬರು ಪುತ್ರಿಯರಾದ ನಿಕಿತಾ ಮತ್ತು ಕರಿಷ್ಮಾ ಅವರು ವಿವಿಧ ಕುಟುಂಬಗಳ ಇಬ್ಬರು ಯುವಕರಾದ ದಂಗ್ವಾರಾ ಭೋಲಾ ಮತ್ತು ಗಣೇಶ್ ಅವರನ್ನು ವಿವಾಹವಾಗಿದ್ದಾರೆ.


ವಧುಗಳಿಬ್ಬರು ಸೆರಗಿನಿಂದ ಮುಖ ಮುಚ್ಚಿಕೊಂಡಿದ್ದರು. ಹಾಗೂ ಇಬ್ಬರ ವಿವಾಹದ ಉಡುಪಿನ ಬಣ್ಣ ಒಂದೇ ಆಗಿತ್ತು. ಸರಿಯಾದ ಸಮಯಕ್ಕೆ ಕರೆಂಟ್ ಬೇರೆ ಕೈಕೊಟ್ಟಿದ್ದರಿಂದ ವಧುಗಳಿಬ್ಬರು ಅದಲು ಬದಲಾಗಿದ್ದಾರೆ. ಮದುವೆ ಕಾರ್ಯಗಳು ಶಾಸ್ತ್ರೋಸ್ತ್ರವಾಗಿ ನಡೆದ ಬಳಿಕ ಪಂಡಿತರು ವಧು ವರರಿಗೆ ಸಪ್ತಪದಿ ತುಳಿಯುವಂತೆ ಹೇಳಿದ್ದಾರೆ.


ಎಲ್ಲಾ ಮದುವೆ ಕಾರ್ಯಗಳನ್ನು ಪೂರೈಸಿ ವರರು ತಮ್ಮ ತಮ್ಮ ಮನೆಗೆ ವಧುಗಳನ್ನು ಕರೆದುಕೊಂಡು ಹೋದಾಗಲೇ ನಿಜವಾದ ವಿಷಯ ಅರಿವಿಗೆ ಬಂದಿದೆ. ಸ್ವಲ್ಪ ಸಮಯದ ಬಳಿಕ ವಾದ ವಿವಾದವು ಇತ್ಯರ್ಥಕ್ಕೆ ಬಂದಿದೆ. ಮಾರನೇ ದಿನ ಮತ್ತೊಮ್ಮೆ ಇಬ್ಬರಿಗೂ ಸರಿಯಾದ ವರನೊಂದಿಗೆ ಮದುವೆ ಮಾಡಿಸುವ ಮೂಲಕ ವಿವಾದ ಅಂತ್ಯಗೊಳಿಸಲಾಗಿದೆ.

ಇದನ್ನು ಓದಿ : ಹೆಬ್ರಿಯ ಮನೆಯಲ್ಲಿ ಅನುಮಾನಾಸ್ಪದವಾಗಿ ತಾಯಿ, ಮಗಳ ಮೃತದೇಹ ಪತ್ತೆ : ಕೊಲೆ ಶಂಕೆ

ಇದನ್ನೂ ಓದಿ : three died in ksrtc bus and car collision : ಸರ್ಕಾರಿ ಬಸ್​ಗೆ ಕಾರು ಡಿಕ್ಕಿ : ಭಯಾನಕ ಅಪಘಾತದಲ್ಲಿ ಆರು ತಿಂಗಳ ಮಗು ಸೇರಿದಂತೆ ಮೂವರು ಸಾವು

Madhya Pradesh: Bride Marries Sister’s Groom After Mix-Up Due to Power Cut in Ujjain

Comments are closed.