Tricolour in His Eye : ಕಣ್ಣಿನೊಳಗೆ ತ್ರಿವರ್ಣ ಧ್ವಜವನ್ನು ಚಿತ್ರಿಸಿಕೊಂಡ ಸಾಮಾಜಿಕ ಕಾರ್ಯಕರ್ತ

ತಮಿಳುನಾಡು : Tricolour in His Eye : ದೇಶವು ಅಮೃತ ಮಹೋತ್ಸವದ ಸಂಭ್ರಮವನ್ನು ಆಚರಿಸುತ್ತಿರುವ ನಡುವೆಯೇ ಭಾರತದ ಸ್ವಾತಂತ್ರ್ಯ ಚಳವಳಿಯ ಬಗ್ಗೆ ಜಾಗೃತಿ ಮೂಡಿಸುವ ಪ್ರಯತ್ನದಲ್ಲಿ ಸಾಮಾಜಿಕ ಕಾರ್ಯಕರ್ತರೊಬ್ಬರು ತಮ್ಮ ಬಲಗಣ್ಣಿನ ಕಾರ್ನಿಯದ ಮೇಲೆ ಭಾರತೀಯ ತ್ರಿವರ್ಣ ಧ್ವಜವನ್ನು ಚಿತ್ರಿಸಿಕೊಂಡಿದ್ದಾರೆ. ಕಣ್ಣಿನ ಒಳಗಡೆ ತಾವು ಬಿಡಿಸಿಕೊಂಡಿರುವ ತ್ರಿವರ್ಣ ಧ್ವಜದ ವಿಡಿಯೋವನ್ನು ಸೋಶಿಯಲ್​ ಮೀಡಿಯಾದಲ್ಲಿ ಪೋಸ್ಟ್​ ಮಾಡುವ ಮೂಲಕ ಈ ಸಾಮಾಜಿಕ ಕಾರ್ಯಕರ್ತ ಜನರಿಗೆ ಸ್ವಾತಂತ್ರ್ಯೋತ್ಸವದ ಮಹತ್ವವನ್ನು ಸಾರುವ ಪ್ರಯತ್ನದಲ್ಲಿದ್ದಾರೆ.


ಜನರಲ್ಲಿ ದೇಶ ಭಕ್ತಿಯನ್ನು ಹೆಚ್ಚಿಸುವ ಸಲುವಾಗಿ ಪ್ರಧಾನಿ ಮೋದಿ ಹರ್​ ಘರ್​ ತಿರಂಗಾ ಅಭಿಯಾನ ಆರಂಭಿಸಿದ್ದು ಈ ಬಾರಿ ಪ್ರತಿ ಮನೆಯಲ್ಲಿಯೂ ರಾಷ್ಟ್ರ ಧ್ವಜ ಹಾರಿಸಬೇಕು ಎಂದು ಕರೆ ನೀಡಿದ್ದಾರೆ. ಸ್ವಾತಂತ್ರ್ಯ ದಿನಾಚರಣೆಯ ಪ್ರಯುಕ್ತ ಆಗಸ್ಟ್​ 2ರಿಂದ 15ನೇ ತಾರೀಖಿನವರೆಗೆ ಸೋಶಿಯಲ್​ ಮೀಡಿಯಾಗಳಲ್ಲಿ ನಿಮ್ಮ ಪ್ರೊಫೈಲ್​ ಫೋಟೋಗಳಲ್ಲಿ ತ್ರಿವರ್ಣ ಧ್ವಜವನ್ನು ಹಾರಿಸುವಂತೆ ಪ್ರಧಾನಿ ಮೋದಿ ಮನವಿ ಮಾಡಿದ್ದಾರೆ.


ಆದರೆ ಸಾಮಾಜಿಕ ಕಾರ್ಯಕರ್ತ ಹಾಗೂ ಕಲಾವಿದರಾದ ಕೊಯಮತ್ತೂರು ಜಿಲ್ಲೆಯ ಯುಎಂಟಿ ರಾಜಾ ಎಂಬವರು ಇನ್ನೂ ಒಂದು ಹೆಜ್ಜೆ ಮುಂದು ಹೋಗಿದ್ದು ತಮ್ಮ ಕಣ್ಣಿನಲ್ಲಿ ಭಾರತದ ತ್ರಿವರ್ಣ ಧ್ವಜವನ್ನು ರಚಿಸುವ ಸಾಹಸಕ್ಕೆ ಕೈ ಹಾಕಿದ್ದಾರೆ. ಈ ರೀತಿ ಮಾಡುವ ಮುನ್ನ ಅವರು ಅತ್ಯಂತ ತೆಳುವಾದ ಬಟ್ಟೆಯಂತಹ ಫಿಲಂನಲ್ಲಿ ರಾಷ್ಟ್ರಧ್ವಜವನ್ನು ಚಿತ್ರಿಸಿದ್ದಾರೆ. ಇದನ್ನು ಬಳಿಕ ಏಕಾಗ್ರತೆಯಿಂದ ಕಣ್ಣಿನ ಒಳಗೆ ಅಂಟಿಸಿದ್ದಾರೆ.


ರಾಷ್ಟ್ರಧ್ವಜದ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ತಾನು ಈ ರೀತಿಯ ಸಾಹಸ ಮಾಡಿದ್ದೇನೆಂದು ರಾಜಾ ಹೇಳಿಕೊಂಡಿದ್ದಾರೆ. ತಮ್ಮ ಕಣ್ಣಿನ ವಿಡಿಯೋವನ್ನು ರಾಜಾ ಸೋಶಿಯಲ್​ ಮೀಡಿಯಾದಲ್ಲಿ ಶೇರ್​ ಮಾಡಿದ್ದಾರೆ. ಅಲ್ಲದೇ ಇಂತಹ ಸಾಹಸವನ್ನು ಇನ್ಯಾರೂ ಮಾಡಬೇಡಿ ಎಂದೂ ಎಚ್ಚರಿಕೆ ನೀಡಿದ್ದಾರೆ. ಏಕೆಂದರೆ ಈ ರೀತಿಯ ಸಾಹಸಗಳು ಕಣ್ಣಿನ ಸೋಂಕಿಗೆ ಕಾರಣವಾಗುವ ಸಾಧ್ಯತೆ ಹೆಚ್ಚು ಮಾಡುತ್ತವೆ.

ಇದನ್ನು ಓದಿ : Mukesh Ambani Ravi Shastri : ರವಿಶಾಸ್ತ್ರಿ ಜೊತೆ ಲಾರ್ಡ್ಸ್ ಕ್ರಿಕೆಟ್ ಮೈದಾನದಲ್ಲಿ ಕಾಣಿಸಿಕೊಂಡ ಮುಕೇಶ್ ಅಂಬಾನಿ, ಏನಿದರ ಗುಟ್ಟು?

ಇದನ್ನೂ ಓದಿ : BSF Recruitment 2022 : ಗಡಿ ಭದ್ರತಾ ಪಡೆಯಲ್ಲಿ ಪಿಯುಸಿ ಪಾಸಾದವರಿಗೆ ಉದ್ಯೋಗಾವಕಾಶ

Tamil Nadu Activist Paints Tricolour in His Eye to Mark Independence Day 2022

Comments are closed.