remove bra for NEET exam : ‘ಒಳ ಉಡುಪು ಕಳಚಿಟ್ಟು ಪರೀಕ್ಷೆ ಬರೆಯಿರಿ’ : ನೀಟ್​ ಪರೀಕ್ಷೆ ಬರೆಯುತ್ತಿದ್ದ ವಿದ್ಯಾರ್ಥಿನಿಗೆ ವಿಚಿತ್ರ ಸೂಚನೆ

ಕೇರಳ : remove bra for NEET exam : ಪರೀಕ್ಷೆಗಳಲ್ಲಿ ನಕಲು ನಡೆಯಬಾರದು ಅಥವಾ ಇನ್ನಿತರ ಯಾವುದೇ ಅಕ್ರಮಗಳು ಉಂಟಾಗಬಾರದು ಅಂತಾ ಪರೀಕ್ಷಾ ಕೇಂದ್ರಗಳಲ್ಲಿ ಕೆಲವೊಂದು ನಿಯಮಗಳನ್ನು ವಿಧಿಸಲಾಗುತ್ತದೆ. ಆದರೆ ಈ ನಿಯಮಗಳು ಅಭ್ಯರ್ಥಿಗಳಿಗೆ ಮಾನಸಿಕವಾಗಿ ಹಿಂದೆ ನೀಡುವಂತಿರಬಾರದು. ಕೇರಳದ ಕೊಲ್ಲಂ ಜಿಲ್ಲೆಯ ಚಡಮಂಗಳದ ಮಾರ್ಥೋಮಾ ಇನ್ಸ್​ಟಿಟ್ಯೂಟ್ ಆಫ್ ಇನ್ಫಾರ್ಮೇಶನ್ ಸೆಂಟರ್​ನಲ್ಲಿ ನಡೆಯುತ್ತಿದ್ದ ನೀಟ್​ ಪರೀಕ್ಷೆಗೆ ಹಾಜರಾಗಿದ್ದ ವಿದ್ಯಾರ್ಥಿನಿಗೆ ಪರೀಕ್ಷೆ ಬರೆಯುವ ಮುನ್ನ ನೀನು ಬ್ರಾ ಕಳಚಬೇಕು ಎಂದು ಪರೀಕ್ಷಾ ಸಿಬ್ಬಂದಿ ಪೀಡಿಸಿದ ಘಟನೆಯೊಂದು ವರದಿಯಾಗಿದೆ. ಭಾನುವಾರದಂದು ನಡೆದ ಪರೀಕ್ಷೆಯಲ್ಲಿ ಈ ಘಟನೆ ಸಂಭವಿಸಿದ್ದು ಈ ಬಗ್ಗೆ ವಿದ್ಯಾರ್ಥಿನಿಯ ಪೋಷಕರು ಕೊಲ್ಲಂ ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ನ್ಯಾಷನಲ್​ ಟೆಸ್ಟಿಂಗ್​ ಏಜೆನ್ಸಿ ನೀಡಿರುವ ಅಧಿಕೃತ ಮಾಹಿತಿಯ ಪ್ರಕಾರ ಅಭ್ಯರ್ಥಿಯು ಮೆಟಲ್​​ ಹುಕ್​ಗಳನ್ನು ಹೊಂದಿರುವ ಬ್ರಾ ಧರಿಸಬಾರದು ಎಂದು ಎಲ್ಲಿಯೂ ಉಲ್ಲೇಖಿಸಿಲ್ಲ ಎಂಬುದು ವಿದ್ಯಾರ್ಥಿನಿಯ ತಂದೆ ಗೋಪಕುಮಾರ್​​ ಸೂರನಾಡ್​ ವಾದವಾಗಿದೆ. ನನ್ನ ಪುತ್ರಿಯ ಒಳ ಉಡುಪನ್ನು ತೆಗೆಯಲು ಒಪ್ಪದೇ ಇದ್ದಾಗ ಆಕೆಗೆ ಪರೀಕ್ಷೆಯನ್ನೇ ಬರೆಯಬೇಡ ಎಂದು ಹೇಳುವ ಮೂಲಕ ಮಾನಸಿಕ ಒತ್ತಡವನ್ನು ಹೇರಿದ್ದಾರೆ. ನನ್ನ ಪುತ್ರಿ ಅನೇಕ ಸಮಯದಿಂದ ನೀಟ್​ ಪರೀಕ್ಷೆಗೆ ತಯಾರಿ ನಡೆಸುತ್ತಿದ್ದಳು. ಆದರೆ ಈ ಘಟನೆ ಬಳಿಕ ಆಕೆಗೆ ಸರಿಯಾಗಿ ಪರೀಕ್ಷೆಯನ್ನು ಎದುರಿಸಲು ಸಾಧ್ಯವಾಗಲಿಲ್ಲ. ಆಕೆ ಅಳುತ್ತಾ ಮನೆಗೆ ಬಂದಿದ್ದಾಳೆ. ಪರೀಕ್ಷಾ ಸಿಬ್ಬಂದಿ ಒಳ ಉಡುಪನ್ನು ತೆಗೆಯಲೇಬೇಕೆಂದು ಪಟ್ಟು ಹಿಡಿದಿದ್ದರು. ಇದರಿಂದ ಅನೇಕ ವಿದ್ಯಾರ್ಥಿನಿಯರು ಮುಜುಗರ ಅನುಭವಿಸಿದ್ದಾರೆ ಎಂದು ಗೋಪಕುಮಾರ್​ ಹೇಳಿದ್ದಾರೆ.

ಇದು ಮಾತ್ರವಲ್ಲದೇ ಕೋವಿಡ್ ನಿಯಮಾವಳಿಗಳನ್ನು ಗಾಳಿಗೆ ತೂರಿ ವಿದ್ಯಾರ್ಥಿನಿಯರನ್ನು ಒಂದೇ ಕೊಠಡಿಯೊಳಗೆ ಸೇರಿಸಿ ಒಳ ಉಡುಪನ್ನು ತೆಗೆದು ಬರುವಂತೆ ಹೇಳಿದ್ದಾರೆ. ಇದು ಖಂಡಿತವಾಗಿಯೂ ಒಂದು ಮಾನಸಿಕ ಹಿಂದೆಯಾಗಿದೆ ಎಂದು ಗೋಪಕುಮಾರ್​ ಆರೋಪಿಸಿದ್ದಾರೆ.
ಈ ನಡುವೆ ಮಾರ್​ ಥೋಮಾ ಇನ್​ಸ್ಟಿಟ್ಯೂಟ್​ ಆಫ್​ ಇನ್​ಫಾರ್ಮೇಷನ್​ ಟೆಕ್ನಾಲಜಿ ಅಧಿಕಾರಿಗಳು ಈ ಆರೋಪವನ್ನು ನಿರಾಕರಿಸಿದ್ದು ನಮ್ಮ ಯಾವುದೇ ಸಿಬ್ಬಂದಿ ಈ ಕೃತ್ಯವನ್ನು ಎಸಗಿಲ್ಲ ಎಂದು ಹೇಳಿದ್ದಾರೆ. ಬಯೋಮೆಟ್ರಿಕ್​​ ಹಾಜರಾತಿ ಪರೀಕ್ಷೆಗೆ ಎನ್​ಟಿಎನಿಂದ ಎರಡು ಏಜೆನ್ಸಿಗಳನ್ನು ನಿಯೋಜಿಸಲಾಗಿದೆ ಎಂದು ಹೇಳಿದೆ .

ಇದನ್ನು ಓದಿ : actress kajal agarwal : ನಾಲ್ಕು ತಿಂಗಳ ಕಂದಮ್ಮನೊಂದಿಗೆ ಗೋವಾ ಬೀಚ್​ನಲ್ಲಿ ಕಾಜಲ್​ ಅಗರ್ವಾಲ್​ ಎಂಜಾಯ್​

ಇದನ್ನೂ ಓದಿ : Sourav Ganguly congratulated Hardik Pandya : ಇಂಗ್ಲೆಂಡ್ ನೆಲದಲ್ಲಿ ಸರಣಿ ಗೆಲ್ಲಿಸಿಕೊಟ್ಟ ‘’ಪಾಂಡು’’ಗೆ ವಿಶೇಷ ಅಭಿನಂದನೆ ತಿಳಿಸಿದ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ

Kerala man alleges daughter forced to remove bra for NEET exam

Comments are closed.