Reporter Uses Condom :ಮೈಕ್​​ಗೆ ಕಾಂಡೋಮ್​ ಹಾಕಿ ನೇರ ವರದಿಗೆ ನಿಂತ ಪತ್ರಕರ್ತೆ:ಇದರ ಹಿಂದಿದೆ ಈ ಕಾರಣ

ಅಮೆರಿಕ : Reporter Uses Condom  : ಅಮೆರಿಕಾವು ಪ್ರಸ್ತುತ ಇಯಾನ್​ ಎಂಬ ಹೆಸರಿನ ತೀವ್ರವಾದ ಚಂಡಮಾರುತದ ವಿರುದ್ಧ ಹೋರಾಡುತ್ತಿದೆ. ಶುಕ್ರವಾರದಂದು ಇಯಾನ್​ ಚಂಡಮಾರುತದಿಂದಾಗಿ ಫ್ಲೋರಿಡಾದಲ್ಲಿ ಭೂಕುಸಿತ ಸಂಭವಿಸಿದೆ. ಇದರಿಂದಾಗಿ ರಾಜ್ಯಾದ್ಯಂತ ಮನೆಗಳು, ರಸ್ತೆಗಳು ಹಾಗೂ ವಾಹನಗಳು ಧ್ವಂಸಗೊಂಡಿವೆ. ಇಯಾನ್​ ಚಂಡಮಾರುತ ದಿನದಿಂದ ದಿನಕ್ಕೆ ಬಲಗೊಳ್ಳುತ್ತಿದೆ ಎಂದು ಅಮೆರಿಕ ಮೂಲದ ಹವಾಮಾನ ತಜ್ಞರು ಮಾಹಿತಿ ನೀಡಿದ್ದಾರೆ.


ಪ್ರಪಂಚದಾದ್ಯಂತ ಸುದ್ದಿ ಮಾಧ್ಯಮಗಳು ಫ್ಲೋರಿಡಾದಲ್ಲಿ ಚಂಡಮಾರುತವನ್ನು ವ್ಯಾಪಕವಾಗಿ ವರದಿ ಮಾಡುತ್ತಿವೆ. ಇಯಾನ್​ ಚಂಡಮಾರುತದ ಇಂಚಿಂಚೂ ಮಾಹಿತಿಯನ್ನು ಜನತೆ ಜೊತೆಯಲ್ಲಿ ಹಂಚಿಕೊಳ್ಳುವ ಕೆಲಸವನ್ನು ಮಾಡುತ್ತಿದೆ. ಈ ನಡುವೆ ಎನ್​ಬಿಸಿ ಅಮೆರಿಕದ ಪತ್ರಕರ್ತೆ ಕೈಲಾ ಗ್ಯಾಲರ್​, ಇಯಾನ್​ ಚಂಡಮಾರುತದ ಕವರೇಜ್​ ಮಾಡುವ ಸಂದರ್ಭದಲ್ಲಿ ವಿಚಿತ್ರ ಕಾರಣಕ್ಕೆ ಸೋಶಿಯಲ್​ ಮೀಡಿಯಾದಲ್ಲಿ ಸುದ್ದಿಯಾಗಿದ್ದಾರೆ.


ಪತ್ರಕರ್ತೆಯು ತನ್ನ ಮೈಕ್​ನಲ್ಲಿ ಕಾಂಡೋಮ್​ ಹಾಕಿಕೊಂಡು ಚಂಡಮಾರುತ ಪೀಡಿತ ವಲಯದ ಜನರೊಂದಿಗೆ ಸಂವಹನ ನಡೆಸುತ್ತಿರುವ ದೃಶ್ಯ ಕಂಡುಬಂದಿದೆ. ಭಾರೀ ಮಳೆಯಿಂದಾಗಿ ಮೈಕ್​ನ್ನು ರಕ್ಷಿಸಿಕೊಳ್ಳಬೇಕು ಎಂದು ಈ ಪತ್ರಕರ್ತೆಯು ವಿಭಿನ್ನ ಪ್ಲಾನ್​ ಮಾಡಿದ್ದಾರೆ. ಫ್ಲೋರಿಡಾದ ಮಳೆ ಹಾಗೂ ಇಯಾನ್ ಚಂಡಮಾರುತದ ಪರಿಣಾಮ ಜನತೆಯ ಮೇಲೆ ಯಾವ ರೀತಿ ಪ್ರಭಾವ ಬೀರಿದೆ ಎಂಬ ಗ್ರೌಂಡ್​ ರಿಪೋರ್ಟ್ ಮಾಡಲು ಮಹಿಳೆಯು ನೇರ ವರದಿಯನ್ನು ನೀಡುತ್ತಿದ್ದರು. ಈ ಸಂದರ್ಭದಲ್ಲಿ ಮೈಕ್​ನಲ್ಲಿ ಕಾಂಡೋಮ್​ ನೋಡಿದ ಜನರು ಇದೇಕೆ ಈಕೆ ಹೀಗೆ ಮಾಡಿದ್ದಾಳೆ ಎಂದು ಮೊದಲು ಗೊಂದಲಕ್ಕೆ ಒಳಗಾಗಿದ್ದಾರೆ. ಇಂತಹದ್ದೊಂದು ಚರ್ಚೆ ಸೋಶಿಯಲ್​ ಮೀಡಿಯಾದಲ್ಲಿ ಆರಂಭಗೊಳ್ಳುತ್ತಿದ್ದಂತೆಯೇ ಕೈಲಾ ಗೇಲರ್​​ ಮೈಕ್​ ಜೊತೆ ಕಾಂಡೋಮ್​ ಏಕಿದೆ ಅನ್ನೋದಕ್ಕೆ ಕಾರಣ ನೀಡಿದ್ದಾರೆ.


ಸೋಶಿಯಲ್​ ಮೀಡಿಯಾದಲ್ಲಿ ಹರಿದಾಡುತ್ತಿರುವ ವಿಡಿಯೋದಲ್ಲಿ ಪತ್ರಕರ್ತೆ ಕೈಲಾ ಮಾತನಾಡಿದ್ದು, ಅನೇಕರು ನನ್ನ ಮೈಕ್​ನಲ್ಲಿ ಏನಿದೆ ಎಂದು ನನ್ನನ್ನು ಸೋಶಿಯಲ್​ ಮೀಡಿಯಾದಲ್ಲಿ ಪ್ರಶ್ನಿಸುತ್ತಿದ್ದಾರೆ. ನೀವೆಲ್ಲ ಯೋಚಿಸುತ್ತಿರುವುದು ಸರಿಯಾಗಿದೆ. ನಾನು ಮೈಕ್​​ನ್ನು ಮಳೆಯಿಂದ ರಕ್ಷಿಸಲು ಅದಕ್ಕೆ ಕಾಂಡೋಮ್​ ಹಾಕಿದ್ದೇನೆ. ಮೈಕ್​ಗೆ ನೀರು ತಾಕಿದರೆ ಅದು ಹಾಳಾಗುತ್ತದೆ. ಆಗ ನನಗೆ ವರದಿ ಮಾಡಲು ಸಾಧ್ಯವಾಗೋದಿಲ್ಲ. ಹೀಗಾಗಿ ನಾನು ಈ ರೀತಿಯ ಪ್ಲಾನ್​ ಮಾಡಿದೆ ಎಂದು ಹೇಳಿದ್ದಾರೆ.

ಇದನ್ನು ಓದಿ : Amit Mishra : “ಪ್ರೇಯಸಿ ಜೊತೆ ಡೇಟಿಂಗ್‌ಗೆ ಹೋಗ್ಬೇಕು, ₹300 ಕೊಡಿ” ಅಂದ ಫ್ಯಾನ್’ಗೆ ₹500 ಕೊಟ್ಟ ಕ್ರಿಕೆಟಿಗ ಅಮಿತ್ ಮಿಶ್ರಾ

ಇದನ್ನೂ ಓದಿ : Mallikarjuna Kharge : ಎಐಸಿಸಿ ಅಧ್ಯಕ್ಷರಾಗ್ತಾರಾ ಖರ್ಗೆ: ದಲಿತ ನಾಯಕನ ಆಯ್ಕೆಗೆ ಕಾರಣಗಳೇನು ಗೊತ್ತಾ?

TV Reporter Uses Condom To Protect Mic From Heavy Rains During Hurricane Ian

Comments are closed.