Jamun Fruit : ನೇರಳೆ ಹಣ್ಣು : ಬೇಸಿಗೆಯ ಸೂಪರ್‌ ಹಣ್ಣಿನ ಪ್ರಯೋಜನಗಳು ನಿಮಗೆ ಗೊತ್ತಾ?

ನೇರಳೆ ಹಣ್ಣನ್ನು ಜಾಮೂನು (Jamun Fruit), ಜಾವಾ ಪ್ಲಮ್‌ ಎಂದೂ ಕರೆಯುತ್ತಾರೆ. ಬೇಸಿಗೆ (Summer)ಯ ಸೂಪರ್‌ ಫ್ರುಟ್‌ ಆದ ಈ ಹಣ್ಣು ಪೋಷಕಾಂಶಗಳ ಪ್ರಯೋಜನವನ್ನೂ ಹೊಂದಿದೆ. ಆರೋಗ್ಯ ತಜ್ಞರು ಇದನ್ನು ಬೇಸಿಗೆಯಲ್ಲಿ ನಿಮ್ಮ ಡಯಟ್‌ ನಲ್ಲಿ ಸೇರಿಸಿಕೊಳ್ಳಿ ಎಂದು ಸಲಹೆ ನೀಡುತ್ತಾರೆ. ನೇರಳೆಯಲ್ಲಿ ಶೇಕಡಾ 84 ರಷ್ಟು ನೀರಿನಾಂಶ ಇರುವುದರಿಂದ ನಿರ್ಜಲೀಕರಣವನ್ನು ತಪ್ಪಿಸುತ್ತದೆ. ದೇಹಕ್ಕೆ ತಂಪು ನೀಡುವ ಗುಣ ಹೊಂದಿದ್ದು, ಬೇಸಿಲಿನ ಬೇಗೆಯನ್ನು ನಿವಾರಿಸುತ್ತದೆ. ಬೇಸಿಗೆಯ ಪ್ರಸಿದ್ಧ ಹಣ್ಣು ಫಾಸ್ಪರಸ್, ಐಯೋಡಿನ್‌, ಮಾಗ್ನೇಸಿಯಂ, ಮತ್ತು ಪೋಟ್ಯಾಸಿಯಂಗಳಂತಹ ಖನಿಜಾಂಶಗಳನ್ನೂ ಹೊಂದಿದ್ದು ಬಿಸಿಲಿನ ತಾಪವನ್ನು ಕಡಿಮೆ ಮಾಡಿಕೊಳ್ಳಲು ಸಹಾಯ ಮಾಡುತ್ತದೆ. ಬೇಸಿಗೆಯಲ್ಲಿ ಬೆವರುವುದರಿಂದ ದೇಹದಿಂದ ನೀರು ಮತ್ತು ಎಲೆಕ್ಟ್ರೋಲೈಟ್‌ಗಳು ಹೊರಹೋಗುವುದನ್ನು ತಪ್ಪಿಸಿ ದೇಹಕ್ಕೆ ಮರುಪೂರೈಕೆಯಾಗುವಂತೆ ನೋಡಿಕೊಳ್ಳುತ್ತದೆ.

ಇದು ನಾರಿನಾಂಶವನ್ನು ಹೊಂದಿದ್ದು ಜೀರ್ಣಾಂಗ ವ್ಯವಸ್ಥೆಯನ್ನು ಸುಧಾರಿಸುತ್ತದೆ. ಇದರಿಂದ ಬಹಳ ಸಮಯದ ವರೆಗೆ ಹಸಿವೆಯನ್ನು ತಡೆಯುವ ಶಕ್ತಿ ಕೊಡುವುದರಿಂದ ತೂಕ ಇಳಿಕೆಯಲ್ಲೂ ಸಹಾಯ ಮಾಡುತ್ತದೆ. ಇದಲ್ಲದೇ ವಿಟಮಿನ್‌ ಸಿ ಅನ್ನು ಅಧಿಕವಾಗಿ ಹೊಂದಿರುವುದರಿಂದ ಕಾಂತಿಯುತ ತ್ವಚೆಗೂ ಉತ್ತಮವಾಗಿದೆ. ಅನಿಮಿಯಾದಿಂದ ಬಳಲುತ್ತಿರುವವರಿಗೆ ನೇರಳೆ ಹಣ್ಣು ಬಹಳ ಪ್ರಯೋಜನಕಾರಿಯಾಗಿದೆ. ಇದರಲ್ಲಿಯ ಕಬ್ಬಿಣದ ಅಂಶವು ನೈಸರ್ಗಿಕವಾಗಿ ದೇಹ ಶುದ್ಧೀಕರಿಸಲು ಮತ್ತು ಹಿಮೋಗ್ಲೋಬಿನ್‌ ಸಂಖ್ಯೆ ಹೆಚ್ಚಿಸುತ್ತದೆ.

ಇದನ್ನೂ ಓದಿ : Papaya Seeds benefits : ಪಪ್ಪಾಯ ಹಣ್ಣಿನ ಬೀಜದಲ್ಲಿದೆ ನೀವೂ ಊಹಿಸದೇ ಇರೋ ಪ್ರಯೋಜನಗಳು

ನೇರಳೆ ಹಣ್ಣಿನಿಂದಾಗುವ ಪ್ರಯೋಜನಗಳು :

  • ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ :
    ನೇರಳೆ ಹಣ್ಣು ವಿಟಮಿನ್‌ ಬಿ ಕಾಂಪ್ಲೆಕ್ಸ್‌ ಮತ್ತು ವಿಟಮಿನ್‌ ಸಿ ಯ ಆಗರವಾಗಿದೆ. ಇದರಲ್ಲಿಯ ಹೆಚ್ಚಿನ ಆಂಟಿ–ಓಕ್ಸಿಡೆಂಟ್‌ ಮತ್ತು ಆಂಟಿ– ಇನ್‌ಫ್ಲಮೇಟರಿ ಗುಣವು ರೋಗಗಳ ವಿರುದ್ಧ ಹೋರಾಡಲು ಮತ್ತು ಉರಿಯೂತ ನಿವಾರಿಸಲು ಸಹಾಯ ಮಾಡುತ್ತದೆ.
  • ದೇಹಕ್ಕೆ ತಂಪನ್ನು ಒದಗಿಸುತ್ತದೆ :
    ನೇರಳೆ ಅತಿ ಹೆಚ್ಚಿನ ಪ್ರಮಾಣದ ನೀರಿನಾಂಶ ಹೊಂದಿದೆ. ಶೇಕಡಾ 84 ರಷ್ಟು ನೀರಿನಂಶ ಹೊಂದಿದ್ದು ಫಾಸ್ಪರಸ್‌ ಮತ್ತು ಐಯೋಡಿನಂತಹ ಅನೇಕ ಖನಿಜಾಂಶಗಳಿಂದ ಕೂಡಿದೆ. ಬೇಸಿಗೆಯಲ್ಲಿ ನಿಯಮಿತವಾಗಿ ಸೇವಿಸುವುದರಿಂದ ನಿರ್ಜಲೀಕರಣದ ಸಮಸ್ಯೆಯನ್ನು ತಡೆಗಟ್ಟಬಹುದು.
  • ಉತ್ತಮ ತ್ವಚೆಗೆ :
    ಬೇಸಿಗೆಯಲ್ಲಿ ಸಾಮಾನ್ಯವಾಗಿ ಎದುರಿಸುವ ಸಮಸ್ಯೆಗಳಲ್ಲಿ ಮೊಡವೆಯೂ ಒಂದು. ನೇರಳೆ ಹಣ್ಣಿನಲ್ಲಿರುವ ಆಸ್ಟ್ರೋಜಿಂಟ್‌ ಮತ್ತು ವಿಟಮಿನ್‌ ಸಿ ಯ ಗುಣವು ತ್ವಚೆಯ ಸಮಸ್ಯೆಗಳಿಗೆ ಪರಿಪೂರ್ಣ ಹಣ್ಣಾಗಿದೆ.
  • ತೂಕ ಇಳಿಕೆಗೆ ಸಹಾಯ ಮಾಡುತ್ತದೆ :
    ನೇರಳೆಯು ಕಡಿಮೆ ಕ್ಯಾಲೋರಿಯನ್ನು ಹೊಂದಿದ್ದು ನಿಮ್ಮ ಡಯಟ್‌ನಲ್ಲಿ ಸೇರಿಸಿಕೊಳ್ಳುವುದರಿಂದ ದೇಹದಲ್ಲಿಯ ಅಧಿಕ ಕ್ಯಾಲೋರಿಯನ್ನು ಕಡಿಮೆ ಮಾಡಿಕೊಳ್ಳಬಹುದು.

ನೇರಳೆ ಬೇಸಿಗೆ ಕಾಲದಲ್ಲಿ ಲಭ್ಯವಿರುವ ಪೌಷ್ಟಿಕ ಮತ್ತು ಅದ್ಭುತ ಹಣ್ಣು. ಇದನ್ನು ಸ್ಮೂಥಿ, ಸಲಾಡ್‌ ಮತ್ತು ಹಾಗೇ ಕೂಡಾ ಹಣ್ಣನ್ನು ಸೇವಿಸಬಹುದು.

ಇದನ್ನೂ ಓದಿ :Apricot Health Benefits: ಈ ಹಣ್ಣಿನ ಪ್ರಯೋಜನಗಳು ನಿಮಗೆ ಗೊತ್ತಾ? ಒಮ್ಮೆ ತಿಳಿದರೆ ನೀವು ಸೇವಿಸದೇ ಇರಲು ಸಾಧ್ಯವೇ ಇಲ್ಲ!

(Jamun Fruit an excellent summer fruit gives maximum health benefits)

Comments are closed.