condom : ಕೊರೊನಾ ಬಳಿಕ ಕಡಿಮೆಯಾಗಿದೆಯಂತೆ ಕಾಂಡೋಮ್​ ಬಳಸುವವರ ಸಂಖ್ಯೆ

condom  : ಕೊರೊನಾ ವೈರಸ್ ಸಾಂಕ್ರಾಮಿಕ ಆರಂಭವಾದ ಬಳಿಕ ಬಹುತೇಕ ಎಲ್ಲಾ ಉದ್ಯಮಗಳು ನೆಲ ಕಚ್ಚಿವೆ ಎಂದು ಹೇಳಿದರೆ ತಪ್ಪಾಗಲಾರದು, ಹೋಟೆಲ್​ ರೆಸ್ಟಾರೆಂಟ್​ ಉದ್ಯಮ, ಟ್ಯಾಕ್ಸಿ ಸರ್ವೀಸ್​, ಪ್ರವಾಸೋದ್ಯಮ ಹೀಗೆ ಎಲ್ಲಾ ಉದ್ಯಮಗಳ ಮೇಲೂ ಕೊರೊನಾ ಕರಿನೆರಳ ಛಾಯೆ ಬೀರಿದೆ. ಇವೆಲ್ಲದರ ಜೊತೆಯಲ್ಲಿ ಕಾಂಡೋಮ್​ ತಯಾರಕ ಕಂಪನಿಗಳೂ ಸಹ ಈ ಅವಧಿಯಲ್ಲಿ ಭಾರೀ ನಷ್ಟವನ್ನು ಅನುಭವಿಸಿವೆ ಎಂದು ತಿಳಿದುಬಂದಿದೆ.

ಕೊರೊನಾ ಸಾಂಕ್ರಾಮಿಕದ ಅವಧಿಯಲ್ಲಿ ಕಾಂಡೋಮ್​ ಬಳಸಿ ಸೆಕ್ಸ್​ ಮಾಡುವವರ ಸಂಖ್ಯೆಯೇ ಕಡಿಮೆಯಾಗಿದೆ ಎಂದು ವರದಿಯಾಗಿದೆ. ಹೀಗಾಗಿ ಕೊರೊನಾ ಅವಧಿಯಲ್ಲಿ ಉಳಿದ ಎಲ್ಲಾ ಕ್ಷೇತ್ರಗಳಂತೆ ಕಾಂಡೋಮ್​ ತಯಾರಕ ಕ್ಷೇತ್ರಕ್ಕೂ ಬಲವಾದ ಪೆಟ್ಟು ಬಿದ್ದಿದೆ. ಜಗತ್ತಿನ ಅತಿದೊಡ್ಡ ಕಾಂಡೋಮ್​ ತಯಾರಕ ಕಂಪನಿ ಕೂಡ ಸದ್ಯ ನಷ್ಟದಲ್ಲಿದೆ. ಕೊರೊನಾ ಸಾಂಕ್ರಾಮಿಕದಿಂದಾಗಿ ಬಹುತೇಕರು ಮನೆಯಲ್ಲಿಯೇ ಇದ್ದಾರೆ. ಹೀಗಾಗಿ ಇವರಲ್ಲಿ ಹೆಚ್ಚಿನ ಮಂದಿ ಲೈಂಗಿಕ ಕ್ರಿಯೆಯ ಸಂದರ್ಭದಲ್ಲಿ ಗರ್ಭನಿರೋಧಕವನ್ನು ಬಳಕೆ ಮಾಡಲು ಇಚ್ಛೆ ಪಡುತ್ತಿಲ್ಲ. ಇದೇ ಕಾರಣಕ್ಕೆ ಕಳೆದ ಎರಡು ವರ್ಷಗಳಲ್ಲಿ ಕಾಂಡೋಮ್​ ಮಾರಾಟದ ಪ್ರಮಾಣ 40 ಪ್ರತಿಶತದಷ್ಟು ಕುಸಿತ ಕಂಡಿದೆ.


ವಿಶ್ವದ ಅತೀದೊಡ್ಡ ಕಾಂಡೋಮ್​ ತಯಾರಕ ಕಂಪನಿ ಕರೆಕ್ಸ್​​ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಗೊಹ್​ ಮಿಯಾ ಕೈಟ್​, ಸಾಂಕ್ರಾಮಿಕದ ಸಂದರ್ಭದಲ್ಲಿ ಲೈಂಗಿಕ ಸ್ವಾಸ್ಥ್ಯ ಕೇಂದ್ರಗಳಂತಹ ಅನಿವಾರ್ಯವಲ್ಲದ ಚಿಕಿತ್ಸಾಲಯಗಳನ್ನು ಬಂದ್​ ಮಾಡಿದ್ದರಿಂದ ಕಾಂಡೋಮ್​​ ಮಾರಾಟದಲ್ಲಿ ಗಣನೀಯ ಪ್ರಮಾಣದಲ್ಲಿ ಕುಸಿತ ಕಂಡು ಬಂದಿದೆ ಎಂದು ಹೇಳಿದ್ದಾರೆ. ಮಲೇಷಿಯಾ ಮೂಲದ ಕಂಪನಿಯು ಈಗ ಮೆಡಿಕಲ್​ ಗ್ಲೌಸ್​ ತಯಾರಿಕೆಗೆ ಮುಂದಾಗಿದೆ ಎನ್ನಲಾಗಿದೆ. ವರ್ಷದ ಮಧ್ಯದಲ್ಲಿ ಥೈಲ್ಯಾಂಡ್​ನಲ್ಲಿ ಇದರ ಉತ್ಪಾದನೆಯನ್ನು ಪ್ರಾರಂಭಿಸಲಿದೆ ಎನ್ನಲಾಗಿದೆ .

ಇದನ್ನು ಓದಿ : Bombay High Court : ಕೊರೊನಾ ಲಸಿಕೆ ಪಡೆಯದವರಿಗೆ ತಾರತಮ್ಯ ಮಾಡುವಂತಿಲ್ಲ : ಬಾಂಬೆ ಹೈಕೋರ್ಟ್

ಇದನ್ನೂ ಓದಿ : Aadhaar for future Schemes: ಆಧಾರ್ ಮಾಹಿತಿ ಸಂಚಿಕೆಗೆ ಒಪ್ಪಿಗೆ ಪಡೆಯಲು ಮುಂದಾಗಲಿದೆ ಸರ್ಕಾರ

Sales of world’s largest condom maker down by almost 40% in last two years

Comments are closed.