Become an IAS officer :ಹನಿಮೂನ್​ ದಿನವೇ ಪತ್ನಿಯ ಎದುರು ವಿಚಿತ್ರ ಬೇಡಿಕೆ ಇಟ್ಟ ಪತಿರಾಯ..! ನ್ಯಾಯಕ್ಕಾಗಿ ಕೋರ್ಟ್ ಮೆಟ್ಟಿಲೇರಿದ ಮಹಿಳೆ

ಮದುವೆ ಅಂದಮೇಲೆ ಗಂಡಿನ ಮನೆಯವರು ಹೆಣ್ಣಿನ ಮನೆಯವರ ಎದುರು ನೂರಾರು ಬೇಡಿಕೆಗಳನ್ನು ಇಡೋದು ಕಾಮನ್​​. ಆದರೆ ಜಾರ್ಖಂಡ್​​ನಲ್ಲಿ ವರನೊಬ್ಬ ಹನಿಮೂನ್​​ಗೆ ತೆರಳಿದ್ದ ವೇಳೆ ಪತ್ನಿಯ ಎದುರು ಇಟ್ಟ ಬೇಡಿಕೆಯನ್ನು (Bizarre Demand On Honeymoon) ಕೇಳಿ ನವವಿವಾಹಿತೆ ಶಾಕ್​ ಆಗಿದ್ದಾಳೆ. ಅಂದಿನಿಂದ ಮಹಿಳೆ ತನಗೆ ನ್ಯಾಯ ಬೇಕೆಂದು ಪೊಲೀಸ್​ ಠಾಣೆಗೂ ಮನೆಗೂ ಅಲೆಯುವಂತಾಗಿದೆ. ಎಂಬಿಎ ಪದವಿಯನ್ನು ಪಡೆದು ಬ್ಯಾಂಕ್​ ಅಧಿಕಾರಿಯಾಗಿದ್ದ ಪತಿಯು ತನ್ನ ಪತ್ನಿಯ ಬಳಿ ನನ್ನ ಸಂಗಾತಿಯಾಗಿ ಬಾಳಬೇಕು ಅಂದರೆ ನೀನು ಐಎಎಸ್​ ಅಧಿಕಾರಿ ಆಗೋದು ಕಡ್ಡಾಯವಾಗಿದೆ (Become an IAS officer) ಎಂದು ಡಿಮ್ಯಾಂಡ್​ ಇಟ್ಟಿದ್ದಾನೆ.ಇದಾದ ಬಳಿಕ ಆಕೆಯೊಂದಿಗೆ ಮಾತನಾಡುವುದನ್ನೇ ನಿಲ್ಲಿಸಿಬಿಟ್ಟಿದ್ದಾನೆ. ಇದರಿಂದ ದಿಗ್ಭ್ರಮೆಗೆ ಒಳಗಾದ ಪತ್ನಿಯು ಪೂರ್ವ ಸಿಂಗ್​ಭೂಮ್​​ನ ಪೋಟ್ಕಾ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾಳೆ.

ಪೋಟ್ಕಾ ಗ್ರಾಮದ ನಿವಾಸಿಯಾದ ಪಲ್ಲವಿ ಜಮಶೇಡ್​ಪುರದ ಜೈಮಾಲ್​​ ಮಂಡಲ್​​ ಜೊತೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ಮದುವೆಯಾದ ದಿನದ ರಾತ್ರಿಯೇ ಅವರು ಹನಿಮೂನ್​ಗೆ ತೆರಳಿದ್ದಾರೆ. ಈ ಸಂದರ್ಭದಲ್ಲಿ ಜೈಮಾಲ್​​ ತನ್ನ ಪತ್ನಿ ಪಲ್ಲವಿಯ ಎದುರು ನೀನು ಐಎಎಸ್​ ಅಧಿಕಾರಿಯಾದಲ್ಲಿ ಮಾತ್ರವೇ ಈ ವೈವಾಹಿಕ ಸಂಬಂಧ ಮುಂದುವರಿಯಲಿದೆ. ಅದರಲ್ಲೂ ನೀನು 2 ವರ್ಷದ ಒಳಗಾಗಿ ಐಎಎಸ್​ ಅಧಿಕಾರಿಯಾಗಿ ನೇಮಕವಾಗಬೇಕು ಎಂದು ಡಿಮ್ಯಾಂಡ್​ ಇಟ್ಟಿದ್ದಾನೆ. ಮೊದಲು ಪಲ್ಲವಿ ಇದನ್ನು ಜೋಕ್​ ಎಂದು ಪರಿಗಣಿಸಿದ್ದಾಳೆ. ಆದರೆ ಮಾರನೇ ದಿನ ನನಗೆ ಸಂದರ್ಶನ ಇದೆ ಎಂದು ತೆರಳಿದ ಜೈಮಾಲ್​​ ಮತ್ತೆ ವಾಪಸ್ಸಾಗಿಲ್ಲ ಎನ್ನಲಾಗಿದೆ.

ಪಲ್ಲವಿಗೆ ಜೈಮಾಲ್​ ಒಂದು ದಿನವೂ ಕರೆ ಮಾಡಿಲ್ಲ. ಪಲ್ಲವಿ ಎಷ್ಟೇ ಪ್ರಯತ್ನ ಪಟ್ಟರೂ ಸಹ ಜೈಮಾಲ್​ ಸಂಪರ್ಕ ಸಾಧಿಸುವುದು ಸಾಧ್ಯವಾಗಲಿಲ್ಲ. ಕುಟುಂಬದಲ್ಲಿ ತನ್ನ ಪ್ರತಿಷ್ಟೆಯನ್ನು ಕಾಪಾಡಿಕೊಳ್ಳವ ಸಲುವಾಗಿ ಪಲ್ಲವಿ ಈ ವಿಚಾರವನ್ನು ಎಲ್ಲರಿಂದಲೂ ಮುಚ್ಚಿಟ್ಟದ್ದಳು ಎನ್ನಲಾಗಿದೆ. ಆದರೆ ಯಾವಾಗ ಜೈಮಾಲ್​​ ವಿಚ್ಚೇದನಕ್ಕೆ ಕೋರ್ಟ್​ ಮೆಟ್ಟಿಲೇರಿದನೋ ಆಗ ಪಲ್ಲವಿಗೆ ಆಘಾತವಾಗಿದೆ.

ಈ ವೇಳೆಯಲ್ಲಿ ಜೈ ಮಾಲ್​ ಕುಟುಂಬಸ್ಥರು ಪಲ್ಲವಿಗೆ ಮೇಲೆ ದೌರ್ಜನ್ಯವನ್ನೂ ನಡೆಸಿದ್ದಾರೆ. ಆದರೆ ಇದರಿಂದ ತನ್ನ ತವರು ಮನೆಗೆ ತೊಂದರೆಯಾಗಬಾರದೆಂದು ಪಲ್ಲವಿ ಈ ಎಲ್ಲಾ ವಿಚಾರಗಳನ್ನು ಪೋಷಕರ ಬಳಿಯೂ ಹೇಳಿಕೊಂಡಿರಲಿಲ್ಲ. ಇದಾದ ಬಳಿಕ ಪಲ್ಲವಿ ಪೊಲೀಸ್​ ಠಾಣೆ ಮೆಟ್ಟಿಲೇರಿದ್ದಾಳೆ. ದಾಂಪತ್ಯ ಜೀವನಕ್ಕೆ ಕಾನೂನಿನ ಮೂಲಕ ಪರಿಹಾರ ಸಿಗಬಹುದು ಎಂಬ ನಿರೀಕ್ಷೆಯಲ್ಲಿದ್ದಾಳೆ.

ಇದನ್ನು ಓದಿ : Traffic Cop Thrashes Man : ಹೆಲ್ಮೆಟ್​ ಧರಿಸದ ವ್ಯಕ್ತಿಗೆ ನಡುರಸ್ತೆಯಲ್ಲಿ ಥಳಿಸಿದ ಪೊಲೀಸ್​; ಪೊಲೀಸ್​ ವರ್ತನೆ ಕಂಡು ಬೆಚ್ಚಿಬಿದ್ದ ಪುಟ್ಟ ಬಾಲಕಿ

ಇದನ್ನೂ ಓದಿ : Deadly Stunt :ಬಸ್​ ಏರಿ ಡೆಡ್ಲಿ ಸಾಹಸ ಮಾಡಿದ ವಿದ್ಯಾರ್ಥಿ..! ಸೋಶಿಯಲ್​ ಮೀಡಿಯಾದಲ್ಲಿ ವಿಡಿಯೋ ವೈರಲ್​ ಆಗುತ್ತಿದ್ದಂತೆಯೇ ವಿದ್ಯಾರ್ಥಿಗಳಿಗೆ ಪೊಲೀಸರಿಂದ ಹುಡುಕಾಟ

‘Become an IAS officer’: Husband leaves wife after making bizarre demand on honeymoon

Comments are closed.